agre relaxation scaled

ರಾಜ್ಯದ ಉದ್ಯೋಗಾಂಕ್ಷಿಗಳಿಗೆ ಜಾಕ್‌ಪಾಟ್: ಗರಿಷ್ಠ ವಯೋಮಿತಿ ಏರಿಕೆ ಮಾಡಿ ಆದೇಶ! ಈಗ ಎಷ್ಟಿದೆ ನೋಡಿ? 

Categories:
WhatsApp Group Telegram Group

ಉದ್ಯೋಗ ಮಾಹಿತಿ: ಕರ್ನಾಟಕ ಸರ್ಕಾರವು ನೇರ ನೇಮಕಾತಿಯಲ್ಲಿ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಿ ಆದೇಶಿಸಿದೆ. 2027ರ ಅಂತ್ಯದವರೆಗೆ ಹೊರಬರುವ ಎಲ್ಲಾ ನೋಟಿಫಿಕೇಶನ್‌ಗಳಿಗೆ ಇದು ಅನ್ವಯವಾಗಲಿದ್ದು, 45 ವರ್ಷದವರೆಗೂ ಸರ್ಕಾರಿ ಕೆಲಸ ಪಡೆಯಲು ಅವಕಾಶವಿದೆ.

ಸರ್ಕಾರಿ ಕೆಲಸ ಪಡೆಯಬೇಕು ಎಂಬ ನಿಮ್ಮ ಕನಸಿಗೆ ವಯಸ್ಸು ಅಡ್ಡಿಯಾಗಿದೆಯೇ? ಓದಿ ಮುಗಿಸಿ ವರ್ಷಗಳೇ ಕಳೆದರೂ ನೋಟಿಫಿಕೇಶನ್ ಬಾರದೆ ನೀವು ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಂಡಿದ್ದೀರಾ? ಹಾಗಿದ್ದರೆ ನಿಮಗೊಂದು ಭರ್ಜರಿ ಸಿಹಿ ಸುದ್ದಿ! ರಾಜ್ಯ ಸರ್ಕಾರವು ಲಕ್ಷಾಂತರ ನಿರುದ್ಯೋಗಿಗಳ ದಶಕದ ಬೇಡಿಕೆಗೆ ಕೊನೆಗೂ ಸ್ಪಂದಿಸಿದೆ. ಕರ್ನಾಟಕ ಸಿವಿಲ್ ಸೇವಾ ಹುದ್ದೆಗಳ ನೇರ ನೇಮಕಾತಿಯಲ್ಲಿ ಗರಿಷ್ಠ ವಯೋಮಿತಿಯನ್ನು ಬರೋಬ್ಬರಿ 5 ವರ್ಷಗಳ ಕಾಲ ಹೆಚ್ಚಿಸಿ ಸರ್ಕಾರ ಅಧಿಕೃತ ಗೆಜೆಟ್ ಅಧಿಸೂಚನೆ ಹೊರಡಿಸಿದೆ.

ಯಾರಿಗೆಲ್ಲಾ ಸಿಗಲಿದೆ ಈ ಲಾಭ?

ಈ ಮೊದಲು ಕೇವಲ 3 ವರ್ಷಗಳ ಸಡಿಲಿಕೆಗೆ ಸರ್ಕಾರ ನಿರ್ಧರಿಸಿತ್ತು. ಆದರೆ ಉದ್ಯೋಗಾಕಾಂಕ್ಷಿಗಳು ಮತ್ತು ಜನಪ್ರತಿನಿಧಿಗಳ ಒತ್ತಾಯಕ್ಕೆ ಮಣಿದಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಈಗ ಅದನ್ನು 5 ವರ್ಷಕ್ಕೆ ಏರಿಸಿದೆ. ಅಂದರೆ, ಸಾಮಾನ್ಯ ವರ್ಗದ (General) ಅಭ್ಯರ್ಥಿಗಳು 40 ವರ್ಷದವರೆಗೂ ಮತ್ತು ಮೀಸಲಾತಿ ವರ್ಗದವರು ಅದಕ್ಕಿಂತಲೂ ಹೆಚ್ಚಿನ ವಯಸ್ಸಿನವರೆಗೂ ಅರ್ಜಿ ಸಲ್ಲಿಸಬಹುದು!

ನೆನಪಿರಲಿ, ಇದು ಕಾಯಂ ಬದಲಾವಣೆಯಲ್ಲ!

ಸರ್ಕಾರವು ಈ ಸೌಲಭ್ಯವನ್ನು ‘ಒಂದು ಬಾರಿಯ ಕ್ರಮವಾಗಿ’ ಮಾತ್ರ ನೀಡುತ್ತಿದೆ. ಅಂದರೆ, ಈ ಆದೇಶ ಹೊರಡಿಸಿದ ದಿನಾಂಕದಿಂದ ಡಿಸೆಂಬರ್ 31, 2027ರ ಒಳಗಾಗಿ ಪ್ರಕಟವಾಗುವ ಎಲ್ಲಾ ನೇರ ನೇಮಕಾತಿ ಅಧಿಸೂಚನೆಗಳಿಗೆ ಮಾತ್ರ ಈ 5 ವರ್ಷಗಳ ಹೆಚ್ಚುವರಿ ಸಡಿಲಿಕೆ ಅನ್ವಯವಾಗಲಿದೆ.

ನೂತನ ವಯೋಮಿತಿ ವಿವರ

ಅಭ್ಯರ್ಥಿಗಳ ಪ್ರವರ್ಗ (Category) ಹಳೆಯ ವಯೋಮಿತಿ ನೂತನ ವಯೋಮಿತಿ (5 ವರ್ಷ ಸೇರಿ)
ಸಾಮಾನ್ಯ ಅರ್ಹತೆ (General Merit) 35 ವರ್ಷಗಳು 40 ವರ್ಷಗಳು
ಪ್ರವರ್ಗ 2A, 2B, 3A, 3B 38 ವರ್ಷಗಳು 43 ವರ್ಷಗಳು
ಪರಿಶಿಷ್ಟ ಜಾತಿ / ಪಂಗಡ / ಪ್ರವರ್ಗ-1 40 ವರ್ಷಗಳು 45 ವರ್ಷಗಳು

ಪ್ರಮುಖ ಸೂಚನೆ: 2027ರ ಡಿಸೆಂಬರ್ 31ರ ನಂತರ ಹೊರಬರುವ ಅಧಿಸೂಚನೆಗಳಿಗೆ ಈ ಸಡಿಲಿಕೆ ಅನ್ವಯವಾಗುವುದಿಲ್ಲ. ಆದ್ದರಿಂದ ಮುಂದಿನ ಎರಡು ವರ್ಷಗಳು ಉದ್ಯೋಗಾಕಾಂಕ್ಷಿಗಳಿಗೆ ‘ಗೋಲ್ಡನ್ ಪಿರಿಯಡ್’ ಇದ್ದಂತೆ!

ನಮ್ಮ ಸಲಹೆ

“ವಯೋಮಿತಿ ಹೆಚ್ಚಳವಾಗಿದೆ ಎಂದು ನಿಧಾನಿಸಬೇಡಿ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ 20ರ ಹರೆಯದ ಯುವಕರಿಗೂ ಮತ್ತು 40ರ ಹರೆಯದ ಅಭ್ಯರ್ಥಿಗಳಿಗೂ ಒಂದೇ ಪಶ್ನೆಪತ್ರಿಕೆ ಇರುತ್ತದೆ. ಆದ್ದರಿಂದ, ಓದುವ ವೇಗ ಹೆಚ್ಚಿಸಿ. ವಿಶೇಷವಾಗಿ ದೀರ್ಘಕಾಲದ ನಂತರ ಪರೀಕ್ಷೆ ಬರೆಯುತ್ತಿರುವವರು ಹಳೆಯ ಪ್ರಶ್ನೆಪತ್ರಿಕೆಗಳನ್ನು (Old Question Papers) ಬಿಡಿಸುವುದನ್ನು ಇಂದೇ ಆರಂಭಿಸಿ. ಇದು ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ.”

FAQs

1. ಈ 5 ವರ್ಷಗಳ ಸಡಿಲಿಕೆ ಎಲ್ಲಾ ಹುದ್ದೆಗಳಿಗೂ ಅನ್ವಯವಾಗುತ್ತದೆಯೇ?

ಹೌದು, ರಾಜ್ಯ ಸಿವಿಲ್ ಸೇವೆಯಡಿ ಬರುವ ಎಲ್ಲಾ ‘ನೇರ ನೇಮಕಾತಿ’ ಹುದ್ದೆಗಳಿಗೆ ಇದು ಅನ್ವಯವಾಗಲಿದೆ. ಆದರೆ ಪೊಲೀಸ್ ಇಲಾಖೆಯಂತಹ ದೈಹಿಕ ಸಾಮರ್ಥ್ಯದ ಹುದ್ದೆಗಳಿಗೆ ಪ್ರತ್ಯೇಕ ನಿಯಮಗಳಿರಬಹುದು, ಹಾಗಾಗಿ ಆಯಾ ನೋಟಿಫಿಕೇಶನ್ ಗಮನಿಸಿ.

2. ನಾನು ಈಗಾಗಲೇ ವಯೋಮಿತಿ ಮೀರಿ ಹೋಗಿದ್ದರೆ ಏನು ಮಾಡಬೇಕು?

ಈ ಹೊಸ ಆದೇಶದ ಪ್ರಕಾರ ನೀವು ಅರ್ಹರಾಗುತ್ತೀರಾ ಎಂದು ಕೂಡಲೇ ಚೆಕ್ ಮಾಡಿ. ನೀವು 40 ವರ್ಷದ ಒಳಗಿನ ಸಾಮಾನ್ಯ ಅಭ್ಯರ್ಥಿಯಾಗಿದ್ದರೆ, ಬರುವ ಎಲ್ಲಾ ಐಟಿಐ, ಎಫ್‌ಡಿಎ, ಎಸ್‌ಡಿಎ ಪರೀಕ್ಷೆಗಳಿಗೆ ನೀವು ಈಗ ಅರ್ಹರು!

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories