ಇವತ್ತಿನಿಂದ (ಜುಲೈ 1 ರಿಂದ) ಸಿಮ್ ಬದಲಾಯಿಸುವ ಮತ್ತು ನಂಬರ್ ಪೋರ್ಟ್ ವಿಷಯದಲ್ಲಿ ಕೂಡ ಹೊಸ ನಿಯಮಗಳು!
ಜುಲೈ 1 ರಿಂದ ದೇಶಾದ್ಯಂತ ಹೊಸ ನಿಯಮಗಳು ಜಾರಿಯಾಗಲಿವೆ ಎಂಬ ಸುದ್ದಿಯನ್ನು ಕೇಳಿರಿತ್ತೀರಿ. ಹೌದು, ಇಂದಿನಿಂದ ವಿವಿಧ ರೀತಿಯ ಅನೇಕ ಹೊಸ ನಿಯಮಗಳು ಜಾರಿಯಾಗಲಿವೆ. ಹಾಗೆಯೇ ಸಿಮ್ ಬದಲಾಯಿಸುವ ಮತ್ತು ನಂಬರ್ ಪೋರ್ಟ್ ಮಾಡುವ (New guidelines for sim swapping and MNP) ವಿಚಾರದಲ್ಲಿ ಕೂಡ ಇಂದಿನಿಂದ (ಜುಲೈ 1 ರಿಂದ) ಹೊಸ ನಿಯಮಗಳು(new rules) ಜಾರಿಯಲ್ಲಿರುತ್ತವೆ. ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಸಿಮ್ ಕಾರ್ಡ್ ಮತ್ತು ನಂಬರ್ ಬದಲಾವಣೆ ಯಲ್ಲಿ ಹೊಸ ನಿಯಮ (new rules) :
ಇಂದು ಹಲವಾರು ಜನರು ತಮ್ಮ ಸಿಮ್ ಗೆ ನಂಬರ್ (number) ಗಳನ್ನು ಬಡಲಾಯಿಸುತ್ತಾ ಇರುತ್ತಾರೆ. ಸಿಮ್ ಕಾರ್ಡ್ ಬದಲಾವಣೆ ಮತ್ತು ಮೊಬೈಲ್ ನಂಬರ್ ಪೋರ್ಟ್ ಮಾಡುವ ವಿಚಾರದಲ್ಲಿ ನಿಯಮಗಳ ಬದಲಾವಣೆ ಆಗಿದೆ. ದೂರವಾಣಿ ನಿಯಂತ್ರಣ ಪ್ರಾಧಿಕಾರ ಟ್ರಾಯ್ (Telephone Regulatory Authority Troy), ಇತ್ತೀಚೆಗೆ ಹೆಚ್ಚುತ್ತಿರುವ ಸಿಮ್ ಕಾರ್ಡ್ ಹಗರಣಗಳನ್ನು ನಿಯಂತ್ರಿಸುವ ಉದ್ದೇಶದಿಂದ ಕೆಲ ನಿಯಮಗಳನ್ನು ಜಾರಿಗೆ ಗೊಳಿಸಿದೆ. ಈ ನಿಯಮದ ಪ್ರಕಾರ ಜುಲೈ 1ರ ಬಳಿಕ ಸಿಮ್ ಕಾರ್ಡ್ ಬದಲಾಯಿಸುವುದಾಗಲಿ ಅಥವಾ ಮೊಬೈಲ್ ನಂಬರ್ ಪೋರ್ಟ್ ಮಾಡುವ ಕೆಲಸವಾಗಲಿ ಕಷ್ಟವಾಗಲಿದೆ. ಹೊಸ ಸಿಮ್ ಗೆ ಮೊಬೈಲ್ ನಂಬರ್ ಅನ್ನು ಪೋರ್ಟ್ ಮಾಡಲು ಬಯಸಿದರೆ, ಅವರು ಏಳು ದಿನವಾದರೂ ಕಾಯಬೇಕಾಗುತ್ತದೆ.
ಈ ಕ್ರಮ ಅಥವಾ ನಿಯಮ ಜಾರಿಗೊಳಿಸುವ ಉದ್ದೇಶ (purpose) :
ದೇಶಾದ್ಯಂತ ಸಿಮ್ ಸ್ವ್ಯಾಪಿಂಗ್ (sim swapping) ಹಗರಣಗಳು, ಮೊಬೈಲ್ ನಂಬರ್ ದುರುಪಯೋಗಡಿಸಿಕೊಳ್ಳುವುದು (Misuse of mobile number) ಇತ್ಯಾದಿ ವಂಚನೆಗಳು ನಡೆಯುತ್ತಿವೆ. ಇದನ್ನು ತಡೆಯಲು ಟ್ರಾಯ್ ಈ ನಿಯಮಗಳನ್ನು ಜಾರಿಗೊಳಿಸಿದೆ. ಆದರೆ, ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಅಧಿಕೃತವಾಗಿ ಕಾರಣ ನೀಡಿಲ್ಲ. ದೂರಸಂಪರ್ಕ ಇಲಾಖೆ ಹಾಗೂ ಹಲವು ಸಂಘ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ಹೊಸ ನಿಯಮಗಳನ್ನು ತರಲಾಗಿದೆ ಎಂದು ತಿಳಿಸಿದೆ.
ಸಿಮ್ ಕಾರ್ಡ್ ಕಳೆದು ಕೊಂಡವರು ಅನುಸರಿಸಬೇಕಾದ ನಿಯಮಗಳು (Rules to be followed by those who have lost their SIM card) :
ಈಗಿರುವ ನಿಯಮದ ಪ್ರಕಾರ, ಸಿಮ್ ಕಾರ್ಡ್ ಕಳೆದುಹೋದರೆ ಕೂಡಲೇ ಸಿಮ್ ಬ್ಲಾಕ್ ಮಾಡಿಸಿ, ಹೊಸ ಸಿಮ್ ಅನ್ನು ಪಡೆದು ಆಕ್ಟಿವೇಟ್ ಮಾಡಿಸಬಹುದು. ಅಥವಾ ಹೊಸ ಸಿಮ್ ಖರೀದಿಸಿದ ಬಳಿಕ ಹಳೆಯ ಸಿಮ್ ಮರಳಿಸಿ ಹೊಸದಕ್ಕೆ ನಂಬರ್ ಆಕ್ಟಿವೇಟ್ (activate) ಮಾಡಿಸಬಹುದು. ಈಗ ಈ ನಿಯಮದಲ್ಲಿ ಟ್ರಾಯ್ ಬದಲಾವಣೆ ಮಾಡಿದೆ. ಹೊಸ ಸಿಮ್ ಪಡೆದು ಅದಕ್ಕೆ ಹಿಂದಿನ ಸಿಮ್ ನಂಬರ್ ಅನ್ನು ಪೋರ್ಟ್ ಮಾಡಲು ಕನಿಷ್ಠ ಏಳು ದಿನವಾದರೂ ಕಾಯಬೇಕಾಗುತ್ತದೆ.
ಸಿಮ್ ಬದಲಾವಣೆಯಲ್ಲಿ ಯೂನಿಕ್ ಪೋರ್ಟಿಂಗ್ ಕೋಡ್ (unique porting code) ಅಥವಾ ಯುಪಿಸಿ ಕೋಡ್ (UPC code) :
ಸಿಮ್ ಬದಲಾಯಿಸುವಾಗ ಟೆಲಿಕಾಂ ಆಪರೇಟಿಂಗ್ ಕಂಪನಿಗಳು ಯೂನಿಕ್ ಪೋರ್ಟಿಂಗ್ ಕೋಡ್ ಅಥವಾ ಯುಪಿಸಿ ಕೋಡ್ ಅನ್ನು ನೀಡುತ್ತವೆ. ಇದು ಮೊಬೈಲ್ ನಂಬರ್ ಅನ್ನು ಬೇರೆ ಸಿಮ್ ಗೆ ವರ್ಗಾಯಿಸುವ ಕಾರ್ಯದ ಮೊದಲ ಹಂತವಾಗಿರುತ್ತದೆ. ಈ ಎಂಟು ಅಂಕಿಗಳ ಕೋಡ್ ಅನ್ನು ಹಾಕಿದ ಬಳಿಕ ಮೊಬೈಲ್ ನಂಬರ್ ಅನ್ನು ಬೇರೆ ಸಿಮ್ ಗೆ ಪೋರ್ಟ್ ಮಾಡಬಹುದು. ಇಲ್ಲಿ ಹೊಸ ನಿಯಮದ ಪ್ರಕಾರ ಸಿಮ್ ನಿಷ್ಕ್ರಿಯಗೊಂಡು ಏಳು ದಿನಗಳವರೆಗೆ ಟೆಲಿಕಾಂ ಆಪರೇಟರ್ ಗಳು ಯುಪಿಸಿ ಕೋಡ್ ಅನ್ನು ಒದಗಿಸುವಂತಿಲ್ಲ ಎನ್ನುವ ನಿಯಮವನ್ನು ಟ್ರಾಯ್ ತಿಳಿಸಿದೆ.
ಈ ತಿದ್ದುಪಡಿ ನಿಯಮಗಳು ಮೋಸದ ಸಿಮ್ ಸ್ವಾಪ್ / ಅಥವಾ ಮೊಬೈಲ್ ನಂಬರ್ ದುರುಪಯೋಗ ಪಡುಸಿಕೊಳ್ಳುವ ಮುಂತಾದ ತೊಂದರೆಗಳಿಂದ ಚಂದಾದಾರರು ತೊಂದರೆಗೆ ಒಳಗಾಗುವುದನ್ನು ತಪ್ಪಿಸುವುದಕ್ಕಾಗಿ ಮೊಬೈಲ್ ಸಂಖ್ಯೆಗಳ ಪೋರ್ಟಿಂಗ್ ಮೂಲಕ ವಂಚನೆಯನ್ನು ನಿಗ್ರಹಿಸುವ ಗುರಿಯನ್ನು ಹೊಂದಿವೆ ಎಂದು ಟ್ರಾಯ್ ಹೇಳಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




