Picsart 25 10 21 21 26 34 319 scaled

ಎಚ್ಚರಿಕೆ! ಈ 10 ಫೋನ್ ಸಂಖ್ಯೆಗಳು ಸ್ಕ್ಯಾಮ್ ಗಾಗಿ ಬಳಸುತ್ತಾರೆ.! ಕರೆ ಸ್ವೀಕರಿಸಿದರೆ ಖಾತೆ ಖಾಲಿ!

Categories:
WhatsApp Group Telegram Group

ಡಿಜಿಟಲ್ ಯುಗದಲ್ಲಿ ಜನರ ಜೀವನ ಸುಲಭವಾಗಿದ್ದರೂ, ಸೈಬರ್ ಹಗರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಆನ್‌ಲೈನ್ ಬ್ಯಾಂಕಿಂಗ್, ಪೇಮೆಂಟ್ ಆ್ಯಪ್‌ಗಳು, ಮತ್ತು ಮೊಬೈಲ್ ಸೇವೆಗಳ ಬಳಕೆ ಹೆಚ್ಚುತ್ತಿರುವ ಈ ಕಾಲದಲ್ಲಿ, ಸ್ಕ್ಯಾಮರ್‌ಗಳು ಜನರನ್ನು ಮೋಸಗೊಳಿಸಲು ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಫೋನ್ ಕರೆಗಳ ಮೂಲಕ ನಡೆಯುತ್ತಿರುವ ವಂಚನೆಗಳು ಹೆಚ್ಚುತ್ತಿದ್ದು, ಜನರಿಗೆ ನಷ್ಟ ಉಂಟುಮಾಡುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಅಮೆರಿಕಾದ BeVerified ಎಂಬ ಸುರಕ್ಷತಾ ಸಂಶೋಧನಾ ಕಂಪನಿಯು ಇತ್ತೀಚೆಗೆ ಒಂದು ವರದಿಯನ್ನು ಪ್ರಕಟಿಸಿದೆ. ಅದರಲ್ಲಿ, ಕಳೆದ ಕೆಲವು ತಿಂಗಳಲ್ಲಿ ಹೆಚ್ಚು ದೂರುಗಳು ಬಂದ ಟಾಪ್ 10 ಹಗರಣದ ಫೋನ್ ಸಂಖ್ಯೆಗಳ ಪಟ್ಟಿ ಹೊರಬಿದ್ದಿದೆ. ಈ ಸಂಖ್ಯೆಗಳ ಮೂಲಕ ಜನರನ್ನು ಬೇರೆ ಬೇರೆ ರೀತಿಯಲ್ಲಿ ಮೋಸಗೊಳಿಸಲಾಗುತ್ತಿದೆ. ಬ್ಯಾಂಕ್ ಖಾತೆ ಹಗರಣದಿಂದ ಹಿಡಿದು ಲಾಟರಿ, ಪ್ಯಾಕೇಜ್ ವಿತರಣೆ, ಮತ್ತು ಉಚಿತ ಉಡುಗೊರೆಗಳ ಹೆಸರಿನಲ್ಲಿ ಮೋಸ ಮಾಡುತ್ತಿದ್ದಾರೆ. ನೀವು ಈ ರೀತಿಯ ಕರೆಗಳಿಂದ ಬಚಾವಾಗಬೇಕೆಂದರೆ ಕೆಲವು  ಸಂಖ್ಯೆಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಹಾಗಿದ್ದರೆ ಆ ಸಂಖ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಟಾಪ್ 10 ಹಗರಣದ ಫೋನ್ ಸಂಖ್ಯೆಗಳು ಮತ್ತು ಅವುಗಳ ವಂಚನೆ ವಿಧಾನ:

(865) 630-4266:
ಈ ಸಂಖ್ಯೆಯಿಂದ ಬರುವ ಕರೆಗಳಲ್ಲಿ, ಸಂತ್ರಸ್ತರಿಗೆ ನಿಮ್ಮ Wells Fargo ಬ್ಯಾಂಕ್ ಖಾತೆ ಲಾಕ್ ಆಗಿದೆ ಎಂಬ ಸಂದೇಶ ಬರುತ್ತದೆ. ನಂತರ ಖಾತೆ ‘ಅನ್‌ಲಾಕ್’ ಮಾಡಲು ಬ್ಯಾಂಕ್‌ಗೆ ಕರೆ ಮಾಡಲು ಒತ್ತಾಯಿಸುತ್ತಾರೆ. ಆದರೆ ಈ ರೀತಿಯಾಗಿ ಫೋನ್ ಕರೆ ಬಂದಾಗ ಹೆಚ್ಚಿನ ಎಚ್ಚರಿಕೆ ಅಗತ್ಯವಾಗಿರುತ್ತದೆ. ಯಾಕೆಂದರೆ ಇದು ಸಂಪೂರ್ಣ ಮೋಸವಾಗಿರುತ್ತದೆ.

(469) 709-7630:
ಈ ಸಂಖ್ಯೆಯಿಂದ ವಿತರಣಾ ಪ್ರಯತ್ನ ವಿಫಲವಾಗಿದೆ ಎಂದು ಹೇಳುವ SMS ಬರುತ್ತದೆ. ಅದರಲ್ಲಿ ನಿಮ್ಮ ಅಥವಾ ನಿಮ್ಮ ಪರಿಚಿತರ ಹೆಸರನ್ನು ಉಲ್ಲೇಖಿಸುತ್ತಾರೆ ಮತ್ತು ಕರೆ ಮಾಡಲು ಒತ್ತಾಯಿಸುತ್ತಾರೆ.

(805) 637-7243:
ಈ ನಂಬರಿನಿಂದ ವೀಸಾ ಫ್ರಾಡ್ ವಿಭಾಗದ ಹೆಸರಿನಲ್ಲಿ ಜನರನ್ನು ಸಂಪರ್ಕಿಸುತ್ತಾರೆ. ಕಾರ್ಡ್ ಡೀಟೈಲ್ಸ್ ಪಡೆಯಲು ಯತ್ನಿಸುತ್ತಾರೆ.

(858) 605-9622:
ನಿಮ್ಮ ಬ್ಯಾಂಕ್ ಖಾತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂಬ ಎಚ್ಚರಿಕೆ ನೀಡುವ ಕರೆಗಳು ಈ ಸಂಖ್ಯೆಯಿಂದ ಬರುತ್ತವೆ.

(863) 532-7969:
ಈ ನಂಬರಿನಿಂದ ಯಾವುದೇ ನಿರ್ದಿಷ್ಟ ಬ್ಯಾಂಕ್ ಹೆಸರಿಲ್ಲದೆ ನಿಮ್ಮ ಡೆಬಿಟ್ ಕಾರ್ಡ್ ಸ್ಥಗಿತಗೊಳಿಸಲಾಗಿದೆ ಎಂದು ಹೇಳುತ್ತಾರೆ. ಇದು ಕೂಡ ಒಂದು ಸ್ಕ್ಯಾಮ್!

(904) 495-2559:
ಈ ನಂಬರಿನಿಂದ ಬಂದ ಸಂದೇಶಗಳಲ್ಲಿ ನೀವು AT&T ಲಾಟರಿ ಗೆದ್ದಿದ್ದೀರಿ ಎಂದು ಹೇಳಲಾಗುತ್ತದೆ. ಆದರೆ ಇದು  ಸುಳ್ಳು ಮತ್ತು ಹಣದ ಹಗರಣ ಮಾಡುವ ಯತ್ನ.

(312) 339-1227:
ಈ ಸಂಖ್ಯೆಯಿಂದ ತೂಕ ಇಳಿಸುವ ಉತ್ಪನ್ನಗಳು ಮತ್ತು ಪ್ಯಾಕೇಜ್ ಸ್ಕ್ಯಾಮ್‌ಗಳು ಪ್ರಚಾರಗೊಳ್ಳುತ್ತಿವೆ ಎಂದು ವರದಿ ತೋರಿಸಿದೆ.

(917) 540-7996:
ಈ ನಂಬರಿನಿಂದ Stream VI ಎಂಬ ಹೆಸರಿನಲ್ಲಿ ಮಾರ್ಕೆಟಿಂಗ್ ಕರೆಗಳು ಬರುತ್ತಿದ್ದರೂ, ಕೆಲವು ಸಂದರ್ಭಗಳಲ್ಲಿ ಇದು ಸಹ ಸ್ಕ್ಯಾಮ್ ಆಗಿ ಪರಿಣಮಿಸಿದೆ.

(347) 437-1689:
ಈ ಸಂಖ್ಯೆ ಸಣ್ಣ ಮೊತ್ತದ ಹಣದ ಹಗರಣದಿಂದ ಹಿಡಿದು ಉಚಿತ Dyson ಕ್ಲೀನರ್ ಕೊಡುಗೆಗಳವರೆಗೆ ಅನೇಕ ಸುಳ್ಳು ಭರವಸೆಗಳಿಗೆ ಬಳಸಲಾಗಿದೆ.

(301) 307-4601:
ಯುಎಸ್ಪಿಎಸ್ ಪಾರ್ಸೆಲ್ ವಿತರಣೆ ಹೆಸರಿನಲ್ಲಿ ಈ ಸಂಖ್ಯೆಯಿಂದ ಫೇಕ್ ಡೆಲಿವರಿ ಮೆಸೇಜ್‌ಗಳು ಬರುತ್ತಿವೆ. ಜನರು ಲಿಂಕ್ ಕ್ಲಿಕ್ ಮಾಡಿದರೆ ಡೇಟಾ ಕಳವುಗೊಳ್ಳುತ್ತದೆ.

ನೀವು ಪಾಲಿಸಲೇಬೇಕಾದ ಎಚ್ಚರಿಕೆ ಕ್ರಮಗಳು ಹೀಗಿವೆ:

ಈ ಸಂಖ್ಯೆಗಳ ಕರೆಗಳು ಅಥವಾ SMS‌ಗಳಿಗೆ ಪ್ರತಿಕ್ರಿಯೆ ಕೊಡಬೇಡಿ.
ಯಾವುದೇ ಲಿಂಕ್ ಕ್ಲಿಕ್ ಮಾಡುವ ಮೊದಲು ಅದು ಅಧಿಕೃತವೆಂಬುದನ್ನು ಖಚಿತಪಡಿಸಿಕೊಳ್ಳಿ.
ಬ್ಯಾಂಕ್ ಅಥವಾ ಸಂಸ್ಥೆಯ ಅಧಿಕೃತ ಸಂಖ್ಯೆಯ ಮೂಲಕ ಮಾತ್ರ ಸಂಪರ್ಕಿಸಿ.
Spam ಅಥವಾ Scam ಎಂದು ಗುರುತಿಸಿ, ನಿಮ್ಮ ಫೋನ್‌ನಲ್ಲೇ ವರದಿ ಮಾಡಿ.

ಒಟ್ಟಾರೆಯಾಗಿ, ಇಂದಿನ ಡಿಜಿಟಲ್ ಯುಗದಲ್ಲಿ, ಕೇವಲ ಒಂದು ಕರೆ ಅಥವಾ ಲಿಂಕ್ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿ ಕಳುವಾಗಬಹುದು. ಆದ್ದರಿಂದ ಎಚ್ಚರಿಕೆಯಿಂದಿರಿ, ಮೋಸದ ಕರೆಗಳಿಗೆ ಬಲಿಯಾಗಬೇಡಿ!

WhatsApp Image 2025 09 05 at 11.51.16 AM 12

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories