ಎಸ್‌ಬಿಐ ಡಿಜಿಟಲ್ ಸೇವೆ ಉತ್ತೇಜಿಸಲು 10 ಸಾವಿರ ಉದ್ಯೋಗಿಗಳ ನೇಮಕಾತಿ(Recruitment)ಗೆ ಸಿದ್ಧತೆ:
2024–25 ಆರ್ಥಿಕ ವರ್ಷದ ಇಂದಿನ ಅವಧಿಯಲ್ಲಿ, ಭಾರತ ದೇಶದ ಪ್ರಮುಖ ಸರ್ಕಾರಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ತನ್ನ ಬ್ಯಾಂಕಿಂಗ್(Banking) ಮತ್ತು ತಂತ್ರಜ್ಞಾನ ಸೇವೆಗಳನ್ನು (Technology services) ಇನ್ನಷ್ಟು ಉತ್ತಮಪಡಿಸಲು 10 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಿಸಲು ನಿರ್ಧರಿಸಿದೆ. ಈ ನೇಮಕಾತಿಯ ಮೂಲಕ, ಬ್ಯಾಂಕ್ ತನ್ನ ದೈನಂದಿನ ಕಾರ್ಯವಿಧಾನದಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಿಸುವ ಮತ್ತು ಡಿಜಿಟಲ್ ಸೇವೆಗಳನ್ನು (Digital services) ಬಲಪಡಿಸುವ ತೊಡಗಿಸಿಕೊಂಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ತಂತ್ರಜ್ಞಾನ ಆಧಾರಿತ ಸೇವೆಗಳಿಗೆ ಹೆಚ್ಚು ಒತ್ತು:
SBI ಅಧ್ಯಕ್ಷ ಸಿ.ಎಸ್. ಸೆಟ್ಟಿಯವರ ಪ್ರಕಾರ, ಈ ನೇಮಕಾತಿಯು ತಂತ್ರಜ್ಞಾನ ವಿಭಾಗದ ಉದ್ಯೋಗಿಗಳನ್ನು ಪ್ರಾಶಸ್ತ್ಯಕ್ಕೆ ತಂದು, ಗ್ರಾಹಕರಿಗೆ ಸಮರ್ಥ ಡಿಜಿಟಲ್ ಸೇವೆಗಳನ್ನು ಒದಗಿಸಲು ದೊಡ್ಡ ಹೆಜ್ಜೆ ಆಗಲಿದೆ. ತಂತ್ರಜ್ಞಾನ ವಿಭಾಗದಲ್ಲಿ ವಿಶೇಷ ಪ್ರವೃತ್ತಿಗಳನ್ನು ಹೊಂದಿದ ಡೇಟಾ ಸೈಂಟಿಸ್ಟ್ (Data scientist), ಡೇಟಾ ಆರ್ಕಿಟೆಕ್ಟ್ (Data architect) ಮತ್ತು ನೆಟ್‌ವರ್ಕ್ ಆಪರೇಟರ್ (Network operator) ಹುದ್ದೆಗಳ ನೇಮಕಾತಿಗೆ ಆದ್ಯತೆ ನೀಡಲಾಗುತ್ತದೆ.
ಸಾಮಾನ್ಯ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಹೂಡಿಕೆ ಪ್ರಮಾಣ ಹೆಚ್ಚಳ:
ಎಸ್‌ಬಿಐ (SBI) ತನ್ನ ಕಾರ್ಯಪಡೆಯ ಸಾಮರ್ಥ್ಯವನ್ನು ಹೆಚ್ಚಿಸಲು 1,500 ತಾಂತ್ರಿಕ ಉದ್ಯೋಗಿಗಳ ನೇಮಕಾತಿಗೆ ಇತ್ತೀಚೆಗೆ ಪ್ರಕಟಣೆ ನೀಡಿದೆ. ಉನ್ನತ ಮಟ್ಟದ ತಂತ್ರಜ್ಞಾನ ಸೇವೆಗಳನ್ನು (Technology services) ಗ್ರಾಹಕರಿಗೆ ನೀಡಲು ಬೇಕಾದ ಬಂಡವಾಳ ಹೂಡಿಕೆ ಹೆಚ್ಚಿಸಿ, ತಂತ್ರಜ್ಞಾನ ವಿಭಾಗದ ಮೂಲಭೂತ ಸೌಕರ್ಯಗಳಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿದೆ.
ಸೇವಾ ವಿಭಾಗದಲ್ಲಿ ಬೃಹತ್ ಹೂಡಿಕೆ:
2024ರ ಮಾರ್ಚ್ ಅಂತ್ಯಕ್ಕೆ ಎಸ್‌ಬಿಐಯಲ್ಲಿ(SBI) 2.32 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಇದ್ದಾರೆ. ಈ ಪೈಕಿ, 1.10 ಲಕ್ಷ ಉದ್ಯೋಗಿಗಳು ಗ್ರಾಹಕರಿಗೆ ಹಣಕಾಸು ಸೇವೆ ನೀಡುವಲ್ಲಿ ತೊಡಗಿಸಿಕೊಂಡಿದ್ದಾರೆ. ಎಸ್‌ಬಿಐ ಈ ಹೊಸ ನೇಮಕಾತಿಯ (SBI new Recruitment) ಮೂಲಕ ತಮ್ಮ ತಂತ್ರಜ್ಞಾನ ಸೇವಾ ಶ್ರೇಣಿಯನ್ನು ಹೆಚ್ಚಿಸಲು ಹೊರಟಿದ್ದು, ಇದರಿಂದ ಬ್ಯಾಂಕ್ ಗ್ರಾಹಕರಿಗೆ (Bank coustomers) ನಿರಂತರ ಮತ್ತು ಸಮರ್ಥ ಸೇವೆಯನ್ನು ನೀಡಲು ಸಿದ್ಧತೆ ಮಾಡಿಕೊಂಡಿದೆ.
ಎಸ್‌ಬಿಐ (SBI) ಈ ಪ್ರಕ್ರಿಯೆ ಮೂಲಕ ಬೃಹತ್ ಡಿಜಿಟಲ್ ಬದಲಾಗುವಿಕೆಯತ್ತ (Digital changes) ಹೆಜ್ಜೆ ಹಾಕಿದ್ದು, ತನ್ನ ಕಾರ್ಯವಿಧಾನವನ್ನು ಸ್ಮಾರ್ಟ್‌ಗೈಲು ಪ್ರಗತಿಪರ ತಂತ್ರಜ್ಞಾನ ಸೇವೆಗಳ ಮೂಲಕ ಗ್ರಾಹಕರಿಗೆ ತಲುಪಿಸಲು ಮುಂದಾಗಿದೆ. ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




