ಇಂದು ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳದ್ದೇ ( Electric scooters ) ಹವಾ. ಹೌದು ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಬೇಡಿಕೆ ಹೆಚ್ಚಾಗುತ್ತಿದೆ. ಪೆಟ್ರೋಲ್ ಬೆಲೆ ಏರಿಕೆಯಿಂದ ಇಂದು ಜನರು ಎಲೆಕ್ಟ್ರಿಕ್ ವಾನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಇದೇ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಕಂಪೆನಿಗಳು ಹೆಚ್ಚಾಗುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ರಿವೋಟ್ ಮೋಟಾರ್ಸ್ – Rivot Motors
ಇದೀಗ ಮಾರುಕಟ್ಟೆಯಲ್ಲಿ ನಮ್ಮ ಕರ್ನಾಟಕದ ರಿವೋಟ್ ಮೋಟಾರ್ಸ್ ( Rivot Motors ) ಭಾರತದಲ್ಲಿ ಹಲವಾರು ಹೊಸ ಸ್ಕೂಟರ್‌ಗಳನ್ನು ಪರಿಚಯಿಸಿದೆ. ಈ ಕಂಪೆನಿಯು ಬಮುಂದಿನ ದಿನಗಳಲ್ಲಿ ಟಾಪ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ( Two Weal Electric Scooter ) ತಯಾರಕಾ ಕಂಪನಿಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಯಾಕೆ ಈ ಕಂಪೆನಿಯು ಹೆಚ್ಚು ಫೇಮಸ್ ಎಂದರೆ, ಈ ಕಂಪನಿಯು ಬಿಡುಗಡೆ ಮಾಡುವ ಎಲ್ಲ ವಾಹನಗಳು ಅದ್ಬುತ ವೈಶಿಷ್ಟ್ಯಗಳನ್ನು ಹೊಂದಿವೆ. ಅಷ್ಟೇ ಅಲ್ಲದೆ, ಕೈಗೆಟುಕುವ ಬೆಲೆ, ಅತ್ಯಾಧುನಿಕ ಫೀಚರ್‌ಗಳು ಗ್ರಾಹಕರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತಿದೆ. ಈ ಒಂದು ಕಾರಣಕ್ಕೆ ಜನರು ಎಲೆಕ್ಟ್ರಿಕ್ ವಾಹನಗಳತ್ತ ಮೊರೆ ಹೋಗುತ್ತಿದ್ದಾರೆ.
ರಿವೋಟ್ NX100 ಎಲೆಕ್ಟ್ರಿಕ್ ಸ್ಕೂಟರ್

ರಿವೋಟ್ ಮೋಟಾರ್ಸ್ ಕಂಪನಿಯು ಬಿಡುಗಡೆ ಮಾಡಿರುವ NX100 ಹೆಸರಿನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ.
ಈ ಎಲೆಕ್ಟ್ರಿಕ್ ಸ್ಕೂಟರ್ ನೋಡುವುದಕ್ಕೆ ಕ್ಲಾಸಿಕ್, ಪ್ರೊ, ಮ್ಯಾಕ್ಸ್, ಸ್ಪೋರ್ಟ್ಸ್ ಮತ್ತು ಆಫ್‌ಲ್ಯಾಂಡರ್ ಎಂಬ ಐದು ರೂಪಾಂತರಗಳನ್ನು ಹೊಂದಿದೆ.
ಇನ್ನೊಂದು ಮುಖ್ಯ ವಿಷಯ ಏನಂದ್ರೆ, ಈ ಸ್ಕೂಟರ್ ಅದರ ವೈಶಿಷ್ಟ್ಯಗಳು ಮತ್ತು ಫೀಚರ್ಸ್ ಬಡಲಾದಾಗ ಅದರ ಬೆಲೆಯು ಕೂಡ ಬದಲಾಗುತ್ತದೆ.
ಈ ಸ್ಕೂಟರ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ 100 ರಿಂದ 300 ಕಿ.ಮೀ ಓಡಿಸಬಹುದು. ಹಾಗೆಯೇ ಈ ಎಲೆಕ್ಟ್ರಿಕ್ ಸ್ಕೂಟರ್, ಸ್ಮಾರ್ಟ್ ಡ್ಯಾಶ್ ಕ್ಯಾಮೆರ, ವರ್ಧಿತ ಸುರಕ್ಷತೆ, ಟಚ್‌ಸ್ಕ್ರೀನ್ ಇಂಟರ್ಫೇಸ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 100 ರಿಂದ 110 ಕಿಲೋಮೀಟರ್ ಆಗಿರುತ್ತದೆ. 500 ಕಿ.ಮೀ ಹೋಗಲು ಅಪ್‌ಗ್ರೇಡ್ ಆಯ್ಕೆಯೂ ಇದೆ.
ಅಷ್ಟೇ ಅಲ್ಲದೆ ಈ ಸ್ಕೂಟರ್ ನ ಎಲ್ಲಾ ವೇರಿಯೆಂಟ್‌ಗಳು ( Different Variants ) :
– ರಿವರ್ಸ್ ಗೇರ್
– ಫೋನ್ ಲಾಕ್
– ಫೋನ್ ಕನೆಕ್ಟಿವಿಟಿ
– ಅಲಾಯ್ ವೀಲ್‌ಗಳು
– ಎಲ್ಇಡಿ ಲೈಟ್‌ಗಳು
ಮುಂತಾದ ವಿಶಿಷ್ಟ ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಸ್ಕೂಟರ್ ನಲ್ಲಿ ವೇರಿಯೆಂಟ್ ವಾರು ರೇಂಜ್ ( Varient varu Range ) ಅನ್ನು ಕಂಪೆನಿಯು ನೀಡಿದೆ. ಇದನ್ನು ಐದು ವಿಧದಲ್ಲಿ ಕಾಣಬಹದು :
1. ಕ್ಲಾಸಿಕ್ ವೇರಿಯಂಟ್‌ನ ರೇಂಜ್ 100 ಕಿ.ಮೀ
2. ಪ್ರೊ ವೇರಿಯಂಟ್‌ನ ರೇಂಜ್ 200 ಕಿ.ಮೀ
3. ಮ್ಯಾಕ್ಸ್ ವೆರಿಯಂಟ್‌ನ ರೇಂಜ್ 30 ಕಿ.ಮೀ
4. ಸ್ಪೋರ್ಟ್ಸ್ ವೆರಿಯಂಟ್‌ನ ರೇಂಜ್ 200 ಕಿ.ಮೀ
5. ಟಾಪ್ ಎಂಡ್ ವೇರಿಯೆಮಟ್ ಆಫ್‌ಲ್ಯಾಂಡರ್ ರೇಂಜ್ 300 ರಿಂದ 500 ಕಿ.ಮೀ
ಹಾಗೆಯೇ ಈ ಪ್ರತಿಯೊಂದು ವೇರಿಯೆಂಟ್ ವಾರು ರೇಂಜ್ ನ ಬೆಲೆ ಬೇರೆ ಬೇರೆ ಇರುತ್ತದೆ, ಅದರ ಬೆಲೆ ಈ ಕೆಳಗಿನಂತಿದೆ :
1. ಕ್ಲಾಸಿಕ್ ವೆರಿಯಂಟ್ ಬೆಲೆ ರೂ.89 ಸಾವಿರ
2. ಪ್ರೊ ವೇರಿಯಂಟ್ ಬೆಲೆ ರೂ.1.29
3. ಮ್ಯಾಕ್ಸ್ ವೇರಿಯಂಟ್ ಬೆಲೆ ರೂ.1.59 ಲಕ್ಷ
4. ಸ್ಪೋರ್ಟ್ಸ್ ವೇರಿಯೆಂಟ್ ಬೆಲೆ ರೂ. 1.39 ಲಕ್ಷ
5. ಟಾಪ್ ಎಂಡ್ ಆಫ್‌ಲ್ಯಾಂಡರ್ ಬೆಲೆ 1.89 ಲಕ್ಷ ರೂ ಆಗಿರುತ್ತದೆ.
ಈ ಸ್ಕೂಟರ್ ಬಿಡುಗಡೆ ದಿನಾಂಕ :
ಈ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಿಡುಗಡೆ ದಿನಾಂಕವನ್ನು ಕಂಪೆನಿಯು ಇನ್ನು ಯಾವಾಗ ಎಂದು ತಿಳಿಸಿಲ್ಲ. ಆದರೆ ಪ್ರಿಬುಕಿಂಗ್ ( Free Booking ) ಆಯ್ಕೆಯನ್ನು ಈಗಾಗಲೇ ಕಂಪೆನಿಯು ನೀಡಿದೆ. ನೀವು ಏನಾದರು ಈ ಸ್ಕೂಟರ್ ಅನ್ನು ಕಂಪನಿಯ ವೆಬ್‌ಸೈಟ್‌ನಲ್ಲಿ ( Website ) ಫ್ರೀಬುಕ್ಕಿಂಗ್ ಮಾಡಿಕೊಳ್ಳಬೇಕು. ಎಂದರೆ ರೂ. 499 ಪಾವತಿಸಿ ಬುಕ್ ಮಾಡಬಹುದು. ಫ್ರೀ ಬುಕಿಂಗ್ ಆಸಕ್ತಿ ಇದ್ದಲ್ಲಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಬುಕ್ ಮಾಡಬಹುದು https://prebook.rivotmotors.com/
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






