Vande Bharat Express:  ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್‌ ಎಕ್ಸ್‌ಪ್ರೆಸ್‌, ಯಾವ ಮಾರ್ಗ.?

Picsart 25 05 02 23 34 09 624

WhatsApp Group Telegram Group

ವಂದೇ ಭಾರತ್ ಎಕ್ಸ್‌ಪ್ರೆಸ್: ಬೆಂಗಳೂರು – ಬೆಳಗಾವಿಗೆ ಹೊಸ ರೈಲು ಸಂಪರ್ಕ, ಕರ್ನಾಟಕಕ್ಕೆ ಮತ್ತೊಂದು ಭರ್ಜರಿ ಗಿಫ್ಟ್!

ಭಾರತದ ರೈಲು ಸಂಪರ್ಕದ (Railway connectivity of India)ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ (Vandhe Bharath Express) ಇದೀಗ ಕರ್ನಾಟಕದ ಮತ್ತೊಂದು ಪ್ರಮುಖ ಮಾರ್ಗದಲ್ಲಿ ಸಂಚರಿಸಲು ಸಜ್ಜಾಗಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಈ ಆಧುನಿಕ, ವೇಗದ, ಮತ್ತು ಪ್ರೀತಿ ಗಳಿಸಿರುವ ರೈಲು ಸೇವೆ, ಈಗ ಬೆಂಗಳೂರು-ಬೆಳಗಾವಿ ಮಾರ್ಗವನ್ನು ಸೇರಿಕೊಳ್ಳುತ್ತಿದೆ. ಇದು ರಾಜ್ಯದ ದಕ್ಷಿಣ ಹಾಗೂ ಉತ್ತರ ಭಾಗದ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿದೆ. ದಕ್ಷಿಣ ಭಾರತದ ಹೃದಯಸ್ಥಳವಾದ ಬೆಂಗಳೂರಿನಿಂದ ಉತ್ತರ ಕರ್ನಾಟಕದ (North Karnataka) ಪ್ರಮುಖ ವಾಣಿಜ್ಯ ಕೇಂದ್ರ ಬೆಳಗಾವಿಗೆ ಪ್ರಯಾಣ  ಸುಗಮವಾಗಲಿದೆ. ಈ ಸೇವೆಯ ವೈಶಿಷ್ಟ್ಯಗಳು (features) ಏನು? ಯಾವ ಯಾವ ನಿಲ್ದಾಣಗಳಲ್ಲಿ ರೈಲು ನಿಲುತ್ತದೆ? ಬೋಗಿಗಳು ಮತ್ತು ದರಗಳ ವಿವರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕೇಂದ್ರ ಸರ್ಕಾರದಿಂದ (central government) ಹೊಸ ಘೋಷಣೆ:

ಭಾರತ ಸರ್ಕಾರದ ಕೊನೆಯ ಪ್ರಕಟಣೆಯ ಪ್ರಕಾರ, ಬೆಂಗಳೂರು–ಬೆಳಗಾವಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗೆ ಅಧಿಕೃತ ಅನುಮತಿ ನೀಡಲಾಗಿದೆ. ಈ ಬಗ್ಗೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ (Union Minister of State for Water Resources and Railways V. Somanna) ಅವರು ಈ ಕುರಿತಾದ ಸುದ್ದಿ ಹಂಚಿಕೊಂಡಿದ್ದು, ರೈಲು ಸಂಚಾರದ ವೇಳಾಪಟ್ಟಿ ಹಾಗೂ ದರಗಳ ಮಾಹಿತಿ ಕೂಡ ಬಹಿರಂಗಗೊಳಿಸಿದ್ದಾರೆ.

ಸೇವೆಯ ವೈಶಿಷ್ಟ್ಯಗಳು ಹೀಗಿವೆ:

ರೈಲು ಸಂಖ್ಯೆ: 20661/20662
ಕಾರ್ಯಾಚರಣೆ ದಿನಗಳು: ವಾರದಲ್ಲಿ ಆರು ದಿನಗಳು (ಮಂಗಳವಾರ ಹೊರತುಪಡಿಸಿ)
ಬೆಳಿಗ್ಗೆ 5:45ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ (KSR Bangalore station) ಹೊರಡುತ್ತಿದ್ದು, ಮಧ್ಯಾಹ್ನ 1:30ಕ್ಕೆ ಬೆಳಗಾವಿಗೆ ತಲುಪುತ್ತದೆ.
ಬೆಳಗಾವಿಯಿಂದ ಮಧ್ಯಾಹ್ನ 2:30ಕ್ಕೆ ಹೊರತು, ರಾತ್ರಿ 9:00ಕ್ಕೆ ಬೆಂಗಳೂರಿಗೆ ತಲುಪುತ್ತದೆ
ಒಟ್ಟು 611 ಕಿಮೀ ದೂರವನ್ನು 8 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಪೂರೈಸಲಿದೆ.

ಯಾವ ಯಾವ ನಿಲ್ದಾಣಗಳಲ್ಲಿ ರೈಲು ನಿಲುತ್ತದೆ:

ಈ ರೈಲು ಯಶವಂತಪುರ, ತುಮಕೂರು, ದಾವಣಗೆರೆ, ಮೈಲಾರ ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ ನಿಲ್ದಾಣಗಳಲ್ಲಿ ನಿಲ್ಲಲಿದೆ. ಇದು ಪ್ರಯಾಣಿಕರಿಗೆ ಹೆಚ್ಚು ಅನುಕೂಲವನ್ನೂ (facilities) ಮತ್ತು ವ್ಯಾಪಕ ಸಂಪರ್ಕವನ್ನೂ ಒದಗಿಸುತ್ತದೆ.

ಬೋಗಿಗಳು ಮತ್ತು ದರಗಳ (Coach and rate) ವಿವರ ನೋಡುವುದಾದರೆ:

ಈ ನೂತನ ರೈಲಿನಲ್ಲಿ ಒಟ್ಟು 8 ಬೋಗಿಗಳು ಇದ್ದು, ಇದರಲ್ಲಿ 1 ಎಕ್ಸಿಕ್ಯುಟಿವ್ ಎಸಿ ಕೋಚ್ ಮತ್ತು 7 ಎಸಿ ಚೇರ್ ಕಾರ್ ಬೋಗಿಗಳು ಇರುತ್ತವೆ.
ಎಸಿ ಚೇರ್ ಕಾರ್ ಟಿಕೆಟ್: ₹1400 (ಅಂದಾಜು)
ಎಕ್ಸಿಕ್ಯುಟಿವ್ ಎಸಿ ಟಿಕೆಟ್: ₹2500 (ಅಂದಾಜು)

ಈ ರೈಲು ಸಂಚಾರದ ಮೂಲಕ ಬೆಂಗಳೂರು ಹಾಗೂ ಬೆಳಗಾವಿಯ ನಡುವೆ ವ್ಯಾಪಾರ, ಉದ್ಯಮ, ಶಿಕ್ಷಣ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಾಗುವ ನಿರೀಕ್ಷೆ ಇದೆ. ಜೊತೆಗೆ, ಇದು ಇತರ ರೈಲುಗಳ ಮೇಲೆ ಇರುವ ಒತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಜನರಿಗೆ ವೇಗದ ಪ್ರಯಾಣದ ಅನುಭವವನ್ನು (Experience fast travel) ನೀಡುತ್ತದೆ.

ಈ ನಿರ್ಧಾರವು ಕರ್ನಾಟಕದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ (Railway infrastructure of Karnataka) ಮತ್ತೊಂದು ಹೆಜ್ಜೆಯಾಗಿ ಪರಿಗಣಿಸಬಹುದು. “ವಂದೇ ಭಾರತ್” ಕರ್ನಾಟಕದಲ್ಲಿ ಬಹಳ ಜನರು ಇಷ್ಟ ಪಡುವ ರೈಲಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!