ಆಸ್ತಿ ತೆರಿಗೆ ಮೇಲೆ 5% ರಿಯಾಯಿತಿ..! ಏ.30 ಲಾಸ್ಟ್‌ ಡೇಟ್..! ಈ ರೀತಿ ಮಾಡಿದ್ರೆ ಅನ್ವಯ.

Picsart 25 04 23 00 13 37 223

WhatsApp Group Telegram Group

ಬಿಬಿಎಂಪಿಯಿಂದ ಶೇ. 5 ರಿಯಾಯಿತಿ: ಏಪ್ರಿಲ್ 30ರೊಳಗೆ ಆಸ್ತಿ ತೆರಿಗೆ ಪಾವತಿಸಿ, ಉಳಿತಾಯದ ಜೊತೆಗೆ ನಗರಾಭಿವೃದ್ಧಿಗೆ ಶ್ರಮಿಸಿ!

ಬೆಂಗಳೂರು ನಗರದ ನಿವಾಸಿಗಳಿಗೆ ಆರ್ಥಿಕ ನಿಟ್ಟುಸಿರು ನೀಡುವಂತಹ ಸಿಹಿ ಸುದ್ದಿ ಹೊರಬಿದ್ದಿದೆ. ಹಲವಾರು ರೀತಿಯ ಧರೆಯರಿಗೆಗಳ ನಡುವೆ ಈ ಸುದ್ದಿ ಜನರಲ್ಲಿ ಹೆಚ್ಚು ಸಂತೋಷವನ್ನು ಉಂಟು ಮಾಡಿದೆ.ನಿತ್ಯಜೀವನದ ಬೇಡಿಕೆಗಳಿಂದ ಬಡ್ತಿಯಾದ ಹಣಕಾಸು ಒತ್ತಡದ ನಡುವೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (Bruhat Bengaluru Mahanagara Palike) ಮುಂದಿಟ್ಟಿರುವ ಈ ಹೊಸ ರಿಯಾಯಿತಿ ಯೋಜನೆ ಹಲವು ಮನೆಮಂದಿಗೆ ತಾತ್ಕಾಲಿಕವಾಗಿ ಸ೦ತೋಷ ತರಲಿದ್ದು, ಬಿಬಿಎಂಪಿಯ ಆದಾಯ ಗುರಿಗೂ ಸಹಕಾರ ನೀಡಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ದಿನದಿಂದ ದಿನಕ್ಕೆ ನಗರ ಜೀವನದ ವೆಚ್ಚಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಬಿಬಿಎಂಪಿ(BBMP) ಯಿಂದ ನೀಡಲ್ಪಟ್ಟಿರುವ ಹೊಸ ಆಸ್ತಿ ತೆರಿಗೆ ರಿಯಾಯಿತಿಯ ಘೋಷಣೆ ನಿಜಕ್ಕೂ ನಿರೀಕ್ಷೆಗೂ ಮೀರಿ ಸಂತೋಷ ತಂದಿದೆ. ಇದು ಕೇವಲ ಹಣ ಉಳಿಸುವ (Money saving) ಅವಕಾಶವಷ್ಟೇ ಅಲ್ಲ, ಬಿಬಿಎಂಪಿಯ ಆದಾಯ ಗುರಿ ತಲುಪಿಸಲು ನಾಗರಿಕರ ಸಹಭಾಗಿತ್ವವನ್ನೂ ಒತ್ತಿಹೇಳುವ ಮಹತ್ವದ ಹೆಜ್ಜೆಯಾಗಿದೆ.

2025-26ನೇ ಆರ್ಥಿಕ ವರ್ಷದ ಶೇ. 5 ರಿಯಾಯಿತಿ ಯೋಜನೆ:

2025-26ನೇ ಹಣಕಾಸು (Finance) ವರ್ಷಕ್ಕೆ ಬಿಬಿಎಂಪಿ ನೀಡಿರುವ ವಿಶಿಷ್ಟ ಅವಕಾಶವೇನೆಂದರೆ ಯಾರಾದರೂ ಈ ಹೊಸ ಆರ್ಥಿಕ ವರ್ಷದ ಆಸ್ತಿ ತೆರಿಗೆಯನ್ನು ಪೂರ್ಣ ಪ್ರಮಾಣದಲ್ಲಿ, ಏಪ್ರಿಲ್ 30ರ ಒಳಗಾಗಿ ಪಾವತಿಸಿದರೆ, ಅವರಿಗೆ ಶೇ. 5ರಷ್ಟು ರಿಯಾಯಿತಿ ಲಭಿಸುತ್ತದೆ. ಈ ರಿಯಾಯಿತಿ ಪಡೆಯಲು ಬಿಬಿಎಂಪಿಯು ಎಲ್ಲರಿಗೂ ಆದಷ್ಟು ಬೇಗ ತೆರಿಗೆ ಪಾವತಿಸುವಂತೆ (Paying tax) ಮನವಿ ಮಾಡಿದೆ. ಈ ಆಫರ್ ಶ್ರೇಷ್ಠ ಮೊತ್ತದ ಉಳಿತಾಯಕ್ಕೆ ದಾರಿ ಮಾಡಿಕೊಡುತ್ತದೆ.

ಈ ಹಿಂದೆ ಇದೇ ಯೋಜನೆ ಅದ್ಭುತ ಯಶಸ್ಸನ್ನು ಕಂಡಿತ್ತು :

ಹೌದು ಈ ಯೋಜನೆ ಹೊಸದೇನಲ್ಲ, 2024-25ನೇ ಹಣಕಾಸು ವರ್ಷದಲ್ಲಿಯೇ ಇದೇ ಮಾದರಿಯ ರಿಯಾಯಿತಿ ಘೋಷಣೆಯೊಂದಿಗೆ ಬಿಬಿಎಂಪಿಗೆ ಉತ್ತಮ ತೆರಿಗೆ ಸಂಗ್ರಹ (tax collection) ಸಾಧ್ಯವಾಗಿತ್ತು. 2023-24 ರಲ್ಲಿ  ಬಿಬಿಎಂಪಿ ರೂ. 3,918 ಕೋಟಿ ತೆರಿಗೆ ಸಂಗ್ರಹಿಸಿದ್ದರೆ, 2024-25 ರಲ್ಲಿ ಅದು ರೂ. 4,930 ಕೋಟಿ ರೂಪಾಯಿಗೆ ಏರಿಕೆಯಾಗಿದ್ದು, ಶೇ. 25ರಷ್ಟು ಏರಿಕೆಯಾಗಿರುವುದು ಗಮನಾರ್ಹ. ಆದರೆ ಬಿಬಿಎಂಪಿಯ ಗುರಿ ರೂ. 5,200 ಕೋಟಿಯಾಗಿತ್ತು. ಆದರೆ ಆ ಗುರಿಯನ್ನು ತಲುಪಲು ಸಾಧ್ಯವಾದದಿದ್ದರೂ ಕೂಡ, ಬಿಬಿಎಂಪಿಯು ತನ್ನ ಗುರಿಯ ಶೇ. 94 ರಷ್ಟು ಸಂಪಾದಿಸಿದೆ.

2025-26 ಕ್ಕೆ ಬಿಬಿಎಂಪಿಯ ಹೊಸ ಗುರಿ ₹6,000 ಕೋಟಿ:

ಹೊಸ ಹಣಕಾಸು ವರ್ಷಕ್ಕೆ ಬಿಬಿಎಂಪಿಯು ತನ್ನ ಗುರಿಯನ್ನು ಇನ್ನಷ್ಟು ಹೆಚ್ಚಿಸಿ, 6,000 ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸಬೇಕೆಂಬ ಮಹತ್ತರ ಉದ್ದೇಶವನ್ನು (Purpose) ಹೊಂದಿದೆ. ಈ ಗುರಿಗೆ ತಲುಪುವ ಸಲುವಾಗಿ ಆರಂಭದ ದಿನಗಳಿಂದಲೇ ರಿಯಾಯಿತಿ ಮೂಲಕ ಪಾವತಿದಾರರನ್ನು ಪ್ರೋತ್ಸಾಹಿಸುವುದು ಬಿಬಿಎಂಪಿಯ ತಂತ್ರವಾಗಿದೆ.

ಇನ್ನು, ವಿವಿಧ ವಲಯಗಳಲ್ಲಿ ಯಲಹಂಕ ಮತ್ತು ಮಹದೇವಪುರ ವಲಯಗಳು ಮಾದರಿಯಾಗಿವೆ.  ಯಲಹಂಕದಲ್ಲಿ ಗುರಿಯಂತೆ ರೂಪಾಯಿ 445 ಕೋಟಿ ತೆರಿಗೆ ಸಂಗ್ರಹವಾಗಬೇಕಾಗಿದ್ದು, ಅದಕ್ಕಿಂತ ಹೆಚ್ಚು ಅಂದರೆ ರೂ. 464 ಕೋಟಿ ಸಂಗ್ರಹವಾಗಿದೆ. ಮಹದೇವಪುರ ವಲಯದಲ್ಲೂ ರೂ. 1,309 ಕೋಟಿಯ ಗುರಿಗೆ ಬದಲಾಗಿ ರೂ. 1,310 ಕೋಟಿ ಸಂಗ್ರಹವಾಗಿದೆ. ಐಟಿ ಕಂಪನಿಗಳು, ಕಚೇರಿಗಳಿರುವ ಈ ಪ್ರದೇಶದ ಪಾಲು ನಗರದ ಒಟ್ಟು ಆಸ್ತಿ ತೆರಿಗೆಯಲ್ಲಿ ಶೇ. 26 ಕ್ಕಿಂತ ಹೆಚ್ಚು ಇದೆ.

ಈ ಅಂಕಿ ಅಂಶಗಳು ಬಿಬಿಎಂಪಿಯ ನಿರಂತರ ಪರಿಶ್ರಮ ಮತ್ತು ಸುಧಾರಿತ ಕಾರ್ಯಪದ್ಧತಿಯನ್ನು ಪ್ರತಿಬಿಂಬಿಸುತ್ತವೆ. ನಾಗರಿಕರಲ್ಲಿ ತೆರಿಗೆ ಪಾವತಿಯ ಜವಾಬ್ದಾರಿ (Responsibility for payment of tax) ಕುರಿತು ಸಾಕಷ್ಟು ಅರಿವು ಮೂಡಿಸುತ್ತಿದೆ. ಶೇ. 5ರಷ್ಟು ರಿಯಾಯಿತಿ ಪಡೆಯುವುದು ಕೇವಲ ವೈಯಕ್ತಿಕ ಲಾಭವಷ್ಟೇ ಅಲ್ಲದೆ, ನಗರಾಭಿವೃದ್ಧಿಗೆ ನಮ್ಮ ಪಾಲು ಸಲ್ಲಿಸುವ ಉದಾತ್ತ ನಡೆ ಕೂಡ ಹೌದು.

ಬಿಬಿಎಂಪಿಯ ಈ ಸದುದ್ದೇಶಿತ ಯೋಜನೆ, ಮುಂಚಿತ ಪಾವತಿಯನ್ನು ಬೆಳೆಸುವುದರಲ್ಲಿ ಪೂರಕವಾಗಿದ್ದು, ಸಾರ್ವಜನಿಕ ಪಾಲುದಾರಿಕೆಗೆ ನಿಖರ ಮಾದರಿ ನಿರ್ಮಾಣವಾಗುತ್ತಿದೆ. ಹೀಗಾಗಿ, ಈ ಬಿಗ್ ಆಫರ್‌ನ್ನು (Big offer) ಸದುಪಯೋಗಪಡಿಸಿಕೊಳ್ಳಿ. ಏಪ್ರಿಲ್ 30ರೊಳಗೆ ನಿಮ್ಮ ಆಸ್ತಿ ತೆರಿಗೆ ಪಾವತಿಸಿ, ಶೇ. 5 ರಿಯಾಯಿತಿಯ ಲಾಭ ಪಡೆದು, ಸುಸಜ್ಜಿತ ನಗರಾಭಿವೃದ್ಧಿಗೆ ಕೈಜೋಡಿಸೋಣ!

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!