ಆಗಸ್ಟ್ ತಿಂಗಳಲ್ಲಿ ಹೊಸ ಕಾರು ಖರೀದಿಸಲು ಯೋಜಿಸುತ್ತಿರುವ ಗ್ರಾಹಕರಿಗೆ ಟಾಟಾ ಮೋಟಾರ್ಸ್ ಒಂದು ಅಪೂರ್ವ ಅವಕಾಶ ನೀಡುತ್ತಿದೆ. ಕಂಪನಿಯ ಜನಪ್ರಿಯ ಸೆಡಾನ್ ಕಾರು ಟಿಗೋರ್‌ನಲ್ಲಿ ರೂ. 60,000 ವರೆಗಿನ ರಿಯಾಯಿತಿ ನೀಡಲಾಗುತ್ತಿದೆ. ಈ ಆಫರ್‌ನಲ್ಲಿ ನಗದು ರಿಯಾಯಿತಿ , ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್‌ಗಳು ಸೇರಿವೆ. ಈ ಕೊಡುಗೆಯಿಂದ ಕಾರಿನ ಬೆಲೆ ₹ 7 ಲಕ್ಷಕ್ಕಿಂತ ಕಡಿಮೆಯಾಗಿದೆ. ಆಸಕ್ತರಾದವರು ತಮ್ಮ ಹತ್ತಿರದ ಟಾಟಾ ಡೀಲರ್‌ಶಿಪ್‌ಗೆ ಸಂಪರ್ಕಿಸಿ ಹೆಚ್ಚಿನ ವಿವರಗಳನ್ನು ಪಡೆಯಬಹುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಟಾಟಾ ಟಿಗೋರ್‌ನ ವಿಶೇಷತೆಗಳು
ಟಾಟಾ ಟಿಗೋರ್ ಕಾರು ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಬಂದಿದೆ. ಇದರ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಮ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಬೆಂಬಲಿಸುತ್ತದೆ. ಕ್ಯಾಬಿನ್‌ನಲ್ಲಿ ಪ್ರೀಮಿಯಂ ಲುಕ್ ನೀಡುವ ಡ್ಯುಯಲ್-ಟೋನ್ ಡ್ಯಾಶ್‌ಬೋರ್ಡ್, ಹೊಸ ಸ್ಟೈಲ್‌ನ ಸ್ಟೀರಿಂಗ್ ವೀಲ್ ಮತ್ತು ಆರಾಮದಾಯಕ ಸೀಟುಗಳು ಡ್ರೈವರ್ ಮತ್ತು ಪ್ರಯಾಣಿಕರಿಗೆ ಲಕ್ಷ್ಷಿ ಅನುಭವ ನೀಡುತ್ತವೆ. ಹೆಚ್ಚುವರಿಯಾಗಿ, 6-ಸ್ಪೀಕರ್ ಸೌಂಡ್ ಸಿಸ್ಟಮ್ ಮತ್ತು ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಕಾರಿನ ಅಲಂಕಾರವನ್ನು ಹೆಚ್ಚಿಸಿವೆ.

ಪವರ್ ಮತ್ತು ಮೈಲೇಜ್
ಟಾಟಾ ಟಿಗೋರ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 86 ಬಿಎಚ್‌ಪಿ ಪವರ್ ಉತ್ಪಾದಿಸುತ್ತದೆ. ಸಿಎನ್‌ಜಿ ಮಾದರಿಯು 26 ಕಿಮೀ/ಕೆಜಿ ವರೆಗು ಮೈಲೇಜ್ ನೀಡುತ್ತದೆ, ಇದು ಇಂಧನ ದಕ್ಷತೆಯನ್ನು ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ. ಈ ಕಾರು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ (AMT) ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಲಭ್ಯವಿದೆ.
ಬೆಲೆ ಮತ್ತು ವ್ಯಾಪ್ತಿ

ಟಾಟಾ ಟಿಗೋರ್ ಕಾರಿನ ಬೇಸ್ ಮಾದರಿಯ ಎಕ್ಸ್-ಶೋರೂಂ ಬೆಲೆ ₹ 6.54 ಲಕ್ಷದಿಂದ ಪ್ರಾರಂಭವಾಗಿ (ಬೆಂಗಳೂರು ಎಕ್ಸ್-ಶೋರೂಂ ಬೆಲೆ) ಹೈ-ಎಂಡ್ ವೇರಿಯೆಂಟ್‌ಗೆ ₹ 10.63 ಲಕ್ಷದವರೆಗೆ ಇದೆ. ಪ್ರಸ್ತುತ ರಿಯಾಯಿತಿಯೊಂದಿಗೆ, ಈ ಸೆಡಾನ್ ಕಾರು ಹೆಚ್ಚು ಸುಲಭವಾಗಿ ಖರೀದಿಸಲು ಅನುವು ಮಾಡಿಕೊಡುತ್ತಿದೆ.
ಈ ಆಫರ್ ಆಗಸ್ಟ್ ತಿಂಗಳ ಕೊನೆಯವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಆದ್ದರಿಂದ, ಟಾಟಾ ಟಿಗೋರ್‌ನಲ್ಲಿ ಆಸಕ್ತಿ ಹೊಂದಿರುವವರು ತ್ವರಿತ ನಿರ್ಧಾರ ತೆಗೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸ್ಥಳೀಯ ಟಾಟಾ ಡೀಲರ್‌ನನ್ನು ಸಂಪರ್ಕಿಸಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.