Picsart 25 11 21 22 11 32 323 scaled

ಸಿದ್ದರಾಮಯ್ಯ vs ಡಿಕೆಶಿ ಅಧಿಕಾರ ಸಮರ: ಕಾಂಗ್ರೆಸ್ ಹೈಕಮಾಂಡ್ ಮುಂದಿನ ಹೆಜ್ಜೆ ಏನು?

Categories: ,
WhatsApp Group Telegram Group

ಕರ್ನಾಟಕ ರಾಜಕೀಯ ಇದೀಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ನಾಯಕತ್ವ ಹೋರಾಟ ದೆಹಲಿ ವರೆಗೂ ಸಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಮುಂದೆ ನಿರ್ಣಾಯಕ ನಿರ್ಧಾರ ಮಾಡುವ ಒತ್ತಡ ಹೆಚ್ಚಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

2023ರ ಚುನಾವಣೆಯಲ್ಲಿ ಗಟ್ಟಿಯಾದ ಗೆಲುವು ಕಂಡ ಕಾಂಗ್ರೆಸ್ ಈಗ 2ವರೇ ವರ್ಷ ಪೂರೈಸಿದ ನಂತರ ನಾಯಕತ್ವ ಬದಲಾವಣೆಯ ಚರ್ಚೆಯಲ್ಲಿ ಸಿಲುಕಿರುವುದು ಪಕ್ಷದ ಒಳಗಿನ ಅಸಮಾಧಾನವನ್ನು ಹೊರತರುತ್ತಿದೆ. ವಿಶೇಷವಾಗಿ, 2023ರಲ್ಲಿ ಸರ್ಕಾರ ರಚನೆಯಾಗುವ ಸಮಯದಲ್ಲಿಯೇ ಸಿಎಂ ಸ್ಥಾನ ಹಂಚಿಕೆ ಕುರಿತಾಗಿ ಗೌಪ್ಯ ಒಪ್ಪಂದ ನಡೆದಿತ್ತು ಎಂದು ಹೇಳಲಾಗುತ್ತಿರುವುದು ಈಗ ಚರ್ಚೆಗೆ ಬಂದಿದೆ.

ಈ ನಡುವೆ, ಬಿಹಾರ ಚುನಾವಣಾ ಸೋಲು ಕಾಂಗ್ರೆಸ್‌ಗೆ ದೊಡ್ಡ ರಾಜಕೀಯ ಎಚ್ಚರಿಕೆಯ ಗಂಟೆಯಾಗಿದ್ದು, ಹೈಕಮಾಂಡ್ ಈಗ ಯಾವುದೇ ರೀತಿಯ ರಾಜಕೀಯ ಸಾಹಸಕ್ಕೆ ಸಿದ್ಧವಾಗಿಲ್ಲ. ಇದೇ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಡೆದಿರುವ ಸಿಎಂ ಕುರ್ಚಿ ಮಾತುಕತೆ ಈಗ ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿದೆ.

ಡಿಕೆಶಿ ದೆಹಲಿಯಲ್ಲಿ ಏನು ಕೇಳಿದ್ದಾರೆ?:

ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಹಾಗೂ ಸೋನಿಯಾ ಗಾಂಧಿ ನಾಯಕರೊಂದಿಗೆ ನಡೆದ ಸಭೆಯಲ್ಲಿ, ಡಿಕೆ ಶಿವಕುಮಾರ್ ತಮ್ಮ ಸಿಎಂ ಹಕ್ಕು ಪ್ರತಿಪಾದಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ, ಹೈಕಮಾಂಡ್ ಈಗಲೇ ನಾಯಕತ್ವ ಬದಲಾವಣೆ ಮಾಡಲು ಸಮ್ಮತಿಸದ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ಪ್ಲಾನ್ ಬಿ ಅಡಿ, ಡಿಕೆಶಿ ತಮ್ಮ ನಾಲ್ಕು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಡಿಕೆ ಶಿವಕುಮಾರ್ ಅವರ ಬೇಡಿಕೆಗಳು:

1.ಡಿಸಿಎಂ ಮತ್ತು ಕೆಪಿಸಿಸಿ ಸ್ಥಾನದಲ್ಲಿ ಯಾವುದೇ ಬದಲಾವಣೆ ಬೇಡ:
ಉಪ ಮುಖ್ಯಮಂತ್ರಿ ಸ್ಥಾನ ಉಳಿಯಬೇಕು.
ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲೂ ಬದಲಾವಣೆ ಆಗಬಾರದು.
ಬೆಂಗಳೂರು ಅಭಿವೃದ್ಧಿ ಮತ್ತು ಜಲಸಂಪನ್ಮೂಲ ಖಾತೆ ಉಳಿಯಬೇಕು.
ಹೆಚ್ಚುವರಿ ಡಿಸಿಎಂ ಬೇಡ (ಜಾರ್ಕಿಹೊಳಿ ಮತ್ತು ಪರಮೇಶ್ವರ ಬೇಡಿಕೆಗಳಿಗೆ ವಿರೋಧ).
ಈ ಬೇಡಿಕೆಯ ಹಿಂದಿನ ಉದ್ದೇಶ, CM ಆಗದಿದ್ದರೂ ರಾಜ್ಯದಲ್ಲಿ ಅಧಿಕಾರದ ಹಿಡಿತ ಕಳೆದುಕೊಳ್ಳಬಾರದು ಎನ್ನುವುದು.

2. 2028ಕ್ಕೆ CM ಸ್ಥಾನ ಬೇಕು, ಬಾಯಿ ಮಾತಲ್ಲ, ಬರಹದ ಒಪ್ಪಂದ:
ಡಿಕೆಶಿಯ ಎರಡನೇ ಬೇಡಿಕೆ ಇಡೀ ಚರ್ಚೆಯ ಕೇಂದ್ರಬಿಂದುವಾಗಿದೆ. 2028ರ ಚುನಾವಣೆಯ ನಂತರ ಸಿಎಂ ಸ್ಥಾನ ಖಚಿತವಾಗಬೇಕು ಮತ್ತು ಇದಕ್ಕೆ ಲಿಖಿತ ಒಪ್ಪಂದ ಬೇಕು ಎಂದು ಒತ್ತಡ ಹಾಕುತ್ತಿದ್ದಾರೆ.
ಇದರಿಂದ ಅವರ ರಾಜಕೀಯ ಭವಿಷ್ಯ ಭದ್ರವಾಗುತ್ತದೆ. ಸಿದ್ದರಾಮಯ್ಯ ಬಣದ ಮೇಲೆ ಒತ್ತಡ ಹೇರಿದಂತೆ ಆಗುತ್ತದೆ. ಪಕ್ಷದೊಳಗಿನ ಸ್ಪಷ್ಟ ನಾಯಕತ್ವ ಕಾಣುತ್ತದೆ.

3. ಸಂಪುಟ ಪುನರ್‌ ರಚನೆಯಲ್ಲಿ 5 ಸಚಿವ ಸ್ಥಾನ ಡಿಕೆ ಬಣಕ್ಕೆ:
ನಿಕಟದ ಬೆಂಬಲಿಗರಿಗೆ ಸ್ಥಾನ ನೀಡುವ ಮೂಲಕ, ಸರ್ಕಾರದೊಳಗಿನ ತಮ್ಮ ರಾಜಕೀಯ ಬಲವನ್ನ ಮತ್ತಷ್ಟು ಗಟ್ಟಿಗೊಳಿಸುವುದು ಡಿಕೆಶಿಯ ಗುರಿ.

4. ಪಕ್ಷ ನಿರ್ಧಾರಗಳಲ್ಲಿ ಸಂಪೂರ್ಣ ಫ್ರೀ ಹ್ಯಾಂಡ್:
ಟಿಕೆಟ್ ಹಂಚಿಕೆ
ಸಂಘಟನಾ ಬದಲಾವಣೆ
2028ರ ಚುನಾವಣೆಗೆ ಮುನ್ನ, ತಮ್ಮ ನಿಷ್ಠಾವಂತರಿಗೆ ಟಿಕೆಟ್ ಕೊಡಿಸುವುದು, ವಿಧಾನಸಭಾ ಪಕ್ಷವನ್ನು ಹಿಡಿತದಲ್ಲಿ ಇಡುವ ರಾಜಕೀಯ ಲೆಕ್ಕಾಚಾರ.

ಸಿದ್ದರಾಮಯ್ಯ ಬಣದ ಪ್ರತಿಕ್ರಿಯೆ ಏನು?:

ಡಿಕೆಶಿಯ ಬೇಡಿಕೆಗಳನ್ನು ಸಿದ್ದರಾಮಯ್ಯ ಬಣ ಸುಲಭವಾಗಿ ಒಪ್ಪುವುದು ಕಷ್ಟ,  ಜಾರ್ಕಿಹೊಳಿ ಈಗಾಗಲೇ 2028ಕ್ಕೆ ಸಿಎಂ ಆಸೆ ವ್ಯಕ್ತಪಡಿಸಿದ್ದಾರೆ.
ಹೆಚ್ಚುವರಿ ಉಪಮುಖ್ಯಮಂತ್ರಿಗಾಗಿ ಒತ್ತಡ ಇದೆ.
ಸಿಎಂ ಗ್ಯಾರಂಟಿ ಒಪ್ಪಂದಕ್ಕೆ ಬಣ ವಿರೋಧಿಸುವ ಸಾಧ್ಯತೆ ಹೆಚ್ಚು ಹೀಗಾಗಿ, ಇದು ಒಂದು ರಾಜಕೀಯ ತೀರ್ಮಾನವಷ್ಟೇ ಬೃಹತ್ ಅಧಿಕಾರ ಸಮರವೂ ಹೌದು.

ಒಟ್ಟಾರೆಯಾಗಿ, ದೆಹಲಿಯ ಚರ್ಚೆಗಳು ಈಗ ನಿರ್ಣಾಯಕ ಹಂತ ತಲುಪಿದ್ದು, ಹೈಕಮಾಂಡ್ ಡಿಕೆಶಿಯ ಬೇಡಿಕೆಗಳಿಗೆ ಸಂಪೂರ್ಣ ಒಪ್ಪುತ್ತದೆಯೇ? ಬೇರೆ ಮಾರ್ಗ ಹುಡುಕುತ್ತದೆಯೇ? ಅಥವಾ ಹೊಸ ನಾಯಕತ್ವ ಮಾದರಿಯನ್ನು ತರಲಿದೆಯೇ? ಅದರಲ್ಲೂ ಕಾಂಗ್ರೆಸ್‌ನ ಮುಂದಿನ 2 ವರ್ಷಗಳ ಭವಿಷ್ಯದ ದಿಕ್ಕು ಈ ಒಂದೇ ನಿರ್ಧಾರದಿಂದ ನಿರ್ಧಾರವಾಗಲಿದೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories