G20 Summit – ಜಿ20 ಶೃಂಗಸಭೆ ಎಂದರೇನು? ಇದರ ಮಹತ್ವವೇನು ? ಇಲ್ಲಿದೆ ತಪ್ಪದೆ ತಿಳಿದುಕೊಳ್ಳಿ

WhatsApp Image 2023 09 10 at 16.40.16

ಎಲ್ಲರಿಗೂ ನಮಸ್ಕಾರ. ತಮಗೆಲ್ಲರಿಗೂ ತಿಳಿದಿರುವ ಹಾಗೆ G20 ಶೃಂಗಸಭೆ(G20 summit) ಯ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ(The Prime minister Narendra Modi) ಮಾತನಾಡುವ ಮೇಜಿನ ನಮಫಲಾಕದಲ್ಲಿ ದೇಶದ ಹೆಸರು ‘INDIA’ ದಿಂದ ಬದಲು ಮಾಡಿ ‘Bharat’ ಎಂದು ಬರೆಯಲಾಗಿತ್ತು. ಹಾಗೂ ಔತಣಕೂಟಕ್ಕೆ ಭಾರತ ಅಧ್ಯಕ್ಷೆ ದ್ರೌಪದಿ ಮುರ್ಮು ಅವರು ‘ಭಾರತದ ರಾಷ್ಟ್ರಪತಿ’ ಬದಲಿಗೆ ‘ಭಾರತದ ಅಧ್ಯಕ್ಷೆ’ ಎಂದು ಕರೆದುಕೊಳ್ಳುವ ಆಹ್ವಾನಗಳು ಸರ್ಕಾರವು ದೇಶದ ಹೆಸರನ್ನು ಬದಲಾಯಿಸುವ ಊಹೆಯನ್ನು ಹುಟ್ಟುಹಾಕಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

“ಭಾರತ್ “ಮತ್ತು “ಇಂಡಿಯಾ” ಪದಗಳು ವಿವಾದವು ಕಳೆದ ಕೆಲವು ದಿನಗಳಿಂದ ದೇಶದೆಲ್ಲಡೆ ಗಂಭೀರವಾಗಿ ಚರ್ಚಿಸುವಂತಹ ವಿಷಯವಾಗಿದೆ. ಈ ವಿವಾದಗಳ ಕುರಿತು ತಿಳಿಯುವ ಮುಂಚೆ ವಿವಾದ ಬೆನ್ನೆಲೆಯಾಗಿರುವ G20 ಶೃಂಗಸಭೆ (summit) ಎಂದರೇನು? ಈ ಸಭೆಯನ್ನು ನಡೆಸುವ ಉದ್ದೇಶವೇನು? ಯಾರು ಯಾರು ಈ ಸಭೆಯಲ್ಲಿ ಉಪಸ್ಥಿತರಿರುತ್ತಾರೆ? ಹೀಗಿಯೇ ಇನ್ನಿತರೇ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳೋಣ.

G20 ಶೃಂಗಸಭೆ:

G20, ಅಥವಾ Group of Twenty, 19 ಪ್ರತ್ಯೇಕ ದೇಶಗಳು ಮತ್ತು ಯುರೋಪಿಯನ್ ಒಕ್ಕೂಟವನ್ನು ಒಳಗೊಂಡಿರುವ ಅಂತರರಾಷ್ಟ್ರೀಯ ವೇದಿಕೆಯಾಗಿದೆ. ಜಾಗತಿಕ ಆರ್ಥಿಕ ನೀತಿಯ ವಿವಿಧ ಅಂಶಗಳಿಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳು ಉದಾಹರಣೆಗೆ, ಅಂತರರಾಷ್ಟ್ರೀಯ ಹಣಕಾಸು ಸ್ಥಿರತೆ , ಹವಾಮಾನ ಬದಲಾವಣೆ ತಗ್ಗಿಸುವಿಕೆ ಮತ್ತು ಸುಸ್ಥಿರ ಅಭಿವೃದ್ಧಿಯ ಕುರಿತು ಚರ್ಚಿಸುವುದು ಮತ್ತು ಪರಿಹರಿಸಿವುದು ಇದರ ಪ್ರಾಥಮಿಕ ಉದ್ದೇಶವಾಗಿದೆ. G20 ದೇಶಗಳು ವಿಶ್ವದ ಆರ್ಥಿಕತೆಯ ಮಹತ್ವದ ಭಾಗವನ್ನು ಪ್ರತಿನಿಧಿಸುತ್ತವೆ ಮತ್ತು ಜಾಗತಿಕ ಆರ್ಥಿಕ ಆಡಳಿತವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.

whatss

ಈ ಸಭೆಯು 23 ವರ್ಷಗಳ ಹಿಂದೆ, 26 ಸೆಪ್ಟೆಂಬರ್ 1999 ರಲ್ಲಿ ಸ್ಥಾಪಿಸಲಾಯಿತು.  ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ಮೆಕ್ಸಿಕೋ, ದಕ್ಷಿಣ ಕೊರಿಯಾ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ,ಯುನೈಟೆಡ್ ಕಿಂಗ್ಡಮ್ ಯುನೈಟೆಡ್ ಸ್ಟೇಟ್ಸ್,ಆಫ್ರಿಕನ್ ಒಕ್ಕೂಟ,
ಯೂರೋಪಿನ ಒಕ್ಕೂಟ ಸೇರಿದಂತೆ ಒಟ್ಟು 21 ರಾಷ್ಟ್ರಗಳು ಸದಸ್ಯತ್ವವನ್ನು ಹೊಂದಿವೆ.

ಪ್ರತಿ ವರ್ಷವು G20 ಶೃಂಗಸಭೆಯ ಸದಸ್ಯತ್ವ ಹೊಂದಿರುವ ರಾಷ್ಟ್ರಗಳಲ್ಲಿ ಈ ಸಭೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಇದು ಪ್ರತಿ ಸದಸ್ಯರ ಸರ್ಕಾರ ಅಥವಾ ರಾಜ್ಯದ ಮುಖ್ಯಸ್ಥರು , ಹಣಕಾಸು ಮಂತ್ರಿ ಅಥವಾ ಫಾರಿನ್ ಮಿನಿಸ್ಟರ್ ಮತ್ತು ಇತರ ಉನ್ನತ-ಶ್ರೇಣಿಯ ಅಧಿಕಾರಿಗಳ ಉಪಸ್ಥಿತಯಲ್ಲಿ ಸಭೆಯನ್ನು ನಡೆಸಲಾಗುತ್ತದೆ.
ಈ ಬಾರಿ 2023 ರ G20 ಶೃಂಗಸಭೆ ನಮ್ಮ ಭಾರತ ದೇಶದಲ್ಲಿ ನವದೆಹಲಿ ನಡೆಯುತ್ತಿದೆ. ನವದೆಹಲಿ ಶೃಂಗಸಭೆಯು G20 ನ ಹದಿನೆಂಟನೇ ಸಭೆಯಾಗಿದೆ, ಸಭೆಯು 9 ರಿಂದ 10 ಸೆಪ್ಟೆಂಬರ್ 2023 ರ ನಡುವೆ ನಡೆಯುತ್ತಿದೆ. ಇದು ಭಾರತ್ ಮಂಡಪಂ ಇಂಟರ್ನ್ಯಾಷನಲ್ ಎಕ್ಸಿಬಿಷನ್-ಕನ್ವೆನ್ಷನ್ ಸೆಂಟರ್, ಪ್ರಗತಿ ಮೈದಾನ , ನವದೆಹಲಿಯಲ್ಲಿ ನಡೆಯುತ್ತಿದೆ. ಇದು ಭಾರತದಲ್ಲಿ ಮತ್ತು ದಕ್ಷಿಣ ಏಷ್ಯಾದಲ್ಲಿ ನಡೆದ ಮೊದಲ G20 ಶೃಂಗಸಭೆಯಾಗಿದೆ.

‘ಭಾರತ್’ ಮತ್ತು india ವಿವಾದ :

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನವದೆಹಲಿಯ ಭಾರತ್ ಮಂಟಪದಲ್ಲಿ ಜಿ20 ಶೃಂಗಸಭೆಯಲ್ಲಿ ಉದ್ಘಾಟನಾ ಭಾಷಣ ಮಾಡಿದರು. ಕುತೂಹಲಕಾರಿ ಸಂಗತಿಯೆಂದರೆ, ಪ್ರಧಾನಿಯ ಮುಂದೆ ಇಡಲಾದ ನಾಮಫಲಕದಲ್ಲಿ India ಬದಲಿಗೆ ಭಾರತ್ ಎಂದು ಬರೆಯಲಾಗಿದೆ. ಇದಕ್ಕಾಗಿಯೇ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ದೇಶದ ಹೆಸರನ್ನೇ ಬದಲಾಯಿಸಲು ಮುಂದುವರಿದಿದೆ ಎಂದು ದೇಶದಲ್ಲಡೆ ಚರ್ಚಿಸಲಾಗುತ್ತಿದೆ.

20 ಕ್ಕೂ ಹೆಚ್ಚು ಅಧಿಕೃತ ಭಾಷೆಗಳನ್ನು ಹೊಂದಿರುವ 1.4 ಶತಕೋಟಿ ಜನರ ರಾಷ್ಟ್ರದಲ್ಲಿ ‘India’ ಮತ್ತು ‘ಭಾರತ’ ಎರಡನ್ನೂ ಅಧಿಕೃತವಾಗಿ ಬಳಸಲಾಗುತ್ತದೆ. ಆದರೆ ಈ ವಾರದ ಗ್ರೂಪ್ ಓಫ್ 20 (ಜಿ 20) ನಾಯಕರ ಶೃಂಗಸಭೆಯ ಭೋಜನದ ಆಹ್ವಾನದ ನಂತರ ಭಾರತವನ್ನು “ಭಾರತ್” ಎಂದು ಉಲ್ಲೇಖಿಸಿದ ನಂತರ ಈ ಪದವು ವಿವಾದದ ಕೇಂದ್ರವಾಗಿದೆ, ಇದು ರಾಜಕೀಯ ಗದ್ದಲವನ್ನು ಮತ್ತು ದೇಶವನ್ನು ಅದರ ಇತಿಹಾಸವನ್ನು ಏನು ಕರೆಯಬೇಕು ಎಂಬುದರ ಕುರಿತು ಸಾರ್ವಜನಿಕ ಚರ್ಚೆಯನ್ನು ಉತ್ತೇಜಿಸಿತು.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಆಮಂತ್ರಣದ ನಂತರ ಶೃಂಗಸಭೆಯ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಧಾನ್ ಮಂತ್ರಿ ಮೋದಿ ಅವರ ಮುಂದೆ ಇಡಲಾದ ನಾಮಫಲಕದಲ್ಲಿ ದೇಶವು ಬಳಸುತ್ತಿದ್ದ ನಾಮಕರಣದ ಸಂಪ್ರದಾಯದಲ್ಲಿ ಗಮನಾರ್ಹ ಬದಲಾವಣೆಯನ್ನು ಗುರುತಿಸಿದೆ.

ಈ ಕಾಯ್ದೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಕೇಂದ್ರ ಸರ್ಕಾರವನ್ನು ವಿರೋಧ ಪಕ್ಷದ ನಾಯಕರು ಟೀಕಿಸಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಬಿಜೆಪಿ ಸರ್ಕಾರವು ‘India’ ಮತ್ತು ‘ಭಾರತ’ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದೆ.

ಜುಲೈನಲ್ಲಿ, 28 ಭಾರತೀಯ ವಿರೋಧ ಪಕ್ಷಗಳ ನಾಯಕರು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿಯನ್ನು ಸೋಲಿಸುವ ಪ್ರಯತ್ನದಲ್ಲಿ, ಕಾಂಗ್ರೆಸ್ ನೇತೃತ್ವದ ಈ ಮಿತ್ರಪಕ್ಷಗಳು ಒಗ್ಗೂಡಿ, INDIA ( Indian National Developmental Inclusive Alliance) ಎಂದು ಹೆಸರಿಟ್ಟಿದೆ. ಹಾಗಾಗಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ದೇಶದ ಹೆಸರನ್ನೇ ಬದಲಾಯಿಸಲು ನಿರ್ಧರಿಸಿದೆ ಎಂದು ಚರ್ಚೆಯಿದೆ.

ಸೆಪ್ಟೆಂಬರ್ 8 ಶುಕ್ರವಾರದಂದು, ವಿಶ್ವಸಂಸ್ಥೆಯು ವಿಶ್ವಸಂಸ್ಥೆಯ ದಾಖಲೆಗಳಲ್ಲಿ ಭಾರತದ ಹೆಸರನ್ನು ಭಾರತ್ ಎಂದು ಬದಲಾಯಿಸುವುದಾಗಿ ಹೇಳಿದೆ, ನವದೆಹಲಿಯು ಎಲ್ಲಾ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದಾಗ ನಂತರ, ” ಭಾರತವು ಹೆಸರನ್ನು ಬದಲಾಯಿಸುವ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದಾಗ, ಅವರು ನಮಗೆ ತಿಳಿಸುತ್ತಾರೆ ಮತ್ತು ನಾವು ಯುಎನ್ (ರೆಕಾರ್ಡ್ಸ್ ) ನಲ್ಲಿ ಹೆಸರನ್ನು ಬದಲಾಯಿಸುತ್ತೇವೆ” ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಮುಖ್ಯ ವಕ್ತಾರ ಸ್ಟೀಫನ್ ಡುಜಾರಿಕ್ NDTV ಗೆ ತಿಳಿಸಿದರು.

tel share transformed

ಮುಂಬರುವ  ಐದು ದಿನಗಳ ವಿಶೇಷ ಸಂಸತ್ ಅಧಿವೇಶನದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು “India” ಹೆಸರನ್ನು “ಭಾರತ್” ಎಂದು ಅಧಿಕೃತವಾಗಿ ಬದಲಾಯಿಸಬಹುದು ಎಂಬ ಊಹಾಪೋಹಗಳು ಕೂಡ ಹರಡಿವೆ.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!