ಕರ್ನಾಟಕದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾಧನ ವಿದ್ಯಾರ್ಥಿವೇತನ ಪಡೆಯಲು (Vidyadhan Scholarship 2025) ಅರ್ಜಿ ಆಹ್ವಾನಿಸಲಾಗಿದೆ. ಈ ವಿದ್ಯಾರ್ಥಿವೇತನ ಯೋಜನೆಯು ಆರ್ಥಿಕವಾಗಿ ದುರ್ಬಲ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅವಕಾಶ ನೀಡುತ್ತದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ವಿದ್ಯಾಧನ ವಿದ್ಯಾರ್ಥಿವೇತನದ ವಿವರ
ಸರೋಜಿನಿ ದಾಮೋದರನ್ ಫೌಂಡೇಶನ್ (SDF) ನಡೆಸುವ ಈ ಯೋಜನೆಯು, 1999ರಲ್ಲಿ ಇನ್ಫೋಸಿಸ್ ಸಹ-ಸಂಸ್ಥಾಪಕರು ಶ್ರೀ ಎಸ್.ಡಿ. ಶಿಬುಲಾಲ್ ಮತ್ತು ಸುಶ್ರೀ ಶಿಬುಲಾಲ್ ಅವರಿಂದ ಪ್ರಾರಂಭವಾಯಿತು. ಇದುವರೆಗೆ ದೇಶದ 20ಕ್ಕೂ ಹೆಚ್ಚು ರಾಜ್ಯಗಳ 50,000ಕ್ಕೂ ಅಧಿಕ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನದಿಂದ ಲಾಭ ಪಡೆದಿದ್ದಾರೆ. ಕರ್ನಾಟಕದಲ್ಲಿ 2014ರಿಂದ ಈ ಯೋಜನೆ ಜಾರಿಯಲ್ಲಿದ್ದು, 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ.
ವಿದ್ಯಾರ್ಥಿವೇತನದ ಪ್ರಯೋಜನಗಳು
ಪಿಯುಸಿ (1ನೇ & 2ನೇ ವರ್ಷ): ವರ್ಷಕ್ಕೆ ₹10,000
ಪದವಿ ಶಿಕ್ಷಣ: ವರ್ಷಕ್ಕೆ ₹15,000 ರಿಂದ ₹75,000 (ವಿವಿಧ ಕೋರ್ಸ್‌ಗಳಿಗೆ ಅನುಗುಣವಾಗಿ)
ಅರ್ಹತಾ ಮಾನದಂಡಗಳು
- 2025ರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ಎಲ್ಲಾ ವಿಷಯಗಳಲ್ಲಿ 90% ಅಥವಾ A+ ಗ್ರೇಡ್ ಪಡೆದಿರಬೇಕು.
- ಅಂಗವೈಕಲ್ಯ ವಿದ್ಯಾರ್ಥಿಗಳಿಗೆ ಕನಿಷ್ಠ 75% ಅಂಕಗಳು ಬೇಕು.
- ಕುಟುಂಬದ ವಾರ್ಷಿಕ ಆದಾಯ ₹2 ಲಕ್ಷಕ್ಕಿಂತ ಕಡಿಮೆ ಇರಬೇಕು.
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
- ಎಸ್ಎಸ್ಎಲ್ಸಿ ಮಾರ್ಕ್ ಶೀಟ್ (2025)
- ಕುಟುಂಬದ ಆದಾಯ ಪ್ರಮಾಣಪತ್ರ
- ಪಾಸ್ಪೋರ್ಟ್ ಗಾತ್ರದ ಫೋಟೋ
- ಅಂಗವೈಕಲ್ಯ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
- ಬ್ಯಾಂಕ್ ಖಾತೆ ವಿವರಗಳು
ಆಯ್ಕೆ ಪ್ರಕ್ರಿಯೆ
- ಆನ್‌ಲೈನ್ ಅರ್ಜಿ ಪರಿಶೀಲನೆ
- ಸಾಮಾನ್ಯ ಜ್ಞಾನ, ಲೆಕ್ಕಾಚಾರ ಮತ್ತು ಭಾಷಾ ಪರೀಕ್ಷೆ
- ಮನೆ ಭೇಟಿ ಮತ್ತು ದಾಖಲೆ ಪರಿಶೀಲನೆ
- ಅಂತಿಮ ಆಯ್ಕೆ
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿಗಳನ್ನು vidyadhan.org ವೆಬ್‌ಸೈಟ್ ಮೂಲಕ ಅಥವಾ SDF Vidya ಮೊಬೈಲ್ ಅಪ್ಲಿಕೇಶನ್ (ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯ) ಬಳಸಿ ಸಲ್ಲಿಸಬಹುದು.
- ಅರ್ಜಿ ಪ್ರಾರಂಭ: 19-05-2025
- ಕೊನೆಯ ದಿನಾಂಕ: 08-07-2025
ಹೆಚ್ಚಿನ ಮಾಹಿತಿಗೆ:
- ಇಮೇಲ್: [email protected]
- ಹೆಲ್ಪ್ಲೈನ್: +91 8068333500
ಈ ವಿದ್ಯಾರ್ಥಿವೇತನ ಯೋಜನೆಯು ಪ್ರತಿಭಾವಂತ ಆದರೆ ಆರ್ಥಿಕ ಸಹಾಯದ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಬಾಗಿಲು ತೆರೆಯುತ್ತದೆ. ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಪಡೆದುಕೊಳ್ಳಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.