ಟ್ರಂಪ್ ಮೊಬೈಲ್ ಬಾಂಬ್: ಡೊನಾಲ್ಡ್ ಟ್ರಂಪ್ ಮೊಬೈಲ್ ಉದ್ಯಮಕ್ಕೆ ಪದಾರ್ಪಣೆ – ‘Trump Mobile T1’ ಫೋನ್ ಬಿಡುಗಡೆ | ಬೆಲೆ, ವೈಶಿಷ್ಟ್ಯತೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ!
ಡೊನಾಲ್ಡ್ ಟ್ರಂಪ್ ಅವರು ರಾಜಕೀಯ, ರಿಯಲ್ ಎಸ್ಟೇಟ್ ನಂತಹ ಎಲ್ಲಾ ಕ್ಷೇತ್ರದಲ್ಲೂ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಇದೀಗ ಮೊಬೈಲ್ ಫೋನ್ ಮತ್ತು ವೈರ್ಲೆಸ್ ಸೇವಾ ಉದ್ಯಮಕ್ಕೆ ಹೆಜ್ಜೆ ಇಟ್ಟಿದ್ದಾರೆ. ಟ್ರಂಪ್ ಕುಟುಂಬವು ಇದೀಗ “Trump Mobile T1 Phone” ಹೆಸರಿನಲ್ಲಿ ಹೊಸ ಆಂಡ್ರಾಯ್ಡ್ ಸ್ಮಾರ್ಟ್ಫೋನ್ನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಈ ಫೋನ್ ಸಾಮಾಜಿಕ ಹಾಗೂ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಹಾಗಿದ್ದರೆ ಈ ಸ್ಮಾರ್ಟ್ಫೋನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇದು ಕೇವಲ ಫೋನ್ವೊಂದೇ ಅಲ್ಲ, ಟ್ರಂಪ್ನ ರಾಜಕೀಯ ವೈಖರಿ ಮತ್ತು ಅವರ ವ್ಯಕ್ತಿತ್ವದ ಪ್ರತಿಬಿಂಬವಾಗಿದೆ ಎನ್ನಬಹುದು. ‘ಅಮೆರಿಕನ್ ಮೆಡ್’ (Made in USA) ಆದ ಈ ಫೋನ್, ಉತ್ಪಾದನೆಯಿಂದ ಹಿಡಿದು ಮಾರಾಟದ ವರೆಗೆ ದೇಶೀಯತೆಗೆ ಆದ್ಯತೆ ನೀಡುತ್ತಿದೆ. ಆಪಲ್ಗೆ ಐಫೋನ್ಗಳನ್ನು ಅಮೆರಿಕದಲ್ಲಿ ತಯಾರಿಸಲು ಒತ್ತಾಯಿಸಿದ್ದ ಟ್ರಂಪ್ ಈಗ ತಾನೇ ಮೊಬೈಲ್ ಉತ್ಪಾದನೆಯಲ್ಲಿ ಮುಂದಾದುದು ಸಾಂಕೇತಿಕವಾಗಿ ಮಹತ್ವಪೂರ್ಣವಾಗಿದೆ.
ಟ್ರಂಪ್ ಮೊಬೈಲ್ T1: ಪ್ರಮುಖ ವೈಶಿಷ್ಟ್ಯಗಳು ಹೀಗಿವೆ:
ಸ್ಕ್ರೀನ್: 6.78 ಇಂಚಿನ AMOLED ಡಿಸ್ಪ್ಲೇ, 1080 x 2460 ಪಿಕ್ಸೆಲ್ ರೆಸೊಲ್ಯೂಶನ್, ~396 ಪಿಕ್ಸೆಲ್ ಡೆನ್ಸಿಟಿ (PPI).
ಸಿಮ್ ಆಯ್ಕೆ: ನ್ಯಾನೋ ಸಿಮ್ + ಇ-ಸಿಮ್ ಸಪೋರ್ಟ್.
ಪ್ರೊಸೆಸರ್: ಅಕ್ಟಾಕೋರ್ ಚಿಪ್ಸೆಟ್.
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 15.
RAM & Storage: 12GB RAM, 256GB ಆಂತರಿಕ ಮೆಮೊರಿ (ಮೆಮೊರಿ ಕಾರ್ಡ್ ಮೂಲಕ ವಿಸ್ತರಿಸಬಹುದಾಗಿದೆ).
ಕ್ಯಾಮೆರಾ:
ಹಿಂಬದಿಯಲ್ಲಿ: 50MP ವೈಡ್ ಕ್ಯಾಮೆರಾ + 2MP ಮ್ಯಾಕ್ರೋ + 2MP ಡೆಪ್ತ್ ಸೆನ್ಸರ್.
ಮುಂಭಾಗದಲ್ಲಿ: 16MP ಸೆಲ್ಫಿ ಕ್ಯಾಮೆರಾ.
ಬ್ಯಾಟರಿ: 5000 mAh ಸಾಮರ್ಥ್ಯದ ಬ್ಯಾಟರಿ.
ಬಲವಾದ ಭದ್ರತೆ: ಸೈಡ್ ಮಾಉಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್.
ಬೆಲೆ ಹಾಗೂ ಸೇವಾ ಪ್ಲಾನ್ ಬಗ್ಗೆ ನೋಡುವುದಾದರೆ:
ಫೋನ್ ಬೆಲೆ: 499 ಅಮೆರಿಕನ್ ಡಾಲರ್ (ಅಂದಾಜು ₹43,000).
ಮೊಬೈಲ್ ಸೇವೆ: 5G ಸಹಿತ ʼ47 ಪ್ಲಾನ್ʼ – ಮಾಸಿಕ ಶುಲ್ಕ $47.45 (ಅಂದಾಜು ₹4,097).
ವಿತರಣೆ: ಫೋನ್ ಅಮೆರಿಕದಲ್ಲಿ ತಯಾರಿಸಲಾಗಿದ್ದು www.trumpmobile.com ನಲ್ಲಿ ಪ್ರೀ-ಆರ್ಡರ್ ಲಭ್ಯವಿದೆ.
ಟ್ರಂಪ್ ಮೊಬೈಲ್ ಸೇವಾ ತಂತ್ರಜ್ಞಾನ:
Trump Mobile ಮೂಲತಃ ಒಂದು ವರ್ಚುವಲ್ ನೆಟ್ವರ್ಕ್ ಆಪರೇಟರ್ (MVNO) ಆಗಿದ್ದು, ಅಮೆರಿಕದ ಪ್ರಮುಖ ಟೆಲಿಕಾಂ ದೈತ್ಯ ಸಂಸ್ಥೆಗಳಾದ Verizon, AT&T ಮತ್ತು T-Mobile ನ ನೆಟ್ವರ್ಕ್ಗಳ ಆಧಾರದ ಮೇಲೆ ತನ್ನ ಸೇವೆಗಳನ್ನು ನೀಡುತ್ತಿದೆ. ಇದರಿಂದ ಗ್ರಾಹಕರು ವಿಶ್ವಾಸಾರ್ಹ ಕನೆಕ್ಟಿವಿಟಿ ಅನುಭವಿಸಬಹುದು.
Trump Mobile ಖರೀದಿ ಹೇಗೆ?:
ಈ ಫೋನನ್ನು ಖರೀದಿಸಲು ಅಥವಾ ಪ್ರೀ-ಆರ್ಡರ್ ಮಾಡಲು ಗ್ರಾಹಕರು www.trumpmobile.com ವೆಬ್ಸೈಟ್ಗೆ ಭೇಟಿ ನೀಡಬೇಕು. ಪ್ರಸ್ತುತ ಈ ಫೋನ್ ಅಮೆರಿಕದಲ್ಲಿ ಮಾತ್ರ ಲಭ್ಯವಿದೆ.
ಒಟ್ಟಾರೆಯಾಗಿ, ಟ್ರಂಪ್ ಅವರ ‘Make America Great Again’ ಯಂತೆ ಈ Trump Mobile ಕೂಡ ಸ್ಥಳೀಯ ಉತ್ಪಾದನೆಗೆ ಮಹತ್ವ ನೀಡಿ ಟೆಕ್ನಾಲಜಿಯಲ್ಲೂ ಸ್ವಾವಲಂಬನೆ ಸಾಧಿಸಲು ಪ್ರಯತ್ನಿಸುತ್ತಿದೆ. ರಾಜಕೀಯ ಅಭಿಮಾನಿಗಳು ಮತ್ತು ಅಮೆರಿಕನ್ ಉತ್ಪನ್ನ ಪ್ರಿಯರು ಈ ಫೋನಿಗೆ ಉತ್ತಮ ಪ್ರತಿಕ್ರಿಯೆ ನೀಡಬಹುದು ಎಂಬ ನಿರೀಕ್ಷೆಯಿದೆ. ತಂತ್ರಜ್ಞಾನವನ್ನು ಇಷ್ಟ ಪಡುವವರಿಗೆ ಈ Trump Mobile T1 Phone ಇದೀಗ ಜಾಗತಿಕ ಗಮನ ಸೆಳೆಯುತ್ತಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.