tanisha

BBK 10- ಬಿಗ್ ಬಾಸ್ ಮನೆಯಿಂದ ತನಿಷಾ ಕುಪ್ಪಂಡ ಔಟ್! ವಾರದ ಮಿಡ್ ಎಲಿಮಿನೇಷನ್, ಸಂಪೂರ್ಣ ಮಾಹಿತಿ ಇಲ್ಲಿದೆ

ಬಿಗ್ ಬಾಸ್ ಈ ಸೀಸನ್ ನಲ್ಲಿ ಎಲಿಮಿನೇಟ್ ಆದ ಸ್ಪರ್ಧಿಗಳನ್ನು ಮತ್ತೆ ಮನೆಗೆ ಆಹ್ವಾನಿಸಿದ್ದು ವಿಶೇಷವಾಗಿತ್ತು. ಎಲಿಮಿನೇಟ್ ಆದ ಎಲ್ಲಾ ಸ್ಪರ್ಧಿಗಳು ಮತ್ತೆ ಖುಷಿ ಖುಷಿಯಿಂದ ಮನೆಗೆ ಬಂದು ಉಳಿದ ಸ್ಪರ್ಧಿಗಳ ಜೊತೆ ಮಿಂಗಲ್ ಆಗಿ ಹೊರಗಿನ ಇನ್ಪುಟ್ ಸಹಿತ ಕೊಟ್ಟಿದ್ದು ಒಳಗಿರುವ ಸ್ಪರ್ಧಿಗಳಿಗೆ ಕಪ್ ಗೆಲ್ಲಲು ಬೂಸ್ಟ್ ಸಿಕ್ಕಂತಾಯಿತು. ಹಳೆಯ ಸ್ಪರ್ದಿಗಳು ಹೋಗುತ್ತಿದ್ದಂತೆಯೇ ವಾರದ ಮಿಡ್ ಎಲಿಮಿನೇಷನ್ ಸಹಿತ ಮುಗಿದೆ ಹೋಯಿತು. ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ

ಪ್ರತಾಪ್ ಗೆ ಕಾಗೆ ಎಂದ ಈಶಾನಿ

ಇತ್ತೀಚೆಗೆ ಡ್ರೋನ್ ಪ್ರತಾಪ್ ಅವರು ಒಂದು ಮಾತನ್ನು ನೇರವಾಗಿ ಹೇಳಿದ್ದರು. ‘ವಿನಯ್ ಗೌಡ ಅವರು ಗ್ರೂಪಿಸಂ ಮಾಡಿದರು. ಅವರ ಗುಂಪಿನ ಎಲ್ಲರೂ ಹೊರ ಹೋದರು. ಈಗ ಅವರ ಬೆಡ್​ಶೀಟ್ ವಿನಯ್ ಅವರ ಬೆಡ್ ಸೇರಿದೆ. ಅವರು ಒಬ್ಬರನ್ನು ತುಳಿದು ಮೇಲೆ ಬಂದಿದ್ದಾರೆ’ ಎಂದಿದ್ದರು ಪ್ರತಾಪ್. ಈ ಮಾತನ್ನು ಕೇಳಿ ವಿನಯ್ ಗೌಡ ಅವರು ಸಿಟ್ಟಾಗಿದ್ದರು. ಡ್ರೋನ್ ಪ್ರತಾಪ್​ಗೆ ಕೆಟ್ಟ ಶಬ್ದಗಳ ಬಳಕೆ ಮಾಡಿದ್ದರು. ನಂತರ ಅವರು ಕ್ಷಮೆ ಕೇಳಿದ್ದರು.

ಈಗ ಈಶಾನಿ ಕೂಡ ಪ್ರತಾಪ್​ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಪ್ರತಾಪ್ ಹೇಳಿದ ಮಾತಿನ ಬಗ್ಗೆ ಅವರಿಗೆ ಕೋಪ ಇದೆ. ಇದನ್ನು ಅವರು ಬೇರೆ ರೀತಿಯಲ್ಲಿ ಹೇಳಿದ್ದಾರೆ. ‘ಕಾಗೆ ಕಕ್ಕ ಮಾಡಿ ಎಲ್ಲ ಕಡೆ ಓಡಾಡುತ್ತಿದೆ. ನೀವು ಸಿಂಪತಿ ಕಾರ್ಡ್​ ಪ್ಲೇ ಮಾಡಿ. ಅದರಿಂದ ಕೆಲವರು ಉಳಿದುಕೊಂಡಿದ್ದಾರೆ’ ಎಂದು ಈಶಾನಿ ಹೇಳಿದ್ದಾರೆ. ಇದನ್ನು ಅನೇಕರು ಟೀಕಿಸಿದ್ದಾರೆ. ಈಶಾನಿ ಅವರು ಈ ರೀತಿ ಮಾತನಾಡಬಾರದಿತ್ತು ಎಂದು ಅನೇಕರು ಹೇಳಿದ್ದಾರೆ. ಈಶಾನಿ ಮಾತನ್ನು ಕೇಳುತ್ತಾ ಬೆಂಬಲಿಸಿದ್ದನ್ನು ಅನೇಕರು ಟೀಕಿಸಿದ್ದಾರೆ.

ಮತ್ತೇ ಕ್ಯಾತೆ ಮುಂದುವರೆಸಿದ ರಕ್ಷಕ

ಬಿಗ್ ಬಾಸ್ ಮನೆಗೆ ಮರಳಿದ ಬಳಿಕ ರಕ್ಷಕ್ ಅವರು ಈ ಬಗ್ಗೆ ಕ್ಯಾತೆ ತೆಗೆದಿದ್ದಾರೆ. ರಾತ್ರಿ ಎಲ್ಲರೂ ಮಲಗುವವರಿದ್ದರು. ಈ ವೇಳೆ ಪ್ರತಾಪ್ ಅವರ ಬಳಿ ಬಂದ ರಕ್ಷಕ್, ‘ನನ್ನ ಬೆಡ್​ಶೀಟ್ ನೀಡಿ, ನನ್ನ ಬೆಡ್​ಶೀಟ್ ನೀಡಿ’ ಎಂದು ಕಾಡಿಸೋಕೆ ಶುರು ಮಾಡಿದರು. ಆಗ ಪ್ರತಾಪ್ ಅವರು ಕೂಲ್ ಆಗಿಯೇ ಉತ್ತರಿಸೋಕೆ ಶುರು ಮಾಡಿದರು. ‘ಯಾವ ಬೆಡ್​ಶೀಟ್’ ಎಂದು ಪ್ರತಾಪ್ ಪ್ರಶ್ನೆ ಮಾಡಿದರು. ‘ಹೇಳಿಕೆ ನೀಡೋ ಮೊದಲು ಯೋಚನೆ ಮಾಡಬೇಕು’ ಎಂದು ರಕ್ಷಕ್ ಆವಾಜ್ ಹಾಕೋಕೆ ಬಂದರು. ‘ಮಕ್ಕಳ ತರ ಆಡಬೇಡಿ. ಹೋಗಿ ಸುಮ್ಮನೆ ಮಲಗಿಕೊಳ್ಳಿ’ ಎಂದು ಪ್ರತಾಪ್ ಬುದ್ಧಿವಾದ ಹೇಳಿದರು. ಆ ಬಳಿಕ ರಕ್ಷಕ್ ಅಲ್ಲಿಂದ ತೆರಳಿದರು.

ತನಿಷಾ ಮನೆಯಿಂದ ಔಟ್!

ಬಿಗ್ ಬಾಸ್ ಮನೆಯಲ್ಲಿ ಕಳೆದ ವಾರ ಯಾವುದೇ ಎಲಿಮಿನೇಷನ್ ನಡೆದಿರಲಿಲ್ಲ. ಹೀಗಾಗಿ, ಈ ವಾರ ಡಬಲ್ ಎಲಿಮಿನೇಷನ್, ಮುಂದಿನ ವಾರದ ಮಧ್ಯದಲ್ಲಿ ಒಂದು ಎಲಿಮಿನೇಷನ್ ನಡೆಯಬಹುದ ಎಂದು ಎಲ್ಲರೂ ಭಾವಿಸಿದ್ದರು. ಈಗ ಬಿಗ್ ಬಾಸ್ ಟ್ವಿಸ್ಟ್ ನೀಡಿದ್ದಾರೆ. ಈ ವಾರದ ಮಧ್ಯವೇ ಒಂದು ಎಲಿಮಿನೇಷನ್ ನಡೆದಿದೆ. ಪ್ರಮುಖ ಸ್ಪರ್ಧಿಯೇ ಎಲಿಮಿನೇಟ್ ಆಗಿದ್ದಾರೆ.  ಬಿಗ್ ಬಾಸ್ ಮನೆ ಆರಂಭದಲ್ಲಿ ತುಂಬಿತ್ತು. ಆ ಬಳಿಕ ಒಬ್ಬೊಬ್ಬರೇ ಎಲಿಮಿನೇಟ್ ಆಗುತ್ತಾ ಬಂದರು. ನಂತರ ಇಬ್ಬರು ವೈಲ್ಡ್ ಕಾರ್ಡ್ ಮೂಲಕ ಬಂದವರು, ಬಂದಷ್ಟೇ ವೇಗದಲ್ಲಿ ಹೊರ ಹೋದರು. ಎಲಿಮಿನೇಟ್ ಆದ ಹಲವು ಸ್ಪರ್ಧಿಗಳು ದೊಡ್ಮನೆಗೆ ಬಂದಿದ್ದಾರೆ. ಅವರು ಸಂಭ್ರಮದಿಂದ ಕಾಲ ಕಳೆದಿದ್ದಾರೆ. ಒಂದು ದಿನ ಇದ್ದು ಅವರು ದೊಡ್ಮನೆಯಿಂದ ಹೋಗಿದ್ದಾರೆ. ಇದಾದ ಬಳಿಕವೇ ಎಲಿಮಿನೇಷನ್ ನಡೆದಿದೆ.

ಈ ವಾರ ತನಿಷಾ ಕುಪ್ಪಂಡ, ವರ್ತೂರು ಸಂತೋಷ್, ಕಾರ್ತಿಕ್, ಪ್ರತಾಪ್, ವಿನಯ್, ನಮ್ರತಾ ನಾಮಿನೇಟ್ ಆಗಿದ್ದರು. ಸಂಗೀತಾ ಹಾಗೂ ತುಕಾಲಿ ಸಂತೋಷ್ ನಾಮಿನೇಷನ್​ನಿಂದ ಬಚಾವ್ ಆಗಿದ್ದರು. ಈ ಪೈಕಿ ತನಿಷಾ ವಾರದ ಮಧ್ಯೆ ಔಟ್ ಆಗಿದ್ದಾರೆ ಎಂದು ತಿಳಿದು ಬಂದಿದೆ. ಇಂದು (ಜನವರಿ 18) ಈ ಎಪಿಸೋಡ್ ಪ್ರಸಾರ ಕಾಣುವ ಸಾಧ್ಯತೆ ಇದೆ. ತನಿಷಾ ಕುಪ್ಪಂಡ ಅವರು ಆರಂಭದಲ್ಲಿ ಸಖತ್ ಫೈಟ್ ನೀಡಿದ್ದರು. ಆ ಬಳಿಕ ಅವರ ಕಾಲಿಗೆ ಏಟಾಯಿತು. ಇದಾದ ಬಳಿಕ ಅವರು ಡಲ್ ಆಗುತ್ತಾ ಬಂದರು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

whatss

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Popular Categories