ರಾಜ್ಯದ ಮಾರುಕಟ್ಟೆಗಳಲ್ಲಿ ಕಳೆದ ಒಂದು ವಾರದಿಂದ ಭರ್ಜರಿ ಏರಿಕೆ ಕಂಡಿದ್ದ ಅಡಿಕೆ ಬೆಲೆಯು, ನಿನ್ನೆ ಮತ್ತು ಇಂದು ಸ್ಥಿರತೆಯನ್ನು ಕಾಯ್ದುಕೊಂಡಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ಮತ್ತು ದಾವಣಗೆರೆ ತಾಲೂಕು ಸೇರಿದಂತೆ ಹಲವು ಭಾಗಗಳಲ್ಲಿ ಅಡಿಕೆ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಹಾಗಾಗಿ, ಇಂದು (ಅಕ್ಟೋಬರ್ 12) ದಾವಣಗೆರೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ರಾಶಿ ಅಡಿಕೆಯ ಇತ್ತೀಚಿನ ದರಗಳ ವಿವರ ಇಲ್ಲಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ..
ದಾವಣಗೆರೆ ಜಿಲ್ಲೆಯ ಕೃಷಿ ಮಾರುಕಟ್ಟೆಗಳಲ್ಲಿ ಇಂದು (ಅಕ್ಟೋಬರ್ 12) ರಾಶಿ ಅಡಿಕೆ ಧಾರಣೆಯಲ್ಲಿ ಹೆಚ್ಚಳ ಕಂಡುಬಂದಿದೆ. ಪ್ರಸ್ತುತ, ರಾಶಿ ಅಡಿಕೆಯು ಪ್ರತಿ ಕ್ವಿಂಟಾಲ್ಗೆ ಗರಿಷ್ಠ ಬೆಲೆ 66,299 ರೂಪಾಯಿ, ಕನಿಷ್ಠ ಬೆಲೆ 52,512 ರೂಪಾಯಿ ಮತ್ತು ಸರಾಸರಿ ಬೆಲೆ 65,321 ರೂಪಾಯಿ ಇದೆ.
ಕಳೆದ ಕೆಲವು ತಿಂಗಳುಗಳ ಹಿಂದೆ 55,000 ರೂಪಾಯಿಗಿಂತ ಕೆಳಗಿಳಿದಿದ್ದ ಅಡಿಕೆ ಬೆಲೆ, ನಂತರ ಏರಿಕೆಯಾಗಿ, ಸ್ವಲ್ಪ ಇಳಿದು ಇದೀಗ ಮತ್ತೆ ಗಣನೀಯ ಏರಿಕೆಯ ಹಾದಿಯಲ್ಲಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ಮತ್ತು ಹೊನ್ನಾಳಿ ಪ್ರದೇಶದಲ್ಲಿ 2025ರ ಜನವರಿ ಅಂತ್ಯದಲ್ಲಿ 52,000 ರೂಪಾಯಿ ಒಳಗಿದ್ದ ಕ್ವಿಂಟಾಲ್ ಅಡಿಕೆ ಬೆಲೆಯು ಫೆಬ್ರವರಿಯಲ್ಲಿ 53,000 ರೂಪಾಯಿ ಗಡಿ ದಾಟಿತ್ತು. ಅಲ್ಲಿಂದ ಸತತವಾಗಿ ಏರುತ್ತಾ ಬಂದ ದರ ಏಪ್ರಿಲ್ ತಿಂಗಳ ಅಂತ್ಯದಲ್ಲಿ 60,000 ರೂಪಾಯಿ ಗಡಿ ದಾಟಿತ್ತು. ಇದೀಗ ಅಕ್ಟೋಬರ್ ಎರಡನೇ ವಾರದಲ್ಲಿ 66,000 ರೂಪಾಯಿ ಸಮೀಪಕ್ಕೆ ತಲುಪಿದೆ. ಇದೇ ಪ್ರವೃತ್ತಿ ಮುಂದುವರಿದರೆ, ಕೆಲವೇ ದಿನಗಳಲ್ಲಿ ಅಡಿಕೆ ಬೆಲೆ 70,000 ರೂಪಾಯಿ ಮುಟ್ಟುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮೇ ತಿಂಗಳ ಆರಂಭದಿಂದ ಜೂನ್ ಮಧ್ಯದವರೆಗೆ ಅಡಿಕೆ ಬೆಲೆಯಲ್ಲಿ ಇಳಿಕೆ ಕಂಡು ಮತ್ತೆ ಏರಿಕೆ ಕಾಣಿಸಿತ್ತು. ಆದರೆ ಜೂನ್ ಮಧ್ಯದಿಂದ ಜುಲೈ ಮೊದಲ ವಾರದವರೆಗೆ ಮತ್ತೆ ಇಳಿಕೆಯಾಗಿತ್ತು. ಹಿಂದಿನ ವರ್ಷಗಳ ದರಗಳನ್ನು ಗಮನಿಸಿದರೆ, 2023ರ ಜುಲೈ ತಿಂಗಳಲ್ಲಿ ಗರಿಷ್ಠ ದರ 57,000 ರೂಪಾಯಿಗೆ ತಲುಪಿತ್ತು. ಕಳೆದ ವರ್ಷ 2024ರ ಮೇ ತಿಂಗಳಲ್ಲಿ ಗರಿಷ್ಠ 55,000 ರೂಪಾಯಿಗೆ ತಲುಪಿತ್ತು.
2025ರ ಜುಲೈ ಮೊದಲ ವಾರದ ಮಧ್ಯದವರೆಗೂ ಇಳಿಕೆ ಕಾಣುತ್ತಾ ಸಾಗಿದ್ದ ದರ ಆಗಸ್ಟ್ನಲ್ಲಿ ತುಸು ಸುಧಾರಣೆ ಕಂಡಿತ್ತು. ತಿಂಗಳ ಕೊನೆಯಲ್ಲಿ ಇಳಿಕೆಯಾಗಿ ಸೆಪ್ಟೆಂಬರ್ ಅಂತ್ಯದಲ್ಲಿ ಮತ್ತೆ ಏರಿಕೆ ಕಂಡಿತ್ತು. ಅಕ್ಟೋಬರ್ ಎರಡನೇ ವಾರದವರೆಗೂ ನಿರಂತರವಾಗಿ ಏರಿಕೆಯಾಗುತ್ತಾ ಬಂದ ದರವು ನಿನ್ನೆ ಮತ್ತು ಇಂದು ಒಂದೇ ಮಟ್ಟದಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯಾಗುವ ಸೂಚನೆಗಳು ಗೋಚರಿಸುತ್ತಿವೆ.
ಈ ವರ್ಷ ವಾಡಿಕೆಯಂತೆ ಜೂನ್ ಆರಂಭದಲ್ಲಿ ಮುಂಗಾರು ಪ್ರವೇಶಿಸಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಇದರ ಪರಿಣಾಮವಾಗಿ ಅಡಿಕೆ ಫಸಲು ಚೆನ್ನಾಗಿ ಬಂದಿದೆ. ಸದ್ಯ ಧಾರಣೆ ಏರುಗತಿಯಲ್ಲಿ ಸಾಗುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಹೆಚ್ಚಳವಾಗುವ ಭರವಸೆಯನ್ನು ಅಡಿಕೆ ಬೆಳೆಗಾರರು ಹೊಂದಿದ್ದಾರೆ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Kavitha holds a Master’s degree in Computer Applications (MCA) and has a deep interest in technology. Leveraging her academic background, she writes articles on science and technology, simplifying complex technical topics for general readers. Her work focuses on making cutting-edge advancements in tech accessible and engaging.


WhatsApp Group




