WhatsApp Image 2025 12 31 at 4.41.53 PM

BREAKING: ರಾಜ್ಯದಲ್ಲಿ 2026ರ ರಜೆ ಪಟ್ಟಿಗೆ ರಾಜ್ಯ ಸರ್ಕಾರ ಅಧಿಕೃತ ಮುದ್ರೆ; ಒಟ್ಟು 20 ದಿನ ಸರ್ಕಾರಿ ರಜೆಗಳು.!

WhatsApp Group Telegram Group

ಬೆಂಗಳೂರು: ರಾಜ್ಯ ಸರ್ಕಾರವು 2026ನೇ ಸಾಲಿನ ಸಾರ್ವತ್ರಿಕ ರಜೆಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಮುಖ್ಯಮಂತ್ರಿಗಳ ಅನುಮೋದನೆಯ ಮೇರೆಗೆ ಹೊರಡಿಸಲಾದ ಈ ಆದೇಶದಲ್ಲಿ, ರಾಜ್ಯದ ಸರ್ಕಾರಿ ನೌಕರರಿಗೆ ಒಟ್ಟು 20 ದಿನಗಳ ಸಾರ್ವತ್ರಿಕ ರಜೆ ಹಾಗೂ 21 ದಿನಗಳ ಪರಿಮಿತ ರಜೆಗಳನ್ನು (Restricted Holidays) ನೀಡಲಾಗಿದೆ. ರಾಜ್ಯ ಸರ್ಕಾರದ ಅಧಿಕೃತ ಪ್ರತಿಗಳು ಲೇಖನದ ಕೊನೆಯ ಭಾಗದಲ್ಲಿವೆ ಅಲ್ಲಿ ನೀವು ವೀಕ್ಷಿಸಬಹುದು

ಭಾನುವಾರ ಮತ್ತು ಎರಡನೇ ಶನಿವಾರದ ರಜೆಗಳ ವಿವರ

ಸಾಮಾನ್ಯವಾಗಿ ಹಬ್ಬಗಳು ಭಾನುವಾರ ಅಥವಾ ಎರಡನೇ ಶನಿವಾರ ಬಂದರೆ ನೌಕರರಿಗೆ ಹೆಚ್ಚುವರಿ ರಜೆ ಸಿಗುವುದಿಲ್ಲ. 2026ರಲ್ಲಿ ಈ ಕೆಳಗಿನ ಹಬ್ಬಗಳು ರಜಾ ದಿನಗಳಂದೇ ಬಂದಿವೆ:

ಭಾನುವಾರ/ಶನಿವಾರ ಬರುವ ರಜೆಗಳ ವಿವರ

ಹಬ್ಬದ ಹೆಸರು ದಿನಾಂಕ ಮತ್ತು ದಿನ
ಮಹಾ ಶಿವರಾತ್ರಿ February 15 (ಭಾನುವಾರ)
ಮಹಾಲಯ ಅಮವಾಸ್ಯೆ October 10 (2ನೇ ಶನಿವಾರ)
ಮಹರ್ಷಿ ವಾಲ್ಮೀಕಿ ಜಯಂತಿ October 25 (ಭಾನುವಾರ)
ಕನ್ನಡ ರಾಜ್ಯೋತ್ಸವ November 1 (ಭಾನುವಾರ)
ನರಕ ಚತುರ್ದಶಿ November 8 (ಭಾನುವಾರ)

ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವ ಸ್ಥಳೀಯ ರಜೆಗಳು

ಕೊಡಗು ಜಿಲ್ಲೆಯ ಸಾಂಸ್ಕೃತಿಕ ಹಬ್ಬಗಳಿಗಾಗಿ ವಿಶೇಷವಾಗಿ ಮೂರು ದಿನಗಳ ಸ್ಥಳೀಯ ರಜೆಯನ್ನು ಘೋಷಿಸಲಾಗಿದೆ:

ಕೊಡಗು ಜಿಲ್ಲೆಯ ಸ್ಥಳೀಯ ರಜೆಗಳು – 2026

ಹಬ್ಬದ ಹೆಸರು ದಿನಾಂಕ ಮತ್ತು ವಾರ
ಕೈಲ್ ಮುಹೂರ್ತ September 03, 2026 (ಗುರುವಾರ)
ತುಲಾ ಸಂಕ್ರಮಣ October 18, 2026 (ಭಾನುವಾರ)
ಹುತ್ತರಿ ಹಬ್ಬ November 26, 2026 (ಗುರುವಾರ)

ಆಡಳಿತಾತ್ಮಕ ಸೂಚನೆಗಳು

ಸರ್ಕಾರದ ಆದೇಶದಂತೆ, ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳು ಮುಚ್ಚಿರುತ್ತವೆ. ಆದರೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಜರೂರು ಕೆಲಸಗಳನ್ನು ನಿರ್ವಹಿಸಲು ಇಲಾಖಾ ಮುಖ್ಯಸ್ಥರು ಸೂಕ್ತ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ.

WhatsApp Image 2025 12 31 at 4.23.00 PM
WhatsApp Image 2025 12 31 at 4.23.01 PM
WhatsApp Image 2025 12 31 at 4.23.02 PM
WhatsApp Image 2025 12 31 at 4.23.03 PM
WhatsApp Image 2025 12 31 at 4.23.03 PM 1
WhatsApp Image 2025 12 31 at 4.23.04 PM

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories