edb9ccbb e530 4a73 b5e7 d502c926bca0 optimized 300

ಗ್ರಾಮ ಪಂಚಾಯಿತಿ ಚುನಾವಣೆ ವಿಳಂಬ: ರಾಜ್ಯದ ಸಾವಿರಾರು ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಕಕ್ಕೆ ಸರ್ಕಾರ ಆದೇಶ!

WhatsApp Group Telegram Group
ಮುಖ್ಯಾಂಶಗಳು
  • ಪಂಚಾಯತ್ ಸದಸ್ಯರ 5 ವರ್ಷದ ಅವಧಿ ಅಧಿಕೃತವಾಗಿ ಅಂತ್ಯ.
  • ಹೊಸ ಚುನಾವಣೆವರೆಗೆ ಸರ್ಕಾರಿ ಆಡಳಿತಾಧಿಕಾರಿಗಳೇ ಇನ್ನು ಬಾಸ್.
  • ಜಿಲ್ಲಾಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳಲು ಸರ್ಕಾರದಿಂದ ಕಟ್ಟುನಿಟ್ಟಿನ ಸೂಚನೆ.

ಬೆಂಗಳೂರು: ಕರ್ನಾಟಕದ ಗ್ರಾಮೀಣ ರಾಜಕಾರಣದಲ್ಲಿ ಈಗ ಹೊಸ ಸಂಚಲನ ಮೂಡಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಐದು ವರ್ಷಗಳ ಅಧಿಕಾರಾವಧಿ ಪೂರೈಸುತ್ತಿರುವ ಗ್ರಾಮ ಪಂಚಾಯಿತಿಗಳಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಆಡಳಿತಾಧಿಕಾರಿಗಳನ್ನು (Administrators) ನೇಮಕ ಮಾಡಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಹೀಗಿದೆ

ಈ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪೀಠಾಧಿಕಾರಿ ತುರ್ತು ಆದೇಶವನ್ನು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹೊರಡಿಸಿದ್ದಾರೆ. ಅದರಲ್ಲಿ ಸಂವಿಧಾನದ ಅನುಚ್ಛೇಧ 243-E ಉಪಬಂಧದನ್ವಯ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 41 ಹಾಗೂ 42 ರಲ್ಲಿ ಉಪಬಂಧಿಸಿರುವಂತೆ ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಂತೆ ಪಂಚಾಯತ್ ರಾಜ್ ಸಂಸ್ಥೆಗಳ ಸದಸ್ಯರ ಅವಧಿಯು, ಅವುಗಳ ಮೊದಲ ಸಭೆಗಾಗಿ ಗೊತ್ತುಪಡಿಸಿದ ದಿನಾಂಕದಿಂದ 5 ವರ್ಷಗಳ ಅವಧಿಯವರೆಗೆ ಅಸ್ತಿತ್ವದಲ್ಲಿದ್ದು, 5 ವರ್ಷಗಳು ಮುಗಿದ ನಂತರದ ದಿನಾಂಕದಿಂದ ಗ್ರಾಮ ಪಂಚಾಯಿತಿಯ ಅವಧಿಯು ಮುಕ್ತಾಯಗೊಳ್ಳಲಿದೆ. ಈ ಹಿಂದ 2020-20253e ಸಾಲಿಗೆ ರಚಿತವಾಗಿದ್ದ ರಾಜ್ಯದ ಗ್ರಾಮ ಪಂಚಾಯಿತಿಗಳ ಅವಧಿಯು 2026ನೇ ಜನವರಿ, ಫೆಬ್ರವರಿ, ಮಾರ್ಚ್ ಹಾಗೂ ಮುಂದಿನ ತಿಂಗಳುಗಳ ವಿವಿಧ ದಿನಾಂಕಗಳಂದು ಮುಕ್ತಾಯಗೊಳ್ಳುತ್ತವೆ ಎಂದಿದ್ದಾರೆ.

2026-2031ರ ಅವಧಿಗಾಗಿ ಈ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯುವ ದಿನಾಂಕದವರೆಗೆ ಸದರಿ ಗ್ರಾಮ ಪಂಚಾಯಿತಿಗಳಿಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ ರಾಜ್ ಅಧಿನಿಯಮ 1993 ರ ಪ್ರಕರಣ 8(iii) ರನ್ವಯ ಜಿಲ್ಲಾಧಿಕಾರಿಗಳು, ಆಡಳಿತಾಧಿಕಾರಿಗಳನ್ನು ನೇಮಿಸಲು ಅವಕಾಶವಿರುತ್ತದೆ. ಇದರನ್ವಯ ಜಿಲ್ಲಾಧಿಕಾರಿಗಳು ಸಂಬಂಧ ಪಟ್ಟ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ರಚನೆಯಾಗಿರುವ ಹಾಗೂ ಮುಕ್ತಾಯಗೊಂಡಿರುವ ದಿನಾಂಕಗಳನ್ನು ಪಡೆದು ಪರಿಶೀಲಿಸಿ, ಗ್ರಾಮ ಪಂಚಾಯಿತಿಗಳು ಮುಕ್ತಾಯಗೊಳ್ಳಲಿರುವ ದಿನಾಂಕದ ಮುಂದಿನ ದಿನಾಂಕದಿಂದ ಜಾರಿಗೆ ಬರುವಂತ ಆಡಳಿತಾಧಿಕಾರಿಗಳನ್ನು ನೇಮಿಸಿ ಅಧಿಸೂಚಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲು ನಿರ್ದೇಶಿಸಲ್ಪಟ್ಟಿದ್ದೇನೆ ಎಂದಿದ್ದಾರೆ.

WhatsApp Image 2026 01 17 at 12.07.49 PM

ಅಧಿಕಾರ ಹಸ್ತಾಂತರದ ವಿವರ

ಪ್ರಮುಖ ಮಾಹಿತಿ ಮತ್ತು ದಿನಾಂಕಗಳು
ಅಧಿಕಾರಾವಧಿ ಮೊದಲ ಸಭೆಯಿಂದ ಒಟ್ಟು 5 ವರ್ಷಗಳು
ಮುಕ್ತಾಯದ ತಿಂಗಳು ಜನವರಿ, ಫೆಬ್ರವರಿ, ಮಾರ್ಚ್ 2026
ಯಾರ ನೇಮಕ? ಸರ್ಕಾರಿ ಆಡಳಿತಾಧಿಕಾರಿಗಳು
ಯಾರ ಆದೇಶ? ಜಿಲ್ಲಾಧಿಕಾರಿಗಳಿಂದ (DC) ಅಧಿಸೂಚನೆ

ಮುಖ್ಯ ಗಮನಿಸಿ: ನಿಮ್ಮ ಪಂಚಾಯಿತಿಯ ಅವಧಿ ಯಾವತ್ತು ಮುಗಿಯುತ್ತದೆಯೋ, ಅದರ ಮರುದಿನದಿಂದಲೇ ಹಳೇ ಸದಸ್ಯರ ಅಧಿಕಾರ ರದ್ದಾಗುತ್ತದೆ. ಅಲ್ಲಿಂದ ಹೊಸ ಚುನಾವಣೆ ಆಗುವವರೆಗೆ ಸರ್ಕಾರಿ ಅಧಿಕಾರಿಗಳೇ ಎಲ್ಲವನ್ನೂ ನಿರ್ಧರಿಸುತ್ತಾರೆ.

ನಮ್ಮ ಸಲಹೆ

ನಮ್ಮ ಸಲಹೆ: ಪಂಚಾಯಿತಿ ಅವಧಿ ಮುಗಿಯುವ ಹೊತ್ತಿನಲ್ಲಿ ಬಾಕಿ ಇರುವ ಬಿಲ್‌ಗಳು, ಸಹಿ ಆಗಬೇಕಿರುವ ಅರ್ಜಿಗಳು ಅಥವಾ ದಾಖಲೆಗಳಿದ್ದರೆ ಕೂಡಲೇ ಪೂರೈಸಿಕೊಳ್ಳಿ. ಒಮ್ಮೆ ಆಡಳಿತಾಧಿಕಾರಿಗಳ ಕೈಗೆ ಪಂಚಾಯಿತಿ ಹೋದರೆ, ಸಣ್ಣ ಕೆಲಸಗಳಿಗೂ ಸರ್ಕಾರಿ ಪ್ರಕ್ರಿಯೆಗಳು ವಿಳಂಬವಾಗಬಹುದು. ಆದ್ದರಿಂದ ನಿಮ್ಮ ಊರಿನ ಸದಸ್ಯರ ಅವಧಿ ಮುಗಿಯುವ ಮೊದಲೇ ಕೆಲಸಗಳನ್ನು ಮುಗಿಸಿಕೊಳ್ಳುವುದು ಜಾಣತನ.

FAQs (ಸಾಮಾನ್ಯ ಪ್ರಶ್ನೆಗಳು)

1. ಪಂಚಾಯಿತಿ ಸದಸ್ಯರ ಅವಧಿ ಮುಗಿದ ಮೇಲೆ ನಮ್ಮ ಕೆಲಸಗಳಿಗೆ ಯಾರನ್ನು ಸಂಪರ್ಕಿಸಬೇಕು?

ಸದಸ್ಯರ ಅವಧಿ ಮುಗಿದ ನಂತರ ನೀವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಅಥವಾ ಜಿಲ್ಲಾಧಿಕಾರಿಗಳು ನೇಮಿಸಿದ ಆಡಳಿತಾಧಿಕಾರಿಯನ್ನು ಸಂಪರ್ಕಿಸಬೇಕಾಗುತ್ತದೆ. ಸದಸ್ಯರಿಗೆ ಸಹಿ ಮಾಡುವ ಅಧಿಕಾರ ಇರುವುದಿಲ್ಲ.

2. ಮುಂದಿನ ಚುನಾವಣೆ ಯಾವಾಗ ನಡೆಯಬಹುದು?

ಸರ್ಕಾರವು ಆಡಳಿತಾಧಿಕಾರಿಗಳನ್ನು ನೇಮಿಸಿದ ನಂತರ, 2026-2031ರ ಅವಧಿಗೆ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತದೆ. ಅಲ್ಲಿಯವರೆಗೆ ಅಧಿಕಾರಿಗಳೇ ಪಂಚಾಯಿತಿಯ ಮೇಲ್ವಿಚಾರಣೆ ನಡೆಸುತ್ತಾರೆ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories