ವೃತ್ತಿ ಪ್ರೋತ್ಸಾಹ ಯೋಜನೆ – 50 ಸಾವಿರ ಉಚಿತ ಸಹಾಯಧನಕ್ಕೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ

WhatsApp Image 2023 09 14 at 07.48.50

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, 50% ಸಬ್ಸಿಡಿ ಅನ್ನು ತೆಗೆದುಕೊಳ್ಳಬಹುದಾದಂತಹ ವೃತ್ತಿ ಪ್ರೋತ್ಸಾಹ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ವೃತ್ತಿ ಪ್ರೋತ್ಸಾಹ ಯೋಜನೆಗೆ ಆನ್ಲೈನ್ ಅರ್ಜಿ ಸಲ್ಲಿಸಿ ಸರ್ಕಾರದ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ 2023 – 24ನೇ ಸಾಲಿನಲ್ಲಿ ಸಿಗುವ ವೃತ್ತಿ ಪ್ರೋತ್ಸಾಹ ಸಾಲದ ಯೋಜನೆಯಲ್ಲಿ 50 % ಸಬ್ಸಿಡಿಯೊಂದಿಗೆ 1 ಲಕ್ಷ ಸಾಲ ಪಡೆಯಬಹುದಾಗಿದೆ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ವೃತ್ತಿ ಪ್ರೋತ್ಸಾಹ ಸಾಲ ಯೋಜನೆ(vrutti protsaha loan scheme) 2023:

ನೀವೇನಾದರೂ ಹೊಸ ವೃತ್ತಿ ಕೆಲಸವನ್ನು ಆರಂಭಿಸಲು ಯೋಚನೆ ಮಾಡುತ್ತಿದ್ದೀರಿಯೇ ? ಹೊಸ ವೃತ್ತಿ ಪ್ರಾರಂಭ ಮಾಡಲು ಹಣವಿಲ್ಲವೆಂದು ಚಿಂತಿಸುತ್ತಿದ್ದೀರಿಯೇ? ಈಗ ಆ ಯೋಚನೆ ಮಾಡದಿರಿ, ಸರಕಾರದಿಂದ ನಿಮ್ಮ ಹೊಸ ವೃತ್ತಿ ಆರಂಭಕ್ಕೆ ಸಹಾಯಧನವನ್ನು ಪಡೆಯಬಹುದು.

whatss

ಹೌದು, ಸರ್ಕಾರ(goverment) ಪ್ರೋತ್ಸಾಹ ಯೋಜನೆಯನ್ನು ಕೈಗೊಂಡಿದೆ ಈ ಯೋಜನೆ ಅಡಿಯಲ್ಲಿ ಅಲ್ಪಸಂಖ್ಯಾತರ ಸಮುದಾಯದ  (Minorities) ಜನರಿಗೆ ಯಾವುದೇ ತಮ್ಮ ಹೊಸ ವೃತ್ತಿಯನ್ನು ಪ್ರಾರಂಭಿಸಲು ಅಥವಾ ಸ್ಥಾಪಿಸಲು ಸರ್ಕಾರದ ನಿಗಮದಿಂದ ಶೇಕಡ 50%  ಸಹಾಯಧನದೊಂದಿಗೆ 1 ಲಕ್ಷ ರೂ ಸಾಲವನ್ನು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ(Karnataka Minorities Development Corporation Limited) ನೀಡಲಾಗುವುದು.

ಯಾವ ವೃತ್ತಿಗಳಿಗೆ ಸಾಲವನ್ನು ನೀಡಲಾಗುತ್ತದೆ?:

ಹಣ್ಣು ಹಂಪಲು , ತರಕಾರಿ ,ಕೋಳಿ ಮತ್ತು ಮೀನು ಮಾರಾಟ ಎಳನೀರು ,ಕಬ್ಬಿನ ಹಾಲು ,ತಂಪು ಪಾನೀಯ ಮಾರಾಟ ,ಬೇಕರಿ ,ಲಾಂಡ್ರಿ , ಡ್ರೈ ಕ್ಲೀನಿಂಗ್ , ಹೇರ್ ಡ್ರೆಸ್ಸಿಂಗ್  ಸಲೂನ್, ಬ್ಯೂಟಿ ಪಾರ್ಲರ್ , ವಾಟರ್ ವಾಶ್ ಸರ್ವಿಸ್ ,ಪಂಚರ್ ಶಾಪ್ , ಮೆಕಾನಿಕ್ ಶಾಪ್, ದ್ವಿಚಕ್ರ ತ್ರಿಚಕ್ರ ವಾಹನ ರಿಪೇರಿ ,ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ ರಿಪೇರಿ , ರೆಫ್ರಿಜರೇಟರ್ ಮೋಟಾರ್ ರೇವೆಂಡಿಂಗ್ ವರ್ಕ್ , ಬಿದರಿ ವೇರ್ ಕೆಲಸ ,ರೇಷ್ಮೆ ರೀಲಿಂಗ್ ಮತ್ತು ಟೆಸ್ಟಿಂಗ್ ,ಗೊಂಬೆ ತಯಾರಿಕೆದವರಿಗೆ ಸಾಲ ಮತ್ತು ಸಹಾಯಧನದ ಸೌಲಭ್ಯ ಒದಗಿಸಲಾಗುವುದು.

ವೃತ್ತಿ ಪ್ರೋತ್ಸಾಹ ಸಾಲ ಯೋಜನೆಯ 2023 ಸಂಕ್ಷಿಪ್ತ ವಿವರಣೆ :

ಯೋಜನೆಯ ಹೆಸರು : ವೃತ್ತಿ ಪ್ರೋತ್ಸಾಹ ಸಾಲ ಯೋಜನೆ
ಸಹಾಯದನದ ಮೊತ್ತ  : ಶೇ 50% ಸಹಾಯಧನದೊಂದಿಗೆ 1 ಲಕ್ಷ ರೂ ಸಾಲ
ಅರ್ಜಿದಾರರ ವಯಸ್ಸು  : 18 ರಿಂದ 55 ವರ್ಷ ನಿಗಮದ ಹೆಸರು  : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮಂಡಳಿ
ಅರ್ಜಿ ಮೋಡ್  : online
ಅಧಿಕೃತ ವೆಬ್ ಸೈಟ್ : kmdc.karnataka.gov.in/
ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ : kmdconline.karnataka.gov.in
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: sep 25, 2023

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ವೃತ್ತಿ ಪ್ರೋತ್ಸಾಹ ಸಾಲ ಯೋಜನೆಯ 2023 ಅರ್ಜಿ ಸಲ್ಲಿಸಲು ಅರ್ಹ ಮಾನತ್ಯೆಗಳು :

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ 2023 -24 ನೇ ಸಾಲಿನಲ್ಲಿ ವೃತ್ತಿ ಪ್ರೋತ್ಸಾಹ ಯೋಜನೆ ಅಡಿಯಲ್ಲಿ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಮುಸ್ಲಿಂ ,ಕ್ರಿಶ್ಚಿಯನ್ ,ಜೈನರು, ಬೌದ್ಧರು, ಸಿಖ್ಖರು ಮತ್ತು ಪಾರ್ಸಿ ಜನಾಂಗದವರಿಗೆ ಸಾಲ ಮತ್ತು ಸಹಾಯಧನದ ಸೌಲಭ್ಯವನ್ನು ನೀಡಲಾಗುತ್ತದೆ.

ಅರ್ಜಿದಾರರು ರಾಜ್ಯದ ಖಾಯಂ ನಿವಾಸಿ ಆಗಿರಬೇಕು.

ಅರ್ಜಿದಾರರು ವಯೋಮಿತಿ 18 ರಿಂದ 55 ವರ್ಷದೊಳಗಿರಬೇಕು.

ಅಲ್ಪಸಂಖ್ಯಾತರ ಸಮುದಾಯದ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ.

ಅರ್ಜಿದಾರರ ಬೇರೆ ಯಾವುದೇ ನಿಗಮದ ಸಾಲ ಸೌಲಭ್ಯವನ್ನು ಪಡೆದಿರಬಾರದು.

ವೃತ್ತಿ ಪ್ರೋತ್ಸಾಹ ಸಾಲ ಯೋಜನೆಗೆ ಬೇಕಾಗಿರುವ ದಾಖಲೆಗಳು :

ಯೋಜನಾ ವರದಿ
ಜಾತಿ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ಆಧಾರ್ ಕಾರ್ಡ್ ಪ್ರತಿ
ಬ್ಯಾಂಕ್ ಪಾಸ್ ಬುಕ್ ಪ್ರತಿ
ಖಾತರಿ ನೀಡುವವರ ಸ್ವಯಂ ಘೋಷಣೆ
ಸ್ವಯಂ ಘೋಷಣೆ ಪತ್ರ

Picsart 23 07 16 14 24 41 584 transformed 1

ಅರ್ಹ ಅಭ್ಯರ್ಥಿಗಳು ಈ ಮೇಲೆ ತಿಳಿಸಿದ ವಿವರವನ್ನು ತಿಳಿದು ಪರಿಶೀಲಿಸಿ, ಅಗತ್ಯ ದಾಖಲೆಗಳೊಂದಿಗೆ ಆನ್ ಲೈನ್(online) ಮೂಲಕ ಅಧಿಕೃತ ವೆಬ್ ಸೈಟ್ ಅಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

One thought on “ವೃತ್ತಿ ಪ್ರೋತ್ಸಾಹ ಯೋಜನೆ – 50 ಸಾವಿರ ಉಚಿತ ಸಹಾಯಧನಕ್ಕೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ

Leave a Reply

Your email address will not be published. Required fields are marked *