SBIF ಆಶಾ ಸ್ಕಾಲರ್‌ಶಿಪ್ ಪ್ರೋಗ್ರಾಂ 2024 ಭವಿಷ್ಯದ ಶಿಕ್ಷಣಕ್ಕಾಗಿ ಹೊಸ ದಾರಿ ಎಂದೇ ಹೇಳಬಹುದಾಗಿದೆ. ಹೌದು ಭಾರತದಲ್ಲಿ ಶಿಕ್ಷಣವು ಆರ್ಥಿಕ ಹಿನ್ನೆಲೆಯಿಂದ ಮುಂದಿನ ತಲೆಮಾರಿನ ಸಾಧನೆಗೆ ಪ್ರಮುಖ ಅಡಿಗಲ್ಲು ಆಗಿದೆ. ದೇಶಾದ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶಗಳನ್ನು ಒದಗಿಸಲು ಎಸ್‌ಬಿಐ ಫೌಂಡೇಶನ್(SBI Foundation), SBIF ಆಶಾ ಸ್ಕಾಲರ್‌ಶಿಪ್ ಪ್ರೋಗ್ರಾಂ(SBIF Asha Scholarship Programm) 2024 ಅನ್ನು ಪ್ರಾರಂಭಿಸಿದೆ. ಇದು ಭಾರತದ ಅತಿದೊಡ್ಡ ವಿದ್ಯಾರ್ಥಿವೇತನ ಕಾರ್ಯಕ್ರಮಗಳಲ್ಲಿ ಒಂದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
SBIF ಆಶಾ ಸ್ಕಾಲರ್‌ಶಿಪ್ ಪ್ರೋಗ್ರಾಂ 2024:
ಈ ಪ್ರೋಗ್ರಾಂ, ಎಸ್‌ಬಿಐ ಫೌಂಡೇಶನ್‌ನ (SBIF Asha Scholarship Programm)”ಇಂಟಿಗ್ರೇಟೆಡ್ ಲರ್ನಿಂಗ್ ಮಿಷನ್ (ILM)” ಅಡಿಯಲ್ಲಿ ಪ್ರಾರಂಭಿಸಲಾಯಿತು, ಇದು 6ರಿಂದ 12ನೇ ತರಗತಿವರೆಗೆ ಮತ್ತು ಉನ್ನತ NIRF ರ‍್ಯಾಂಕಿಂಗ್‌ಗಳ ವಿಶ್ವವಿದ್ಯಾಲಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅರ್ಥಸಹಾಯವನ್ನು ಒದಗಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಯತ್ನಗಳನ್ನು ಮುಂದುವರೆಸಲು ಐಎನ್‌ಆರ್ 7.5 ಲಕ್ಷದವರೆಗೆ ಆರ್ಥಿಕ ಬೆಂಬಲ ಪಡೆಯಬಹುದು.
ಅರ್ಜಿದಾರರ ಅರ್ಹತೆ:
ಭಾರತೀಯ ಪ್ರಜೆಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹ.
6ರಿಂದ 12ನೇ ತರಗತಿ ಹಾಗೂ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿಸಲ್ಲಿಸಬಹುದು.
ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 75% ಅಂಕಗಳನ್ನು ಗಳಿಸಿರಬೇಕು.
ಕುಟುಂಬದ ವಾರ್ಷಿಕ ಆದಾಯ INR 3,00,000 ಮಿತಿಯೊಳಗಿರಬೇಕು.
50% ಮೀಸಲಾತಿ ಮಹಿಳಾ ವಿದ್ಯಾರ್ಥಿಗಳಿಗೆ ನೀಡಲಾಗಿದ್ದು, ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
SBIF ಆಶಾ ವಿದ್ಯಾರ್ಥಿವೇತನ ಕಾರ್ಯಕ್ರಮ 2024 – ಪ್ರಶಸ್ತಿ ವಿವರಗಳು:
6 ರಿಂದ 12ನೇ ತರಗತಿವರೆಗೆ: ತಲಾ 15,000 ರೂ.
ಪದವಿಪೂರ್ವ ವಿದ್ಯಾರ್ಥಿಗಳಿಗೆ: INR 50,000 ವರೆಗೆ.
ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ: INR 70,000 ವರೆಗೆ.
IIT ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ: INR 2,00,000 ವರೆಗೆ.
IIM ಗಳಲ್ಲಿ MBA ಕೋರ್ಸ್‌ಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗೆ: INR 7,50,000 ವರೆಗೆ.
ಆವಶ್ಯಕ ದಾಖಲೆಗಳು:
ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿ.
ಸರ್ಕಾರ ನೀಡಿದ ಗುರುತಿನ ಪುರಾವೆ (ಆಧಾರ್ ಕಾರ್ಡ್).
ಪ್ರಸ್ತುತ ವರ್ಷದ ಶುಲ್ಕ ರಶೀದಿ.
ಬನಫೈಡ್ ಪ್ರಮಾಣಪತ್ರ.
ಅರ್ಜಿದಾರರ ಅಥವಾ ಪೋಷಕರ ಬ್ಯಾಂಕ್ ಖಾತೆ ವಿವರಗಳು.
ಆದಾಯದ ಪುರಾವೆ.
ಅರ್ಜಿದಾರರ ಭಾವಚಿತ್ರ.
ಜಾತಿ ಪ್ರಮಾಣಪತ್ರ (ಅನ್ವಯವಾಗುವಲ್ಲಿ).
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 01, 2024.
ಅರ್ಜಿಯನ್ನು ಹೀಗೆ ಸಲ್ಲಿಸಿ :
ಹಂತ 1: ಮೊದಲು, ಅಧಿಕೃತ ವೆಬ್‌ಸೈಟ್ ಗೆ (Official Website) ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ https://www.sbifoundation.in/focus-area-detail/SBIF-Asha-Scholarship
ಹಂತ 2: ನಂತರ ನೋಂದಣಿಯನ್ನು ಮಾಡಿಕೊಳ್ಳಿ. ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
ಹಂತ 3: ಅಭ್ಯರ್ಥಿಗಳು ಫೋಟೋ, ಸಹಿ, ಹುಟ್ಟಿದ ದಿನಾಂಕದ ದಾಖಲೆ, ಗುರುತಿನ ಪುರಾವೆ, ಅಗತ್ಯ ಅರ್ಹತೆಯ ಮಾರ್ಕ್‌ಶೀಟ್, ವರ್ಗ ಪ್ರಮಾಣಪತ್ರ (ಅನ್ವಯಿಸಿದರೆ). ಹೀಗೆ ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು
ಹಂತ 5: ಅರ್ಜಿ ಶುಲ್ಕವನ್ನು ಪಾವತಿಸಿ.(ಅನ್ವಯಿಸಿದಲ್ಲಿ)
ಹಂತ 5: ಸಂಪೂರ್ಣ ಅರ್ಜಿ ನಮೂನೆಯನ್ನು ಪೂರ್ವವೀಕ್ಷಿಸಲು ಮತ್ತು ಪರಿಶೀಲಿಸಲು ಪೂರ್ವವೀಕ್ಷಣೆ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಹಂತ 6: ಅಂತಿಮ ಸಲ್ಲಿಕೆ ಮೊದಲು, ಅಗತ್ಯವಿದ್ದಲ್ಲಿ ವಿವರಗಳನ್ನು ಮಾರ್ಪಡಿಸಿ ಮತ್ತು ನೀವು ಭರ್ತಿ ಮಾಡಿದ ಫೋಟೋ, ಸಹಿ ಮತ್ತು ಇತರ ವಿವರಗಳನ್ನು ಪರಿಶೀಲಿಸಿದ ನಂತರ ಮತ್ತು ಖಚಿತಪಡಿಸಿದ ನಂತರವೇ ಅಂತಿಮ ಸಲ್ಲಿಕೆ ಮಾಡಿ.
ಇನ್ನೂ ಕೊನೆಯದಾಗಿ ಹೇಳುವುದಾದರೆ,SBIF ಆಶಾ ಸ್ಕಾಲರ್‌ಶಿಪ್ ಪ್ರೋಗ್ರಾಂ 2024, ಯುವ ಪ್ರತಿಭೆಗಳ ಭವಿಷ್ಯವನ್ನು ರೂಪಿಸಲು ಒಂದು ಪ್ರಮುಖ ಹೆಜ್ಜೆ. ಈ ಪ್ರೋಗ್ರಾಂ ಮೂಲಕ, ಸಮಾಜದ ಹಿಂದುಳಿದ ವರ್ಗಗಳಿಗೆ ಸುಧಾರಿತ ಶಿಕ್ಷಣದ ಅಂಗಳವನ್ನು ಸೃಷ್ಟಿಸಲಾಗುತ್ತಿದೆ, ಇದು ಅವರಿಗೆ ಬೆಳವಣಿಗೆಗೆ ಅವಶ್ಯಕವಾದ ಬದಲಾವಣೆಗಳನ್ನೂ ತರುತ್ತದೆ.ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




