WhatsApp Image 2023 09 11 at 17.18.47

UIDAI ಎಚ್ಚರಿಕೆ – ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಮಹತ್ವದ ಎಚ್ಚರಿಕೆ – ಈ ತಪ್ಪು ಮಾಡಿದ್ರೆ ನಿಮ್ಮ ಅಕೌಂಟ್ ಖಾಲಿಯಾಗುತ್ತೆ ಹುಷಾರ್

Categories:
WhatsApp Group Telegram Group

ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವ ಸಲುವಾಗಿ ಒಂದು ಒಳ್ಳೆಯ ಸುದ್ದಿಯನ್ನು UIDAI ತಿಳಿಸಿ ಎಚ್ಚರಿಸಿದೆ. ನೀವು ಕೂಡ ಇ-ಮೇಲ್ ಮೂಲಕ ಅಥವಾ ವಾಟ್ಸಾಪ್ ಮೂಲಕ ಆಧಾರ್ ನ ಯಾವುದೇ ಅಪ್‌ಡೇಟ್‌ ಮೆಸೇಜ್ ಬಂದಿದ್ರೆ ಅದಕ್ಕೆ ರಿಪ್ಲೈ ಮಾಡಲು ಹೋಗ್ಬೇಡಿ. ಯಾಕಂದ್ರೆ ಇಂತ ಸಂದೇಶಗಳನ್ನ ವಂಚಕರು ಕಳಿಸ್ತಿದ್ದಾರೆ ಅನ್ನೋ ಮಾಹಿತಿ ಬಂದಿದೆ. ಮತ್ತು ಇದು ವಂಚನೆಯ ಮಾಡುವ ಹೊಸ ವಿಧಾನವಾಗಿದೆ. ಏನಿದು ಅಂತ ತಿಳ್ಕೊಬೇಕ ಹಾಗಿದಲ್ಲಿ ಈ ಲೇಖನವನ್ನು  ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಇಂದು ಭಾರತದಲ್ಲಿ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಎಲ್ಲದಕ್ಕೂ ಆಧಾರ್ ಕಾರ್ಡ್ ಅವಶ್ಯಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಆಧಾರ್ ನೀಡುವ ಸಂಸ್ಥೆಯಾದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI), ಅದನ್ನು ಅಪ್‌ಡೇಟ್‌ ಮಾಡುವ ಮೂಲಕ ಅವಾಗ ಅವಾಗ  ಮಾಹಿತಿಯನ್ನು ಕೊಡುತ್ತಿರುತ್ತದೆ. ತುಂಬಾ ಜನ ಆಧಾರ್ ಉಪಯೋಗ ಮಾಡುವವರು ಆಧಾರ್ ನ ಅಪ್‌ಡೇಟ್‌ ಗಾಗಿ ಇಮೇಲ್ ಅಥವಾ ವಾಟ್ಸಾಪ್‌ ನಲ್ಲಿ ಮೆಸೇಜ್ ಗಳನ್ನ ನೋಡುತ್ತಿರುತ್ತಾರೆ. ನೀವು ಸಹ ಇಂತಹ ಹಲವಾರು ಮೆಸೇಜ್ ಗಳನ್ನ ನೋಡುತ್ತಿದ್ದರೆ ಎಚ್ಚರ ವಹಿಸಿ ಯಾಕಂದ್ರೆ ಇದು ವಂಚನೆ ಮಾಡೋ ಹೊಸ ವಿಧಾನವಾಗಿದೆ.

whatss

ಯುಐಡಿಎಐ ಕಡೆಯಿಂದ ಎಚ್ಚರಿಕೆ:

UIDAI ಕೋಟಿಗಟ್ಟಲೆ ಆಧಾರ್ ಬಳಕೆದಾರರನ್ನ ಎಚ್ಚರಿಸುತ್ತಾ ಇದೆ. UIDAI ಟ್ವಿಟರ್ ನಲ್ಲಿ ಮೆಸೇಜ್ ಮಾಡುವ ಮೂಲಕ ಆಧಾರ್ ಅನ್ನು ಅಪ್ಡೇಟ್ ಮಾಡಲು  ಇಮೇಲ್ ಅಥವಾ ವಾಟ್ಸಾಪ್‌ ಮೂಲಕ ದಾಖಲೆಗಳನ್ನು ಕೇಳಲ್ಲ ಅಂತ ತಿಳಿಸಿದೆ. ಈ ಸಂದರ್ಭದಲ್ಲಿ, ಆಧಾರ್ ಅನ್ನು ಅಪ್‌ಡೇಟ್ ಮಾಡಲು ಯಾವಾಗಲೂ ಆಧಾರ್ ಪೋರ್ಟಲ್ ಅನ್ನು ಬಳಸ್ಬೇಕು ಅಂತ ತಿಳಿಸಿದೆ. ಮತ್ತು ಈ ಸೇವೆಯ ಆಫ್‌ಲೈನ್(offline) ಸೌಲಭ್ಯ ಬೇಕಿದ್ರೆ ಹತ್ತಿರ ಇರೋ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಎಂದು ತಿಳಿಸಿದೆ.

UIDAI ಕೆಲವು ಸಮಯದಿಂದ 10 ವರ್ಷಗಳ ಹಳೆಯ ಆಧಾರ್ ಅನ್ನು ಅಪ್ಡೇಟ್ ಮಾಡಲು ತಿಳಿಸಿದೆ. ಮತ್ತು ಇದರ ಬಗ್ಗೆ ಮಾಹಿತಿ ನೀಡ್ತಾ ಇದೆ. ಇದರಲ್ಲಿ 10 ವರ್ಷಗಳಿಗಿಂತ ಹೆಚ್ಚು ಹಳೆಯದಾದ ಆಧಾರ್ ಅನ್ನು ಅಪ್‌ಡೇಟ್‌ ಮಾಡಲು ಕೇಳಿದೆ. ಆಧಾರ್ 10 ವರ್ಷಕ್ಕಿಂತ ಹೆಚ್ಚು ಹಳೆಯದಾದ ಜನರು ತಮ್ಮ ಜನಸಂಖ್ಯಾ ವಿವರಗಳಾದ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆ (POI / POA) ದಾಖಲೆಗಳನ್ನು ಆಧಾರ್‌ನಲ್ಲಿ ನವೀಕರಿಸ್ಬೇಕು ಎಂದು UIDAI ಹೇಳುತ್ತದೆ. ಇದಕ್ಕಾಗಿ ಯುಐಡಿಎಐ ಆಧಾರ್ ಅನ್ನು ಉಚಿತವಾಗಿ ಅಪ್‌ಡೇಟ್‌ ಮಾಡುವ ಸೌಲಭ್ಯವನ್ನೂ ನೀಡುತ್ತಿದೆ. ಈ ಹಿಂದೆ ಈ ಉಚಿತ ಸೇವೆಯು ಜೂನ್ 14, 2023 ರವರೆಗೆ ಲಭ್ಯವಿತ್ತು, ಆದ್ರೆ ಇದೀಗ ಇದನ್ನು ಸೆಪ್ಟೆಂಬರ್ 14, 2023 ರವರೆಗೆ ವಿಸ್ತರಿಸಲಾಗಿದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಆಧಾರ್ ಅನ್ನು ಉಚಿತವಾಗಿ ಅಪ್‌ಡೇಟ್‌ ಮಾಡುವುದು ಹೇಗೆ?

ಹಂತ 1: ಇದಕ್ಕಾಗಿ, ಮೊದಲು https://myaadhaar.uidai.gov.in/ ವೆಬ್‌ಸೈಟ್ ಕ್ಲಿಕ್ ಮಾಡಿ ಮತ್ತು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು.

ಹಂತ 2: ನಂತರ ವಿಳಾಸವನ್ನು ನಮೂದಿಸುವ ಆಯ್ಕೆಯನ್ನು ಆರಿಸಿಕೊಳ್ಳಬೇಕು.

ಹಂತ 3: ನಂತರ ನಿಮ್ಮ ಆಧಾರ್ ಲಿಂಕ್ ನ ಮೊಬೈಲ್‌ಗೆ OTP ಬರುತ್ತದೆ. ಅದನ್ನು ಇಲ್ಲಿ ನಮೂದಿಸಬೇಕು.

ಹಂತ 4: ಮುಂದೆ ನೀವು ಡಾಕ್ಯುಮೆಂಟ್ ಅಪ್‌ಡೇಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ನೀವು ಇವಾಗಿನ ವಿಳಾಸವನ್ನು ನೋಡುತ್ತೀರಿ.

ಹಂತ 5: ನಿಮ್ಮ ವಿಳಾಸ ಸರಿಯಾಗಿದ್ದರೆ ಲಿಂಕ್ ಅನ್ನು ಕ್ಲಿಕ್ ಮಾಡಿ.

ಹಂತ 6: ಇದರ ನಂತರ ನೀವು ನಿಮ್ಮ ಗುರುತಿನ ಮತ್ತು ವಿಳಾಸ ಸರಿಯದನ್ನು ಆಯ್ಕೆ ಮಾಡಬೇಕಾಗುತ್ತದೆ.

ಹಂತ 7: ಇದು ಆದ ನಂತರ ನೀವು ವಿಳಾಸ ಮಾಹಿತಿಗಾಗಿ ಸ್ಕ್ಯಾನ್ ಜೆರಾಕ್ಸ್ ಅನ್ನು ಅಪ್‌ಲೋಡ್ ಮಾಡಬೇಕು ಮತ್ತು ಸಲ್ಲಿಸುವ ಬಟನ್ ಅನ್ನು ಕ್ಲಿಕ್ ಮಾಡಬೇಕು.

ಹಂತ 8: ಇದರ ನಂತರ ನಿಮ್ಮ ಆಧಾರ್ ಅಪ್‌ಡೇಟ್ ಮಾಹಿತಿಯನ್ನು ಪಡೆಯುತ್ತದೆ. ನಂತರ ಅದರ ಬದಲಿಗೆ ನೀವು 14 ಅಂಕಿಗಳ ಅಪ್‌ಡೇಟ್ ಸಂಖ್ಯೆ (URN) ಪಡೆಯುತ್ತೀರಿ.

Picsart 23 07 16 14 24 41 584 transformed 1

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

WhatsApp Group Join Now
Telegram Group Join Now

Popular Categories