CASTE CENSUS

ಕರ್ನಾಟಕದಲ್ಲಿ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ 2025: ಆನ್‌ಲೈನ್‌ನಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಅವಕಾಶ

Categories:
WhatsApp Group Telegram Group

ಕರ್ನಾಟಕದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ-2025 (Social and Educational Survey – 2025) ಕಾರ್ಯ ಜಾರಿಯಲ್ಲಿದೆ. ಸಮಾಜದ ನಿಜವಾದ ಸ್ಥಿತಿಗತಿ, ಆರ್ಥಿಕ ಹಿನ್ನಲೆ, ಶೈಕ್ಷಣಿಕ ಪ್ರಗತಿ ಹಾಗೂ ವಿವಿಧ ಸಮುದಾಯಗಳ ಸಾಮಾಜಿಕ ಬಲಾಬಲವನ್ನು ಅರ್ಥಮಾಡಿಕೊಳ್ಳಲು ಈ ಸಮೀಕ್ಷೆ ಪ್ರಮುಖ ಪಾತ್ರವಹಿಸಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಸರ್ಕಾರ (State Government) ಈಗಾಗಲೇ ಸಮೀಕ್ಷಾ ಸಿಬ್ಬಂದಿ ಮೂಲಕ ಮನೆಮನೆಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಆದರೆ, ಎಲ್ಲರಿಗೂ ಸುಲಭವಾಗುವಂತೆ ಸಾರ್ವಜನಿಕರು ತಮ್ಮದೇ ಮೊಬೈಲ್‌ ಫೋನ್ ಅಥವಾ ಕಂಪ್ಯೂಟರ್ (Mobile phone or Computer) ಮೂಲಕ ಆನ್‌ಲೈನ್‌ನಲ್ಲಿ ಸಮೀಕ್ಷೆಯಲ್ಲಿ ನೇರವಾಗಿ ಭಾಗವಹಿಸುವ ಅವಕಾಶವನ್ನು ಕೂಡ ಕಲ್ಪಿಸಿದೆ.

ಈ ಮೂಲಕ ಪ್ರತಿಯೊಬ್ಬ ನಾಗರಿಕರು ತಮ್ಮ ಮಾಹಿತಿಯನ್ನು ತಾವೇ ಸುರಕ್ಷಿತವಾಗಿ ಸಲ್ಲಿಸಲು ಸಾಧ್ಯವಾಗುತ್ತದೆ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಯಶಸ್ಸಿಗೆ ನಿಮ್ಮ ಭಾಗವಹಿಸುವಿಕೆ ಅತ್ಯಂತ ಮುಖ್ಯ.

ಆನ್‌ಲೈನ್‌ನಲ್ಲಿ (Online) ಭಾಗವಹಿಸಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು?:

ವೆಬ್‌ಸೈಟ್‌ಗೆ ಭೇಟಿ ನೀಡಿ:
https://kscbcselfdeclaration.karnataka.gov.in
ನಂತರ ವೆಬ್‌ಸೈಟ್‌ನಲ್ಲಿ “Citizen” (ನಾಗರಿಕ) ಆಯ್ಕೆ ಮಾಡಬೇಕು.
ಮೊಬೈಲ್ ನಂಬರವನ್ನು ನಮೂದಿಸಿ OTP ಪಡೆದು ಲಾಗಿನ್ ಮಾಡಬೇಕು.
ಹೊಸ ಸಮೀಕ್ಷೆ ಆರಂಭಿಸಿ ಮೇಲೆ ಕ್ಲಿಕ್ ಮಾಡಿ.
ನಿಮ್ಮ UHID (Unique Household ID) ಸಂಖ್ಯೆಯನ್ನು ನಮೂದಿಸಿ ಪರಿಶೀಲಿಸಿ.
UHID ಇಲ್ಲದಿದ್ದರೆ “I don’t have UHID” ಕ್ಲಿಕ್ ಮಾಡಿ.
ನಂತರ HESCOM Account Number ನಮೂದಿಸಬಹುದು.
ಸಮೀಕ್ಷೆಯಲ್ಲಿ ಭಾಗವಹಿಸುವವರ ಫೋಟೋ ಅಪ್ಲೋಡ್ ಮಾಡಬೇಕು.
ನಂತರ ಪಡಿತರ ಚೀಟಿ ಸಂಖ್ಯೆ ಅಥವಾ ಆಧಾರ್ ಸಂಖ್ಯೆ ನಮೂದಿಸಿ.
ಆಧಾರ್ ಆಯ್ಕೆ ಮಾಡಿದಲ್ಲಿ OTP ಅಥವಾ QR ಮುಖಾಂತರ Face Capture ಮಾಡಬಹುದು.
ಎಲ್ಲಾ ವಿವರಗಳನ್ನು ನಮೂದಿಸಿದ ನಂತರ “Get Data” ಕ್ಲಿಕ್ ಮಾಡಿ ಮುಂದುವರೆಯಬೇಕು.

ಅಗತ್ಯ ದಾಖಲೆಗಳು ಕೆಳಗಿನಂತಿವೆ:

UHID / MESCOM Account Number
ಚುನಾವಣಾ ಗುರುತಿನ ಚೀಟಿ (Voter ID)
ಪಡಿತರ ಚೀಟಿ ಸಂಖ್ಯೆ / ಆಧಾರ್ ಕಾರ್ಡ್

ಒಟ್ಟಾರೆಯಾಗಿ, ಸಾರ್ವಜನಿಕರು ಸಮೀಕ್ಷೆದಾರರನ್ನು ಕಾಯಬೇಕಿಲ್ಲ. ತಮ್ಮ ಮೊಬೈಲ್‌ ಮೂಲಕವೇ(With only mobile) ಸರಳ ಹಂತಗಳಲ್ಲಿ ಸಮೀಕ್ಷಾ ಅರ್ಜಿ ಭರ್ತಿ ಮಾಡಿ, ರಾಜ್ಯದ ಸಮಗ್ರ ಅಭಿವೃದ್ಧಿಗೆ ತಾವೂ ಸಹಭಾಗಿಗಳಾಗಬಹುದು.

WhatsApp Image 2025 09 05 at 11.51.16 AM 11

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories