ವಿಶ್ವದ ಅತ್ಯಂತ ದುಬಾರಿ ವಿಸ್ಕಿ. ಇಡೀ ಆಸ್ತಿಯನ್ನೇ ಮಾರಬೇಕಾಗುವಷ್ಟು ದುಬಾರಿ ಪೆಗ್! – ಇಸಾಬೆಲ್ಲಾಸ್ ಇಸ್ಲಾ

Picsart 25 06 03 17 19 26 696

WhatsApp Group Telegram Group

ಮಾನವನ ಇಚ್ಛೆಗಳಿಗೂ, ಆಸೆಗೂ ಅಂತ್ಯವಿಲ್ಲ. ಭೋಜನದಿಂದ ಹಿಡಿದು ಉಡುಪಿನವರೆಗೆ, ಎಲ್ಲದರಲ್ಲೂ ವೈಭೋಗ ಮತ್ತು ವೈಶಿಷ್ಟ್ಯತೆಗೆ (For splendor and distinction) ಆಸಕ್ತರಿರುವವರು ಇದ್ದಾರೆ. ಮದ್ಯ ಪ್ರಿಯರಿಗೂ ಇದು ಅನ್ವಯಿಸುತ್ತದೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರು ತಮ್ಮ ಆಸಕ್ತಿಯ ಮದ್ಯಕ್ಕಾಗಿ ಸಾವಿರಾರು, ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುವ ಉದಾಹರಣೆಗಳು ಸಾಮಾನ್ಯ. ಆದರೆ ಕೆಲವು ಮದ್ಯಗಳು ಇಷ್ಟೊಂದು ದುಬಾರಿಯಾದರೂ, ಅವುಗಳ ವಿಶಿಷ್ಟತೆ, ಅಪರೂಪತೆ ಮತ್ತು ತಯಾರಿಕೆಯ ವೈಶಿಷ್ಟ್ಯಗಳಿಂದಾಗಿ ಸಂಗ್ರಹಕಾರರು ಮತ್ತು ಐಷಾರಾಮಿ ಜೀವನವನ್ನು ಮೆಚ್ಚುವವರ ಮನಸ್ಸು ಸೆಳೆಯುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇಂತಹದ್ದರಲ್ಲಿ ಇಸಾಬೆಲ್ಲಾಸ್ ಇಸ್ಲಾ (Isabella’s Islay) ಎಂಬ ವಿಸ್ಕಿಯು ವಿಶ್ವದ ಅತ್ಯಂತ ದುಬಾರಿ ವಿಸ್ಕಿಯಾಗಿ ಹೆಸರು ಗಳಿಸಿದೆ. ಅದರ ಬೆಲೆ ಕೇಳಿದರೆ ಶಾಕ್ ಆಗುತ್ತೀರಿ! ಹಾಗಿದ್ದರೆ ಅದರ ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಇಸಾಬೆಲ್ಲಾಸ್ ಇಸ್ಲಾ ವಿಸ್ಕಿ – ಬೆಲೆ ಕೇಳಿದ್ರೆ ಬೆವರಿಳಿಯೋದು ಖಚಿತ!:

ಈ ಸೀಮಿತ ಆವೃತ್ತಿಯ ವಿಸ್ಕಿಯ (Visky) ಒಂದು ಬಾಟಲಿಯ ಬೆಲೆ 6.2 ಮಿಲಿಯನ್ ಅಮೆರಿಕನ್ ಡಾಲರ್(American Dollar), ಅಂದರೆ ಸುಮಾರು 53 ಕೋಟಿ ಭಾರತೀಯ ರೂಪಾಯಿಗಳಲ್ಲಿ! ಇದು ಕೇವಲ ಒಂದು ಮದ್ಯ ಬಾಟಲಿ ಎನ್ನುತ್ತೀರಾ? ಇಲ್ಲ, ಇದರ ಹಿಂದೆ ಬಹುಮಟ್ಟಿಗೆ ಕಾರಣಗಳಿವೆ.

ಒಂದು ಪೆಗ್ ಎಷ್ಟು?:

ಒಂದು ಸಾಮಾನ್ಯ ಪೆಗ್‌ (Normal peg) ಅಂದರೆ ಸುಮಾರು 30 ಮಿಲಿ. ಇಸಾಬೆಲ್ಲಾಸ್ ಇಸ್ಲಾ ವಿಸ್ಕಿಯ 700 ಮಿಲಿ ಬಾಟಲಿಯಿಂದ ಕೇವಲ ಒಂದು ಪೆಗ್ ಕುಡಿಯಲು ನಿಮಗೆ 2 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಖರ್ಚು ಆಗಬಹುದು! ಅಂದರೆ, ಈ ಒಂದು ಪೆಗ್ ನ ಎಂಜೋಯ್ಮೆಂಟ್ ಗಾಗಿ(enjoyment)  ನೀವು ಬಹುಶಃ ನಿಮ್ಮ ಇಡೀ ಆಸ್ತಿಯನ್ನು ಮಾರಾಟ ಮಾಡಬೇಕಾಗಬಹುದು.

ಇಷ್ಟು ದುಬಾರಿ ಯಾಕೆ? ವಿಶೇಷತೆಗಳು ಇಲ್ಲಿವೆ:

ಈ ವಿಸ್ಕಿಯ ಬೆಲೆ ಮೌಲ್ಯ ಕೇವಲ ಅದರ ಒಳಗಿನ ದ್ರಾವಣಕ್ಕೆ ಮಾತ್ರವಲ್ಲ. ಇಸಾಬೆಲ್ಲಾಸ್ ಇಸ್ಲಾ ವಿಸ್ಕಿ (Isabella’s Isla Whiskey) ಅನನ್ಯವಾದ ಪ್ಯಾಕೇಜಿಂಗ್ ಮತ್ತು ವಿನ್ಯಾಸದಿಂದ ಕೂಡಿದೆ,
ಬಾಟಲಿಯು ಕ್ರಿಸ್ಟಲ್‌ನಿಂದ ತಯಾರಿಸಲಾಗಿದ್ದು, ಅದರಲ್ಲಿ 8,500 ಡೈಮಂಡ್‌ಗಳು ಮತ್ತು 300 ರತ್ನಗಳು ಜಡಿತವಾಗಿವೆ.
ಬಾಟಲಿಯ ಮೇಲೆ ಶುದ್ಧ ಚಿನ್ನದ ಕೆಲಸ ಕೂಡ ಮಾಡಲಾಗಿದೆ.
ವಿಸ್ಕಿಯು ಇಸ್ಲಾ (Islay) ಎಂಬ ಪ್ರಸಿದ್ಧ ಸ್ಕಾಟ್ಲೆಂಡ್‌ನ ದ್ವೀಪದಲ್ಲಿ ತಯಾರಿಸಲಾದ ಅಪರೂಪದ ಮ್ಯಾಲ್ಟ್‌ನಿಂದ ಮಾಡಲ್ಪಟ್ಟಿದೆ.
ಇದು ಕೇವಲ ಬಟ್ಟಲಿನ ಮೌಲ್ಯವಲ್ಲ, ಸಂಸ್ಕೃತಿಯ ಪ್ರತಿಬಿಂಬ, ರುಚಿಯ ಸಂಕೇತ.

ಆಸ್ಥಿ(Property) ಮಾರುವ ಮುನ್ನ ಆಲೋಚಿಸಿ – ಮದ್ಯ ಪ್ರಿಯರಿಗೆ ಸಂದೇಶ:

ಈ ವಿಸ್ಕಿ ಎಷ್ಟೇ ದುಬಾರಿಯಾಗಿದರೂ, ಮದ್ಯ ಪ್ರಿಯರಿಗೂ ಸಂಗ್ರಹಕರಿಗೂ ಇದು ಬಹುಮಾನವಾಗಿ, ಹೆಮ್ಮೆಪಡುವಂತಹ ವಸ್ತುವಾಗಿದೆ. ಆದರೆ, ಇದನ್ನು ಸವಿಯುವ ಮೊದಲು  ಒಂದು ಪೆಗ್‌ನ ಖರ್ಚು (one peg) ಎಷ್ಟೆಂಬುದನ್ನು ತಿಳಿದುಕೊಳ್ಳುವುದು ಬಹು ಮುಖ್ಯ. ಒಂದು ಪೆಗ್ ಕುಡಿಯಲು ಕೊಟ್ಟ ಮೊತ್ತದಲ್ಲಿ ಒಂದು ಐಷಾರಾಮಿ ಬಂಗಲೆ ಅಥವಾ ವಿಶೇಷ ವಾಹನ ಖರೀದಿಸಬಹುದಾದಷ್ಟು ಮೌಲ್ಯವಿದೆ.

ಒಟ್ಟಾರೆಯಾಗಿ, ಇಸಾಬೆಲ್ಲಾಸ್ ಇಸ್ಲಾ ವಿಸ್ಕಿ ಎಂಬುದು ಕೇವಲ ಮದ್ಯವಲ್ಲ ಅದು ವೈಭವ, ಶೈಲಿ, ಹಾಗೂ ಅಪರೂಪದ ಸಂಗ್ರಹ ವಸ್ತುವಿನ ಸಂಕೇತವಾಗಿದೆ. ಇಂತಹ ದುಬಾರಿ ವಿಸ್ಕಿಗಳು ಮದ್ಯದ ಪ್ರಿಯರಿಗಿಂತಲೂ ಹೆಚ್ಚು ಐಷಾರಾಮಿ ಶೌಕ್ಯವನ್ನು (Luxurious elegance) ಮೆಚ್ಚುವವರ ಮನಸ್ಸು ಸೆಳೆಯುತ್ತವೆ. ಹಾಗಾಗಿ, ಕುಡಿಯುವದಕ್ಕೂ ಮುಂಚೆ, ಅದರ ಬೆಲೆಯ ಪೆಗ್ ನಿಮ್ಮ ಬ್ಯಾಂಕ್‌ ಖಾತೆಗೆ ಸೂಕ್ತವೋ ಇಲ್ಲವೋ ಎಂದು ಪರಿಶೀಲಿಸಬೇಕಾಗುತ್ತದೆ!

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!