ನೀವು ಹೊಸ ಮೊಬೈಲ್ ಖರೀದಿ ಮಾಡುವಾಗ ಎಲ್ಲಾ ಫೀಚರ್ಗಳನ್ನು ಒಮ್ಮೆ ಬೇರೆ ಬೇರೆ ಮೊಬೈಲ್ ಫೋನ್ಗಳ ಜೊತೆ ಕಂಪೇರ್ ಮಾಡಿ ನೋಡಬೇಕಾಗುತ್ತದೆ. ಒಂದು ವೇಳೆ ಐವತ್ತು ಸಾವಿರಕ್ಕಿಂತ ಹೆಚ್ಚಿನ ಹಣ ಕೊಟ್ಟು ಮೊಬೈಲ್ ಖರೀದಿಸುವಾಗ ಖಂಡಿತವಾಗಿಯೂ ನಾವು ಆ ಬಜೆಟ್ ನಲ್ಲಿ ಸಿಗುವ ಎಲ್ಲಾ ಮೊಬೈಲ್ ಫೋನ್ಗಳ ಜೊತೆಗೆ ಫೀಚರ್ಗಳನ್ನು ಅಳೆದು ತೂಗಿ ನೋಡಬೇಕಾಗುತ್ತದೆ. ಹೌದು ಇತ್ತೀಚೆಗೆ xiaomi 14 ಮತ್ತು ಒನ್ ಪ್ಲಸ್ 12 ಮೊಬೈಲ್ ಫೋನ್ ಗಳು ಬಾರಿ ಸದ್ದು ಮಾಡುತ್ತಿವೆ. ಈ ಎರಡು ಮೊಬೈಲ್ ಫೋನ್ ಗಳಲ್ಲಿ ಸ್ನ್ಯಾಪ್ ಡ್ರಾಗನ್ 8 Gen 3 ಇರುವುದರಿಂದ ತುಂಬಾ ಜನರಿಗೆ ಯಾವ ಫೋನ್ ತೆಗೆದುಕೊಳ್ಳಬೇಕು ಎಂದು ಗೊಂದಲವಾಗುವುದು ಸಹಜ. ಹಾಗಾಗಿ ಇವತ್ತಿನ ವರದಿಯಲ್ಲಿ ಎರಡು ಮೊಬೈಲ್ ಫೋನ್ಗಳಲ್ಲಿ ಎನಿಲ್ಲಾ ವ್ಯತ್ಯಾಸಗಳಿವೆ ಎನ್ನುವುದನ್ನು ತುಂಬಾ ಸರಳವಾಗಿ ಕೆಳಗೆ ವಿವರಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Xiaomi 14 vs OnePlus 12:
ಈ ಎರಡು ಮೊಬೈಲ್ ಫೋನ್ಗಳ ಎಲ್ಲಾ ಫೀಚರ್ ಗಳ ತ್ವರಿತ ನೋಟ ಇಲ್ಲಿದೆ
[wptb id=18201]
Oneplus 12 ಮತ್ತು Xiaomi 14 ಮೊಬೈಲ್ ಫೋನ್ ಗಳ ಲುಕ್ ನಲ್ಲಿ ನಾವು ಹಲವಾರು ವ್ಯತ್ಯಾಸಗಳನ್ನು ಗಮನಿಸಬಹುದು. Xiaomi ವಿನ್ಯಾಸವು ನೋಡಲು ತುಂಬಾ ಸರಳವಾಗಿ ಮತ್ತು ಸುಂದರವಾಗಿ ಕಾಣುತ್ತದೆ. ಮೊಬೈಲ್ ಹಿಂಭಾಗದಲ್ಲಿ ಆಯತಾಕಾರದ ಕ್ಯಾಮೆರಾ ಸೆಟ್ ಅಪ್ ಹೊಂದಿದೆ. ಆದರೆ Oneplus 12 ವೃತ್ತಾಕಾರದ ಕ್ಯಾಮೆರಾ ಸೆಟ್ ಅಪ್ ನಲ್ಲಿ ರೌಂಡ್ ಹಂಪ್ ಹೊಂದಿದೆ.

ಇನ್ನು ಮೊಬೈಲ್ ಫೋನ್ ಬಾಳಿಕೆ ನೋಡೋದಾದ್ರೆ Xiaomi 12 ನಲ್ಲಿ ಸಾಮಾನ್ಯ ಗೊರಿಲ್ಲಾ ಗ್ಲಾಸ್ ಇದೇ. ಇದಕ್ಕೆ ಹೋಲಿಸಿದರೆ Oneplus 12 ಹಿಂಬಾಗದಲ್ಲಿ Gorilla Glass Victus 2 ಹೊಂದಿದ್ದು ಒನ್ ಪ್ಲಸ್ 12 ಬೆಟರ್ ಅನಿಸುತ್ತದೆ.
ಆದರೆ ನೀವು ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಫೀಚರ್ ಎಂದರೆ Xiaomi 14 ನಲ್ಲಿ ಉತ್ತಮವಾದ IP68 ವಾಟರ್ ಪ್ರೂಫ್ ರೇಟಿಂಗ್ ಹೊಂದಿದ್ದು. 30 ನಿಮಿಷಗಳ ಕಾಲ ನೀವು ಮೊಬೈಲ್ ಅನ್ನ ಒಂದುವರೆ ಮೀಟರ್ ನೀರಿನ ಒಳಗೆ ಮುಳುಗಿಸಿದರು ಏನು ಆಗುವುದಿಲ್ಲ.

OnePlus 12 IP65 ರೇಟಿಂಗ್ ಅನ್ನು ಹೊಂದಿದೆ, ಇದು ನೀರಿನ ಹನಿಗಳ ವಿರುದ್ಧ ಮಾತ್ರ ರಕ್ಷಿಸುತ್ತದೆ, ಆದ್ದರಿಂದಮಿಸ್ ಆಗಿ ನೀರಲ್ಲಿ ಬಿದ್ದರೆ ನಿಮ್ಮ ಒನ್ ಪ್ಲಸ್ 12 ಮೊಬೈಲ್ ಫೋನ್ ಗೆ ಹಾನಿ ಆಗಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




