ಸುಕನ್ಯ ಸಮೃದ್ಧಿ ಯೋಜನೆಯ (sukanya samriddhi yojana) ಅಡಿಯಲ್ಲಿ ಹೆಣ್ಣು ಮಕ್ಕಳ ಪೋಷಕರಿಗೆ ದೊರೆಯುತ್ತದೆ 22 ಲಕ್ಷ!
ಸುಕನ್ಯಾ ಸಮೃದ್ಧಿ ಯೋಜನೆ (SSY) ಭಾರತ ಸರ್ಕಾರವು ನೀಡುವ ರಾಷ್ಟ್ರೀಯ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಈ ಸಣ್ಣ ಠೇವಣಿ ಯೋಜನೆಯನ್ನು ವಿಶೇಷವಾಗಿ ಹೆಣ್ಣು ಮಗುವಿನ ಭವಿಷ್ಯವನ್ನು ಭದ್ರಪಡಿಸಲು ವಿನ್ಯಾಸಗೊಳಿಸಲಾಗಿದೆ. ಇದೀಗ ಈ ಯೋಜನೆಯಲ್ಲಿ ಹೂಡಿಕೆಯ ಅತಿ ಹೆಚ್ಚು ಇದ್ದು, ಮನೆಯ ಹೆಣ್ಣು ಮಕ್ಕಳ (girl child) ಪೋಷಕರ ಖಾತೆಗೆ ಬಹಳಷ್ಟು ಹಣ ಜಮಾ ಆಗಲಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
14 ಲಕ್ಷ ರೂ. ಗಳ ಬಡ್ಡಿಯನ್ನು ಪಡೆಯಬಹುದು ಸುಕನ್ಯ ಸಮೃದ್ಧಿ ಯೋಜನೆಯಲ್ಲಿ :
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ಪ್ರತಿ ಮನೆಯ ಹೆಣ್ಣು ಮಕ್ಕಳ ಪೋಷಕರು 8.2% ದರದಲ್ಲಿ ಬಡ್ಡಿಯನ್ನು (interest) ಗಳಿಸಬಹುದು. ₹48,000 ಹೂಡಿಕೆಯಿಂದ 14 ಲಕ್ಷ ರೂ.ಗಳ ಬಡ್ಡಿಯನ್ನು ಗಳಿಸಬಹುದು. ಈ ಒಂದು ಯೋಜನೆಯು ಹೆಣ್ಣು ಮಕ್ಕಳ ಕಲಿಕೆ, ವಿದ್ಯಾಭ್ಯಾಸ ಹಾಗೂ ಅವರ ಜೀವನ ರೂಪಿಸಿಕೊಳ್ಳಲು ಬಹಳ ಸಹಾಯವಾಗುತ್ತದೆ.
ಸುಕನ್ಯ ಸಮೃದ್ಧಿ ಯೋಜನಯ ಬಡ್ಡಿ ದರ ಹಾಗೂ ಈ ಯೋಜನೆಯ ಖಾತೆಯ ಅವಧಿ ಹೀಗಿದೆ :
ಕೇಂದ್ರ ಸರ್ಕಾರವು ರೂಪಿಸಿರುವ ಈ ಒಂದು ಯೋಜನೆಯು ಹೆಣ್ಣು ಮಕ್ಕಳ ಅಭಿವೃದ್ಧಿಗೆ ಬಹಳ ಉಪಯೋಗವಾಗಿದೆ. ಹೌದು, ಇದೀಗ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ನೀಡುತ್ತಿದ್ದ ಬಡ್ಡಿ ದರವನ್ನು ಹೆಚ್ಚಾಗಿದ್ದು, ಈ ಹಿಂದೆ ಗ್ರಾಹಕರಿಗೆ ಯೋಜನೆಯಲ್ಲಿ ಹೂಡಿಕೆಯ ಮೇಲೆ 8% ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತಿತ್ತು. ಆದರೆ, ಬಡ್ಡಿದರ ಹೆಚ್ಚಳದ ನಂತರ ಈಗ ಅದನ್ನು ಶೇ.8.2ಕ್ಕೆ ಹೆಚ್ಚಿಸಲಾಗಿದೆ. ಯೋಜನೆಯ ವಿಶೇಷತೆಯೆಂದರೆ ದೀರ್ಘಾವಧಿಯ ಹೂಡಿಕೆಯಿಂದಾಗಿ, ಈ ಯೋಜನೆಯು ದೊಡ್ಡ ನಿಧಿಯನ್ನು ಹೊಂದಿದೆ. ಮುಖ್ಯ ವಿಷಯವೇನೆಂದರೆ, ಹೆಣ್ಣು ಮಗಳು 10 ವರ್ಷ ವಯಸ್ಸಿನವರೆಗೆ ಮಾತ್ರ ಸುಕನ್ಯ ಸಮೃದ್ಧಿ ಯೋಜನೆಯಲ್ಲಿ ಖಾತೆಯನ್ನು ತೆರೆಯಬಹುದಾಗಿದೆ.
ಈ ಯೋಜನೆಯಲ್ಲಿ ಹೆಣ್ಣು ಮಕ್ಕಳಿಗೆ ಯಾವ ಸಮಯದಲ್ಲಿ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಬಹುದು :
ಸುಕನ್ಯ ಸಮೃದ್ಧಿ ಯೋಜನೆಯ ಖಾತೆಯಲ್ಲಿ ಜಮಾ ಮಾಡಿದ ಹಣವು 21 ವರ್ಷಗಳಲ್ಲಿ ದೊರೆಯುತ್ತದೆ. ಹಾಗೆಯೇ ಹೆಣ್ಣು ಮಗಳಿಗೆ 18 ವರ್ಷ ತುಂಬಿದಾಗ, ಅಧ್ಯಯನ ಅಥವಾ ಮದುವೆಗಾಗಿ ಖಾತೆಯಿಂದ ಮೊತ್ತವನ್ನು ಹಿಂಪಡೆಯಬಹುದು. ಇನ್ನೊಂದು ಮುಖ್ಯ ವಿಚಾರವೆಂದರೆ, ಈ ಯೋಜನೆಯಲ್ಲಿ ಪ್ರತಿ ತಿಂಗಳು (every month) 4 ಸಾವಿರ ರೂಪಾಯಿಗಳನ್ನು ಸುಕನ್ಯ ಸಮೃದ್ಧಿ ಯೋಜನೆಯ ಖಾತೆಗೆ ಹಾಕಬೇಕು.
ಖಾತೆಯ ಮುಕ್ತಾಯದ ಅವಧಿಯು 21 ವರ್ಷಗಳು ಆಗಿರುತ್ತದೆ. ನೀವೇನಾದರೂ, 2024 ರಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, 2045 ರಲ್ಲಿ ಬಲವಾದ ಆದಾಯವನ್ನು ಪಡೆಯಬಹುದು. ಮತ್ತು ಪ್ರತಿ ತಿಂಗಳು ರೂ. 4,000 ಉಳಿಸಿದರೆ, ಒಂದು ವರ್ಷದಲ್ಲಿ 48,000 ಉಳಿಸದಂತಾಗುತ್ತದೆ. 15 ವರ್ಷಗಳವರೆಗೆ ಖಾತೆಗೆ ಹಣ ಜಮಾ ಮಾಡಬೇಕು. ಲೆಕ್ಕಾಚಾರದ ಪ್ರಕಾರ, 2042 ರ ವೇಳೆಗೆ ಈ ಹೂಡಿಕೆಯನ್ನು ಮಾಡಬೇಕಾಗುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




