ಕಾಲೇಜು ಪದವಿಯನ್ನು ಆರಿಸುವುದು ನಿಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುವ ನಿರ್ಣಾಯಕ ಹಂತವಾಗಿದೆ. ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ, ಹೆಚ್ಚಿನ ಯುವಕರು ಉತ್ತಮ ಜೀವನ, ಆರ್ಥಿಕ ಸುರಕ್ಷತೆ ಮತ್ತು ಶ್ರೇಷ್ಠ ವೃತ್ತಿ ಜೀವನವನ್ನು ಹೊಂದಲು ವಿಶ್ವವಿದ್ಯಾಲಯಗಳತ್ತ ಗಮನ ಹರಿಸುತ್ತಾರೆ. ಇಂತಹ ಸಂದರ್ಭದಲ್ಲಿ, ಹಾರ್ವರ್ಡ್ ವಿಶ್ವವಿದ್ಯಾಲಯದ(Harvard University) ಇತ್ತೀಚಿನ ಸಂಶೋಧನೆಗಳು ಕೆಲವು ಪದವಿಗಳ ಮೌಲ್ಯವು ಕಾಲಕ್ರಮೇಣ ಕಡಿಮೆಯಾಗುತ್ತಿದ್ದು, ಅವುಗಳ ಆರ್ಥಿಕ ಲಾಭಗಳು ಇನ್ಮುಂದೆ ಕಡಿಮೆಯಾಗಬಹುದು ಎಂದು ಸೂಚಿಸುತ್ತವೆ.
ಹಾರ್ವರ್ಡ್ ಅರ್ಥಶಾಸ್ತ್ರಜ್ಞರು ಡೇವಿಡ್ ಜೆ. ಡೆಮಿಂಗ್(Harvard economist David J. Deming) ಮತ್ತು ಕದೀಮ್ ನೋರ್(Kadeem Nor) ನಡೆಸಿದ 2020ರ ಅಧ್ಯಯನವು, ಕಂಪ್ಯೂಟರ್ ವಿಜ್ಞಾನ, ಎಂಜಿನಿಯರಿಂಗ್, ವ್ಯವಹಾರ ಆಡಳಿತ ಮುಂತಾದ ಕ್ಷೇತ್ರಗಳಲ್ಲಿ ಪದವೀಧರರ ಆದಾಯವು ಕಾಲಕ್ರಮೇಣ ಕುಸಿಯುತ್ತಿದೆ ಎಂಬುದನ್ನು ತೋರಿಸಿದೆ. ಅಂದರೆ, ನೀವು ಈ ಕ್ಷೇತ್ರಗಳಲ್ಲಿ ಪದವಿ ಪಡೆದರೂ ಸಹ, ನಿಮ್ಮ ಪದವಿ ಸಂಪೂರ್ಣವಾಗಿ ಮಾರುಕಟ್ಟೆ ಭದ್ರತೆಯನ್ನು ಖಾತರಿಪಡಿಸುವುದಿಲ್ಲ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪದವಿಗಳ ಮೌಲ್ಯ ಕುಸಿತಕ್ಕೆ ಕಾರಣವೇನು?:
ಈ ಅಧ್ಯಯನವು ಪ್ರಮುಖವಾದ ವಿಷಯವನ್ನು ಒತ್ತಿ ಹೇಳುತ್ತದೆ ಅದರ ಪ್ರಕಾರ ಉದ್ಯಮವು ವೇಗವಾಗಿ ಬದಲಾಗುತ್ತಿದೆ. ಒಂದು ಕಾಲದಲ್ಲಿ ಉನ್ನತ ಪದವಿಗಳು ಎಂದು ಪರಿಗಣಿಸಲ್ಪಟ್ಟ ಪದವಿಗಳು ಈಗ ತಮ್ಮ ಮೌಲ್ಯವನ್ನು ಕಳೆದುಕೊಂಡಿವೆ. ತಾಂತ್ರಿಕ ನವೀನತೆ, ಆಟೋಮೇಷನ್, ಕೃತಕ ಬುದ್ಧಿಮತ್ತೆ (AI), ಮತ್ತು ಉದ್ಯೋಗ ಹವಾಮಾನದಲ್ಲಿ ಬದಲಾಗುತ್ತಿರುವ ಪ್ರಭಾವದಿಂದಾಗಿ, ವಿದ್ಯಾರ್ಥಿಗಳು ಪದವಿ ಮಾತ್ರಕ್ಕೆ ಅವಲಂಬಿತರಾಗಿರಬಾರದು. ನಿರಂತರ ಕೌಶಲ್ಯಾಭಿವೃದ್ಧಿ ಮತ್ತು ವೃತ್ತಿಗೆ ಹೊಂದಿಕೊಳ್ಳುವ ಸಾಮರ್ಥ್ಯವೇ ಮುಂದಿನ ಯಶಸ್ಸಿನ ಪ್ರಮುಖ ಅಂಶವಾಗಿವೆ.
ಉದಾಹರಣೆಗೆ, 1990–2000ರ ದಶಕಗಳಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಪದವಿಗಳು ಹೆಚ್ಚಿನ ಸಂಬಳದೊಂದಿಗೆ ಉದ್ಯೋಗಗಳಿಗೆ ದಾರಿ ಮಾಡಿಕೊಟ್ಟಿದ್ದವು. ಆದರೆ 2025ಕ್ಕೆ, ಅನೇಕ ಸಾಫ್ಟ್‌ವೇರ್ ಕಂಪನಿಗಳು ಉದ್ಯೋಗಿಗಳನ್ನ ಕಡಿತಗೊಳಿಸುತ್ತಿವೆ. ಇದರಿಂದ, ಈ ಕ್ಷೇತ್ರಗಳಲ್ಲಿಯೂ ಉದ್ಯೋಗ ಭದ್ರತೆ ಕುಸಿದಿರುವುದು ಸ್ಪಷ್ಟವಾಗಿದೆ.
ಮಾರುಕಟ್ಟೆ ಮೌಲ್ಯ ಕಳೆದುಕೊಳ್ಳುತ್ತಿರುವ 10 ಪ್ರಮುಖ ಪದವಿಗಳು ಹೀಗಿವೆ:
ಹಾರ್ವರ್ಡ್ ಅಧ್ಯಯನವು 2025ರಲ್ಲಿ ಈ ಕೆಳಗಿನ ಪದವಿಗಳು ದೀರ್ಘಕಾಲೀನ ಮೌಲ್ಯ ಕಳೆದುಕೊಂಡಿರುವುದನ್ನು ಗುರುತಿಸಿದೆ,
1. ಸಾಮಾನ್ಯ ವ್ಯವಹಾರ ಆಡಳಿತ (MBA ಸೇರಿದಂತೆ) : ಮಾರ್ಕೆಟ್ ತೃಪ್ತಿ ಕಡಿಮೆಯಾಗಿದ್ದು, ಮುಂಚೆಯಿದ್ದ ನೇಮಕಾತಿ ಖಾತರಿ ಇಲ್ಲ.
2. ಕಂಪ್ಯೂಟರ್ ಸೈನ್ಸ್(Computer Science) : ಆರಂಭಿಕ ಸಂಬಳ ಹೆಚ್ಚಾಗಿದ್ದರೂ, ಕೌಶಲ್ಯಗಳು ವೇಗವಾಗಿ ಬಳಕೆಯಲ್ಲಿಲ್ಲ.
3. ಮೆಕ್ಯಾನಿಕಲ್ ಎಂಜಿನಿಯರಿಂಗ್(Mechanical Engineering) : ಆಟೋಮೇಷನ್ ಮತ್ತು ವಿದೇಶಿ ಉತ್ಪಾದನೆಯ ಪರಿಣಾಮದಿಂದ ಉದ್ಯೋಗ ಭದ್ರತೆ ಕಡಿಮೆ.
4. ಲೆಕ್ಕಪತ್ರ ನಿರ್ವಹಣೆ (Accounting) : AI ಪರಿಣಾಮದಿಂದ ಮಾನವ ಹಸ್ತಕ್ಷೇಪ ಕಡಿಮೆಯಾಗುತ್ತಿದೆ.
5. ಜೀವರಸಾಯನಶಾಸ್ತ್ರ (Biochemistry) : ಸೀಮಿತ ಉದ್ಯೋಗ ಅವಕಾಶಗಳು.
6. ಮನೋವಿಜ್ಞಾನ (Undergraduate Psychology) : ಪದವಿ ಮಾತ್ರವಲ್ಲದೆ ಅನುಭವದ ಅಗತ್ಯ.
7. ಇಂಗ್ಲಿಷ್ ಮತ್ತು ಮಾನವಿಕ ವಿಷಯಗಳು (English & Humanities) : ಅನಿಶ್ಚಿತ ವೃತ್ತಿ ನಿರೀಕ್ಷೆಗಳು.
8. ಸಮಾಜಶಾಸ್ತ್ರ ಮತ್ತು ಸಾಮಾಜಿಕ ವಿಜ್ಞಾನಗಳು (Sociology & Social Sciences) : ಉದ್ಯೋಗಕ್ಕೆ ಬೇಡಿಕೆ ಕಡಿಮೆ.
9. ಇತಿಹಾಸ (History) : ಕಡಿಮೆ ವೇತನದ ಅವಕಾಶಗಳು.
10. ತತ್ವಶಾಸ್ತ್ರ (Philosophy) : ವಿಮರ್ಶಾತ್ಮಕ ಚಿಂತನೆಗೆ ಅವಕಾಶ, ಆದರೆ ಮಾರುಕಟ್ಟೆಯಲ್ಲಿ ಬಳಕೆ ಕಡಿಮೆ.
ಹಾಗಾದರೆ ವಿದ್ಯಾರ್ಥಿಗಳಿಗೆ ಭವಿಷ್ಯಕ್ಕಾಗಿ ಯಾವ ಪದವಿ ಆಯ್ಕೆ ಮಾಡಬೇಕು?
ಹಾರ್ವರ್ಡ್ ಸಂಶೋಧನೆ ಹೇಳುವ ಪ್ರಕಾರ, ಪದವಿ ಮಾತ್ರ ಯಶಸ್ಸಿನ ಖಾತರಿಯಲ್ಲ. 21ನೇ ಶತಮಾನದಲ್ಲಿ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಯಶಸ್ವಿಯಾಗಲು ಕೆಲವು ಪ್ರಮುಖ ಅಂಶಗಳನ್ನು ಗಮನಿಸಬೇಕಾಗುತ್ತದೆ, ಅವುಗಳೆಂದರೆ,
ಹೊಸ ತಂತ್ರಜ್ಞಾನ ಹಾಗೂ ಕೌಶಲ್ಯಗಳಲ್ಲಿ ನವೀಕರಣ : AI, ಡೇಟಾ ಅನಾಲಿಟಿಕ್ಸ್, ಡಿಜಿಟಲ್ ಮಾರ್ಕೆಟಿಂಗ್ ಮುಂತಾದ ಕ್ಷೇತ್ರಗಳಲ್ಲಿ ತಜ್ಞರಾಗಬೇಕು.
ಸೃಜನಶೀಲತೆ ಮುಖ್ಯ : ಯಾವ ಉದ್ಯೋಗವನ್ನೂ ಎದುರಿಸಲು ಕೌಶಲ್ಯ ಮತ್ತು ಬುದ್ಧಿವಂತಿಕೆ ಬಹಳ ಮುಕ್ಯವಾಗಿ ಬೇಕಾಗುತ್ತದೆ.
ಸಾಮಾಜಿಕ ಬುದ್ಧಿವಂತಿಕೆ (Social Intelligence) : ತಂಡ, ನಿರ್ವಹಣೆ, ಮತ್ತು ನೇರ ಸಂಪರ್ಕ ಕೌಶಲ್ಯ.
ಅನುಭವ ಮತ್ತು ಇಂಟರ್ನ್‌ಶಿಪ್ : ಪ್ರಾಯೋಗಿಕ ಅನುಭವವು ಪದವಿಯ ಮೌಲ್ಯವನ್ನು ಹೆಚ್ಚಿಸುತ್ತದೆ.
ಹೀಗಾಗಿ, ಮುಂದಿನ ದಿನಗಳಲ್ಲಿ ವೃತ್ತಿಜೀವನದಲ್ಲಿ ಮುನ್ನಡೆ ಪಡೆಯಲು, ವಿದ್ಯಾರ್ಥಿಗಳು ಕೇವಲ ಪದವಿಗೆ ಅವಲಂಬಿತರಾಗಿರಬಾರದು. ಬಹುಕೌಶಲ್ಯಗಳೊಂದಿಗೆ ನಿರಂತರ ಕಲಿಕೆಯ ದಾರಿಯನ್ನು ಅನುಸರಿಸುವುದು ಮತ್ತು ತಾಂತ್ರಿಕ ಜ್ಞಾನವನ್ನು ಸೃಜನಶೀಲತೆಯೊಂದಿಗೆ ಪರಿಣಾಮಕಾರಿಯಾಗಿ ಪ್ರಯೋಗ ಮಾಡುವುದು ಉತ್ತಮವಾಗಿರುತ್ತದೆ.
ಒಟ್ಟಾರೆಯಾಗಿ, ಪದವಿ ನಿಮ್ಮ ಭವಿಷ್ಯವನ್ನು ನಿರ್ಣಯಿಸುವುದಕ್ಕೆ ಸಾಕಾಗುವುದಿಲ್ಲ. ಹಾರ್ವರ್ಡ್ ಅಧ್ಯಯನ ಹೇಳುವಂತೆ, ಉದ್ಯೋಗ ಮಾರುಕಟ್ಟೆ ವೇಗವಾಗಿ ಬದಲಾಗುತ್ತಿದೆ. 21ನೇ ಶತಮಾನದಲ್ಲಿ ಯಶಸ್ಸು ಕೇವಲ ಪದವಿಯಲ್ಲಿ ಇರುವುದಿಲ್ಲ. ಅದನ್ನು ಹೊರತಾಗಿ ನವೀನತೆಯುಳ್ಳ ಕೌಶಲ್ಯ, ಅನುಭವ ಮತ್ತು ಸಾಮರ್ಥ್ಯದಲ್ಲಿದೆ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




