Picsart 25 10 05 22 47 23 640 scaled

ಮಲಗುವಾಗ ಫೋನ್(phone) ಹತ್ತಿರ ಇಡುವ ಅಭ್ಯಾಸ ಅಪಾಯಕರ! ವೈದ್ಯರ ಗಂಭೀರ ಎಚ್ಚರಿಕೆ

Categories:
WhatsApp Group Telegram Group

ಇಂದಿನ ಯುಗದಲ್ಲಿ ಸ್ಮಾರ್ಟ್‌ಫೋನ್(Smartphone) ನಮ್ಮ ದಿನನಿತ್ಯದ ಜೀವನದ ಅವಿಭಾಜ್ಯ ಅಂಗವಾಗಿದೆ. ಬೆಳಿಗ್ಗೆ ಎಚ್ಚರಿಸುವ ಅಲಾರಂನಿಂದ ಹಿಡಿದು, ರಾತ್ರಿ ಮಲಗುವವರೆಗೂ ಅದು ನಮ್ಮೊಂದಿಗೇ ಇರುತ್ತದೆ. ಕೆಲಸ, ಮನರಂಜನೆ, ಮಾಹಿತಿ  ಎಲ್ಲವುದಕ್ಕೂ ಮೊಬೈಲ್‌ಗಳೇ ಬೇಕು. ಜೊತೆಯಲ್ಲಿ ಅದರ ಮೇಲೆಯೇ ಅವಲಂಬನೆ ಕೂಡ ಹೆಚ್ಚಾಗಿದೆ. ಆದರೆ ಈ ಅತಿಯಾದ ಅವಲಂಬನೆಯ ನಡುವೆ, ನಾವು ನಿರ್ಲಕ್ಷ ತೋರುವ ಕೆಲವು ವಿಚಾರಗಳು ನಿಧಾನವಾಗಿ ನಮ್ಮ ಆರೋಗ್ಯವನ್ನು (Health) ಹಾಳುಮಾಡುತ್ತಿವೆ. ವಿಶೇಷವಾಗಿ ರಾತ್ರಿ ಮಲಗುವಾಗ ಫೋನ್ ಹತ್ತಿರದಲ್ಲಿಟ್ಟು ನಿದ್ರಿಸುವ ಅಭ್ಯಾಸವು ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು ಎಂಬುದಾಗಿ ವೈದ್ಯರು ಎಚ್ಚರಿಸುತ್ತಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪಕ್ಕದಲ್ಲಿ ಮೊಬೈಲ್ ಇಟ್ಟು ಮಲಗುವುದು ಅಪಾಯ?:

ಹೆಚ್ಚಿನವರು ಮಲಗುವಾಗ ಫೋನ್ ಬಳಸಿದ ನಂತರ ದಿಂಬಿನ ಕೆಳಗೆ ಅಥವಾ ಹಾಸಿಗೆಯ ಪಕ್ಕದಲ್ಲಿ ಇಟ್ಟುಕೊಳ್ಳುತ್ತಾರೆ. ಕೆಲವರು ನಿದ್ರೆಯ ಮಧ್ಯದಲ್ಲೇ ನೋಟಿಫಿಕೇಶನ್‌ಗಳನ್ನು (Notifications) ಪರಿಶೀಲಿಸುತ್ತಾರೆ. ಕೆಲವರಿಗೆ ಇದು ಸುರಕ್ಷಿತವೆನಿಸಬಹುದು, ಆದರೆ ವೈದ್ಯಕೀಯವಾಗಿ ಇದು ಅಪಾಯಕಾರಿ ಎನ್ನುವುದನ್ನು ಕ್ಯಾಲಿಫೋರ್ನಿಯಾದ ಆನೆಸ್ಥೆಸಿಯಾಲಜಿಸ್ಟ್ ಡಾ. ಮೈರೋ ಫಿಗುರಾ (Dr. Mairo Figuera, an anesthesiologist in California) ವಿವರಿಸಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಎಚ್ಚರಿಕೆ ಈಗ ವ್ಯಾಪಕವಾಗಿ ಚರ್ಚೆಗೆ ಕಾರಣವಾಗಿದೆ.

ವೈದ್ಯರ ಎಚ್ಚರಿಕೆ:

ಡಾ. ಮೈರೋ ಅವರ ಪ್ರಕಾರ, ನೀವು ಫೋನ್ ಬಳಸದೆ ಇದ್ದರೂ ಅದು ರೇಡಿಯೊಫ್ರೀಕ್ವೆನ್ಸಿ ವಿಕಿರಣವನ್ನು (Radiofrequency radiation) ಹೊರಸೂಸುತ್ತದೆ. ಈ ವಿಕಿರಣಗಳು ನಿದ್ರೆಯ ಗುಣಮಟ್ಟವನ್ನು ಹಾಳುಮಾಡುತ್ತವೆ, ಮೆದುಳಿನ ಚಟುವಟಿಕೆಯನ್ನು ಅಸ್ಥಿರಗೊಳಿಸುತ್ತವೆ ಮತ್ತು ತಲೆನೋವು, ಒತ್ತಡ, ಕಿರಿಕಿರಿ ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು.

ವಿಶ್ವ ಆರೋಗ್ಯ ಸಂಸ್ಥೆಯ ಅಂತರರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ (International Agency for Cancer Research) ಮೊಬೈಲ್‌ಗಳಿಂದ ಹೊರಬರುವ ವಿಕಿರಣವನ್ನು “ಬಹುಶಃ ಮನುಷ್ಯರಿಗೆ ಕ್ಯಾನ್ಸರ್ ಕಾರಕ” ಎಂದು ವರ್ಗೀಕರಿಸಿದೆ. ಅತಿಯಾದ ಮೊಬೈಲ್ ಬಳಕೆಯಿಂದ ಮೆದುಳಿನ ಮೇಲೆ ದೀರ್ಘಾವಧಿಯ ಹಾನಿ ಉಂಟಾಗಬಹುದು ಹಾಗೂ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದಾಗಿದೆ.

ನೀಲಿ ಬೆಳಕಿನ ಹಾನಿ:

ಫೋನ್‌ನ ಸ್ಕ್ರೀನ್‌ನಿಂದ ಬರುವ ನೀಲಿ ಬೆಳಕು ಮೆಲಾಟೋನಿನ್ (Blue light melatonin) ಹಾರ್ಮೋನ್‌ನ ಉತ್ಪಾದನೆಯನ್ನು ತಡೆಯುತ್ತದೆ. ಇದು ನಿದ್ರೆಯ ಸಮಯ ಮತ್ತು ಗುಣಮಟ್ಟವನ್ನು ಹಾಳುಮಾಡುತ್ತದೆ. ಹಾರ್ಮೋನ್ ಬದಲಾವಣೆಗಳು (Harmone Changes) ದೇಹದ ನೈಸರ್ಗಿಕ ಕಾರ್ಯವೈಖರಿಯನ್ನೇ ಅಸ್ತವ್ಯಸ್ತಗೊಳಿಸುತ್ತವೆ.

ಚಾರ್ಜಿಂಗ್ ಸಮಯದಲ್ಲಿ ಅಪಾಯ ಸಂಭವಿಸುತ್ತದೆ ಎಚ್ಚರ:
ಫೋನ್‌ಗಳನ್ನು ಮಲಗುವಾಗ ಹಾಸಿಗೆಯ ಪಕ್ಕದಲ್ಲೇ ಚಾರ್ಜ್ (Charge) ಮಾಡಲು ಬಹುತೇಕರು ಅಭ್ಯಾಸ ಹೊಂದಿದ್ದಾರೆ. ಆದರೆ ಫೋನ್ ಹೆಚ್ಚು ಬಿಸಿಯಾದರೆ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಅಪಾಯ ಕಡಿಮೆ ಮಾಡುವ ಸರಳ ಕ್ರಮಗಳು ಹೀಗಿವೆ:

ಡಾ. ಫಿಗುರಾ ಅವರು ಕೆಲವು ಸರಳ ಸಲಹೆಗಳನ್ನು ನೀಡಿದ್ದಾರೆ,
ಮಲಗುವ ಮುನ್ನ ಫೋನ್ ಅನ್ನು ಹಾಸಿಗೆಯಿಂದ ದೂರ ಇಡಿ. ಕೋಣೆಯ ಇನ್ನೊಂದು ಭಾಗದಲ್ಲಿ ಇಡುವುದು ಉತ್ತಮ.
ಫೋನ್ ಚಟವನ್ನು ಕಡಿಮೆ ಮಾಡಲು ಅದನ್ನು ಫ್ಲೈಟ್ ಮೋಡ್ ಅಥವಾ ಸೈಲೆಂಟ್ ಮೋಡ್‌ನಲ್ಲಿ (Flight mode or Silent mode) ಇಡಿ.
ಮಲಗುವ ಮೊದಲು ಮೊಬೈಲ್ ಬಳಕೆಯ ಬದಲು ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಿ.
ವಾರದಲ್ಲಿ ಒಂದು ದಿನ ಎಲ್ಲರೂ ಫೋನ್ ಹಾಗೂ ಟಿವಿಯನ್ನು ಆಫ್ ಮಾಡಿ ಕುಟುಂಬದೊಂದಿಗೆ ಸಮಯ ಕಳೆಯಿರಿ.

ಒಟ್ಟಾರೆಯಾಗಿ, ಮೊಬೈಲ್ ಫೋನ್‌ನಿಂದ ಸಂಪೂರ್ಣ ದೂರವಿರುವುದು ಸಾಧ್ಯವಿಲ್ಲದಿದ್ದರೂ, ಅದರ ಬಳಕೆಯ ಸಮಯ ಮತ್ತು ಸ್ಥಳದ ಬಗ್ಗೆ ಜಾಗರೂಕತೆಯಿಂದ ವರ್ತಿಸುವುದು ಆರೋಗ್ಯಕ್ಕಾಗಿ ಅಗತ್ಯ. ನಿದ್ರೆಯ ಸಮಯದಲ್ಲಿ ಫೋನ್ ಹತ್ತಿರ ಇಡುವ ಅಭ್ಯಾಸವನ್ನು ಬದಲಾಯಿಸುವುದರಿಂದ ಉತ್ತಮ ನಿದ್ರೆ, ತಲೆನೋವು ನಿವಾರಣೆ ಹಾಗೂ ದೀರ್ಘಾವಧಿಯಲ್ಲಿ ಗಂಭೀರ ಕಾಯಿಲೆಗಳಿಂದ ರಕ್ಷಣೆ ದೊರೆಯಬಹುದು.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories