Picsart 25 11 21 22 16 24 531 scaled

ದಿನನಿತ್ಯದ ಈ 5 ಅಭ್ಯಾಸಗಳೇ ಮೂಳೆಗಳನ್ನು ನಿಧಾನವಾಗಿ ದುರ್ಬಲಗೊಳಿಸುತ್ತವೆ! 

Categories:
WhatsApp Group Telegram Group

ಇಂದಿನ ವೇಗದ ಜೀವನಶೈಲಿಯಲ್ಲಿ ಆರೋಗ್ಯಕ್ಕೆ ಅಗತ್ಯವಾದ ಗಮನ ಕೊಡುವವರು ತುಂಬಾ ಕಡಿಮೆ. ಬೆಳಿಗ್ಗೆಯಿಂದ ರಾತ್ರಿ ತನಕ ಕೆಲಸ, ಓಡಾಟ, ಮನೆ, ಕಚೇರಿ ಜವಾಬ್ದಾರಿಗಳು ಎಂಬುದಾಗಿ ಅನೇಕರು ತಮ್ಮ ದೇಹದ ಮೂಲಭೂತ ಅಗತ್ಯಗಳನ್ನೇ ಕಡೆಗಣಿಸುತ್ತಾರೆ. ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಹುಟ್ಟುತ್ತವೆ. ವಿಶೇಷವಾಗಿ, ಮೂಳೆಗಳ ದುರ್ಬಲತೆ (Weak Bones) ಈಗ ವಯಸ್ಸಾದವರಲ್ಲದೆ ಯುವಕರಲ್ಲಿಯೂ ಹೆಚ್ಚುತ್ತಿದೆ ಎಂಬುದು ಆತಂಕಕಾರಿ ವಿಚಾರ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮೂಲವಾಗಿ ವಯಸ್ಸು, ಹಾರ್ಮೋನ್ ಬದಲಾವಣೆ, ಜಿನೇಟಿಕ್ ಕಾರಣಗಳಿಂದ ಮೂಳೆ ಸಮಸ್ಯೆಗಳು ಉಂಟಾಗುತ್ತವೆ ಎಂದು ಅನೇಕರು ಭಾವಿಸಿದರೂ, ವಾಸ್ತವದಲ್ಲಿ ನಮ್ಮ ದಿನನಿತ್ಯದ ಕೆಲವು ಸರಳ ಅಭ್ಯಾಸಗಳೇ(Daily Habits) ಮೂಳೆಗಳನ್ನು ನಿಧಾನವಾಗಿ ದುರ್ಬಲಗೊಳಿಸುತ್ತವೆ. ಮೊಣಕಾಲು ನೋವು, ಬೆನ್ನುನೋವು, ಆಯಾಸ, ಕೀಲು ಗಟ್ಟಿಯಾಗುವುದು, ಸುಲಭವಾಗಿ ಎಲುಬು ಮುರಿಯುವುದು ಈ ಎಲ್ಲವೂ ಕೂಡ ನಮ್ಮ ಅರೋಗ್ಯಕ್ಕೆ ಸಂಬಂಧಿಸಿದಂತೆ ಎಚ್ಚರಿಕೆಯ ಗಂಟೆಗಳು. ಈ ರೀತಿಯ ಎಚ್ಚರಿಕೆಯನ್ನು ಗಮನಿಸದಿದ್ದರೆ ಮುಂದಿನ ದಿನಗಳಲ್ಲಿ osteoporosis, arthritis ಮುಂತಾದ ತೊಂದರೆಗಳು ಕಾಡುವ ಸಂಭವ ಹೆಚ್ಚಾಗಿದೆ. ಆದ್ದರಿಂದ, ಯಾವ ದೈನಂದಿನ ಅಭ್ಯಾಸಗಳು ಮೂಳೆ ಆರೋಗ್ಯಕ್ಕೆ ಹಾನಿಕಾರಕವೆಂಬುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಹಾಗಿದ್ದರೆ ಮೂಳೆಗಳನ್ನು ದುರ್ಬಲಗೊಳಿಸುವ ಐದು ಸಾಮಾನ್ಯ ದೈನಂದಿನ ಅಭ್ಯಾಸಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಸೂರ್ಯನ ಬೆಳಕಿಗೆ ಹೋಗದಿರುವುದು:

ವಿಟಮಿನ್ D ಮೂಳೆಗಳ ಬಲಕ್ಕೆ ಅತ್ಯಂತ ಮುಖ್ಯ. ಆದರೆ ಹೆಚ್ಚು ಮಂದಿ ದಿನವಿಡೀ ಮನೆ, ಕಚೇರಿ, ಎಸಿ ರೋಮ್‌ಗಳಲ್ಲೇ ಕಾಲ ಕಳೆದ ಪರಿಣಾಮ ಸೂರ್ಯನ ಬೆಳಕು ಸಿಗುವುದೇ ಇಲ್ಲ. ವಿಟಮಿನ್ D ಕೊರತೆಯಿಂದ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ಕಡಿಮೆಯಾಗುತ್ತದೆ. ಇದರಿಂದ ಮೂಳೆ ನೋವು, ದುರ್ಬಲತೆ, ಫಾಟೀಗ್ ಹೆಚ್ಚಾಗುತ್ತದೆ. ಪ್ರತಿದಿನ 20–30 ನಿಮಿಷ ಸೂರ್ಯನ ಬೆಳಕಿನಲ್ಲಿ ಕಾಲ ಕಳೆಯುವುದು ಅಗತ್ಯ.

ಗಂಟೆಗಳ ತನಕ ಒಂದೇ ಜಾಗದಲ್ಲಿ ಕುಳಿತುಕೊಳ್ಳುವುದು:

ಡಿಜಿಟಲ್ ಯುಗದಲ್ಲಿ 8–10 ಗಂಟೆಗಳ ಕುಳಿತು ಮಾಡುವ ಕೆಲಸ ಸಾಮಾನ್ಯವಾಗಿದೆ. ಆದರೆ, ದೀರ್ಘಕಾಲ ಕುಳಿತರೆ ರಕ್ತ ಸಂಚಾರ ಕಡಿಮೆಯಾಗುತ್ತದೆ. ಬೆನ್ನು ಮತ್ತು ಮೊಣಕಾಲಿಗೆ ಒತ್ತಡ ಹೆಚ್ಚುತ್ತದೆ. ಸ್ನಾಯುಗಳು ದುರ್ಬಲಗೊಂಡು ಮೂಳೆಗಳಿಗೆ ಬೆಂಬಲ ಕಡಿಮೆಯಾಗುತ್ತದೆ. ಪ್ರತಿ 1–2 ಗಂಟೆಗೆ ಎದ್ದು 5 ನಿಮಿಷ ವಾಕ್ ಅಥವಾ ಸ್ಟ್ರೆಚಿಂಗ್ ಮಾಡುವುದು ಉತ್ತಮ.

ಆಹಾರದಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಕೊರತೆ:

ಸಂಸ್ಕರಿಸಿದ ಫುಡ್, ಫಾಸ್ಟ್ ಫುಡ್, ಚಹಾ–ಕಾಫಿ ಹೆಚ್ಚಾಗಿ ಸೇವಿಸುವ ಅಭ್ಯಾಸ ಪೋಷಕಾಂಶ ಕೊರತೆಯ ಮೂಲ. ದೇಹಕ್ಕೆ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಕಡಿಮೆ ಸಿಕ್ಕರೆ ಮೂಳೆ ಸಾಂದ್ರತೆ ಕಡಿಮೆಯಾಗುತ್ತದೆ. ಇದರಿಂದ ಸುಲಭವಾಗಿ ಮೂಳೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಆಹಾರದಲ್ಲಿ ಹಾಲು, ಮೊಸರು, ನವಣೆ, ಬಾದಾಮಿ, ತೆಂಗು, ಮೊಟ್ಟೆ, ದಾಳಿಂಬೆ, ಮೀನು  ಮುಂತಾದವು ಸೇರಿಸಿಕೊಳ್ಳಿ.

ಕಡಿಮೆ ಪ್ರಮಾಣದಲ್ಲಿ ನೀರು ಕುಡಿಯುವುದು:

ನೀರು ಕೇವಲ ದಾಹ ತಣಿಸುವುದಕ್ಕೆ ಮಾತ್ರವಲ್ಲ; ಕೀಲುಗಳ ಸವೆತ ತಪ್ಪಿಸಲು ಅಗತ್ಯವಾದ ಸೈನೋವಿಯಲ್ ದ್ರವದ ಉತ್ಪಾದನೆ ನೀರಿನ ಮೇಲೆ ಅವಲಂಬಿತ. ನೀರಿನ ಕೊರತೆಯಿಂದ ಕೀಲು ಗಟ್ಟಿಯಾಗುವುದು, ನೋವು, ಆಯಾಸ ಹೆಚ್ಚಾಗುತ್ತದೆ. ಪ್ರತಿದಿನ ಕನಿಷ್ಠ 8 ಗ್ಲಾಸ್‌ ನೀರು ಕುಡಿಯುವುದು ಅವಶ್ಯ.

ತಡರಾತ್ರಿ ಮಲಗುವುದು ಮತ್ತು ಕಡಿಮೆ ನಿದ್ರೆ:

ಮೊಬೈಲ್, ಟಿವಿ, ಗೇಮಿಂಗ್ ಆಡುತ್ತಾ ನಿದ್ರೆ ಮಾಡುವುದನ್ನು ಕಡಿಮೆ ಮಾಡಿರುತ್ತೇವೆ. ತಡರಾತ್ರಿ ಮಲಗುವುದು ಮೂಳೆ ಕೋಶಗಳನ್ನು ದುರ್ಬಲಗೊಳಿಸುತ್ತದೆ. ನಿದ್ರೆ ಕೊರತೆಯಿಂದ ಅದರ ಮೂಳೆಗಳಕ್ರಿಯೆ ದೋಷಗೊಳ್ಳುತ್ತದೆ. ಆದ್ದರಿಂದ ಪ್ರತಿದಿನ 7–8 ಗಂಟೆ ಗುಣಮಟ್ಟದ ನಿದ್ರೆ ಮೂಳೆ ಆರೋಗ್ಯಕ್ಕೆ ಅತ್ಯಗತ್ಯ.

ಒಟ್ಟಾರೆಯಾಗಿ, ಮೂಳೆ ಸಮಸ್ಯೆಗಳು ವಯಸ್ಸಿನ ಲಕ್ಷಣವೆಂಬುದು ಈಗ ಶುದ್ಧ ಸುಳ್ಳು. ನಾವು ದಿನವೂ ಮಾಡುತ್ತಿರುವ ಕೆಲವು ಸರಳ ಅಭ್ಯಾಸಗಳೇ ದೊಡ್ಡ ಸಮಸ್ಯೆಗೆ ಕಾರಣವಾಗುತ್ತಿವೆ. ಸೂರ್ಯನ ಬೆಳಕು, ಸರಿಯಾದ ಆಹಾರ, ನೀರಿನ ಸೇವನೆ, ನಿದ್ರೆ ಇವುಗಳನ್ನು ಪಾಲಿಸಿದರೆ ಮೂಳೆಗಳನ್ನು ದೀರ್ಘಕಾಲ ಆರೋಗ್ಯಕರವಾಗಿ ಕಾಪಾಡಿಕೊಳ್ಳಬಹುದು.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories