money to wrong account

ಮೀಸ್ ಆಗಿ ಹಣ ಬೇರೆಯವರಿಗೆ ಹೋಯ್ತಾ..? ಹೀಗೆ ಮಾಡಿ ಹಣ ವಾಪಾಸ್ ಬರುತ್ತೆ..!

Categories:
WhatsApp Group Telegram Group

PhonePe ಅಥವಾ Google Pay UPI ಪಾವತಿಯೊಂದಿಗೆ ತಪ್ಪಾಗಿದೆಯೇ? ಹಣವನ್ನು ತಪ್ಪು ವ್ಯಕ್ತಿಗೆ ಪಾವತಿ ಮಾಡಿದ್ದೀರೇ? ಭಯಪಡಬೇಡಿ! ನಿಮ್ಮ ತಪ್ಪಾದ ಹಣವನ್ನು ಮರುಪಡೆಯುವುದು ಅಸಾಧ್ಯವೇನಲ್ಲ. ನಿಮ್ಮ ಹಣವನ್ನು ಮರಳಿ ಪಡೆಯುವುದು ಹೇಗೆ ಎಂಬುದರ ಮಾಹಿತಿ ಈ ವರದಿಯಲ್ಲಿ ಪ್ರಸ್ತಾಪಸಲಾಗಿದೆ. ವರದಿಯನ್ನು ಸಂಪೂರ್ಣವಾಗಿ ಓದಿ, ತಿಳಿಯಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ತಪ್ಪಾದ ವ್ಯಕ್ತಿಗೆ ಹಣ ಕಳಿಸಿದ್ದರೆ ಇಲ್ಲಿದೆ ಹಿಂಪಡೆಯುವ ಮಾರ್ಗ :

ಭಾರತದಲ್ಲಿ ಡಿಜಿಟಲ್ ಪಾವತಿಗಳು(Digital payments) ತ್ವರಿತವಾಗಿ ಬೆಳೆಯುತ್ತಿವೆ. ಈ ಬೆಳವಣಿಗೆಯ ಹಿಂದೆ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಯ ಪಾತ್ರವು ಅತ್ಯಗತ್ಯವಾಗಿದೆ. UPI ಯು ಭಾರತದ ಬಹುಪಾಲು ಆನ್‌ಲೈನ್ ಡಿಜಿಟಲ್ ವಹಿವಾಟುಗಳನ್ನು ನಿರ್ವಹಿಸುತ್ತದೆ.

UPI ಯು ಒಂದು ಅದ್ಭುತವಾದ ಪಾವತಿ ವ್ಯವಸ್ಥೆಯಾಗಿದೆ. ಇದು ಸುಲಭವಾಗಿ ಬಳಸಬಹುದು ಮತ್ತು ವೇಗವಾಗಿದೆ. ಆದರೂ UPI ಯ ಜನಪ್ರಿಯತೆಯು ಒಂದು ಸಮಸ್ಯೆಯನ್ನು ಸಹ ಸೃಷ್ಟಿಸಿದೆ. ಕೆಲವೊಮ್ಮೆ, ಜನರು ತಪ್ಪಾದ UPI ವಿಳಾಸಕ್ಕೆ ಹಣವನ್ನು ಕಳುಹಿಸುತ್ತಾರೆ. ಒಂದು ಸಣ್ಣ ತಪ್ಪು ಮಾಡಿದರು ನಿಮ್ಮ ಹಣ ಬೇರೆಯವರ ಖಾತೆ ಹೋಗುವ ಸಾಧ್ಯತೆ ಇರುತ್ತದೆ. ಇಂತಹ ಸಂಧರ್ಭದಲ್ಲಿ ಭಯಪಡುವಂತಿಲ್ಲಾ ನಿಮ್ಮ ತಪ್ಪಾದ ಹಣವನ್ನು ಮರುಪಡೆಯುವುದು ಅಸಾಧ್ಯವೇನಲ್ಲ. ನಿಮ್ಮ ಹಣವನ್ನು ಮರಳಿ ಪಡೆಯಲು ಈ ಕೆಳಗಿನ ಕೆಲವು ಮಾರ್ಗಗಳನ್ನು ಅನುಸರಿಸಿದರೆ ನಿಮ್ಮ ಹಣ ಹಿಂಪಡೆಯುವ ಸಾಧ್ಯತೆ ಇದೆ.

whatss

ತಪ್ಪಾಗಿ ಹಣ ವರ್ಗಾವಣೆಯದ ವ್ಯಕ್ತಿಯನ್ನು ಸಂಪರ್ಕಿಸಿ(Contact the person) :

UPI ವಹಿವಾಟಿನಲ್ಲಿ ತೊಂದರೆಯಾದರೆ ಮೊಟ್ಟ ಮೊದಲು ನೀವು ಆ ವ್ಯಕ್ತಿಯನ್ನು ಸಂಪರ್ಕಿಸಲು ಪ್ರಯತ್ನ ಪಡಿ. ಇದು ಅತ್ಯಂತ ಸುಲಭ ಮಾರ್ಗವಾಗಿದೆ ಎನ್ನಬಹುದು. ವಹಿವಾಟಿನ ಹಿಸ್ಟರಿ(Transaction History) ಯನ್ನು ತೆರೆಯಿರಿ ಮತ್ತು ಯಾವ ವ್ಯಕ್ತಿಗೆ ತಪ್ಪಾಗಿ ಹಣ ಸೇರಿಕೊಂಡಿದೆ ಎಂದು ಖಚಿತ ಪಡೆಸಿಕೊಳ್ಳಿ ಮತ್ತು ಅವರನ್ನು ಸಂಪರ್ಕಿಸಿ

ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಿ(Contact customer care ):

UPI ವಹಿವಾಟಿನಲ್ಲಿ ತೊಂದರೆಯಾದರೆ, ನೀವು ಬಳಸಿದ ಪಾವತಿ ಪ್ಲಾಟ್‌ಫಾರ್ಮ್‌ನ ಗ್ರಾಹಕ ಆರೈಕೆಯನ್ನು ಸಂಪರ್ಕಿಸಿ. ಅವರಿಗೆ ವಹಿವಾಟಿನ ವಿವರಗಳನ್ನು ಒದಗಿಸಿ ಮತ್ತು ದೂರು ದಾಖಲಿಸಿ. ಈ ಹಂತವು RBI ಮಾರ್ಗಸೂಚಿಗಳ ಪ್ರಕಾರ ನಿರ್ಣಾಯಕವಾಗಿದೆ. ವಹಿವಾಟಿನ 3 ಕೆಲಸದ ದಿನಗಳಲ್ಲಿ ದೂರು ಸಲ್ಲಿಸುವುದರಿಂದ ನಿಮ್ಮ ಹಣವನ್ನು ಮರುಪಡೆಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಬ್ಯಾಂಕ್ ಗೆ ದೂರು ಸಲ್ಲಿಸಿ(Complaint to bank) :

ಕಸ್ಟಮರ್ ಕೇರ್ ಅನ್ನು ಸಂಪರ್ಕಿಸುವುದರ ಜೊತೆಗೆ, ನಿಮ್ಮ ಬ್ಯಾಂಕ್‌ಗೆ ದೂರು ಸಲ್ಲಿಸಿ. ತಪ್ಪಾದ ವಹಿವಾಟಿನ ಬಗ್ಗೆ ಅವರಿಗೆ ತಿಳಿಸಿ ಮತ್ತು ಅಗತ್ಯ ಮಾಹಿತಿಯನ್ನು ಒದಗಿಸಿ. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ತಪ್ಪು ಪಾವತಿಯ ಬಗ್ಗೆ ದೂರು ನೀಡಿದ 48 ಗಂಟೆಗಳ ಒಳಗೆ ಹಣವನ್ನು ಮರುಪಡೆಯುವ ಸಾಧ್ಯತೆ ಇರುತ್ತದೆ.
ಇನ್ನು ಬ್ಯಾಂಕ್ ನಿಮ್ಮ ಸಮಸ್ಯೆಯನ್ನು ತಿರಸ್ಕರಿಸಿದರೆ ತಕ್ಷಣವೇ RBI ವೆಬ್ಸೈಟ್ ನಲ್ಲಿ ದೂರು ಸಲ್ಲಿಸಬಹುದು.

tel share transformed

ಸಹಾಯವಾಣಿ ಸಂಖ್ಯೆಯಲ್ಲಿ ದೂರು ಸಲ್ಲಿಸಿ(Contact Helpline number) :

ಯುಪಿಐ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ನೀವು ತಪ್ಪು ಪಾವತಿ ಮಾಡಿದ್ದರೆ, ಹಣ ಹಿಂಪಡೆಯಲು 18001201740 ಗೆ ಕರೆ ಮಾಡಿ ದೂರು ದಾಖಲಿಸಿ. ದೂರಿನಲ್ಲಿ, ನಿಮ್ಮ ಪಾವತಿ ವಿವರಗಳನ್ನು (ಪಾವತಿ ಮಾಡಿದ ಮೊತ್ತ, ಪಾವತಿ ಮಾಡಿದ ದಿನಾಂಕ, ಪಾವತಿ ಮಾಡಿದ ಯುಪಿಐ ಐಡಿ ಅಥವಾ ನೆಟ್ ಬ್ಯಾಂಕಿಂಗ್ ವಿವರಗಳು) ಒದಗಿಸಿ.

ಗಮನಿಸಬೇಕಾದ ವಿಷಯವೆಂದರೆ, ಅಕಸ್ಮಾತ ತಪ್ಪಾದ UPI ವಿಳಾಸಕ್ಕೆ ಹಣವನ್ನು ಕಳಿಸಿದರೆ ನಿಮ್ಮ ಫೋನ್‌ನಿಂದ ಯಾವುದೇ ವಹಿವಾಟು ಸಂದೇಶ(Message) ಗಳನ್ನು ಡಿಲೀಟ್ ಮಾಡಬೇಡಿ. ಏಕೆಂದರೆ ಸಂದೇಶಗಳು ಪಿಪಿಬಿಎಲ್(PPBL) ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಒಳಗೊಂಡಿರುತ್ತವೆ, ಹಾಗಾಗಿ ಸಂದೇಶಗಳನ್ನು ಅಳಿಸದಿರುವುದು ಬಹಳ ಮುಖ್ಯ.

ಆನ್‌ಲೈನ್ ಪಾವತಿಗಳನ್ನು ಮಾಡುವ ಮೊದಲು ಯಾವಾಗಲೂ ಜಾಗರೂಕರಾಗಿರಿ. ಅಂತಹ ತೊಡಕುಗಳನ್ನು ತಪ್ಪಿಸಲು ನೀವು ಹಣವನ್ನು ವರ್ಗಾಯಿಸುತ್ತಿರುವ ಖಾತೆ ಅಥವಾ UPI ಸರಿಯಾಗಿದೆಯೇ ಎಂದು ಎರಡು ಬಾರಿ ಪರಿಶೀಲಿಸಿದ ನಂತರವೇ ಮುಂದಿನ ಕ್ರಮವನ್ನು ಕೈಗೊಳ್ಳಬೇಕು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories