ಶೀಘ್ರದಲ್ಲಿ ಹೆಚ್ಚಾಗಲಿದೆ ಕಾರ್ಮಿಕರ ವೇತನ(Wages of workers) : ಎಚ್.ಎನ್ ಗೋಪಾಲ ಕೃಷ್ಣ(H.N. Gopala Krishna)
ಮೈಸೂರು(Mysore) ನಗರದ ವಿದ್ಯಾರಣ್ಯಪುರಂನಲ್ಲಿರುವ ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಕಾರ್ಮಿಕ ಕಾಯ್ದೆಗಳು ಮತ್ತು ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಕುರಿತು ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಕಾರ್ಮಿಕ ಇಲಾಖೆಯ ಆಯುಕ್ತ(Commissioner of Labor Department) ಡಾ.ಎಚ್.ಎನ್.ಗೋಪಾಲಕೃಷ್ಣ (Dr. H.N. Gopalakrishna) ಕಾರ್ಮಿಕರ ಕನಿಷ್ಠ ವೇತನವನ್ನು ಶೀಘ್ರದಲ್ಲೇ ಹೆಚ್ಚಳಿಸಲಾಗುವುದು ಎಂದು ಕಾರ್ಮಿಕರ ವರ್ಗಕ್ಕೆ ಭರವಸೆ ನೀಡಿದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ವೇತನ ಪರಿಷ್ಕರಣೆ ಈ ಹಿಂದೆ ಯಾವಾಗ ನಡೆದಿತ್ತು?:
ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಕಾರ್ಮಿಕ ಇಲಾಖೆಯ ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ 5 ವರ್ಷಗಳ ಹಿಂದೆ ಕನಿಷ್ಠ ವೇತನ ಪರಿಷ್ಕರಣೆಯನ್ನು (revision) ಮಾಡಲಾಗಿತ್ತು. ಈ ಪರಿಷ್ಕರಣೆಯಲ್ಲಿ ಕಾರ್ಮಿಕರಿಗೆ 14 ಸಾವಿರ ರೂಗಳನ್ನು ನೀಡುವಂತೆ ನಿಗದಿಪಡಿಸಲಾಗಿತ್ತು. ಇನ್ನು ಈ 14,000 ರೂ. ಗಳಲ್ಲಿ ಕಾರ್ಮಿಕರು ಜೀವನ ನಡೆಸುವುದು ಕಷ್ಟವಾಗಿದೆ. ಇಂದಿನ ಕಾಲದಲ್ಲಿ ಎಲ್ಲವುದರ ಮೇಲಿರುವ ಬೆಲೆ ಜಾಸ್ತಿ ಆಗಿರುವುದರಿಂದ ಕೇವಲ ಇಷ್ಟು ಸಾವಿರ ಇಟ್ಟುಕೊಂಡು ಜೀವನ ನಡೆಸಲಾಗು ಕಷ್ಟವಾಗುತ್ತಿದೆ ಇಂದು ಸಂಘಟನೆಗಳು ಹೇಳಿದ್ದವು. ಹಾಗೂ 14 ಸಾವಿರ ಇರುವ ಮೊತ್ತವನ್ನು 35 ಸಾವಿರ ರೂ. ಗಳನ್ನು ಮಾಡುವಂತೆ ಮನವಿ ಮಾಡಿದ್ದರು. ಆದರೆ ಸಂಘಟನೆಗಳು ಕೇಳಿದರು ಎಂದು ನಾವು 35 ಸಾವಿರ ರೂ.ಗಳನ್ನು ನೀಡಲು ಸಾಧ್ಯವಿಲ್ಲ. ನಾವೆಲ್ಲರೂ ಚರ್ಚೆ ಮಾಡಿ ಕಾರ್ಮಿಕರಿಗೆ ಬಹುಮತದ ಕನಿಷ್ಠ ವೇತನ ನಿಗದಿಪಡಿಸುತ್ತೇವೆ ಎಂದು ತಿಳಿಸದರು.
ಕಾರ್ಮಿಕ ಇಲಾಖೆಗೆ ಎಷ್ಟು ಹುದ್ದೆಗಳು ಮಂಜೂರಾಗಿವೆ?:
ಕಾರ್ಮಿಕ ಇಲಾಖೆಗೆ ಒಟ್ಟು 880 ಹುದ್ದೆಗಳನ್ನು(positions) ಮಂಜೂರಾಗಿವೆ. ಅದರಲ್ಲಿ ಪ್ರಸ್ತುತವಾಗಿ ಕಾರ್ಯ ನಿರ್ವಹಿಸುತ್ತಿರುವುದು 450 ಅಧಿಕಾರಿಗಳು ಅಷ್ಟೇ ಆದ್ದರಿಂದ ಇಲಾಖೆಯ ವ್ಯಾಪ್ತಿಯು ದೊಡ್ಡದಿದೆ ಎಂದರು. ರಾಜ್ಯದಲ್ಲಿ ಒಟ್ಟು 20 ಸಾವಿರಕ್ಕೂ ಹೆಚ್ಚು ನೋಂದಾಯಿತ ಸಂಸ್ಥೆಗಳಿದ್ದು, ಒಟ್ಟು 65 ಲಕ್ಷ ಕಾರ್ಮಿಕರಿದ್ದಾರೆ ಅದರಲ್ಲಿ ರಾಜ್ಯದಲ್ಲಿ 38 ಲಕ್ಷ ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರಿದ್ದಾರೆ. ಅವುಗಳಲ್ಲಿ ಅಸಂಘಟಿತ ವಲಯದಲ್ಲಿ 1.81 ಕೋಟಿ ಕಾರ್ಮಿಕರಿದ್ದಾರೆ. ಅಲ್ಲದೇ, 25 ಕಾರ್ಮಿಕ ಕಾಯ್ದೆಗಳನ್ನು ಕ್ರೋಢಿಕರಿಸಿ 4 ಕಾರ್ಮಿಕ ಸಂಹಿತೆಗಳು ಮುಂದಿನ ಆರ್ಥಿಕ ವರ್ಷದಿಂದ ಜಾರಿಗೆ ತರುವ ನಿರೀಕ್ಷೆಯಿದೆ. ಇದಕ್ಕಾಗಿ ನಿಯಮಗಳನ್ನು ರೂಪಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ವರ್ಷಕ್ಕೆ ಎಷ್ಟು ಕೋಟಿ ಕಾರ್ಮಿಕ ಸೆಸ್ ಹಣ(Labor cess money) ಸಂಗ್ರಹವಾಗುತ್ತದೆ?:
ಒಟ್ಟಾರೆಯಾಗಿ ಒಂದು ವರ್ಷಕ್ಕೆ 1 ಸಾವಿರ ಕೋಟಿ ಕಾರ್ಮಿಕ ಸೆಸ್ ಸಂಗ್ರಹವಾಗುತ್ತಿದೆ. ರಾಜ್ಯದಲ್ಲಿ 38 ಲಕ್ಷ ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರಿದ್ದಾರೆ. ಆದರೆ, ಕಾರ್ಮಿಕರಿಗೆ ಹಲವು ಸೌಲಭ್ಯಗಳನ್ನು ಲೇಬರ್ ವೆಲ್ಫೇರ್ ಬೋರ್ಡ್ನಿಂದ ಜಾರಿಯಾಗಿರುವ ಯೋಜನೆಗಳಿಂದ ಮಾತ್ರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಕಳೆದ ವರ್ಷದಲ್ಲಿ 57 ಕೋಟಿ ರೂಗಳನ್ನು ಖರ್ಚು ಮಾಡಿ, 29 ಸಾವಿರ ಫಲಾನುಭವಿಗಳಿಗೆ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ಒದಗಿಸಿದ್ದೇವೆ. ಆದ್ದರಿಂದ ಕಾರ್ಮಿಕ ಮಂಡಳಿಗೆ ಉದ್ಯೋಗದಾತರು ಪಾವತಿಸಬೇಕಾದ ಪಾಲನ್ನು ನಿಯಮಿತವಾಗಿ ಪಾವತಿಸಬೇಕು ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
ಇ-ಶ್ರಮ್ ಪೋರ್ಟಲ್ (E-shrum portal) ನೋಂದಣಿ ಅತ್ಯಗತ್ಯ :
ಅಸಂಘಟಿತ ವಲಯದವರು ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ಪಡೆಯಲು “ಇ-ಶ್ರಮ್ʼ ಪೋರ್ಟಲ್ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಈ ವ್ಯವಸ್ಥೆಯಲ್ಲಿ ಒಟ್ಟು 398 ವರ್ಗದ ಅಸಂಘಟಿತ ಕಾರ್ಮಿಕರಿಗೆ ಅವಕಾಶ ನೀಡಲಾಗಿದೆ. ಹಾಗೂ ಇಲ್ಲಿಯವರೆಗೂ ಒಟ್ಟು 99.87 ಲಕ್ಷ ಮಂದಿ ಮಾತ್ರ ನೋಂದಾಯಿಸಿಕೊಂಡಿದ್ದಾರೆ. ಉಳಿದವರೂ ಇದರ ಉಪಯೋಗ ಪಡೆಯಲು ಮುಂದಾಗಬೇಕು ಎಂದು ತಿಳಿಸಿದರು.
ಗಿಗ್ ಕ್ಷೇತ್ರದ ಕಾರ್ಮಿಕರಿಗೂ(gig workers) ವಿಮೆ ಸೌಲಭ್ಯ :
ರಾಜ್ಯದಲ್ಲಿ ಒಟ್ಟು 2.39 ಲಕ್ಷ ಕಾರ್ಮಿಕರು ಗಿಗ್ ಕ್ಷೇತ್ರದ ಕಾರ್ಮಿಕರಾಗಿದ್ದಾರೆ. ಇವರಿಗೂ ಕೂಡ ವಿಮೆ ಯೋಜನೆ (Insurance plan) ಜಾರಿಗೊಳಿಸಲಾಗುತ್ತಿದ್ದು, ಇದುವರೆಗೂ 10,000 ಮಂದಿ ಮಾತ್ರ ನೋಂದಾಯಿಸಿಕೊಂಡಿದ್ದಾರೆ. ಆದ್ದರಿಂದ ಅವರಿಗೂ ಕೂಡ ಪ್ರತ್ಯೇಕ ಮಂಡಳಿ ರಚಿಸುವಂತೆ ಚಿಂತನೆಯೂ ನಡೆದಿದೆ. ಅದರಲ್ಲೂ ದಿನಪತ್ರಿಕೆ ಹಾಕುವ 40ಸಾವಿರದಿಂದ 50 ಸಾವಿರ ಮಂದಿ ಕಾರ್ಮಿಕರಿದ್ದು, ಅವರಿಗೂ ವಿಮೆ ದೊರೆಯಲಿದೆ ಎಂದು ತಿಳಿಸಿದರು.
ಇನ್ನು ಕಾರ್ಯಗರದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಕೆಎನ್ ಗಾಯಿತ್ರಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಈ ಮಾಹಿತಿಗಳನ್ನು ಓದಿ:
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




