Picsart 25 09 28 23 42 08 322 scaled

ಬೆಳ್ಳಗ್ಗೆ ಮಾಡುವ ಈ 6 ತಪ್ಪುಗಳು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತವೆ!

Categories:
WhatsApp Group Telegram Group

ನಮ್ಮ ದೈನಂದಿನ ಜೀವನದಲ್ಲಿ ಬೆಳಗಿನ ಸಮಯವು ಅತ್ಯಂತ ನಿರ್ಣಾಯಕವಾಗಿರುತ್ತದೆ. ಒಂದು ದಿನವನ್ನು ಹೇಗೆ ಆರಂಭಿಸುತ್ತೇವೆ ಎಂಬುದೇ ನಮ್ಮ ದೇಹ ಮತ್ತು ಮನಸ್ಸಿನ ಆರೋಗ್ಯವನ್ನು (Body and mental health) ಬಹಳ ಮಟ್ಟಿಗೆ ಪ್ರಭಾವಿಸುತ್ತದೆ. ವೈದ್ಯಕೀಯ ತಜ್ಞರ ಪ್ರಕಾರ, ಬೆಳಗಿನ ಮೊದಲ ಕೆಲವು ಗಂಟೆಗಳಲ್ಲಿ ದೇಹದಲ್ಲಿ ಅನೇಕ ಜೈವಿಕ ಬದಲಾವಣೆಗಳು ಸಂಭವಿಸುತ್ತವೆ. ನಿದ್ರೆಯ ನಂತರ ಎದ್ದ ಕೂಡಲೇ ರಕ್ತದೊತ್ತಡ ಏರಿಕೆಯಾಗುವುದು, ಕಾರ್ಟಿಸೋಲ್‌ (Cartisole) ಎಂಬ ಒತ್ತಡ ಹಾರ್ಮೋನ್‌ ಹೆಚ್ಚಾಗುವುದು ಇವು ಸಹಜ ಪ್ರಕ್ರಿಯೆಗಳು. ಆದರೆ, ಈ ಸಮಯದಲ್ಲಿ ನಾವು ಕೈಗೊಳ್ಳುವ ತಪ್ಪು ಕ್ರಮಗಳು ಹೃದಯದ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿ, ಹೃದ್ರೋಗ ಹಾಗೂ ಹೃದಯಾಘಾತದ ಅಪಾಯವನ್ನು ಗಂಭೀರಗೊಳಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ..

ಅಮೇರಿಕನ್ ಹಾರ್ಟ್ ಅಸೋಸಿಯೇಷನ್ (American heart association) ಸೇರಿದಂತೆ ಅನೇಕ ಅಧ್ಯಯನಗಳು ಬೆಳಗಿನ ಸಮಯದಲ್ಲಿ ಹೃದಯಾಘಾತಗಳು ಹೆಚ್ಚಾಗಿ ಸಂಭವಿಸುತ್ತವೆ ಎಂದು ದೃಢಪಡಿಸಿವೆ. ಕಾರಣವೆಂದರೆ ದೇಹದ ನೈಸರ್ಗಿಕ ಜೈವಿಕ ಬದಲಾವಣೆಗಳಿಗೆ ಜೊತೆಯಾಗುವ ಕೆಟ್ಟ ಅಭ್ಯಾಸಗಳು. ಆದ್ದರಿಂದಲೇ ಆರೋಗ್ಯ ತಜ್ಞರು (Health Specialist) ಬೆಳಗಿನ ಜೀವನ ಶೈಲಿಯ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕೆಂದು ಸಲಹೆ ನೀಡುತ್ತಾರೆ. ಹಾಗಿದ್ದರೆ, ಸದ್ದಿಲ್ಲದೆ ಅಪಾಯ ಹೆಚ್ಚಿಸುವ 6 ಪ್ರಮುಖ  ತಪ್ಪುಗಳು ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಬೆಳಗ್ಗೆ ಎದ್ದು ನೀರು ಕುಡಿಯದೆ ಇರುವುದು:

ರಾತ್ರಿಯ ನಿದ್ರೆಯ ನಂತರ ದೇಹ ನಿರ್ಜಲೀಕರಣದ ಸ್ಥಿತಿಗೆ ಬರುತ್ತದೆ. ಈ ಸಂದರ್ಭದಲ್ಲಿ ನೀರು ಕುಡಿಯದೆ ನೇರವಾಗಿ ಚಹಾ ಅಥವಾ ಕಾಫಿ (Tea or Coffee) ಸೇವಿಸುವುದು ರಕ್ತದ ಸ್ನಿಗ್ಧತೆಯನ್ನು ಹೆಚ್ಚಿಸಿ, ರಕ್ತದೊತ್ತಡವನ್ನು ಏರಿಸುತ್ತದೆ. ಇದರಿಂದ ಹೃದಯಕ್ಕೆ ಹೆಚ್ಚುವರಿ ಒತ್ತಡ ಉಂಟಾಗುತ್ತದೆ.

ಮಿತಿ ಮೀರಿ ತೀವ್ರ ವ್ಯಾಯಾಮ ಮಾಡುವುದು:

ಬೆಳಗಿನ ವ್ಯಾಯಾಮ ಆರೋಗ್ಯಕರವಾದರೂ ಎಚ್ಚರವಾದ ತಕ್ಷಣವೇ ಅತಿಯಾದ ವ್ಯಾಯಾಮ ಮಾಡುವುದು ಅಪಾಯಕಾರಿ. ಆ ಸಮಯದಲ್ಲಿ ರಕ್ತನಾಳಗಳು ಗಟ್ಟಿಯಾಗಿರುತ್ತವೆ. ಹಠಾತ್ ಶಾರೀರಿಕ ಪರಿಶ್ರಮ ಹೃದಯಾಘಾತದ (Heartattack) ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಸ್ಟ್ರೆಚಿಂಗ್ ಅಥವಾ ಸರಳ ವಾಕಿಂಗ್‌ನಿಂದ ಆರಂಭಿಸುವುದು ಸೂಕ್ತ.

ಬೆಳಗಿನ ರಕ್ತದೊತ್ತಡವನ್ನು ನಿರ್ಲಕ್ಷಿಸುವುದು:

ಹೈಬಿಪಿ “ಸೈಲೆಂಟ್ ಕಿಲ್ಲರ್” (Silent killer) ಎಂದು ಕರೆಯಲ್ಪಡುತ್ತದೆ. ಬೆಳಗ್ಗೆ ರಕ್ತದೊತ್ತಡ ಏರಿಕೆಯಾಗುವುದು ಸಾಮಾನ್ಯ. ಇದನ್ನು ಗಮನಿಸದೆ ಬಿಟ್ಟರೆ ಹೃದ್ರೋಗದ ಮೊದಲ ಎಚ್ಚರಿಕೆ ಸೂಚನೆಗಳನ್ನು ಮಿಸ್ ಮಾಡಿಕೊಳ್ಳಬಹುದು. ತಜ್ಞರು ಬೆಳಗಿನ ಬಿಪಿ ಚೆಕ್‌ (BP check) ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಶಿಫಾರಸು ಮಾಡುತ್ತಾರೆ.

ಉಪ್ಪು ಹೆಚ್ಚಿರುವ ಉಪಾಹಾರ ಸೇವನೆ:

ಪ್ಯಾಕ್ ಮಾಡಿದ ಬ್ರೆಡ್, ಉಪ್ಪಿನಕಾಯಿ, ರೆಡಿಮೇಡ್ ತಿಂಡಿ ಇವು ಬೆಳಗಿನ ಉಪಾಹಾರಕ್ಕೆ ರುಚಿ ನೀಡುತ್ತವೆ. ಆದರೆ ಇವು ಸೋಡಿಯಂ (Sodium) ಹೆಚ್ಚಾಗಿರುವುದರಿಂದ ದೇಹದಲ್ಲಿ ದ್ರವ ಶೇಖರಣೆಯಾಗುತ್ತದೆ, ರಕ್ತದೊತ್ತಡ ಏರುತ್ತದೆ. ಇದರಿಂದ ಹೃದಯದ ಮೇಲಿನ ಒತ್ತಡ ಹೆಚ್ಚಾಗುತ್ತದೆ. ಹಣ್ಣುಗಳು, ಓಟ್ಸ್ ಅಥವಾ ಮೊಳಕೆ ಕಾಳುಗಳಂತಹ ಸಮತೋಲನ ಆಹಾರ ಉತ್ತಮ.

ಎದ್ದು ಕೂಡಲೇ ಮೊಬೈಲ್/ಲ್ಯಾಪ್‌ಟಾಪ್ ಬಳಸುವುದು:

ಬೆಳಗಿನ ಹೊತ್ತಿನಲ್ಲಿ ಕಾರ್ಟಿಸೋಲ್ ಹಾರ್ಮೋನ್ ಸಹಜವಾಗಿಯೇ ಹೆಚ್ಚಿರುತ್ತದೆ. ಈ ವೇಳೆಯಲ್ಲಿ ಫೋನ್‌ನಲ್ಲಿ ಕೆಲಸದ ಇಮೇಲ್‌ಗಳು ಅಥವಾ ಸಾಮಾಜಿಕ ಮಾಧ್ಯಮವನ್ನು ಪರಿಶೀಲಿಸುವುದು ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದರಿಂದ ರಕ್ತದೊತ್ತಡ(blood pleasure) ನಿರಂತರ ಏರಿಕೆಯಾಗುತ್ತದೆ ಮತ್ತು ಹೃದ್ರೋಗದ ಅಪಾಯ ವೇಗವಾಗಿ ಹೆಚ್ಚುತ್ತದೆ.

ಉಪಾಹಾರವನ್ನು ಬಿಡುವುದು ಅಥವಾ ತಡವಾಗಿ ತಿನ್ನುವುದು:

ಬೆಳಗಿನ ತಿಂಡಿ ತಪ್ಪಿಸಿದಾಗ ದೇಹ ಒತ್ತಡದ ಸ್ಥಿತಿಗೆ ಹೋಗುತ್ತದೆ, ಕಾರ್ಟಿಸೋಲ್ (Cartisole) ಹೆಚ್ಚುತ್ತದೆ. ಇದರಿಂದ ಹೃದಯವು ಹೆಚ್ಚುವರಿ ಕೆಲಸ ಮಾಡಬೇಕಾಗುತ್ತದೆ. ಉಪಾಹಾರ ಬಿಟ್ಟುಬಿಡುವ ಜನರಿಗೆ ಹೃದ್ರೋಗ ಮತ್ತು ಅಕಾಲಿಕ ಮರಣದ ಅಪಾಯ ಹೆಚ್ಚು. ನಿಯಮಿತ, ಪೌಷ್ಟಿಕ ಉಪಾಹಾರ ಹೃದಯಕ್ಕೆ ಉತ್ತಮ ಎಂದು ಹೇಳಲಾಗುತ್ತಿದೆ.

ಒಟ್ಟಾರೆಯಾಗಿ, ಬೆಳಗಿನ ಸಮಯವನ್ನು (Morning time) ಆರೋಗ್ಯಕರ ರೀತಿಯಲ್ಲಿ ಕಳೆಯುವುದು ಹೃದಯದ ದೀರ್ಘಕಾಲೀನ ಆರೋಗ್ಯಕ್ಕಾಗಿ ಅತ್ಯಂತ ಮುಖ್ಯ. ನೀರು ಕುಡಿಯುವುದು, ಸರಿಯಾದ ವ್ಯಾಯಾಮ, ಸಮತೋಲನ ಉಪಾಹಾರ ಮತ್ತು ಡಿಜಿಟಲ್ (Digital) ಒತ್ತಡದಿಂದ ದೂರವಿರುವ ಅಭ್ಯಾಸಗಳು ಹೃದಯವನ್ನು ರಕ್ಷಿಸುತ್ತವೆ.

ಗಮನಿಸಿ(Notice) :
ಈ ಲೇಖನವು ಕೇವಲ ಮಾಹಿತಿ ಉದ್ದೇಶಕ್ಕಾಗಿ ಮಾತ್ರ. ವೈದ್ಯಕೀಯ ಸಲಹೆಯ ಪರ್ಯಾಯವಲ್ಲ. ವೈಯಕ್ತಿಕ ಆರೋಗ್ಯ ಕಾಳಜಿಗಾಗಿ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಅತ್ಯವಶ್ಯಕ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories