Sukanya Samrudhi Scheme interest rate increased

ಸರ್ಕಾರದ ಪ್ರಮುಖ ಯೋಜನೆಗಳ ಬಡ್ಡಿದರ ಏರಿಕೆ.! ಇಲ್ಲಿದೆ ಕಂಪ್ಲೀಟ್ ಮಾಹಿತಿ

WhatsApp Group Telegram Group

ಇದೀಗ ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು, ಸುಕನ್ಯಾ ಸಮೃದ್ಧಿ ಯೋಜನೆ ( Sukanya Samrudhi Scheme ) ಮೂರು ವರ್ಷದ ಅವಧಿಯ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರವನ್ನು ತ್ರೈಮಾಸಿಕ ಅವಧಿಗೆ ( 3 Years ) ಹೆಚ್ಚಿಸಲಾಗಿದೆ. ಅಂದರೆ ಜನವರಿ ಇಂದ ಮಾರ್ಚ್ ವರೆಗೆ. ಸುಕನ್ಯಾ ಸಮೃದ್ಧಿ ಯೋಜನೆಯ ಮೇಲಿನ ಬಡ್ಡಿದರದಲ್ಲಿ 20 ಮೂಲಾಂಶಗಳು ಮತ್ತು ಮೂರು ವರ್ಷಗಳ ಅವಧಿಯ ನಿಶ್ಚಿತ ಠೇವಣಿ ಮೇಲಿನ ಬಡ್ಡಿದರಗಳಲ್ಲಿ 10 ಮೂಲಾಂಶಗಳನ್ನು ಕೇಂದ್ರ ಸರ್ಕಾರ ( Central Government ) ಹೆಚ್ಚಿಸಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೆಚ್ಚಿದ ಬಡ್ಡಿ ದರ :

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಬಡ್ಡಿ ದರವನ್ನು ಹೆಚ್ಚಿಸಿದ್ದಾರೆ. ಸುಕನ್ಯಾ ಸಮೃದ್ಧಿ ಯೋಜನೆಯ ಠೇವಣಿ ಮೇಲಿನ ಬಡ್ಡಿ ದರ ಸದ್ಯ ಶೇ 8 ರಷ್ಟಿದ್ದು, ಅದನ್ನು ಶೇ 8.2 ಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ ಮೂರು ವರ್ಷಗಳ ಅವಧಿಯ ಠೇವಣಿ ಮೇಲಿನ ಬಡ್ಡಿ ದರ ಶೇ 7 ರಿಂದ ಶೇ 7.1ಕ್ಕೆ ಹೆಚ್ಚಿಸಲಾಗಿದೆ.

ಪಿಪಿಎಫ್ ಮತ್ತು ಸೇವಿಂಗ್ಸ್ ಡೆಪಾಸಿಟ್ ನಲ್ಲಿ ಯಾವುದೇ ಬದಲಾವಣೆ ಇಲ್ಲ :

ಪಿಪಿಎಫ್ ( PPF ) ಮತ್ತು ಸೇವಿಂಗ್ಸ್ ಡೆಪಾಸಿಟ್ಸ್ ( Savings Deposit ) ಮೇಲಿನ ಬಡ್ಡಿ ದರಗಳು ಕ್ರಮವಾಗಿ, ಶೇ 7.1 ಮತ್ತು ಶೇ 4 ರಲ್ಲೇ ಮುಂದುವರಿದಿವೆ. ಈ ಹಿಂದೆ ಡಿಸೆಂಬರ್ ತ್ರೈಮಾಸಿಕದಲ್ಲಿ ನಿಗದಿಪಡಿಸಿದ್ದ ದರವನ್ನು ಹಾಗೆ ಉಳಿಸಿದ್ದಾರೆ ಅದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

whatss

ಸಣ್ಣ ಯೋಜನೆಗಳಲ್ಲಿಯೂ ಕೂಡ ಬಡ್ಡಿ ದರ ಹೆಚ್ಚಳ :

ಹಾಗೆಯೇ ಕೇಂದ್ರ ಸರ್ಕಾರವು (Central Government) ಸಣ್ಣ ಉಳಿತಾಯಗಾರರಿಗೆ (savings rates ) ಸಿಹಿ ಸುದ್ದಿ ನೀಡಿದೆ. 2024ರ ಜನವರಿ-ಮಾರ್ಚ್‌ ಅವಧಿಗೆ ಸಣ್ಣ ಉಳಿತಾಯ ಯೋಜನೆಗಳ (Small Saving Schemes) ಬಡ್ಡಿ ದರಗಳನ್ನು 0.20% ತನಕ ಏರಿಸಲಾಗಿದೆ (Rate of Interests). 3 ವರ್ಷಗಳ ಅವಧಿಯ ಪೋಸ್ಟ್‌ ಆಫೀಸ್‌ ಬಡ್ಡಿ ದರಗಳನ್ನು ಏರಿಸಲಾಗಿದೆ (Post office FD).

ಕೆಲವೊಂದು ಯೋಜನೆಗಳಲ್ಲಿ ಬಡ್ಡಿ ದರ ಇನ್ನೂ ಏರಿಕೆ ಆಗಿಲ್ಲ :

ಆದರೂ ಕೂಡ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್)‌ ಬಡ್ಡಿ ದರ 7.1% ರ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.
ಮಾಸಿಕ ಆದಾಯ ಯೋಜನೆಯ ಬಡ್ಡಿದರದಲ್ಲಿಯೂ ಕೂಡ ಹಾಗೆಯೇ ಇಡಲಾಗಿದೆ.

2022ರ ಮೇ ತಿಂಗಳಿನಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರೆಪೊ ದರವನ್ನು ಹೆಚ್ಚಿಸಿತ್ತು. ಸದ್ಯ ರೆಪೊ ದರ ಶೇ 6.5ರಷ್ಟಿದೆ. ಪ್ರಸಕ್ತ ವರ್ಷದಲ್ಲಿ ಐದು ಬಾರಿ ನಡೆದಿರುವ ಹಣಕಾಸು ನೀತಿ ಸಭೆಯಲ್ಲೂ ಯಾವುದೇ ಬದಲಾವಣೆ ಮಾಡಿಲ್ಲ.

ಸಣ್ಣ ಉಳಿತಾಯ ಬಡ್ಡಿ ಲೆಕ್ಕಾಚಾರ ಹೇಗೆ?

ಸರ್ಕಾರ ಪ್ರತಿ ಮೂರು ತಿಂಗಳಿಗೊಮ್ಮೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಚೆಕ್ ಮಾಡುತ್ತದೆ. ಶ್ಯಾಮಲಾ ಗೋಪಿನಾಥ್‌ ಸಮಿತಿಯ ವರದಿಯನ್ನು ಆಧರಿಸಿ ಈ ಬಡ್ಡಿ ದರಗಳು ನಿಗದಿಯಾಗುತ್ತವೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಕ್ಕೂ 10 ವರ್ಷಗಳ ಅವಧಿಯ ಸರ್ಕಾರಿ ಸಾಲಪತ್ರಗಳು ನೀಡುವ ಆದಾಯಕ್ಕೂ ಸಂಬಂಧವಿದೆ. ಈ ಸಮಿತಿ 2011ರಲ್ಲಿ ಸಲ್ಲಿಸಿದ್ದ ವರದಿಯಲ್ಲಿ, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಮಾರುಕಟ್ಟೆಯ ಏರಿಳಿತಗಳಿಗೆ ಲಿಂಕ್‌ ಕಲ್ಪಿಸಬೇಕು ಎಂದು ತಿಳಿಸಿದೆ.

ಕೇವಲ ಚಿನ್ನ , ಸಣ್ಣ ಉಳಿತಾಯ ಯೋಜನೆಗಳು ಅಥವಾ ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದರಿಂದ ಕೆಲವು ಅನಾನುಕೂಲತೆ ಇದೆ. ಹೂಡಿಕೆಯನ್ನು ವೈವಿಧ್ಯಗೊಳಿಸಲು ಮ್ಯೂಚುವಲ್ ಫಂಡ್‌ ಸೂಕ್ತ. ಹಣದುಬ್ಬರ ಉನ್ನತ ಮಟ್ಟದಲ್ಲಿ ಇದ್ದಾಗ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ನಿಮ್ಮ ಹೂಡಿಕೆಯನ್ನು ಹೆಚ್ಚಿಸುವುದಿಲ್ಲ. ಬದಲಿಗೆ ಮೌಲ್ಯವನ್ನು ಕಳೆಯುತ್ತದೆ. ಹೀಗಾಗಿ ಮ್ಯೂಚುವಲ್‌ ಫಂಡ್‌ ಸಹಕಾರಿಯಾಗುತ್ತದೆ.

tel share transformed

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories