WhatsApp Image 2025 11 26 at 1.54.25 PM

ಅತಂತ್ರ ಸ್ಥಿತಿಯಲ್ಲಿ ಸಿಲುಕಿದ ಗೃಹಲಕ್ಷ್ಮೀ ಯೋಜನೆಯ ಮಹಿಳೆಯರು : ಗ್ಯಾರಂಟಿ ಹಣ ಈ ವರ್ಷ ಬಂದಿರೋದು ಕೇವಲ 5 ತಿಂಗಳು ಮಾತ್ರ.!

Categories:
WhatsApp Group Telegram Group

ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಯಾದ ‘ಗೃಹಲಕ್ಷ್ಮಿ’ ಯೋಜನೆಯಡಿಯಲ್ಲಿ ಮಹಿಳೆಯರಿಗೆ ನೀಡಬೇಕಿದ್ದ ಮಾಸಿಕ 2,000 ರೂಪಾಯಿ ಗ್ಯಾರಂಟಿ ಹಣವು ಕ್ರಮಬದ್ಧವಾಗಿ ಬರದೆ, ಜಿಲ್ಲೆಯ ಸಾವಿರಾರು ಮಹಿಳೆಯರು ಗಂಭೀರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಸರ್ಕಾರಿ ಯೋಜನೆಯನ್ನು ನಂಬಿ ವಿವಿಧ ಉಳಿತಾಯ ಯೋಜನೆಗಳಲ್ಲಿ ಹಣವನ್ನು ಪಡೆದು ಇದೀಗ ಅನೇಕರು ಸಾಲದ ಬಿಕ್ಕಟ್ಟಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.……..

WhatsApp Image 2025 11 26 at 1.51.49 PM

ಮಡಿಕೇರಿ: ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಮನೆ ಯಜಮಾನಿಗೆ ಪ್ರತಿ ತಿಂಗಳಿಗೆ 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯ ಹಣ ಕಳೆದ ಮೂರು ತಿಂಗಳಿನಿಂದ ಬಾರದೇ ಮಹಿಳೆಯರು ಅತಂತ್ರವಾಗಿದ್ದಾರೆ. ಸರ್ಕಾರದ ಗ್ಯಾರಂಟಿಗಳನ್ನು ನಂಬಿ ಚೀಟಿ, ಗೋಲ್ಡ್‌ ಸ್ಕೀಮ್‌ ಹೀಗೆ ಉಳಿತಾಯ ಯೋಜನೆಗಳಿಗೆ ಕೈಹಾಕಿದ್ದ ಮಹಿಳೆಯರೀಗ ತೊಂದರೆಗೊಳಗಾಗಿದ್ದಾರೆ.

ಗ್ಯಾರಂಟಿ ಯೋಜನೆಗಳಿಂದ ಅದೆಷ್ಟೋ ಮಹಿಳೆಯರಿಗೆ ದಿನನಿತ್ಯದ ಜೀವನಕ್ಕೆ ಅನುಕೂಲಕರವಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಯ ಹಣವನ್ನು ಉಳಿಸಿ ಅತ್ಯಗತ್ಯ ದಿನನಿತ್ಯದ ವಸ್ತುಗಳನ್ನು ಕೊಂಡುಕೊಂಡಿರುವ, ಕೊಡಿಸಿರುವ ಕುರಿತು ಆಗಾಗ ವಾಹಿನಿಗಳಲ್ಲಿ ಸುದ್ದಿಯಾಗುತ್ತಿರುತ್ತದೆ. ಆದರೇ, ಕಳೆದ ಮೂರು ತಿಂಗಳಿಂದ ಖಾತೆಗೆ ಗೃಹಲಕ್ಷ್ಮಿ ಹಣ ಬಾರದೇ ಇರುವುದರಿಂದ ಜಿಲ್ಲೆಯ ಮಹಿಳೆಯರು ಸಮಸ್ಯೆ ಅನುಭವಿಸುವಂತಾಗಿದೆ. ಗೃಹಲಕ್ಷ್ಮಿ ಹಣವನ್ನು ನಂಬಿ ಕೆಲವು ಮಹಿಳೆಯರು ಸ್ಥಳೀಯವಾಗಿ ಚೀಟಿಗಳಿಗೆ ಸೇರುವುದು, ಗೋಲ್ಡ್‌ ಸ್ಕೀಮ್‌ಗಳನ್ನು ಕಟ್ಟುವುದು ಹೀಗೆ ಹಣವನ್ನು ಉಳಿತಾಯ ಮಾಡುವ ಯೋಜನೆಗಳಲ್ಲಿ ಪಾಲ್ಗೊಂಡಿದ್ದರು. ಆದರೆ ಈಗ ಮೂರು ತಿಂಗಳು ಹಣ ಬರದೇ ಇರುವುದರಿಂದ ಮಹಿಳೆಯರು ತಮ್ಮ ಸ್ಕೀಮ್‌ ಹಣ ಪಾವತಿಸಲಾಗದೇ ಸಾಲ ಮಾಡುವ ಪರಿಸ್ಥಿತಿಗೆ ಬಂದು ನಿಂತಿದ್ದಾರೆ

ಆಗಸ್ಟ್‌ನಿಂದ ಖಾತೆಗೆ ಹಣ ಜಮಾ ಆಗೇಯಿಲ್ಲಾ

2023ರ ಆಗಸ್ಟ್‌ ತಿಂಗಳಿನಿಂದ ಶುರುವಾದ ಈ ಯೋಜನೆಯು ಮನೆ ಯಜಮಾನಿಯ ಖಾತೆಗೆ ಸರ್ಕಾರದಿಂದ 2 ಸಾವಿರ ರೂ. ಹಣವನ್ನು ಜಮಾ ಮಾಡಲಾಗುತ್ತಿದೆ. ಒಂದೆರಡು ಸಂದರ್ಭಗಲಲ್ಲಿ ತಡವಾಗಿದ್ದು ಬಿಟ್ಟರೇ ಉಳಿದಂತೆ ಹಣವನ್ನು ಹಾಕಲಾಗಿದೆ. ಜುಲೈ ತಿಂಗಳಿನಲ್ಲಿ ಕೊನೆಯದಾಗಿ ಹಣ ಬಂದಿದ್ದು ಬಿಟ್ಟರೆ ಮತ್ತೆ ಮಹಿಳೆಯರ ಖಾತೆಗೆ ಸರ್ಕಾರದ 2000 ರೂ. ಬಂದಿರುವುದಿಲ್ಲಾ. ಕಳೆದ ಆಗಸ್ಟ್‌ , ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ ತಿಂಗಳಿನಲ್ಲಿ ಮಹಿಳೆಯರ ಖಾತೆಗೆ ಹಣ ಬರದೇ ಇರುವುದರಿಂದ ಸಿದ್ದರಾಮಯ್ಯ ಅವರ ಗ್ಯಾರಂಟಿ ಮುಗಿದು ಹೋಯಿತೇ ಎಂದು ಮಹಿಳೆಯರು ಅಧಿಕಾರಿಗಳನ್ನಾ ಪ್ರಶ್ನೆ ಮಾಡುತ್ತಿದ್ದಾರೆ.

ಈ ವರ್ಷ ಒಟ್ಟು ಬಂದಿದ್ದು 5 ತಿಂಗಳ ಹಣವಷ್ಟೆ:

ಪ್ರಸ್ತುತ ವರ್ಷ 2025 ರಲ್ಲಿ ಕೇವಲ 5 ತಿಂಗಳು ಮಾತ್ರ ಮಹಿಳೆಯರ ಖಾತೆಗೆ ಹಣ ವರ್ಗಾಯಿಸಲಾಗಿದೆ. ಜನವರಿಯ ಹಣ ಖಾತೆಗೆ ಬಂದಿದ್ದು, ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಹಣ ಹಾಕಲಿಲ್ಲ. ಬಳಿಕ ಏಪ್ರಿಲ್‌ನಿಂದ ಹಣ ಹಾಕುವುದನ್ನು ಮುಂದುವರಿಸಲಾಗಿದೆ. ಆದರೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಬಾಕಿ ಹಣವನ್ನು ಸರ್ಕಾರ ಇದುವರೆಗೂ ಪಾವತಿ ಮಾಡಿಲ್ಲ. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇತ್ತೀಚೆಗೆ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ಮತ್ತು ಕೆಡಿಪಿ ಸಭೆಗಳಲ್ಲಿ ಮಾಹಿತಿ ನೀಡಿದೆಯಷ್ಟೆ.

ಗೃಹಲಕ್ಷ್ಮೀ ಯೋಜನೆ – ಇಲ್ಲಿಯವರೆಗಿನ ಕಂತುಗಳ ಬಿಡುಗಡೆ ದಿನಾಂಕಗಳು

ಕಂತು ಸಂಖ್ಯೆಸಂಬಂಧಿತ ತಿಂಗಳುಸ್ಥಿತಿಬಿಡುಗಡೆ ದಿನಾಂಕ
28thನವಂಬರ್ 2025ಪೆಂಡಿಂಗ್ (Pending)ಇನ್ನೂ ನವೀಕರಿಸಬೇಕು
27thಅಕ್ಟೋಬರ್ 2025ಪೆಂಡಿಂಗ್ (Pending)ಇನ್ನೂ ನವೀಕರಿಸಬೇಕು
26thಸೆಪ್ಟೆಂಬರ್ 2025ಪೆಂಡಿಂಗ್ (Pending)ಇನ್ನೂ ನವೀಕರಿಸಬೇಕು
25thಆಗಸ್ಟ್ 2025ಪೆಂಡಿಂಗ್ (Pending)ಇನ್ನೂ ನವೀಕರಿಸಬೇಕು
24thಜುಲೈ 2025ಪೆಂಡಿಂಗ್ (Pending)ಇನ್ನೂ ನವೀಕರಿಸಬೇಕು
23rdಜೂನ್ 2025ಪೆಂಡಿಂಗ್ (Pending)ಇನ್ನೂ ನವೀಕರಿಸಬೇಕು
22ndಮೇ 2025ಬಿಡುಗಡೆಯಾಗಿದೆ 20-10-2025
21stಏಪ್ರಿಲ್ 2025ಪೂರ್ಣಗೊಂಡಿದೆ 14-08-2025
20thಮಾರ್ಚ್ 2025ಪೂರ್ಣಗೊಂಡಿದೆ 05-06-2025
19thಫೆಬ್ರವರಿ 2025ಪೂರ್ಣಗೊಂಡಿದೆ (17-05-2025
18thಜನವರಿ 2025ಪೂರ್ಣಗೊಂಡಿದೆ 30-03-2025

ಗಮನಿಸಿ: DBT ಮೂಲಕ ಬ್ಯಾಚ್‌ಗಳಲ್ಲಿ ಪ್ರಕ್ರಿಯೆಗೊಳ್ಳುವ ಕಾರಣ ಬಿಡುಗಡೆ ದಿನಾಂಕ ಮತ್ತು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವ ನಿಜವಾದ ದಿನಾಂಕದಲ್ಲಿ ವ್ಯತ್ಯಾಸವಾಗಿರಬಹುದು.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories