ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಕಾಲಿಕ ಹಾಗೂ ಹಠಾತ್ ಮರಣಗಳ ಪ್ರಮಾಣ ಭಾರೀ ಮಟ್ಟದಲ್ಲಿ ಏರಿಕೆಯಾಗಿದೆ. ಸಾಮಾನ್ಯವಾಗಿ ಯಾವುದೇ ಸೂಚನೆ ಇಲ್ಲದೆ, ಕ್ಷಣಗಳಲ್ಲಿ ಅಥವಾ ಕೆಲವೇ ನಿಮಿಷಗಳಲ್ಲಿ ಸಂಭವಿಸುವ ಹಠಾತ್ ಮರಣಗಳು ವೈದ್ಯಕೀಯ ಲೋಕವನ್ನು ಗೊಂದಲಕ್ಕೀಡುಮಾಡುತ್ತಿವೆ. ವಿಶೇಷವಾಗಿ ಹೃದಯಾಘಾತವು ಈ ಮರಣಗಳ ಪ್ರಮುಖ (Cause of death’s) ಕಾರಣವಾಗಿದ್ದು, ನಗರ ಜೀವನಶೈಲಿ, ಒತ್ತಡ, ಆಹಾರ ಪದ್ಧತಿ ಮತ್ತು ಆರೋಗ್ಯ ನಿರ್ಲಕ್ಷ್ಯವು ಈ ದುರ್ಘಟನೆಯ ಮೂಲ ಅಂಶಗಳೆಂದು ತಜ್ಞರು ಸೂಚಿಸುತ್ತಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿದ ಇತ್ತೀಚಿನ ವರದಿ ಪ್ರಕಾರ, 2025ರಲ್ಲಿ ಪ್ರತಿದಿನ ಸರಾಸರಿ 175 ಜನರು ಹಠಾತ್ ನಿಧನ ಹೊಂದುತ್ತಿದ್ದಾರೆ. ಇದರಲ್ಲಿ 60% ಕ್ಕೂ ಹೆಚ್ಚು ಹೃದಯಾಘಾತದಿಂದಾಗಿಯೇ ಸಂಭವಿಸುತ್ತಿರುವ ಸಾವು ಎಂಬುದು ಆತಂಕಕಾರಿ.
ಪ್ರಮುಖ ಅಂಕಿಅಂಶಗಳು (NCRB ವರದಿ – 2025):
ಒಟ್ಟು ಹಠಾತ್ ಮರಣಗಳು (2023): 63,609
ಇವುಗಳಲ್ಲಿ ಹೃದಯಾಘಾತ ಮರಣಗಳು: 35,637
2022ರಲ್ಲಿ ಹಠಾತ್ ಮರಣಗಳು: 56,653 (ಹೃದಯಾಘಾತ: 32,410)
2019–2023 ಅವಧಿಯಲ್ಲಿ ಏರಿಕೆ:
ಹಠಾತ್ ಮರಣಗಳು 35% ಹೆಚ್ಚಳ
ಹೃದಯಾಘಾತ ಮರಣಗಳು 27% ಹೆಚ್ಚಳ
ಲಿಂಗ ವಿಭಜನೆ (Gender division) 2023 :
ಪುರುಷರು – 53,310
ಮಹಿಳೆಯರು – 10,289
ಟ್ರಾನ್ಸ್‌ಜೆಂಡರ್ – 10
ಹೃದಯಾಘಾತ ಮರಣಗಳ ಲಿಂಗ ವಿಭಜನೆ:
ಪುರುಷರು – 30,999
ಮಹಿಳೆಯರು – 4,634
ಟ್ರಾನ್ಸ್‌ಜೆಂಡರ್ – 4
ರಾಜ್ಯವಾರು ಹಠಾತ್ ಮರಣಗಳ ಚಿತ್ರಣ ಹೀಗಿದೆ:
ಮಹಾರಾಷ್ಟ್ರ: 21,310 (ಹೃದಯಾಘಾತ: 14,165), ಒಟ್ಟು ಹಠಾತ್ ಮರಣಗಳಲ್ಲಿ 66% ಕ್ಕಿಂತ ಹೆಚ್ಚು ಹೃದಯಾಘಾತದಿಂದ.
ಕೇರಳ: 6,930 (ಹೃದಯಾಘಾತ: 4,345)
ಕರ್ನಾಟಕ: 7,551 (ಹೃದಯಾಘಾತ: 2,352)
ಈ ಮೂರು ರಾಜ್ಯಗಳು ಸೇರಿ ದೇಶದ ಒಟ್ಟು ಹಠಾತ್ ಮರಣಗಳ 56% ಹಾಗೂ ಹೃದಯಾಘಾತ ಮರಣಗಳ (Heartattack death’s) 59% ದಾಖಲಿಸಿವೆ.
ಒಡಿಶಾ, ಪುಡುಚ್ಚೇರಿ ಮತ್ತು ಲಕ್ಷದ್ವೀಪ, ಇಲ್ಲಿ ದಾಖಲಾಗಿರುವ ಎಲ್ಲಾ ಹಠಾತ್ ಮರಣಗಳು ಹೃದಯಾಘಾತದಿಂದಲೇ ಸಂಭವಿಸಿವೆ.
ವಯಸ್ಸು ಆಧಾರಿತ ವಿಶ್ಲೇಷಣೆ ಹೀಗಿದೆ:
45–60 ವರ್ಷ ವಯಸ್ಸಿನವರು ಹಠಾತ್ ಮರಣಗಳಿಗೆ ಅತ್ಯಂತ ಹೆಚ್ಚು ಗುರಿಯಾಗಿದ್ದಾರೆ.
ನಂತರ 30–45 ವರ್ಷ ವಯಸ್ಸಿನವರು ಎರಡನೇ ಸ್ಥಾನದಲ್ಲಿದ್ದಾರೆ.
2019ರಿಂದ ಈ ಮರಣಗಳಲ್ಲಿ ನಿರಂತರ ಏರಿಕೆ ಕಂಡುಬಂದಿದ್ದು, ವಿಶೇಷವಾಗಿ 2022–23 ರಲ್ಲಿ ಗಂಭೀರ ಏರಿಕೆ ಕಂಡುಬಂದಿದೆ.
ತಜ್ಞರ ಅಭಿಪ್ರಾಯ (According to Specialists) ಮತ್ತು ಸರ್ಕಾರದ ಅಧ್ಯಯನಗಳು ಏನು ಹೇಳುತ್ತವೆ:
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (2022):
COVID-19 ಲಸಿಕೆ ಮತ್ತು ಹಠಾತ್ ಮರಣಗಳ ನಡುವೆ ಯಾವುದೇ ನೇರ ಸಂಬಂಧವಿಲ್ಲ ಎಂಬುದನ್ನು ICMR ಮತ್ತು NCDC ಅಧ್ಯಯನಗಳು ದೃಢಪಡಿಸಿವೆ.
ಭಾರತೀಯ ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ. ಗಂಭೀರ ಪಾರ್ಶ್ವ ಪರಿಣಾಮಗಳು ಅತ್ಯಂತ ಅಪರೂಪ.
ಹಠಾತ್ ಹೃದಯ ಮರಣಗಳ ಪ್ರಮುಖ ಕಾರಣಗಳು (Causes) ಯಾವುವು?:
ಜನ್ಯುವಿಕ ಅಂಶಗಳು
ಅಸ್ವಸ್ಥ ಜೀವನಶೈಲಿ
ಹಿಂದಿನ ಆರೋಗ್ಯ ಸಮಸ್ಯೆಗಳು
COVID ನಂತರದ ಜಟಿಲತೆಗಳು
ಸಾರ್ವಜನಿಕರಿಗಾಗಿ ಮುಖ್ಯ ಮಾಹಿತಿ:
18–45 ವರ್ಷದವರಲ್ಲಿ ಹಠಾತ್ ಮರಣಗಳ ನಿಖರ ಕಾರಣ ಪತ್ತೆಹಚ್ಚಲು ಎರಡು ಪ್ರತ್ಯೇಕ ಅಧ್ಯಯನಗಳು (Superate researches) ನಡೆಯುತ್ತಿವೆ,
1. ಹಿಂದಿನ ಡೇಟಾ ಆಧಾರಿತ ವಿಶ್ಲೇಷಣೆ
2. ನೈಜ-ಕಾಲ ತನಿಖಾ ಅಧ್ಯಯನ
ಸಾರ್ವಜನಿಕರಿಗಾಗಿ ಮುಖ್ಯ ಮಾಹಿತಿ:
ವೈದ್ಯಕೀಯ ತಜ್ಞರು ನೀಡಿರುವ ಎಚ್ಚರಿಕೆ ಪ್ರಕಾರ, ಈ ಅಂಕಿಅಂಶಗಳು ನಮ್ಮಲ್ಲಿ ಆರೋಗ್ಯ ಜಾಗೃತಿ (Health awareness) ಮೂಡಿಸಬೇಕು.
ಹೃದಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು,
ನಿಯಮಿತ ವ್ಯಾಯಾಮ ಮಾಡುವುದು,
ಆರೋಗ್ಯಕರ ಆಹಾರ ಪದ್ಧತಿ (Diet) ಅಳವಡಿಸಿಕೊಳ್ಳುವುದು,
ಒತ್ತಡ ನಿಯಂತ್ರಣಕ್ಕೆ ಗಮನ ಹರಿಸುವುದು,
ಇವು ಹಠಾತ್ ಮರಣಗಳ ಅಪಾಯವನ್ನು ಕಡಿಮೆ ಮಾಡಬಲ್ಲವು.
ಒಟ್ಟಾರೆಯಾಗಿ, NCRB ವರದಿ ಭಾರತದಲ್ಲಿ ಹಠಾತ್ ಮರಣಗಳ ಏರಿಕೆಯನ್ನು ಗಂಭೀರವಾಗಿ ಎತ್ತಿ ತೋರಿಸಿದೆ. ವಿಶೇಷವಾಗಿ ಹೃದಯಾಘಾತವು ಮುಖ್ಯ ಕಾರಣವಾಗಿರುವುದರಿಂದ, ಜನರು ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕಿದೆ. ಸರಿಯಾದ ಜೀವನಶೈಲಿ (Currect Lifestyle) ಹಾಗೂ ಸಮಯಕ್ಕೆ ತಕ್ಕ ವೈದ್ಯಕೀಯ ತಪಾಸಣೆಗಳು ಮಾತ್ರ ಈ ಅಪಾಯವನ್ನು ತಗ್ಗಿಸಬಹುದು.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




