ಬೆಂಗಳೂರು ಎಂದರೆ ಟ್ರಾಫಿಕ್ ಜಾಮ್(Traffic jam), ಟ್ರಾಫಿಕ್ ಎಂದರೆ ಬೆಂಗಳೂರು ಎನ್ನುವಷ್ಟು ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪೀಕ್ ಅವರ್ಗಳಲ್ಲಿ ಜನರು ಕಚೇರಿಗೆ ಹೋಗಲು, ಮನೆಗೆ ಮರಳಲು ಹಲವು ಗಂಟೆಗಳನ್ನು ರಸ್ತೆಯಲ್ಲೇ ಕಳೆಯುತ್ತಿದ್ದಾರೆ. ಬೆಂಗಳೂರಿನ ರಸ್ತೆಗಳನ್ನು ಕುರಿತ ಮೀಮ್ಸ್, ಟ್ರೋಲ್ಸ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇವೆ. ಆದರೆ ಈಗ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆಯಿದೆ. ಏಕೆಂದರೆ ಅಕ್ಟೋಬರ್ 1ರಿಂದ ಬಹುತೇಕ ಕಂಪನಿಗಳು ವರ್ಕ್ ಫ್ರಮ್ ಹೋಮ್(Work from home) ಮತ್ತು ಹೈಬ್ರಿಡ್ ಮಾದರಿಯನ್ನು ಸಂಪೂರ್ಣ ಅಂತ್ಯಗೊಳಿಸಿ, ಕಚೇರಿಯಿಂದಲೇ ಕೆಲಸ ಕಡ್ಡಾಯಗೊಳಿಸುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕಂಪನಿಗಳ ಹೊಸ ನಿಯಮ, ಎಲ್ಲರೂ ಕಚೇರಿಗೆ ಬರಲೇಬೇಕು:
ಬೆಂಗಳೂರು ವಿಶೇಷವಾಗಿ ಔಟರ್ ರಿಂಗ್ ರೋಡ್ ಪ್ರದೇಶದಲ್ಲಿರುವ ಬಹುತೇಕ ಐಟಿ ಹಾಗೂ ಖಾಸಗಿ ಕಂಪನಿಗಳು ಈಗಾಗಲೇ ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ (Work from Home) ಅಥವಾ ವಾರದಲ್ಲಿ ಕೆಲವು ದಿನ ಮನೆಯಿಂದ, ಕೆಲವು ದಿನ ಕಚೇರಿಯಿಂದ ಕೆಲಸ (Hybrid Model) ನೀಡುತ್ತಿವೆ. ಆದರೆ ಅಕ್ಟೋಬರ್ 1ರಿಂದ ಈ ಅವಕಾಶ ಸಂಪೂರ್ಣ ಮುಕ್ತಾಯವಾಗಲಿದೆ. ಉದ್ಯೋಗಿಗಳು ಪ್ರತಿದಿನ ಕಚೇರಿಯಿಂದಲೇ ಕೆಲಸ ಮಾಡಬೇಕೆಂದು ಕಂಪನಿಗಳು ಸ್ಪಷ್ಟ ಆದೇಶ ಹೊರಡಿಸಿವೆ.
ವಾಹನ ಸಂಚಾರದಲ್ಲಿ ದಾಖಲೆ ಮಟ್ಟದ ಏರಿಕೆ:
ಔಟರ್ ರಿಂಗ್ ರೋಡ್ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ವಾಹನ ಸಂಚಾರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. 2024ರ ಜೂನ್ನಲ್ಲಿ ಪ್ರತಿದಿನ ಸರಾಸರಿ 82,000 ವಾಹನಗಳು ಓಡಾಡುತ್ತಿದ್ದರೆ, 2025ರ ವೇಳೆಗೆ ಈ ಸಂಖ್ಯೆ 1,20,000ಕ್ಕೆ ಏರಿಕೆಯಾಗಿದೆ. ಇದೀಗ ಅಕ್ಟೋಬರ್ನಿಂದ ಕಚೇರಿ ಹಾಜರಾತಿ ಕಡ್ಡಾಯವಾದ ನಂತರ ವಾಹನ ಸಂಚಾರ ಇನ್ನೂ ಹೆಚ್ಚುವ ನಿರೀಕ್ಷೆಯಿದೆ. ಕೇವಲ ಔಟರ್ ರಿಂಗ್ ರೋಡ್ ಮಾತ್ರವಲ್ಲದೆ ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಾಳ ಮುಂತಾದ ಪ್ರಮುಖ ರಸ್ತೆಗಳೂ ವಾಹನಗಳಿಂದ ತುಂಬಿ ತುಳುಕಲಿವೆ.
ಉದ್ಯೋಗ ಕಡಿತ, ಕಡ್ಡಾಯ ಕಚೇರಿ ಹಾಜರಾತಿ:
ಇತ್ತೀಚೆಗೆ ಹಲವು ಪ್ರಮುಖ ಕಂಪನಿಗಳು ಉದ್ಯೋಗ ಕಡಿತ ಪ್ರಕ್ರಿಯೆಯನ್ನು ಆರಂಭಿಸಿವೆ. ಜೊತೆಗೆ AI (Artificial Intelligence) ತಂತ್ರಜ್ಞಾನಗಳ ಅಳವಡಿಕೆಯಿಂದ ಉದ್ಯೋಗ ಭದ್ರತೆ ಬಗ್ಗೆ ಆತಂಕ ಹೆಚ್ಚಾಗಿದೆ. ಹೀಗಾಗಿ ಕಂಪನಿಯ ಹೊಸ ನಿಯಮಗಳನ್ನು ಪಾಲಿಸಲು ಉದ್ಯೋಗಿಗಳು ಬಲವಂತವಾಗಿ ಕಚೇರಿಗೆ ತೆರಳುವ ಪರಿಸ್ಥಿತಿ ಎದುರಾಗಲಿದೆ.
ಪ್ರಯಾಣಕ್ಕೆ 1-2 ಗಂಟೆಗಳ ಕಾಲ ಮೀಸಲು:
ಬೆಂಗಳೂರು ನಗರದಲ್ಲಿ ಈಗಾಗಲೇ 10ರಿಂದ 15 ಕಿಲೋಮೀಟರ್ ದೂರ ಪ್ರಯಾಣಕ್ಕೂ 1 ಗಂಟೆಗೂ ಹೆಚ್ಚು ಸಮಯ ಬೇಕಾಗಿದೆ. ಮಾರ್ಥಹಳ್ಳಿ, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಾಳ ರಸ್ತೆಗಳಂತಹ ಪ್ರಮುಖ ಮಾರ್ಗಗಳಲ್ಲಿ ಕೆಲವೊಮ್ಮೆ 2 ಗಂಟೆಗಳವರೆಗೂ ಸಮಯ ತೆಗೆದುಕೊಳ್ಳುತ್ತಿದೆ. ವರ್ಷದಿಂದ ವರ್ಷಕ್ಕೆ ಈ ಸಮಯ ಹೆಚ್ಚುತ್ತಲೇ ಹೋಗುತ್ತಿದ್ದು, ಅಕ್ಟೋಬರ್ನಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುವ ನಿರೀಕ್ಷೆಯಿದೆ.
ಉದ್ಯೋಗಿಗಳ ಮನವಿ, ವರ್ಕ್ ಫ್ರಮ್ ಹೋಮ್ ಮುಂದುವರಿಸಿ:
ರೆಡ್ಡಿಟ್ ನ ಒಬ್ಬ ಉದ್ಯೋಗಿ ತನ್ನ ತೊಂದರೆ ಹಂಚಿಕೊಂಡಿದ್ದು, ಈಗಾಗಲೇ ಕಚೇರಿಗೆ ಹೋಗಲು ಹೆಚ್ಚು ಸಮಯ ವ್ಯಯವಾಗುತ್ತಿದೆ. ಅಕ್ಟೋಬರ್ನಿಂದ ಟ್ರಾಫಿಕ್ ಡಬಲ್ ಆದರೆ ಕಚೇರಿಗೆ ಹೋಗುವುದು ಅಸಾಧ್ಯವಾಗಲಿದೆ. ಜೊತೆಗೆ ಗುಂಡಿಬಿದ್ದ ರಸ್ತೆಗಳ ಕಾರಣದಿಂದ ಪ್ರಯಾಣ ಕಷ್ಟವಾಗುತ್ತಿದೆ. ಹೀಗಾಗಿ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಒಟ್ಟಾರೆಯಾಗಿ, ಬೆಂಗಳೂರು ನಗರವು ಐಟಿ ಹಬ್ ಆಗಿರುವುದರಿಂದ ಸಾವಿರಾರು ಜನ ಉದ್ಯೋಗಕ್ಕಾಗಿ ಪ್ರತಿದಿನ ಕಚೇರಿಗೆ ಪ್ರಯಾಣಿಸುತ್ತಾರೆ. ಈಗಾಗಲೇ ತಾಳಲಾರದ ಮಟ್ಟದ ಟ್ರಾಫಿಕ್ ಇರುವ ಪರಿಸ್ಥಿತಿಯಲ್ಲಿ, ವರ್ಕ್ ಫ್ರಮ್ ಹೋಮ್ ಮತ್ತು ಹೈಬ್ರಿಡ್ ಅಂತ್ಯವಾದರೆ ಟ್ರಾಫಿಕ್ ಸಮಸ್ಯೆ ಗರಿಷ್ಠ ಮಟ್ಟ ತಲುಪುವುದು ಖಚಿತ. ಇದರಿಂದ ಸಾರ್ವಜನಿಕರ ದಿನನಿತ್ಯ ಜೀವನ, ಆರೋಗ್ಯ ಮತ್ತು ಉದ್ಯೋಗಿಗಳ ಉತ್ಪಾದಕತೆಗೂ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




