ಚಹಾ(tea) ಎಂದರೆ ಕೇವಲ ಪಾನೀಯವಲ್ಲ, ಅದು ನಮ್ಮ ದಿನದ ಪ್ರಾರಂಭ, ಉತ್ಸಾಹ ಮತ್ತು ಮನೋಬಲಕ್ಕೆ ಜೀವ ನೀಡುವ ಶಕ್ತಿ. ಪ್ರತಿಯೊಬ್ಬರು ಬೆಳಗ್ಗೆ ಚಹಾ ಅಥವಾ ಕಾಫಿಯೊಂದಿಗೆ ದಿನ ಆರಂಭಿಸುತ್ತಾರೆ. ಕೆಲವರು ದಿನದಲ್ಲಿ 3-4 ಬಾರಿ ಚಹಾ ಕುಡಿಯುವ ಅಭ್ಯಾಸವನ್ನೂ ಹೊಂದಿರುತ್ತಾರೆ. ಆದರೆ, ಅದರ ರುಚಿ, ಪರಿಮಳ ಮತ್ತು ಆರೋಗ್ಯ ಲಾಭಗಳಿಗಾಗಿ (Health benefits) ಸರಿಯಾದ ವಿಧಾನ ತಿಳಿದುಕೊಳ್ಳುವುದು ಅತ್ಯಂತ ಮುಖ್ಯ. ಹಾಗಾದರೆ ಚಹಾ ತಯಾರಿಸುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಹಾ ತಯಾರಿಸಬೇಕಾದರೆ ಹಾಲು ಅಥವಾ ನೀರು ಈ ಎರಡರಲ್ಲಿ ಮೊದಲು ಯಾವುದನ್ನು ಕುದಿಸಬೇಕು?:
ಬಹುಪಾಲು ಜನರು ಈ ಸರಿಯಾದ ಕ್ರಮವನ್ನು ತಿಳಿಯದೆ ಹಾಲು ಮತ್ತು ನೀರನ್ನು(Milk and water) ಕುದಿಸುವ ಕ್ರಮದಲ್ಲಿ ತಪ್ಪು ಮಾಡುತ್ತಾರೆ. ಇದರಿಂದಾಗಿ ಚಹಾದ ಮೂಲ ಸುವಾಸನೆ ಮತ್ತು ಮಸಾಲೆಗಳ ಸಂಪೂರ್ಣ ರುಚಿ ಬರುವುದಿಲ್ಲ.
ಸರಿಯಾದ ವಿಧಾನ ಹೀಗಿದೆ:
ಮೊದಲು ನೀರನ್ನು ಪಾತ್ರೆಯಲ್ಲಿ ಕುದಿಸಿ.
ನೀರಿನಲ್ಲಿ ನಿಮ್ಮ ನೆಚ್ಚಿನ ಮಸಾಲೆಗಳಾದ, ಏಲಕ್ಕಿ, ದಾಲಚಿನ್ನಿ, ಶುಂಠಿ, ಮೆಣಸು ಸೇರಿಸಿ ಚೆನ್ನಾಗಿ ಕುದಿಸಬೇಕು.
ಮಸಾಲೆಗಳು (Masala item’s) ನೀರಿನಲ್ಲಿ ಚೆನ್ನಾಗಿ ಕುದಿದ ನಂತರವೇ ಹಾಲು ಸೇರಿಸಬೇಕು.
ಕಡಿಮೆ ಉರಿಯಲ್ಲಿ ಹಾಲು ಸೇರಿಸಿ 2–3 ನಿಮಿಷಗಳು ಮೃದುವಾಗಿ ಕುದಿಸಬೇಕು.
ಇದರಿಂದ ಚಹಾಕ್ಕೆ ಹೆಚ್ಚು ಪರಿಮಳ (more smell) ಮತ್ತು ಆಕರ್ಷಕ ಬಣ್ಣ ಬರುವ ಜೊತೆಗೆ ಮಸಾಲೆಗಳ ಸಂಪೂರ್ಣ ಪೂರಕ ರುಚಿ ಬರುತ್ತದೆ.
99% ಜನರು ಮಾಡುವ ತಪ್ಪು:
ಹಾಲು ಮೊದಲು ಸೇರಿಸಿ ನಂತರ ಮಸಾಲೆ, ಚಹಾ ಪುಡಿ(Tea powder) ಅಥವಾ ಸಕ್ಕರೆ ಹಾಕಿ ಕುದಿಸುವುದು.
ಇದರಿಂದ ಮಸಾಲೆಗಳ ಶಕ್ತಿಶಾಲಿ ಪರಿಮಳ ಮತ್ತು ರುಚಿ ಕಹಿಯಾಗಿ ಪರಿವರ್ತಿಸುತ್ತದೆ ಮತ್ತು ಒಳ್ಳೆಯ ಚಹಾ ರುಚಿ ಬರುವುದಿಲ್ಲ.
ಇನ್ನು,ಚಹಾ ಸಿದ್ಧವಾದ ತಕ್ಷಣವೇ ಇಡೀ ಪಾತ್ರೆಯನ್ನು ಮುಚ್ಚಿ ಒಂದು ಅಥವಾ ಎರಡು ನಿಮಿಷಗಳ ಕಾಲ ಸ್ಥಗಿತಗೊಳಿಸಬೇಕು. ಇದು ಉತ್ತಮ ಪರಿಮಳವನ್ನು ನೀಡಲು ಅನುವು ಮಾಡಿಕೊಡುತ್ತದೆ ಜೊತೆಯಲ್ಲಿ ಮಸಾಲೆ ಪರಿಮಳ ಬರುವಂತೆ ಮಾಡುತ್ತದೆ.
ಚಹಾ ತಯಾರಿಕೆಯ ಸಂಪೂರ್ಣ ವಿಧಾನ:
ಶುದ್ಧ, ತಾಜಾ ಹಾಲು ಮತ್ತು ನೀರನ್ನು ಮಾತ್ರ ಬಳಸಿ.
ಮಸಾಲೆಗಳನ್ನು ಸ್ವಲ್ಪ ಪುಡಿ ಮಾಡಿ ಸೇರಿಸಬೇಕು.
ಸಕ್ಕರೆ ಅಥವಾ ಬೆಲ್ಲದ (Sugar or Jaggery) ಪ್ರಮಾಣ ಸರಿಯಾಗಿ ಸೇರಿಸಿ.
ಹೆಚ್ಚು ಹೊತ್ತು ಕುದಿಸಬಾರದು ಏಕೆಂದರೆ ಇದರಿಂದ ರುಚಿ ಕಹಿಯಾಗುತ್ತದೆ.
ಕುದಿಸಿದ ನಂತರ, ಚಹಾವನ್ನು ಮುಚ್ಚಿ ಕೆಲವು ನಿಮಿಷ ಸ್ಥಗಿತಗೊಳಿಸಿ ಪರಿಮಳ ಹೆಚ್ಚಿಸಬೇಕು.
ಹಾಲಿನ ಚಹಾ ಕುಡಿಯುವುದು ಏಕೆ ಮಹತ್ವಪೂರ್ಣ?:
ದೇಹಕ್ಕೆ ಶಕ್ತಿಯನ್ನು (Power to the body) ನೀಡುತ್ತದೆ.
ಗಂಟಲು ನೋವು, ಶೀತ ಮತ್ತು ಕೆಮ್ಮಿನಲ್ಲೂ ಉಪಶಮನ ನೀಡುತ್ತದೆ.
ಶಕ್ತಿಶಾಲಿ ಮಸಾಲೆಗಳಾದ ಶುಂಠಿ, ಏಲಕ್ಕಿ, ದಾಲಚಿನ್ನಿ ಮೂಲಕ ರೋಗ ನಿರೋಧಕ ಶಕ್ತಿ (Emunity system) ಹೆಚ್ಚಿಸುತ್ತದೆ.
ನಿಮ್ಮ ಮನಸ್ಸನ್ನು ಉತ್ಸಾಹಪೂರ್ವಕವಾಗಿಸುತ್ತದೆ ಮತ್ತು ದಿನವನ್ನು ಸಕಾರಾತ್ಮಕವಾಗಿ ಸಾಗಿಸಲು ನೆರವಾಗುತ್ತದೆ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.