ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಸೆಪ್ಟೆಂಬರ್ 1 ರಿಂದ ಯಾವ ನಿಯಮಗಳಲ್ಲಿ ಬದಲಾವಣೆ ಆಗಲಿವೆ ಎಂಬುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಯಾವುದೆಲ್ಲರ ಮೇಲೆ ಹೊಸ ನಿಯಮ ಬದಲಾವಣೆ ಆಗಿದೆ?, ಈ ಬದಲಾವಣೆಗಳು ಜನಸಾಮಾನ್ಯರ ಮೇಲೆ ಹೇಗೆ ಪರಿಣಾಮ ಬೀರಲಿವೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಸೆಪ್ಟೆಂಬರ್ 1 ರಿಂದ ನಿಯಮ ಬದಲಾವಣೆ:
ಸೆಪ್ಟೆಂಬರ್ ತಿಂಗಳು ನಾಳೆಯಿಂದ ಪ್ರಾರಂಭವಾಗಲಿದೆ ಮತ್ತು ಪ್ರತಿ ತಿಂಗಳಂತೆ, ಸೆಪ್ಟೆಂಬರ್ 2023 ಸಹ ಅನೇಕ ಬದಲಾವಣೆಗಳನ್ನು ತರುತ್ತಿದೆ. ಇದು ನಿಮ್ಮ ಜೇಬಿನ ಮೇಲೆ ನೇರವಾಗಿ ಕೂಡಾ ಪರಿಣಾಮ ಬೀರಬಹುದು. ಗ್ಯಾಸ್ ಸಿಲಿಂಡರ್ (LPG ಬೆಲೆ), ನೌಕರರ ಸಂಬಳ ಮತ್ತು ಆಧಾರ್ ಲಿಂಕ್ ಸೇರಿದಂತೆ ಕೆಲವು ನಿಯಮಗಳನ್ನೂ ಸೂಚಿಸಿದ್ದಾರೆ. ಇಷ್ಟೇ ಅಲ್ಲ, ದೇಶದ ಹಲವು ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸಲು ಸೆಪ್ಟೆಂಬರ್ ತಿಂಗಳು ಗಡುವು ಕೂಡ ಆಗಿದೆ. ಆದ್ದರಿಂದ ಯಾವ ನಿಯಮಗಳು ಬದಲಾಗಲಿವೆ ಎಂಬುದನ್ನು ನೀವು 1 ನೇ ದಿನಾಂಕದ ಮೊದಲು ತಿಳಿದಿರಬೇಕಾಗುತ್ತದೆ. ಮತ್ತು ಅದರ ಜೊತೆ ನಾಳೆಯಿಂದ ದೇಶದಲ್ಲಿ ಏನೆಲ್ಲಾ ಬದಲಾವಣೆಯಾಗಲಿದೆ ಎಂದು ತಿಳಿದುಕೊಳ್ಳೋಣ.
2,000 ರೂಪಾಯಿ ನೋಟು ಬದಲಿಸಲು ಕೊನೆಯ ದಿನಾಂಕ:
ದೇಶದಲ್ಲಿ ಈಗ ಚಾಲ್ತಿ ಅಲ್ಲಿ ಇರುವ 2,000 ರೂಪಾಯಿಗಳ ಗುಲಾಬಿ ನೋಟುಗಳನ್ನು ಬದಲಾಯಿಸಲು ಸೆಪ್ಟೆಂಬರ್ ವರೆಗೆ ಮಾತ್ರ ಕೊನೆಯ ಸಮಯವಿದೆ. ಇದರ ಗಡುವು 30 ಸೆಪ್ಟೆಂಬರ್ 2023 ರಂದು ಕೊನೆಯಾಗುತ್ತದೆ. ಮತ್ತು ಸಾಧ್ಯವಾದಷ್ಟು ಬೇಗ ಈ ಕೆಲಸವನ್ನು ಮಾಡಿ. ಏಕೆಂದರೆ ಈ ತಿಂಗಳ ನಂತರ ನಿಮಗೆ ಅವಕಾಶ ಸಿಗದೆ ಇರಬಹುದು ನೆನಪಿರಲಿ. ಸೆಪ್ಟೆಂಬರ್‌ನಲ್ಲಿ 16 ದಿನಗಳವರೆಗೆ ಬ್ಯಾಂಕುಗಳು ರಜೆಯಲ್ಲಿ ಇರುತ್ತವೆ. ನಂತರ ಈ ರಜಾದಿನಗಳಲ್ಲಿ 2000 ರೂಪಾಯಿ ನೋಟುಗಳನ್ನು ಬದಲಾಯಿಸುವ ಕೆಲಸವೂ ಆಗುವುದಿಲ್ಲ.
16 ದಿನಗಳವರೆಗೆ ಬ್ಯಾಂಕ್‌ಗಳಲ್ಲಿ ಯಾವುದೇ ಕೆಲಸ ನೆರವೇರುವುದಿಲ್ಲಾ :
ಹೌದು ನೀವು ಏನಾದರೂ ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸಗಳು ಇದ್ದರೆ ಅದು ಬೇಗನೆ ಆಗುವುದಿಲ್ಲ ಎಂದು ತಿಳಿದು ಬಿಡಿ. ಏಕೆಂದರೆ ಇಡೀ ತಿಂಗಳಲ್ಲಿ 16 ದಿನ ಬ್ಯಾಂಕ್ ರಜೆ ಇರುತ್ತದೆ. ಬ್ಯಾಂಕ್ ರಜೆ ಪಟ್ಟಿಯನ್ನು RBI ಈಗ ಆಗಲೇ ಬಿಡುಗಡೆ ಮಾಡಿದೆ. ವಿವಿಧ ರಾಜ್ಯಗಳಲ್ಲಿ ನಡೆಯುವ ಹಬ್ಬಗಳು ಮತ್ತು ಕಾರ್ಯಕ್ರಮಗಳಿಗೆ ಅನುಗುಣವಾಗಿ ಈ ಬ್ಯಾಂಕ್ ರಜಾದಿನಗಳು ಬದಲಾಗಬಹುದು. ಇವುಗಳಲ್ಲಿ ಭಾನುವಾರ ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರದ ರಜಾದಿನಗಳು ಕೂಡಾ ಸೇರಿವೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
LPG ಸಿಲಿಂಡರ್ ಬೆಲೆಗಳು :
ಪ್ರತಿ ತಿಂಗಳ ಮೊದಲನೆಯ ದಿನ, ತೈಲ ಮತ್ತು ಅನಿಲ ವಿತರಣಾ ಕಂಪನಿಗಳು ದೇಶದಲ್ಲಿ ಅನಿಲ ಬೆಲೆಗಳನ್ನು ಬದಲಾಯಿಸುತ್ತವೆ, ಅದು ತಿಳಿದೇ ಇದೆ. ಅದರಿಂದ ಸೆಪ್ಟೆಂಬರ್ 1 ರಲ್ಲೂ ಕೂಡಾ ನಾವು ಬದಲಾವಣೆಗಳನ್ನು ಕಾಣಬಹುದು. ಆದರೆ, ಇಲ್ಲಿ ಒಂದು ಸಮಾಧಾನದ ವಿಚಾರ ಆಗಿದೆ. ಅದೇನೆಂದರೆ ಗೃಹಬಳಕೆಯ LPG ಸಿಲಿಂಡರ್ ಬೆಲೆಗೆ ಬಿಗ್ ರಿಲೀಫ್ ನೀಡುವ ಮೂಲಕ ಕೇಂದ್ರ ಸರ್ಕಾರ ಸಮಾಧಾನದ ಸುದ್ದಿ ನೀಡಿದೆ.
ಹೌದು,LPG ಸಿಲಿಂಡರ್‌ಗಳ ಮೇಲೆ 200 ರೂ.ಗಳ ಸಬ್ಸಿಡಿಯನ್ನು ಘೋಷಿಸಿದೆ. ಉಜ್ವಲ ಯೋಜನೆಯ ಫಲಾನುಭವಿಗಳು ಈಗಾಗಲೇ ಪಡೆಯುತ್ತಿರುವ ರೂ.200 ಸಹಾಯಧನದ ಜೊತೆಗೆ ಈ ಪ್ರಯೋಜನವನ್ನು ಕೂಡಾ ಪಡೆಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಈ ಯೋಜನೆಯ ಫಲಾನುಭವಿಗಳು ಪ್ರತಿ ಸಿಲಿಂಡರ್‌ಗೆ 400 ರೂ. ಪಡೆಯುತ್ತಾರೆ. 14.2 ಕೆಜಿ LPG ಸಿಲಿಂಡರ್ ಬೆಲೆಯನ್ನು 200 ರೂ ಕಡಿಮೆ ಮಾಡಿದೆ. ಮತ್ತು ಇವುಗಳಲ್ಲಿ ಯಾವುದೇ ಬದಲಾವಣೆಯು ಆದರೆ ನೇರವಾಗಿ ಸಾಮಾನ್ಯರ ಪಾಕೆಟ್ ಮನಿಯನ್ನು ಹೆಚ್ಚಿಸುತ್ತದೆ ಅಥವಾ ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ತಿಳಿಯಬಹುದು.
ಪಡಿತರ ಚೀಟಿ ಆಧಾರ್ ನೊಂದಿಗೆ ಲಿಂಕ್:
ಪಡಿತರ ಚೀಟಿ ಹೊಂದಿರುವವರು ಆಧಾರ್ ಕಾರ್ಡ್ ನೊಂದಿಗೆ ಕಡ್ಡಾಯವಾಗಿ ಲಿಂಕ್ ಮಾಡಬೇಕಾಗುತ್ತದೆ.
ಈ ಹಿಂದೆ ಪಡಿತರ ಚೀಟಿಯನ್ನು ಆಧಾರದೊಂದಿಗೆ ಲಿಂಕ್ ಮಾಡಲು ಜೂನ್ 30ರ ತನಕ ಕೊನೆಯ ದಿನಾಂಕ ಮಾಡಿದ್ದರು. ಆದರೆ ಕೇಂದ್ರ ಸರ್ಕಾರವು ಈಗ ಅದರ ಗಡುವನ್ನು ವಿಸ್ತರಿಸಿದೆ. ಇದೇ ಸಪ್ಟಂಬರ್ 30ರ ತನಕ ಕೊನೆಯ ಗಡುವನ್ನು ವಿಸ್ತರಿಸಿದೆ. ಆದರಿಂದ ಪಡಿತರ ಚೀಟಿ ಹೊಂದಿದವರು ಆಧಾರ್ ಲಿಂಕ್ ಅನ್ನು ತಪ್ಪದೆ ಮಾಡಿಸಿ. ಇದೇ ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿದೆ. ಮತ್ತು ನಿಗದಿ ಪಡಿಸಿದ ಕೊನೆಯ ದಿನಾಂಕದ ಒಳಗೆ ತಮ್ಮ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಕೊಳ್ಳಿ.
LPG ಯಿಂದ CNG ಗೆ ಹೊಸ ದರಗಳನ್ನು ಬಿಡುಗಡೆ ಮಾಡಲಾಗುವುದು:
ಹೌದು, ಇದರೊಂದಿಗೆ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು CNG ಮತ್ತು PNG ಗೆ ಪ್ರತಿ ತಿಂಗಳ ಮೊದಲನೆಯ ದಿನದಲ್ಲಿ ಏನೆಂದು ತಿಳಿಸುತ್ತದೆ.ಈ ಬಾರಿ CNG PNG ಬೆಲೆಗಳು ಕಡಿತಗೊಳ್ಳಬಹುದು ಎಂದು ನಂಬಬಹುದಾಗಿದೆ.
ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ :
ಆಕ್ಸಿಸ್ ಬ್ಯಾಂಕ್‌ನ ಪ್ರಸಿದ್ಧ ಮ್ಯಾಗ್ನಸ್ ಕ್ರೆಡಿಟ್ ಕಾರ್ಡ್ ಸೆಪ್ಟೆಂಬರ್ 1 ರಿಂದ ಬದಲಾಗಲಿದೆ. ಹೌದು,ಈ ಬದಲಾವಣೆಗಳ ನಂತರ, ಗ್ರಾಹಕರು ಮೊದಲಿಗಿಂತ ಕಡಿಮೆ ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯುತ್ತಾರೆ. ಇದರೊಂದಿಗೆ, ಕೆಲವು ವಹಿವಾಟುಗಳಲ್ಲಿ, ಗ್ರಾಹಕರು ಮುಂದಿನ ತಿಂಗಳಿನಿಂದ ವಿಶೇಷ ರಿಯಾಯಿತಿಗಳ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದರೊಂದಿಗೆ ಗ್ರಾಹಕರು 1ನೇ ದಿನಾಂಕದಿಂದ ವಾರ್ಷಿಕ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ.
ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group








