ಭಾರತೀಯ ರಿಸರ್ವ್ ಬ್ಯಾಂಕ್ (RBI) ನೀಡಿರುವ 2025ರ ಸೆಪ್ಟೆಂಬರ್ ತಿಂಗಳ ಬ್ಯಾಂಕ್ ರಜಾ ಕ್ಯಾಲೆಂಡರ್ ಪ್ರಕಾರ, ದೇಶದ ವಿವಿಧ ಭಾಗಗಳಲ್ಲಿ ಒಟ್ಟು 15 ದಿನಗಳು ಬ್ಯಾಂಕುಗಳು ಮುಚ್ಚಿರುತ್ತವೆ. ವಿವಿಧ ರಾಜ್ಯಗಳಲ್ಲಿ ಆಚರಿಸಲಾಗುವ ಹಬ್ಬಗಳು ಮತ್ತು ಸಂಪ್ರದಾಯಗಳ ಆಧಾರದ ಮೇಲೆ ಈ ರಜೆಗಳು ನಿಗದಿಯಾಗಿವೆ. ಕರ್ನಾಟಕದಲ್ಲಿ ಈ ತಿಂಗಳು ಭಾನುವಾರ ಮತ್ತು ಶನಿವಾರದ ನಿಯಮಿತ ರಜೆಗಳನ್ನು ಒಳಗೊಂಡು ಒಟ್ಟು 7 ದಿನಗಳ ರಜೆ ಇದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ದೇಶಾದ್ಯಂತದ ಬ್ಯಾಂಕ್ ರಜಾದಿನಗಳು (ಸೆಪ್ಟೆಂಬರ್ 2025):
- Sep 3, ಬುಧವಾರ: ಕರ್ಮಪೂಜೆ (ಜಾರ್ಖಂಡ್‌ನಲ್ಲಿ ಮಾತ್ರ)
- Sep 4, ಗುರುವಾರ: ಓಣಂ (ಕೇರಳದಲ್ಲಿ ಮಾತ್ರ)
- Sep 5, ಶುಕ್ರವಾರ: ಈದ್-ಎ-ಮಿಲಾದ್ (ದೇಶದ ಹಲವು ಭಾಗಗಳಲ್ಲಿ)
- Sep 6, ಶನಿವಾರ: ಇಂದ್ರಜಾತ್ರ (ಸಿಕ್ಕಿಂ ಮತ್ತು ಛತ್ತೀಸ್ಗಢದಲ್ಲಿ ಮಾತ್ರ)
- Sep 7, ಭಾನುವಾರ: ನಿಯಮಿತ ರಜೆ
- Sep 13, ಶನಿವಾರ: ಎರಡನೇ ಶನಿವಾರದ ರಜೆ
- Sep 14, ಭಾನುವಾರ: ನಿಯಮಿತ ರಜೆ
- Sep 21, ಭಾನುವಾರ: ನಿಯಮಿತ ರಜೆ
- Sep 27, ಶನಿವಾರ: ನಾಲ್ಕನೇ ಶನಿವಾರದ ರಜೆ
- Sep 28, ಭಾನುವಾರ: ನಿಯಮಿತ ರಜೆ
- Sep 29, ಸೋಮವಾರ: ದುರ್ಗಾ ಪೂಜಾ (ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಾದಲ್ಲಿ ಮಾತ್ರ)
- Sep 30, ಮಂಗಳವಾರ: ದುರ್ಗಾಷ್ಟಮಿ (ಒಡಿಶಾ ಮತ್ತು ಇತರ ಕೆಲವು ರಾಜ್ಯಗಳಲ್ಲಿ)
ಕರ್ನಾಟಕದಲ್ಲಿ ಬ್ಯಾಂಕ್ ರಜಾದಿನಗಳು:
ಕರ್ನಾಟಕದ ಬ್ಯಾಂಕುಗಳು ಸೆಪ್ಟೆಂಬರ್ 2025 ರಲ್ಲಿ ಈ ಕೆಳಗಿನ ದಿನಗಳಲ್ಲಿ ಮುಚ್ಚಿರುತ್ತವೆ:
- Sep 5, ಶುಕ್ರವಾರ: ಈದ್-ಎ-ಮಿಲಾದ್
- Sep 7, ಭಾನುವಾರ: ನಿಯಮಿತ ರಜೆ
- Sep 13, ಶನಿವಾರ: ಎರಡನೇ ಶನಿವಾರದ ರಜೆ
- Sep 14, ಭಾನುವಾರ: ನಿಯಮಿತ ರಜೆ
- Sep 21, ಭಾನುವಾರ: ನಿಯಮಿತ ರಜೆ
- Sep 27, ಶನಿವಾರ: ನಾಲ್ಕನೇ ಶನಿವಾರದ ರಜೆ
- Sep 28, ಭಾನುವಾರ: ನಿಯಮಿತ ರಜೆ
ಗಮನಿಸಬೇಕಾದ ಅಂಶಗಳು:
ರಜೆಯ ದಿನಗಳಲ್ಲಿ ಬ್ಯಾಂಕ್ ಕಚೇರಿಗಳು ಮುಚ್ಚಿರುತ್ತವೆ. ಆದರೆ, ಆನ್‌ಲೈನ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಎಟಿಎಂ ಸೇವೆಗಳು ಸಾಮಾನ್ಯವಾಗಿ ಲಭ್ಯವಿರುತ್ತವೆ. ನಗದು ಠೇವಣಿ, ಡಿಮ್ಯಾಂಡ್ ಡ್ರಾಫ್ಟ್, ಆರ್‌ಟಿಜಿಎಸ್ ಮುಂತಾದ ಕೆಲವು ನಿರ್ದಿಷ್ಟ ಸೇವೆಗಳಿಗಾಗಿ ಬ್ಯಾಂಕ್ ಕಚೇರಿಗೆ ಭೇಟಿ ನೀಡುವುದು ಅಗತ್ಯವಾಗಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.