ಕಳೆದ ವರ್ಷ ಕರ್ನಾಟಕ ತೀವ್ರ ಬಿಸಿಲಿಗೆ ಸಿಲುಕಿದರೆ, ಈ ವರ್ಷವೂ ಹೆಚ್ಚು ಉಷ್ಣಾಂಶ (High temperature) ಎದುರಾಗಲಿದೆ ಎಂಬ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ. ಸಾಮಾನ್ಯವಾಗಿ ಮಾರ್ಚ್‌ನಿಂದ ಮೇ ವರೆಗೆ ನಿರೀಕ್ಷಿಸಲಾಗುವ ಬೇಸಿಗೆ, ಈ ಬಾರಿ ಮುಂಚೆಯೇ ಪ್ರಾರಂಭಗೊಳ್ಳಬಹುದು. ರಾಜ್ಯದ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನವು 3-4 ಡಿಗ್ರಿ ಸೆಲ್‌ಷಿಯಸ್ ಹೆಚ್ಚು ಹೆಚ್ಚಾಗಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಜಾಗತಿಕ ತಾಪಮಾನ ಏರಿಕೆ ಪರಿಣಾಮ ಕರ್ನಾಟಕಕ್ಕೂ ಇದೆ :
ಹೌದು,ವೈಜ್ಞಾನಿಕ ಅಧ್ಯಯನಗಳ ಪ್ರಕಾರ, ಜನವರಿ 2025 ಅನ್ನು ಜಗತ್ತಿನ ದಾಖಲಿತ ಅತಿ ಉಷ್ಣತೆಯ ತಿಂಗಳಾಗಿ ಗುರುತಿಸಲಾಗಿದೆ. ಐರೋಪ್ಯ ಒಕ್ಕೂಟದ ಕೊಪರ್ನಿಕಸ್ ಕ್ರೈಮೇಟ್ ಚೇಂಜ್ ಸರ್ವಿಸ್ (C3S) ವಿಜ್ಞಾನಿಗಳ ಪ್ರಕಾರ, ಕಳೆದ 19 ತಿಂಗಳಲ್ಲಿ 18 ತಿಂಗಳು ಸರಾಸರಿ ಜಾಗತಿಕ ತಾಪಮಾನವು 1.5 ಡಿಗ್ರಿ ಸೆಲ್‌ಷಿಯಸ್‌ಗಿಂತಲೂ ಅಧಿಕವಾಗಿದೆ. ಈ ಪ್ರವೃತ್ತಿಯು ಮುಂದುವರಿದರೆ, ಮುಂದಿನ ವರ್ಷಗಳು ತೀವ್ರ ಶಾಖದ ಮಾರಕ ಪರಿಣಾಮ ಅನುಭವಿಸಬಹುದು.
ಕರ್ನಾಟಕದ ತಾಪಮಾನ ಏರಿಕೆಯ ಪ್ರಮುಖ ಕಾರಣಗಳು:
ತೇವಾಂಶ ಕೊರತೆ: ಮಣ್ಣಿನ ತೇವಾಂಶ ಕಡಿಮೆಯಾಗುತ್ತಿದೆ, ಕೆರೆ, ಕಾಗುಣಿತೆಗಳು ಒಣಗುತ್ತಿವೆ.
ಶುಭ್ರ ಆಕಾಶ: ಮೋಡ ಕವಿದ ವಾತಾವರಣ ಇಲ್ಲದಿರುವುದರಿಂದ ಬಿಸಿಲಿನ ಪರಿಣಾಮ ಹೆಚ್ಚಾಗಿದೆ.
ಅರಣ್ಯನಾಶ: ಮರಗಳ ಕಡಿತ ಹೆಚ್ಚಾಗಿರುವುದರಿಂದ ನೈಸರ್ಗಿಕ ಶೀತಲತೆಯ ಕೊರತೆಯಾಗಿದೆ.
ಎಲ್-ನಿನೋ ಪ್ರಭಾವ: ಸಮುದ್ರದ ಉಷ್ಣ ಪ್ರವಾಹ (El Nino) ಪರಿಣಾಮವಾಗಿ ಈ ವರ್ಷ ಹೆಚ್ಚು ಬಿಸಿಯಾಗಿದೆ.
ಪಳೆಯುಳಿಕೆ ಇಂಧನ ಬಳಕೆ: ಉರಿಯುವ ಇಂಧನ ಮತ್ತು ಕಾರ್ಬನ್ ಉತ್ಸರ್ಗದ ಪ್ರಮಾಣ ಹೆಚ್ಚಾಗುತ್ತಿದ್ದು, ಹವಾಮಾನ ವೈಪರೀತ್ಯ ಉಂಟಾಗುತ್ತಿದೆ.
ಶಾಖ ಅಲೆ ಭೀತಿ – ಜನರು ಎಚ್ಚರಿಕೆಯಿಂದ ಇರಬೇಕಾದ ಪ್ರದೇಶಗಳು:
ಕರ್ನಾಟಕದ ಬಹುತೇಕ ಭಾಗಗಳು ಬಿಸಿಲಿನ ತಾಪಕ್ಕೆ ತತ್ತರಿಸುವ ಸಾಧ್ಯತೆ ಇದೆ. ರಾಜ್ಯದ ಶೇ.90% ಪ್ರದೇಶಗಳಲ್ಲಿ ವಾಡಿಕೆಯ ಗರಿಷ್ಠ ತಾಪಮಾನಕ್ಕಿಂತ 3-4 ಡಿಗ್ರಿ ಹೆಚ್ಚಾಗುವ ಸೂಚನೆ ಇದೆ. ಕರಾವಳಿ ಭಾಗ, ದಕ್ಷಿಣ ಒಳನಾಡು ಮತ್ತು ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಶಾಖ ಅಲೆ (Heatwave) ಉಂಟಾಗಬಹುದು.
ತೀವ್ರ ಬಿಸಿಲಿಗೆ ಸಿಲುಕುವ ಅಪಾಯವಿರುವ ಜಿಲ್ಲೆಗಳು:
ಉತ್ತರ ಕರ್ನಾಟಕ: ಕೊಪ್ಪಳ, ಬಾಗಲಕೋಟೆ, ಬೆಳಗಾವಿ, ಕಾರವಾರ, ಕಲಬುರ್ಗಿ, ಗದಗ.
ಮಧ್ಯ ಕರ್ನಾಟಕ: ದಾವಣಗೆರೆ, ಚಿತ್ರದುರ್ಗ, ತುಮಕೂರು.
ದಕ್ಷಿಣ ಕರ್ನಾಟಕ: ಬೆಂಗಳೂರು, ರಾಮನಗರ, ಮೈಸೂರು, ಚಾಮರಾಜನಗರ.
ಕರಾವಳಿ: ಕಾರವಾರ, ಮಂಗಳೂರು, ಉಡುಪಿ.
ಈ ವರ್ಷ ಬೇಸಿಗೆ ನಾಲ್ಕು ತಿಂಗಳು ಇರಬಹುದಾದ ಕಾರಣ, ಜನರು ತಾವು ವಾಸಿಸುವ ಪ್ರದೇಶದ ಹವಾಮಾನವನ್ನು ಗಮನಿಸಿ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.
ತೀವ್ರ ಬೇಸಿಗೆಯಿಂದ ತೊಂದರೆ ತಪ್ಪಿಸಿಕೊಳ್ಳಲು ಏನು ಮಾಡಬಹುದು?
ಹೆಚ್ಚಿನ ನೀರು ಸೇವನೆ: ಪ್ರತಿದಿನ ಕನಿಷ್ಠ 3-4 ಲೀಟರ್ ನೀರು ಕುಡಿಯುವುದು ಅಗತ್ಯ.
ಮಧ್ಯಾಹ್ನ ಬಿಸಿಲಿನಲ್ಲಿ ಓಡಾಟ ಕಡಿಮೆ ಮಾಡುವುದು: 12PM-4PM ನಡುವೆ ಹೊರಗೆ ಹೋಗುವುದನ್ನು ಕಡಿಮೆ ಮಾಡಬೇಕು.
ಸೇರುವ ಆಹಾರ: ಹೆಚ್ಚು ಪೇಯದ್ರವ್ಯಗಳು, ಹಣ್ಣಿನ ಜ್ಯೂಸ್, ದಪ್ಪ ಬಟ್ಟೆಗಳನ್ನು ತೊಡುವುದು.
ಮನೆ ಮತ್ತು ಕಚೇರಿಯನ್ನು ಶೀತಲವಾಗಿರಿಸುವುದು: ವಾತಾಯನ ತೆರೆಯುವುದು, ಹಸಿರು ಗಿಡಗಳನ್ನು ಬೆಳೆಸುವುದು. ಮತ್ತು ಮಕ್ಕಳು, ವಯೋವೃದ್ಧರು, ಶ್ರಮಿಕರು ಹೆಚ್ಚು ಎಚ್ಚರಿಕೆಯಿಂದ ಇರಬೇಕು.
ಇನ್ನು ಕೊನೆಯದಾಗಿ ತಿಳಿಸುವುದೇನೆಂದರೆ,
ಈಗಾಗಲೇ ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವುದರಿಂದ, ಕರ್ನಾಟಕದ ಹವಾಮಾನವು ಮುಂದಿನ ವರ್ಷಗಳಲ್ಲೂ ಬಿರು ಬೇಸಿಗೆಯನ್ನು ಅನುಭವಿಸುವ ಸಾಧ್ಯತೆ ಇದೆ. ನೀರಿನ ಶೇಖರಣಾ ವ್ಯವಸ್ಥೆ, ಮರಗಳ ಸಂರಕ್ಷಣೆ, ಪರಿಸರ ಸ್ನೇಹಿ ಪರ್ಯಾಯ ಇಂಧನ ಬಳಕೆ.ಈ ಎಲ್ಲಾ ಕ್ರಮಗಳನ್ನು ಈಗಲೇ ಕೈಗೊಂಡರೆ ಭವಿಷ್ಯದ ತೀವ್ರ ತಾಪಮಾನವನ್ನು ನಿಯಂತ್ರಿಸಲು ಸಾಧ್ಯ ಎಂದು ಹೇಳಬಹುದು.ಈಗಯಿಂದಲ್ಲೆ ಮುನ್ನೆಚ್ಚರಿಕೆ ವಹಿಸಿ, ಬಿಸಿಲಿನ ತಾಪಮಾನದಿಂದ ಸುರಕ್ಷಿತರಾಗಿ.ಮತ್ತು ಇಂತಹ ಉತ್ತಮವಾದ ಮಾಹಿತಿಯನ್ನು ನೀವು ತಿಳಿದಮೇಲೆ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




