anganavadi recruitment scaled

Anganwadi Recruitment 2025: 10ನೇ ಕ್ಲಾಸ್ ಪಾಸಾದವರಿಗೆ ಸರ್ಕಾರಿ ಕೆಲಸ! 229 ಹುದ್ದೆಗಳಿಗೆ ಅರ್ಜಿ ಆಹ್ವಾನ – ಆನ್‌ಲೈನ್ ಲಿಂಕ್ ಇಲ್ಲಿದೆ

Categories:
WhatsApp Group Telegram Group

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) ಸಿಹಿ ಸುದ್ದಿ ನೀಡಿದೆ.

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಹೊಸ ಅಧಿಸೂಚನೆ ಹೊರಡಿಸಲಾಗಿದೆ. ಸದ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ 229 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು, ರಾಜ್ಯದ ಇತರೆ ಜಿಲ್ಲೆಗಳಲ್ಲೂ ಹಂತ ಹಂತವಾಗಿ ಅರ್ಜಿ ಕರೆಯಲಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಮಹಿಳೆಯರಿಗೆ ಸರ್ಕಾರಿ ಉದ್ಯೋಗ ಪಡೆಯಲು ಸುವರ್ಣಾವಕಾಶವೊಂದು ಒದಗಿ ಬಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಜಿಲ್ಲೆಯಾದ್ಯಂತ ಖಾಲಿ ಇರುವ ಅಂಗನವಾಡಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.

ಒಟ್ಟು 229 ಹುದ್ದೆಗಳಿಗೆ (ಕಾರ್ಯಕರ್ತೆ ಮತ್ತು ಸಹಾಯಕಿ) ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಮಹಿಳಾ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲುಇಲ್ಲಿ ಕ್ಲಿಕ್ ಮಾಡಿ.

ತಾಲೂಕುವಾರು ಖಾಲಿ ಹುದ್ದೆಗಳ ಪಟ್ಟಿ (Vacancy List)

ನಿಮ್ಮ ತಾಲೂಕಿನಲ್ಲಿ ಎಷ್ಟು ಹುದ್ದೆಗಳಿವೆ ಎಂದು ತಿಳಿಯಲು ಈ ಕೆಳಗಿನ ಟೇಬಲ್ ನೋಡಿ.

ತಾಲೂಕು (Taluk)ಕಾರ್ಯಕರ್ತೆ (Worker)ಸಹಾಯಕಿ (Helper)ಒಟ್ಟು
ಶಿರಸಿ023941
ಯಲ್ಲಾಪುರ032528
ಅಂಕೋಲಾ022426
ಹಳಿಯಾಳ031821
ಜೋಯಿಡಾ051621
ಭಟ್ಕಳ011617
ಮುಂಡಗೋಡ021618
ಸಿದ್ದಾಪುರ041519
ಹೊನ್ನಾವರ011213
ಕಾರವಾರ / ಕುಮಟಾ017 (ಒಟ್ಟು)17
ಒಟ್ಟು ಹುದ್ದೆಗಳು23206229

ಅರ್ಹತೆಗಳೇನು? (Eligibility)

(ಸಾಮಾನ್ಯ ನಿಯಮಗಳ ಪ್ರಕಾರ)

  • ವಿದ್ಯಾರ್ಹತೆ: ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ SSLC (10ನೇ ತರಗತಿ) ಪಾಸ್ ಆಗಿರಬೇಕು. ಸಹಾಯಕಿ ಹುದ್ದೆಗೆ ಕನಿಷ್ಠ 4ನೇ ತರಗತಿ ಅಥವಾ 9ನೇ ತರಗತಿ ಪಾಸ್ ಆಗಿರಬೇಕು.
  • ವಯಸ್ಸು: 18 ರಿಂದ 35 ವರ್ಷದೊಳಗಿರಬೇಕು.
  • ವಿಶೇಷ ಸೂಚನೆ: ಅಭ್ಯರ್ಥಿಯು ಅದೇ ಗ್ರಾಮ ಅಥವಾ ವಾರ್ಡ್‌ನ ನಿವಾಸಿಯಾಗಿರಬೇಕು (ಸ್ಥಳೀಯರಿಗೆ ಮಾತ್ರ ಅವಕಾಶ).

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸಲು ಡಿಸೆಂಬರ್ 31, 2025 ಕೊನೆಯ ದಿನಾಂಕವಾಗಿದೆ.

  1. ಕೆಳಗೆ ನೀಡಿರುವ ಅಧಿಕೃತ ವೆಬ್‌ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
  2. ಜಿಲ್ಲೆ ‘ಉತ್ತರ ಕನ್ನಡ’ ಎಂದು ಆಯ್ಕೆ ಮಾಡಿ.
  3. ನಿಮ್ಮ ವಿವರಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ.

ಆನ್‌ಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ:


👉 ಇಲ್ಲಿ ಅರ್ಜಿ ಹಾಕಿ (Apply Online)

 

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories