Picsart 25 02 24 23 31 58 245 scaled

ಅತೀ ಹೆಚ್ಚು  ಬಡ್ಡಿ ಮತ್ತು  ಹಣ  ಸೇಫ್ ಆಗಿರುವ ಟಾಪ್ ಯೋಜನೆಗಳ ಪಟ್ಟಿ ಇಲ್ಲಿದೆ,  

Categories:
WhatsApp Group Telegram Group

ಭಾರತದ ಶ್ರೇಷ್ಠ 9 ಉಳಿತಾಯ ಯೋಜನೆಗಳು(9 Savings Schemes): ನಿಮ್ಮ ಹಣದ ಭದ್ರತೆ ಮತ್ತು ಲಾಭದಾಯಕ ಹೂಡಿಕೆ ಮಾರ್ಗಗಳ ಸಂಪೂರ್ಣ ಮಾಹಿತಿ

ಹಣ ಉಳಿತಾಯ ಮತ್ತು ಹೂಡಿಕೆ(investment) ಮಾಡುವುದು ಜೀವನದಲ್ಲಿ ಆರ್ಥಿಕ ಸುರಕ್ಷತೆ ಪಡೆಯಲು ಅತ್ಯಂತ ಮಹತ್ವದ ಅಂಶ. ಜನರು ಹಣ ಸಂಪಾದನೆ ಮಾಡುವುದು, ಉಳಿಸುವುದು ಮತ್ತು ಅದನ್ನು ಸರಿಯಾದ ಕಡೆ ಹೂಡಿಕೆ ಮಾಡುವುದರಿಂದ ಭವಿಷ್ಯದ ಆರ್ಥಿಕ ತೊಡಕುಗಳನ್ನು ಕಡಿಮೆ ಮಾಡಬಹುದು. ಆದರೆ ಯಾವ ಹೂಡಿಕೆ ಯೋಜನೆಗಳು(Investment plans) ಉತ್ತಮ? ಯಾವ ಯೋಜನೆ ನಿಮ್ಮ ಹಣಕ್ಕೆ ಉತ್ತಮ ಬಡ್ಡಿದರ(interest rate) ನೀಡುತ್ತದೆ? ಯಾವ ಯೋಜನೆ ಹೆಚ್ಚು ಸುರಕ್ಷಿತ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹಣ ಹೂಡಿಕೆಯ ಬಗ್ಗೆ ಜನರು ವಿವಿಧ ಕಲ್ಪನೆಗಳನ್ನು ಹೊಂದಿದ್ದಾರೆ. ಕೆಲವರು ಷೇರು ಮಾರುಕಟ್ಟೆಗೆ(stock market) ಹೂಡಿಕೆ ಮಾಡಬಹುದು, ಆದರೆ ಅದು ಅಪಾಯಕಾರಿ ಎಂದೆನಿಸುತ್ತದೆ. ಕೆಲವರು ಬ್ಯಾಂಕ್ ಠೇವಣಿಗಳನ್ನು(Bank deposits) ಇಷ್ಟ ಪಡುತ್ತಾರೆ, ಆದರೆ ಅವು ಹೆಚ್ಚಿನ ಬಡ್ಡಿದರ ನೀಡುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಸುರಕ್ಷಿತ ಮತ್ತು ಲಾಭದಾಯಕ ಹೂಡಿಕೆ ಆಯ್ಕೆ ಮಾಡುವುದು ಅನಿವಾರ್ಯ.

ಭಾರತ ಸರ್ಕಾರ ಮತ್ತು ವಿವಿಧ ಹಣಕಾಸು ಸಂಸ್ಥೆಗಳು ವಿವಿಧ ಉಳಿತಾಯ ಮತ್ತು ಹೂಡಿಕೆ ಯೋಜನೆಗಳನ್ನು ನಿಯೋಜಿಸಿವೆ. ಈ ಯೋಜನೆಗಳು ನಿಮ್ಮ ಹಣಕ್ಕೆ ಉತ್ತಮ ಬಡ್ಡಿಯನ್ನು ನೀಡುವುದಲ್ಲದೆ, ಭದ್ರತೆಗೂ ಭರವಸೆ ನೀಡುತ್ತವೆ. ಅಂದಹಾಗೆ,

ಭಾರತದಲ್ಲಿ 9 ಅತ್ಯುತ್ತಮ ಉಳಿತಾಯ ಯೋಜನೆಗಳ(Savings Schemes) ಕುರಿತು ಯಾವುವು ಎಂದು ನೋಡೋಣ ಬನ್ನಿ.

1. ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS):
ಬಡ್ಡಿದರ: 8.2% ವಾರ್ಷಿಕ
ಅರ್ಹತೆ: 60 ವರ್ಷ(60 years) ಮೇಲ್ಪಟ್ಟ ಹಿರಿಯ ನಾಗರಿಕರು
ವಿಶೇಷತೆ: ಕಡಿಮೆ ಅಪಾಯದ ಹೂಡಿಕೆ, ತೆರಿಗೆ ಸೌಲಭ್ಯ

2. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC):
ಬಡ್ಡಿದರ: 7.7% ವಾರ್ಷಿಕ
ಅರ್ಹತೆ: ಯಾವುದೇ ಭಾರತೀಯ ನಾಗರಿಕರು(Indian citizens)
ವಿಶೇಷತೆ: ತೆರಿಗೆ ಉಳಿತಾಯ, ಕನಿಷ್ಠ ಅಪಾಯ

3. ಸುಕನ್ಯಾ ಸಮೃದ್ಧಿ ಯೋಜನೆ (SSY):
ಬಡ್ಡಿದರ: 8% ವಾರ್ಷಿಕ
ಅರ್ಹತೆ: 10 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಮಾತ್ರ( only for  below 10 years girls  )
ವಿಶೇಷತೆ: ತೆರಿಗೆ ಸೌಲಭ್ಯ, ಉನ್ನತ ಬಡ್ಡಿದರ

4. ಕಿಸಾನ್ ವಿಕಾಸ್ ಪತ್ರ (KVP):
ಬಡ್ಡಿದರ: 7.5% ವಾರ್ಷಿಕ
ಅರ್ಹತೆ: ಯಾವುದೇ ಭಾರತೀಯ ನಾಗರಿಕರು(Indian citizens)
ವಿಶೇಷತೆ: 115 ತಿಂಗಳಲ್ಲೇ ಹಣ ದ್ವಿಗುಣವಾಗುತ್ತದೆವಾಗುತ್ತದೆ

5. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (POMIS):
ಬಡ್ಡಿದರ: 7.4% ವಾರ್ಷಿಕ
ಅರ್ಹತೆ: ಎಲ್ಲಾ ನಾಗರಿಕರು
ವಿಶೇಷತೆ: ಪ್ರತಿಮಾಸ(every month) ಆದಾಯ ಲಭ್ಯ

6. ಸಾರ್ವಜನಿಕ ಭವಿಷ್ಯ ನಿಧಿ (PPF):
ಬಡ್ಡಿದರ: 7.1% ವಾರ್ಷಿಕ
ಅರ್ಹತೆ: ಎಲ್ಲಾ ಭಾರತೀಯ ನಾಗರಿಕರು
ವಿಶೇಷತೆ: ದೀರ್ಘಾವಧಿ  ಹೂಡಿಕೆ, ತೆರಿಗೆ ಸೌಲಭ್ಯ

7. ಅಂಚೆ ಕಚೇರಿಯ ಸಮಯ ಠೇವಣಿ ಯೋಜನೆ (1-Year TD):
ಬಡ್ಡಿದರ: 6.9% ವಾರ್ಷಿಕ
ಅರ್ಹತೆ: ಎಲ್ಲಾ ನಾಗರಿಕರು
ವಿಶೇಷತೆ: ಶಾರ್ಟ್-ಟರ್ಮ್ ಹೂಡಿಕೆ(Short-term investment)

8. 3 ವರ್ಷಗಳ ಅಂಚೆ ಕಚೇರಿ ಸಮಯ ಠೇವಣಿ ಯೋಜನೆ (3-Year TD):
ಬಡ್ಡಿದರ: 7% ವಾರ್ಷಿಕ
ಅರ್ಹತೆ: ಎಲ್ಲಾ ನಾಗರಿಕರು
ವಿಶೇಷತೆ: ಮಧ್ಯಮ ಅವಧಿಯ ಹೂಡಿಕೆ(medium term investment)

9. 5 ವರ್ಷಗಳ ಅಂಚೆ ಕಚೇರಿ ಸಮಯ ಠೇವಣಿ ಯೋಜನೆ (5-Year TD):
ಬಡ್ಡಿದರ: 7.5% ವಾರ್ಷಿಕ
ಅರ್ಹತೆ: ಎಲ್ಲಾ ನಾಗರಿಕರು
ವಿಶೇಷತೆ: ಉದ್ದಕಾಲದ ಹೂಡಿಕೆ, ತೆರಿಗೆ ಸೌಲಭ್ಯ(Tax relief)

ನಿಮ್ಮ ಹೂಡಿಕೆ ಆಯ್ಕೆಯು ನಿಮ್ಮ ಆರ್ಥಿಕ ಗುರಿ, ಅಪಾಯ ನಿರ್ವಹಣಾ ಸಾಮರ್ಥ್ಯ, ಮತ್ತು ಭವಿಷ್ಯದ ಯೋಜನೆಗಳ ಮೇಲೆ ಅವಲಂಬಿತವಾಗಿದೆ. ಸಣ್ಣ ಅವಧಿಯ ಉದ್ದೇಶಗಳಿಗಾಗಿ ಅಂಚೆ ಠೇವಣಿ ಯೋಜನೆಗಳು(Postal Deposit Schemes) ಉತ್ತಮ ಆಯ್ಕೆಯಾಗಬಹುದು, ದೀರ್ಘಾವಧಿ ಹೂಡಿಕೆಗಾಗಿ PPF ಮತ್ತು NSC ಉತ್ತಮ ಆಯ್ಕೆಯಾಗಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories