8th Pay Commission:  ಕೇಂದ್ರ ಸರ್ಕಾರಿ ನೌಕರರ ವೇತನ ಎಷ್ಟು ಏರಿಕೆ ಆಗುತ್ತೆ ಗೊತ್ತಾ?

8th pay commission

ಮೋದಿ ಸರ್ಕಾರ (Modi government) ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ, ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ (government employees payment) ಭಾರಿ ಹೆಚ್ಚಳದ ನಿರೀಕ್ಷೆ.

ಪ್ರಧಾನಿ (PM) ನರೇಂದ್ರ ಮೋದಿ (Narendra Modi) ನೇತೃತ್ವದ 3.0 ಸರ್ಕಾರ ರಚನೆಯಾಗಿದ್ದು, ಸಂಪುಟ ಸಚಿವರು (Cabinet Ministers) ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ಮೋದಿ ಸರ್ಕಾರ ಮೂರನೇ ಬಾರಿ ಅಧಿಕಾರಕ್ಕೆ ಬಂದಿದೆ. ಈ ಬೆನ್ನಲ್ಲೇ ಸರ್ಕಾರಿ ಉದ್ಯೋಗಿಗಳಿಗೆ ವೇತನದಲ್ಲಿ ಭಾರಿ ಹೆಚ್ಚಳದ ನಿರೀಕ್ಷೆಯಿದೆ. ಅಂದರೆ ಹೊಸದಾಗಿ ರಚನೆಯಾಗಿರುವ ಸರ್ಕಾರದಿಂದ ಈಗ 8ನೇ ವೇತನ ಆಯೋಗ (8th Pay Commission) ರಚನೆ ಸೇರಿದಂತೆ ಹಲವಾರು ನಿರೀಕ್ಷೆಗಳಿವೆ. ಹಿಂದಿನ ನಿದರ್ಶನಗಳ ಪ್ರಕಾರ ಕೇಂದ್ರ ಸರ್ಕಾರವು ಪ್ರತಿ 10 ವರ್ಷಗಳಿಗೊಮ್ಮೆ ಹೊಸ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತಂದಿದೆ. 7ನೇ ವೇತನ ಆಯೋಗ(7ತ್ pay commission)ವು 2016ರ ಜನವರಿಯಲ್ಲಿ ಜಾರಿಗೆ ಬಂದಿದ್ದು, 8 ನೇ ವೇತನ ಆಯೋಗವು ಜನವರಿ 2026 ರಿಂದ ಜಾರಿಗೆ ಬರುವ ಸಾಧ್ಯತೆಯಿದೆ. ಇನ್ನು 1 ಕೋಟಿಗೂ ಅಧಿಕ ಸರಕಾರಿ ನೌಕರರು ಮತ್ತು ಪಿಂಚಣಿದಾರರು 8ನೇ ವೇತನ ಆಯೋಗ (8th pay commission) ರಚನೆಗಾಗಿ ಕಾಯುತ್ತಿದ್ದು, ಸರ್ಕಾರಿ ಸಿಬ್ಬಂದಿಯ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರಕಾರಕ್ಕೆ ಶಿಫಾರಸುಗಳನ್ನು ಸಲ್ಲಿಸಲಿದೆ. ಬಿಜೆಪಿ(BJP) ನೇತೃತ್ವದ ಎನ್‌ಡಿಎ(NDA) ಮೈತ್ರಿಕೂಟ ಸರ್ಕಾರ ಶೀಘ್ರದಲ್ಲೇ 8ನೇ ವೇತನ ಆಯೋಗದ ಬಗ್ಗೆ ಚರ್ಚೆಗಳನ್ನು ಪ್ರಾರಂಭಿಸಲಿದ್ದು, ಇನ್ನೂ ಯಾವುದೇ ರೀತಿಯಾದ ಅಧಿಕೃತ ಘೋಷಣೆಯನ್ನು ಮಾಡಿಲ್ಲ. ಮೋದಿ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ಕೆಲವೇ ತಿಂಗಳುಗಳಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆ ಇದೆ. 8ನೇ ವೇತನ ಆಯೋಗದ (8th Pay Commission) ಕುರಿತ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

8ನೇ ವೇತನ ಆಯೋಗದಿಂದ (8th Pay Commission)ಯಾರಿಗೆಲ್ಲ ಉಪಯೋಗ :

ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಸಂಬಂಧಿಸಿ 8ನೇ ವೇತನ ಆಯೋಗವು ತನ್ನ ಶಿಫಾರಸುಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಈ ಆಯೋಗ ಜಾರಿಯಾದರೆ ಕೇಂದ್ರ ಸರ್ಕಾರಿ(central government) ನೌಕರರ ವೇತನದಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆ ಇದ್ದು, ಕೋಟ್ಯಂತರ ಸರ್ಕಾರಿ ನೌಕರರು ಸೇರಿದಂತೆ ಪಿಂಚಣಿದಾರರಿಗೆ ಉಪಯೋಗವಾಗಲಿದೆ. ಸರಿಸುಮಾರು 49 ಲಕ್ಷ ಸರ್ಕಾರಿ ನೌಕರರು ಮತ್ತು 68 ಲಕ್ಷ ಪಿಂಚಣಿದಾರರು ಇದರ ಉಪಯೋಗವನ್ನು ಪಡೆಯುವ ಸಾಧ್ಯತೆಯಿದೆ.

8ನೇ ವೇತನ ಆಯೋಗದಲ್ಲಿ (8th Pay Commission) ಭಾರಿ ಬದಲಾವಣೆ :

ಕೇಂದ್ರ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗದ ಜತೆಗೆ ಫಿಟ್‌ಮೆಂಟ್ ಅಂಶವನ್ನೂ ಹೆಚ್ಚಿಸಬಹುದು ಎಂಬ ನಿರೀಕ್ಷೆಗಳಿವೆ. ಫಿಟ್‌ಮೆಂಟ್ (fitment) ಅಂಶ ಸೇರಿದಂತೆ ಹಲವು ಬದಲಾವಣೆಗಳನ್ನು ತರುವ ಸಾಧ್ಯತೆ ಇದ್ದು.ಫಿಟ್‌ಮೆಂಟ್ ಅಂಶವು 3.68 ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಫಿಟ್‌ಮೆಂಟ್ ಅಂಶ ಎಂದರೇನು (what is fitment) ?

ಫಿಟ್‌ಮೆಂಟ್ ಅಂಶವೆಂದರೆ ಮೂಲ ವೇತನದಲ್ಲಿನ ಪರಿಷ್ಕರಣೆಯನ್ನು ಸೂಚಿಸುವುದು ಅಂದರೆ ಹಿಂದಿನ ವೇತನದಿಂದ ವೇತನ ಪರಿಷ್ಕೃರಣೆ ಮಾಡಲು ಪರಿಷ್ಕೃತ ವೇತನದ ಲೆಕ್ಕಾಚಾರ ನಡೆಸಲು ವೇತನ ಆಯೋಗವು ಸೂಚಿಸುವ ನಿರ್ದಿಷ್ಟ ಮೌಲ್ಯವಾಗಿದೆ. ಈ ಫಿಟ್‌ಮೆಂಟ್ ಅಂಶವು ಕೇಂದ್ರ ಸರ್ಕಾರಿ ಸೇವೆಗಳಲ್ಲಿರುವ ಎಲ್ಲಾ ಉದ್ಯೋಗಿಗಳಿಗೆ ಅನ್ವಯಿಸುತ್ತದೆ.

8ನೇ ವೇತನ ಆಯೋಗದಲ್ಲಿ (8th Pay Commission) ಮೂಲವೇತನ ಎಷ್ಟಕ್ಕೆ ಏರಿಕೆಯಾಗುತ್ತದೆ?

8ನೇ ವೇತನ ಆಯೋಗದಲ್ಲಿ (8th Pay Commission) ಉದ್ಯೋಗಿಗಳ ಫಿಟ್‌ಮೆಂಟ್ ಅಂಶವು 3.68 ಪಟ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಪ್ರಸ್ತುತ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನ 18,000 ರೂ. ಗಳಾಗಿದ್ದು, ಫಿಟ್‌ಮೆಂಟ್ ಅಂಶ ಹೆಚ್ಚಳದಿಂದ ಅವರ ಮೂಲ ವೇತನ 18,000 ರೂ. ನಿಂದ 26,000 ರೂ. ಗೆ ಏರಿಕೆಯಾಗಲಿದೆ ಎಂಬ ಮಾಹಿತಿ ತಿಳಿದುಬಂದಿದೆ.

8ನೇ ವೇತನ ಆಯೋಗ (8th Pay Commission) ಯಾವಾಗ ಸ್ಥಾಪನೆ?

8ನೇ ವೇತನ ಆಯೋಗವನ್ನು ಸ್ಥಾಪನೆಯಾದ ನಂತರದಲ್ಲಿ ಪ್ರಸ್ತಾವನೆಗಳನ್ನು ಸ್ವೀಕರಿಸಲು 12 ರಿಂದ 18 ತಿಂಗಳುಗಳು (12 to 18 months) ಬೇಕಾಗುತ್ತವೆ, ಅದರ ಬಳಿಕ ಉದ್ಯೋಗಿಗಳ ವೇತನವು ಗಣನೀಯವಾಗಿ ಹೆಚ್ಚಳವಾಗುವ ಸಾಧ್ಯತೆಗಳು ಹೆಚ್ಚಿವೆ. 8ನೇ ವೇತನ ಆಯೋಗ (8th Pay Commission) ಸ್ಥಾಪನೆಯಾದರೆ 8 ಸಾವಿರ ಸಂಬಳ ಹೆಚ್ಚಾಗಲಿದ್ದು, ವರದಿಗಳ ಪ್ರಕಾರ ಹೊಸ ಕ್ಯಾಬಿನೆಟ್ ರಚನೆಯಾದ ಬಳಿಕ, ಡಿಎ-ಡಿಆರ್ ಹೆಚ್ಚಳ ಮತ್ತು ವೇತನ ಹೆಚ್ಚಾಗುವ ಸಾಧ್ಯತೆಗಳಿವೆ. ಆದರೆ ಈ ಕುರಿತಾದಂತೆ ಯಾವುದೇ ರೀತಿಯ ಅಧಿಕೃತ ಘೋಷಣೆಗಳಾಗಿಲ್ಲ.

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!