KCET 2025 Results: ಕೆಸಿಇಟಿ 2025ರ ಫಲಿತಾಂಶಕ್ಕೆ ಇದೀಗ ಕ್ಷಣಗಣನೆ ಆರಂಭವಾಗಿದೆ. ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈ ಫಲಿತಾಂಶಕ್ಕಾಗಿ ಖಾತುರದಿಂದ ಕಾದು ಕುಳಿತಿದ್ದಾರೆ. ಈ ಫಲಿತಾಂಶದ ಮೂಲಕ ಮುಂದಿನ ವಿದ್ಯಾಬ್ಯಾಸದ ಭವಿಷ್ಯದ ಬಗ್ಗೆ ಯೋಚನೆ ಮಾಡತ್ತಿದ್ದಾರೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಫಲಿತಾಂಶವನ್ನು ಪರಿಶೀಲಿಸುವ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ, ಹೌದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಂಡಳಿ ಏಪ್ರಿಲ್ 16 ಮತ್ತು 17, 2025 ರಂದು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಪರೀಕ್ಷೆಗೆ ಸುಮಾರು ಮೂರು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದೀಗ ಈ ಎಲ್ಲಾ ಅಭ್ಯರ್ಥಿಗಳು ಫಲಿತಾಂಶವನ್ನು ಪರಿಶೀಲಿಸಲು ಖಾತುರದಿಂದ ಕಾದು ಕುಳಿತಿದ್ದಾರೆ..KCET ಫಲಿತಾಂಶವನ್ನು KEA ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ ನಲ್ಲಿ ಪ್ರಕಟಿಸಲಾಗುತ್ತದೆ. ರಿಜಲ್ಟ್ ಚೆಕ್ ಮಾಡಲು ಕೆಳಗಿನ ಹಂತಗಳನ್ನು ಅನುಸರಿಸಿ:
*cetonline.karnataka.gov.in
*karresults.nic.in
*kea.kar.nic.in
KEA ವೆಬ್ಸೈಟ್ ಗೆ ಭೇಟಿ ನೀಡಿ.
1)“Latest Announcements” ವಿಭಾಗದಲ್ಲಿ “KCET 2025 Results” ಲಿಂಕ್ ಅನ್ನು ಕ್ಲಿಕ್ ಮಾಡಿ.
2)ನಿಮ್ಮ ನೋಂದಣಿ ಸಂಖ್ಯೆ ಮತ್ತು ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನು ನಮೂದಿಸಿ.
3)“Submit” ಬಟನ್ ಒತ್ತಿದ ನಂತರ, ನಿಮ್ಮ ರಿಜಲ್ಟ್ ಸ್ಕ್ರೀನ್ ಮೇಲೆ ಪ್ರದರ್ಶನಗೊಳ್ಳುತ್ತದೆ.
4)ಅಂಕಗಳು ಮತ್ತು ರ್ಯಾಂಕ್ ಪರಿಶೀಲಿಸಿ, PDF ಡೌನ್ಲೋಡ್ ಮಾಡಿ ಮುದ್ರಿತ ಪ್ರತಿ ಸಂಗ್ರಹಿಸಿ.
ಕನ್ನಡ ಭಾಷಾ ಪರೀಕ್ಷೆ ಫಲಿತಾಂಶ ಪ್ರಕಟ
ಇನ್ನು ಕನ್ನಡ ಭಾಷಾ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆಗೆ ಅರ್ಹತೆ ಪಡೆದ ವಿದ್ಯಾರ್ಥಿಗಳು ಕೆಸಿಇಟಿ ಕೌನ್ಸೆಲಿಂಗ್‌ಗೆ ಹಾಜರಾಗಬೇಕಿದೆ. ಹಾಗೆಯೇ ಸಿಇಟಿಯಲ್ಲಿ ಭಾಗವಹಿಸುವ ಕಾಲೇಜುಗಳು ಕೆಸಿಇಟಿ ಕಟ್ ಆಫ್ ಅಂಕಗಳನ್ನು ಕಾಲೇಜುಗಳ ಕೌನ್ಸೆಲಿಂಗ್ ವೇಳಾಪಟ್ಟಿಯೊಂದಿಗೆ ಬಿಡುಗಡೆ ಮಾಡಲಾಗುತ್ತದೆ. ಈಗಾಗಲೇ ಕನ್ನಡ ಭಾಷಾ ಪರೀಕ್ಷೆಯ ಕೆಸಿಇಟಿ ಫಲಿತಾಂಶವನ್ನು ಪ್ರಕಟ ಮಾಡಲಾಗಿದೆ
KCET 2025: ಕಟ್-ಆಫ್ ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆ
*ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 50% ಅಂಕಗಳು ಅಗತ್ಯ.
*SC/ST ಅಭ್ಯರ್ಥಿಗಳಿಗೆ 40% ಅಂಕಗಳು ಬೇಕು.
ಕನಿಷ್ಠ ಅರ್ಹತಾ ಅಂಕಗಳ ವಿವರ
KCET ಫಲಿತಾಂಶ ಬಿಡುಗಡೆಯಾದ ನಂತರ, KEA ಕಟ್-ಆಫ್ ಮಾರ್ಕ್ಸ್ ಮತ್ತು ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸುತ್ತದೆ. ವಿವಿಧ ಕಾಲೇಜುಗಳು ಮತ್ತು ಕೋರ್ಸ್ಗಳಿಗೆ ಪ್ರವೇಶ ಪಡೆಯಲು ರ್ಯಾಂಕ್ ಆಧಾರಿತ ಸೀಟ್ ಹಂಚಿಕೆ ನಡೆಯುತ್ತದೆ.
ಫಲಿತಾಂಶ ವೀಕ್ಷಣೆ ಯಾವಾಗ?
ಕೆಸಿಇಟಿ 2025ರ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಂಡಳಿ ಏಪ್ರಿಲ್ 16 ಮತ್ತು 17, 2025ರಂದು ಪ್ರಕಟ ಮಾಡಲಾಗುತ್ತೆ ಅಂತಾ ಸಾಕಷ್ಟು ಕಡೆ ಸುದ್ದಿ ಹರಡಿತ್ತು ಇದರ ಹಿನ್ನಲೆ ಪರೀಕ್ಷೆ ಬರೆದಂತಹ ಎಲ್ಲಾ ಅಭ್ಯರ್ಥಿಗಳು ನಿನ್ನೆ ಮತ್ತು ಇವತ್ತಿನ ದಿನ ಚೆಕ್ ಮಾಡುತ್ತಲೇ ಇದ್ದಾರೆ ಆದರೇ ಹಿಂದಿನ ವರ್ಷ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) 2024 ರ ಫಲಿತಾಂಶವನ್ನು ಜೂನ್ 1, 2024 ರಂದು ಘೋಷಿಸಲಾಗಿತ್ತು ,2023 ರಲ್ಲಿ ಜೂನ್ 15ಕ್ಕೆ ಪ್ರಕಟಿಸಿದ್ದರು ಹೀಗಾಗಿ ಕಳೆದ ಎಲ್ಲಾ ವರ್ಷಗಳ ಫಲಿತಾಂಶದ ದಿನಾಂಕಗಳಿಗೆ ಹೋಲಿಸಿದರೆ ಈ 2025ರ ಫಲಿತಾಂಶವು ಇನ್ನು ವಿಳಂಬವಾಗಬಹುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲಾ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಹೇಳಿಕೆಯ ಪ್ರಕಾರ
ಸಿಇಟಿ ಫಲಿತಾಂಶ ವನ್ನು ಶೀಘ್ರವೇ ಪ್ರಕಟಿಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ತಿಳಿಸಿದ್ದಾರೆ. ಈ ಬಗ್ಗೆ ಮಾದ್ಯಮದೊಂದಿಗೆ ಮಾತನಾಡಿದ ಅವರು, ಕೃಷಿ ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶ ಇನ್ನೂ ನಮ್ಮ ಕೈಸೇರಿಲ್ಲ.
ಈ ಮಧ್ಯೆ ನಿನ್ನೆಯಷ್ಟೆ ದ್ವಿತಿಯ ಪಿಯುಸಿ ಪರೀಕ್ಷೆ2 ಫಲಿತಾಂಷ ಪ್ರಕಟಿಸಿದ್ದು ಅಲ್ಲದೇ ಕೇರಳದ ದ್ವಿತೀಯ ಪಿಯು ಫಲಿತಾಂಶ ಇನ್ನಷ್ಟೇ ಪ್ರಕಟಗೊಳ್ಳಬೇಕಿದ್ದು, ಅಲ್ಲಿಂದ ಸುಮಾರು 2,000 ವಿದ್ಯಾರ್ಥಿಗಳು ನಮ್ಮ ಸಿಇಟಿ ಪರೀಕ್ಷೆ ಬರೆದಿದ್ದಾರೆ. ಅವರಿಗೂ ಕೂಡ ರ್‍ಯಾಂಕಿಂಗ್ ಕೊಡುವ ಅವಕಾಶವಿದೆ. ಈ ಪರೀಕ್ಷಾ ಮಂಡಳಿ ನಡೆಸಿದ 2 ಪರೀಕ್ಷೆಗಳ ಅತ್ಯುತ್ತಮ ಫಲಿತಾಂಶದ ಅಧಿಕೃತ ಮಾಹಿತಿ ನಮಗೆ ನೀಡಬೇಕಿದೆ. ಮಂಡಳಿ ಮಾಹಿತಿ ನಮಗೆ ನೀಡಿದ ಸ್ಡಲ್ಪ ದಿನಗಳಲ್ಲಿ ನಾವು ಸಿಇಟಿ ಫಲಿತಾಂಶ ನೀಡುತ್ತೇವೆ ಎಂದು ತಿಳಿಸಿದರು.
ಇದರ ಹಿನ್ನಲೆ 2025ರ ಫಲಿತಾಂಶವನ್ನು ಬರುವ ಮೇ 20 2025ರ ದಿನಾಂಕಕ್ಕೆ ನಿಗದಿ ಪಡಿಸಿದ್ದಾರೆ ಅಂತಾ ಕೆಲವು ಮೂಲಗಳಿಂದ ತಿಳಿದು ಬಂದಿದೆ ಇದರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಂಡಳಿ ಇನ್ನೆರಡು ದಿನಗಳಲ್ಲಿ ಅಧಿಕೃತವಾಗಿ ದಿನಾಂಕವನ್ನು ಹೊರಡಿಸಬಹುದು ಅಲ್ಲಿಯವರೆಗು ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಕಾಯಲೇಬೇಕಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಂಡಳಿಯ ಹೊಸ ಅಪ್ಲಿಕೇಶನ್
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಂಡಳಿ ವಿದ್ಯಾರ್ಥಿಗಳ ಅನೂಕೂಲಕ್ಕಾಗಿ ಹೊಸದೊಂದು ಅಪ್ಲಿಕೇಶನ್ ಬಿಡುಗೊಡೆ ಮಾಡಿದೆ ಅದುವೇ ವಿದ್ಯಾರ್ಥಿ ಸ್ನೇಹಿ ಅಪ್ಲಿಕೇಶನ್ ಇದರಲ್ಲಿ ಈ ಕೆಳಗೆ ಇರುವ ಎಲ್ಲಾ ಸೌಲಬ್ಯಗಳನ್ನು ವಿದ್ಯಾರ್ಥಿಗಳು ಪಡೆಯಬಹುದು
*ಆನ್ ಲೈನ್ ಅರ್ಜಿ ಸಲ್ಲಿಕೆ
*ಬೇಕಾಗಿರುವ ಆಪ್ಷನ್ ಎಂಟ್ರಿ
*ದಾಖಲೆಗಳ ಅಪ್ ಲೋಡ್
*ಫೀಸ್ ತುಂಬುವಿಕೆ
*ಸೀಟ್ ಹಂಚಿಕೆ
*ಎಚ್ಚರಿಕೆಯ ಸಂದೇಷಗಳು
ಈ ಅಪ್ಲಿಕೇಶನ್ ನೀವು ನಿಮ್ಮ ಮೊಬೈಲ್ ನಲ್ಲಿರುವ ಗೂಗಲ್ ಪ್ಲೇ ಸ್ಟೋರ್ ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಂಡಳಿಯ ಅಧಿಕೃತ ವೆಬ್ ಸೈಟ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು ಇದರಲ್ಲಿಯೇ ನೀವು ಮುಂದಿನ ಪ್ರವೇಶದ ಎಲ್ಲಾ ಡಾಟಾಗಳನ್ನು ಎಂಟ್ರಿ ಮಾಡಬಹುದು.
ಮುಂದಿನ ಅಧಿಕೃತ ಮಾಹಿತಿಗೆ ನಮ್ಮ ಚಾನಲ್ ತಪ್ಪದೇ ಫಾಲೋ ಮಾಡಿ
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.