Picsart 25 11 17 22 48 38 379 scaled

ಬಿಪಿ ಔಷಧಿ ತೆಗೆದುಕೋಳ್ಳೋರು ಈ ತಪ್ಪು ಮಾಡಬೇಡಿ ನಿಮ್ಮ ಜೀವಕ್ಕೂ ಅಪಾಯ ಎಚ್ಚರ! ಸಿ ಎನ್ ಮಂಜುನಾಥ್ 

Categories:
WhatsApp Group Telegram Group

ಇಂದಿನ ವೇಗದ ಜೀವನಶೈಲಿಯಲ್ಲಿ ರಕ್ತದೊತ್ತಡ (BP) ಸಮಸ್ಯೆ ಸಾಮಾನ್ಯವಾಗಿ ಕಾಣಸಿಗುತ್ತಿದೆ. ಒತ್ತಡ, ಅನಿಯಮಿತ ಆಹಾರ ಪದ್ಧತಿ, ವ್ಯಾಯಾಮದ ಕೊರತೆ, ಅತಿಯಾದ ಕೆಲಸದ ಒತ್ತಡ ಇವೆಲ್ಲವೂ ಬಿಪಿಯ ಪ್ರಮಾಣವನ್ನು ಹೆಚ್ಚಿಸುತ್ತಿರುವ ಪ್ರಮುಖ ಕಾರಣಗಳು. ವಿಶೇಷವಾಗಿ 30 ವರ್ಷ ದಾಟಿದ ಜನರಲ್ಲಿ ಹೈ ಬ್ಲಡ್ ಪ್ರೆಷರ್ ಕಂಡುಬರುವುದು ಅಸಾಧಾರಣವೇನಲ್ಲ. ಆದರೆ, ಸಮಸ್ಯೆ ಇರುವುದು ಬಿಪಿ ಬರೋದರಲ್ಲಿ ಅಲ್ಲ, ಅದನ್ನು ನಿರ್ಲಕ್ಷಿಸುವ ನಮ್ಮ ನಡವಳಿಕೆಯಲ್ಲಿ. ಹಾಗಿದ್ದರೆ ಬಿಪಿ ಇರುವವರು ಮಾಡುವ ದೊಡ್ಡ ತಪ್ಪೇನು? ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಖ್ಯಾತ ಹೃದ್ರೋಗ ತಜ್ಞರು ಹಾಗೂ ಮಾಜಿ ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್ ಇತ್ತೀಚಿನ ಸಂವಾದವೊಂದರಲ್ಲಿ ಬಿಪಿ ಇರುವವರು ಮಾಡುವ ದೊಡ್ಡ ತಪ್ಪಿನ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ಬಿಪಿ ಇರುವವರು ಮಾಡುವ ದೊಡ್ಡ ತಪ್ಪೇನು?:

ಡಾ. ಮಂಜುನಾಥ್ ಪ್ರಕಾರ, ರಕ್ತದೊತ್ತಡ ಒಂದು ಬಾರಿ ಹೆಚ್ಚಾಗಿದೆ ಎಂದು ಕಂಡುಬಂದ ತಕ್ಷಣ ಜನರು ವೈದ್ಯರು ನೀಡಿದ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಕೆಲವೇ ದಿನಗಳಲ್ಲಿ ಅಥವಾ ಕೆಲವು ತಿಂಗಳಲ್ಲಿ ಬಿಪಿ ಸರಿಹೋಗಿದೆ ಎನ್ನುವ ಕಾರಣಕ್ಕೆ ಔಷಧಿಯನ್ನು ಸ್ವಇಚ್ಚದಿಂದ ನಿಲ್ಲಿಸುತ್ತಾರೆ. ಆದರೆ ಬಿಪಿ ಇರುವವರು ಮಾಡುವ ದೊಡ್ಡ ತಪ್ಪು ಇದೆ. ರಕ್ತದೊತ್ತಡ ಎಂಬುದು ಒಂದು ದೀರ್ಘಕಾಲದ ಕಾಯಿಲೆ. ಅದು ಕೆಲದಿನ ಗುಳಿಗೆ ತೆಗೆದುಕೊಂಡರೆ ಗುಣವಾಗುವ ತಾತ್ಕಾಲಿಕ ಸಮಸ್ಯೆಯಲ್ಲ. ಬಿಪಿ ನಿಯಂತ್ರಣದಲ್ಲಿ ಇರುತ್ತಿದೆ ಎಂದರೆ, ಔಷಧಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂಬ ಅರ್ಥ, ಗುಣವಾಗಿದೆ ಎಂದಲ್ಲ.

ಔಷಧಿ ನಿಲ್ಲಿಸಿದರೆ ಏನಾಗುತ್ತದೆ?:

ಡಾ. ಮಂಜುನಾಥ್ ಎಚ್ಚರಿಕೆ ನೀಡುವಂತೆ, ಹಾಗೆ ಸ್ವಇಚ್ಛೆಯಿಂದ ಔಷಧಿ ನಿಲ್ಲಿಸುವುದು ಬಹಳ ಅಪಾಯಕಾರಿ. ಇದರಿಂದ ಅಕಸ್ಮಿಕವಾಗಿ ಬಿಪಿ ಏರಿಕೆಯಾಗುವುದು, ಮೂತ್ರಪಿಂಡಕ್ಕೆ ಹಾನಿ, ಹೃದಯಾಘಾತದ ಅಪಾಯ,  ಸ್ಟ್ರೋಕ್, ದೇಹದ ರಕ್ತನಾಳಗಳಿಗೆ ಶಾಶ್ವತ ಹಾನಿ ಇವುಗಳಲ್ಲಿ ಯಾವುದಾದರೂ ಕಾಣಿಸಿಕೊಳ್ಳುವ ಮುನ್ನ ಯಾವುದೇ ಲಕ್ಷಣ ಕಾಣಿಸದೇ ಇರಬಹುದು. ಆದ್ದರಿಂದ, ಬಿಪಿ ಇರುವವರು ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು.

ಒಟ್ಟಾರೆಯಾಗಿ, ಬಿಪಿ ಇರುವವರು ಔಷಧಿಯನ್ನು ವೈದ್ಯರ ಸೂಚನೆ ಪ್ರಕಾರ ನಿರಂತರವಾಗಿ ತೆಗೆದುಕೊಳ್ಳಬೇಕು. ಔಷಧಿ ಪ್ರಮಾಣ ಬದಲಾಯಿಸಬೇಕಾ, ನಿಲ್ಲಿಸಬೇಕಾ ಎಂಬುದನ್ನು ವೈದ್ಯರೇ ನಿರ್ಧರಿಸಬೇಕು. 30 ವರ್ಷ ದಾಟಿದವರು ನಿಯಮಿತವಾಗಿ ಬಿಪಿ ಪರೀಕ್ಷೆ ಮಾಡಿಸಿಕೊಳ್ಳಬೇಕು.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories