ಬರೋಬ್ಬರಿ 4 ಲಕ್ಷ ವರೆಗೆ ಸಹಕಾರ ಸಿಗಲಿರುವ ಈ ಕಾರ್ಮಿಕರ ಯೋಜನೆ ಬಗ್ಗೆ ಯಾರಿಗೂ ಗೊತ್ತಿಲ್ಲ! ಈಗಲೇ ತಿಳಿದುಕೊಳ್ಳಿ

4 lakhs for gig workers

ದೇಶದಲ್ಲಿಯೇ ಮೊದಲ ಬಾರಿಗೆ ಫುಡ್ ಡೆಲಿವರಿ(food delivery) ಮಾಡುವ ಹಾಗೂ ಇ-ಕಾಮರ್ಸ್‌(e-commerce) ಸಂಸ್ಥೆಗಳಾದ ಅಮೇಜಾನ್(Amazon), ಫ್ಲಿಪ್‌ಕಾರ್ಟ್(Flipkart), ಫಾರ್ಮಸಿ(Pharmacy), ಬ್ಲಿಂಕಿಟ್(blinkit), ಜೆಪ್ಪೊ(jipto) ಬಿಗ್ ಬಾಸ್ಕೆಟ್(big basket), ಡೊಮಿನೋಸ್ (Dominos) ಹೀಗೆ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತಿಯಲ್ಲಿ (Delivery work) ತೊಡಗಿರುವ ಗಿಗ್ (ಡೆಲಿವರಿ ಕಾರ್ಮಿಕ/ ಬಾಯ್) ಕಾರ್ಮಿಕರಿಗೆ (Gig workers) ರಾಜ್ಯ ಸರ್ಕಾರವು ವಿಮಾ ಯೋಜನೆ (Insurance Yojana) ಜಾರಿ ಮಾಡಿದೆ. ಹೌದು, ಅದೇನೆಂದರೆ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಗಿಗ್ ಕಾರ್ಮಿಕರಿಗೆ (Gig workers) ವಿಮೆ ಸೌಲಭ್ಯವನ್ನು(Insurance facility) ಕಲ್ಪಿಸಿದೆ. ಈ ಯೋಜನೆಗೆ ‘ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ’ (Karnataka state gig workers insurance yojana) ಎಂದು ನಾಮಕರಣ ಮಾಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಗಿಗ್ ಕಾರ್ಮಿಕರ ವಿಮಾ ಯೋಜನೆ:

ನೀತಿ ಆಯೋಗ 2022ರ ವರದಿಯನ್ವಯ ಸ್ವಿಗ್ಗಿ, ಜೊಮಾಟೋಗಳಲ್ಲಿ ಫುಡ್ ಡೆಲಿವರಿ ಮಾಡುವ ಹಾಗೂ ಇ-ಕಾಮರ್ಸ್‌ ಸಂಸ್ಥೆಗಳಾದ ಅಮೆಜಾನ್, ಪ್ಲಿಪ್‌ಕಾರ್ಟ್, ಬಿಗ್ ಬಾಸ್ಕೆಟ್ ಇವೇ ಮೊದಲಾದವುಗಳಲ್ಲಿ ಪೂರ್ಣ/ ಅರೆಕಾಲಿಕ ಡೆಲಿವರಿ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರ ಸಂಖ್ಯೆ ಸುಮಾರು 2.30 ಲಕ್ಷವಾಗಿದೆ.
ಗಿಗ್ ಕಾರ್ಮಿಕರು ಸರಕು/ ಸೇವೆಗಳನ್ನು ನಿಗದಿತ ಸಮಯಕ್ಕೆ ಸರಿಯಾಗಿ ವಾಹನಗಳಲ್ಲಿ ವಿತರಿಸುತ್ತಿದ್ದು, ಅಂತಹ ಸಂದರ್ಭದಲ್ಲಿ ಅಪಘಾತಕ್ಕೆ (Accident) ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಪಘಾತದಿಂದ ಮರಣ(Accident death)/ ಸಂಪೂರ್ಣ ಶಾಶ್ವತ ದುರ್ಬಲತೆ (permenent disability) ಹೊಂದಿದ್ದಲ್ಲಿ ಅವರು ಹಾಗೂ ಅವರ ಅವಲಂಬಿತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಅಂತಹ ಸಂದರ್ಭದಲ್ಲಿ ಗಿಗ್ ಕಾರ್ಮಿಕರು/ ಅವರ ಅವಲಂಬಿತರಿಗೆ ಸಾಮಾಜಿಕ ಭದ್ರತೆ (Social security) ಒದಗಿಸುವುದು ಸರ್ಕಾರದ ಹೊಣೆಗಾರಿಕೆಯಾಗಿರುತ್ತದೆ. ಸೂಕ್ತ ವಿಮಾ ಸೌಲಭ್ಯ ಒದಗಿಸುವ ಮೂಲಕ ಸಂಕಷ್ಟದಿಂದ ಮುಕ್ತಗೊಳಿಸಲು ಉದ್ದೇಶಿಸಲಾಗುತ್ತದೆ. ಆದ್ದರಿಂದ, ಗಿಗ್ ಕಾರ್ಮಿಕರಿಗೆ ಜೀವ ವಿಮೆ ಹಾಗೂ ಅಪಘಾತ ವಿಮಾ ಸೌಲಭ್ಯ ಅನ್ನು ನೀಡಲಾಗುತ್ತದೆ.

ಕರ್ನಾಟಕ ಸರ್ಕಾರ 2023-24ನೇ ಸಾಲಿನ ಬಜೆಟ್‌(Budget) ನಲ್ಲಿ ಇ-ಕಾಮರ್ಸ್‌ ವಲಯದಲ್ಲಿ ಕಾರ್ಯ ನಿರ್ವಹಣೆ ಮಾಡುವ ಗಿಗ್ ಕಾರ್ಮಿಕರಿಗೆ ಜೀವ ವಿಮೆ ಹಾಗೂ ಅಪಘಾತ ವಿಮೆ ಸೌಲಭ್ಯವನ್ನು ಘೋಷಣೆ ಮಾಡಿದೆ. 7/9/2023ರ ಸರ್ಕಾರಿ ಆದೇಶದಲ್ಲಿ ಈ ವಿಮೆ ಸೌಲಭ್ಯ ಯೋಜನೆಯನ್ನು ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಡೆಲಿವರಿ ವೃತ್ತಿಯಲ್ಲಿ ತೊಡಗಿರುವ ಗಿಗ್ ಕಾರ್ಮಿಕರಿಗೆ ಈ ಯೋಜನೆ ಜಾರಿಗೊಳಿಸಿದೆ. ಪೂರ್ಣಕಾಲಿಕ ಹಾಗೂ ಅರೆಕಾಲಿಕ ಡೆಲಿವರಿ ನೌಕರರು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು ಎಂದು ಹೇಳಬಹುದು.

ಕರ್ತವ್ಯದಲ್ಲಿ ಇದ್ದಾಗ ಹಾಗೂ ಇಲ್ಲದಿರುವಾಗ ಸಂಭವಿಸುವ ಅಫಘಾತಗಳಿಗೆ ಅನ್ವಯವಾಗಲಿದೆ. ಅಫಘಾತದಿಂದ ಮರಣ ಹೊಂದಿದ್ದಲ್ಲಿ ರೂ. 2 ಲಕ್ಷ ಹಾಗೂ ಜೀವ ವಿಮಾ ರೂ. 2 ಲಕ್ಷ ಸೇರಿ ಒಟ್ಟು ರೂ. 4 ಲಕ್ಷಗಳ ಪರಿಹಾರ. ಅಫಘಾತದಿಂದ ಸಂಪೂರ್ಣವಾಗಿ ಶಾಶ್ವತ ದುರ್ಬಲತೆಗೆ ಹೊಂದಿದ್ದಲ್ಲಿ ರೂ. 2 ಲಕ್ಷ, ಅಪಘಾತದ ಸಂದರ್ಭದ ಆಸ್ಪತ್ರೆ ವೆಚ್ಚ ಮರುಪಾವತಿ ರೂ. 1 ಲಕ್ಷ ಹಾಗೂ ಜೀವ ವಿಮಾ ರೂ. 2 ಲಕ್ಷ ಪರಿಹಾರ ದೊರೆಯಲಿದೆ.ಈ ಯೋಜನೆ ಸಂಪೂರ್ಣ ಉಚಿತವಾಗಿದೆ. ಯಾವುದೇ ರೀತಿಯ ಪ್ರೀಮಿಯಂ(Premium) ಪಾವತಿ ಮಾಡುವ ಅವಶ್ಯಕತೆ ಇಲ್ಲ.

whatss

 

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಮತ್ತು ಅರ್ಹತೆಗಳು:

ಫಲಾನುಭವಿಗಳು ಆದಾಯ ತೆರಿಗೆ ಪಾವತಿದಾರರು ಹಾಗೂ ಇ.ಎಸ್.ಐ(ESI) ಫಲಾನುಭವಿಗಳಾಗಿರಬಾರದು.
ವಯೋಮಿತಿ 18 ರಿಂದ 60 ವರ್ಷದೊಳಗಿರಬೇಕು.
ಈ ಸೌಲಭ್ಯವು ಕರ್ನಾಟಕದಲ್ಲಿ ಡೆಲಿವರಿ ಕಾರ್ಯನಿರ್ವಹಿಸುತ್ತಿರುವವರಿಗೆ ಮಾತ್ರ ಅನ್ವಯಿಸುತ್ತದೆ.
ಮತ್ತು ಆಧಾರ್‌ಕಾರ್ಡ್, ವೃತ್ತಿ ನಿರ್ವಹಿಸುತ್ತಿರುವ ಕುರಿತು ಸಂಸ್ಥೆಗಳು ವಿತರಿಸಿದ ಗುರುತಿನ ಚೀಟಿ/ ವೇತನ ಚೀಟಿ/ ವೇತನ ಪಡೆದ ಬ್ಯಾಂಕ್ ಪಾಸ್ ಬುಕ್ ಝೆರಾಕ್ಸ್ ಪ್ರತಿ ಇವುಗಳಲ್ಲಿ ಯಾವುದಾದರೊಂದು ನೀಡಬೇಕು.
ಇ-ಶ್ರಮ್ ಕಾರ್ಡ್ ನೋಂದಣಿ ಸಂಖ್ಯೆಯೊಂದಿಗೆ ಅರ್ಜಿ ಸಲ್ಲಿಸಬಹುದು.

ಅರ್ಹ ಮತ್ತು ಆಸಕ್ತಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

ಹಂತ-01: ಮೊದಲು ಅಭ್ಯರ್ಥಿಗಳು ಸೇವಾ ಸಿಂಧುಗೆ(Seva sindhu) ಲಾಗಿನ್(Login) ಆಗಬೇಕು.

ಹಂತ-02: ನಂತರ ಅಪ್ಲೈ ಫಾರ್ ಸರ್ವಿಸಸ್ ನಲ್ಲಿ “ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ”(Karnataka state Gig workers insurance Yojana) ಅನ್ನುವುದರ ಮೇಲೆ ಕ್ಲಿಕ್ ಮಾಡಿ

ಹಂತ-03: ನಂತರ ಧೃಡೀಕರಣವನ್ನು ಮಾಡಿಕೊಳ್ಳಿ

ಹಂತ-04: ಅದಾದ ನಂತರ ಆಧಾರ್ ಕಾರ್ಡನ್ನು ದೃಢೀಕರಣವನ್ನು ಕೂಡ ಮಾಡಿಕೊಳ್ಳಿ.

ಹಂತ-05: ಅರ್ಜಿದಾರರ ವಿವರಗಳನ್ನು ಭರ್ತಿ ಮಾಡಿಕೊಳ್ಳಿ.

ಹಂತ-06: ಕುಟುಂಬದ ಸದಸ್ಯರ ವಿವರಗಳನ್ನು ಕೂಡ ಭರ್ತಿ ಮಾಡಿಕೊಳ್ಳಿ.

ಹಂತ-07: ಘೋಷಣೆ ಅಥವಾ ಡಿಕ್ಲರೇಷನ್.

ಹಾಗೂ ಇನ್ನಿತರ ಮಾಹಿತಿಗಳನ್ನು ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಿ ಪೂರ್ಣಗೊಳಿಸಿ.

tel share transformed

ಮತ್ತು ಅರ್ಜಿ ಸಲ್ಲಿಸಲು ಸಿಎಸ್‌ಸಿ ಸೆಂಟರ್(CSC centere) ಕರ್ನಾಟಕ ಒನ್ (Karnataka One)ಅಥವಾ ಜಿಲ್ಲಾ ಕಾರ್ಮಿಕ ಅಧಿಕಾರಿಗಳವರ ಕಛೇರಿ, ಆಯಾ ತಾಲೂಕಿನ ಕಾರ್ಮಿಕ ನಿರೀಕ್ಷಕರ ಕಛೇರಿಗಳನ್ನು ಸಂಪರ್ಕಿಸಬಹುದಾಗಿದೆ. ಈ ಸೌಲಭ್ಯವನ್ನು ಎಲ್ಲಾ ಗಿಗ್ ಕಾರ್ಮಿಕರು (Gig workers) ಉಪಯೋಗ ಪಡಿಸಿಕೊಳ್ಳಬೇಕು ಎಂದು ನಾವು ಅಶಿಸುತ್ತಿವೆ ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!