ಬೆಂಗಳೂರು STRR ಯೋಜನೆ: ದಕ್ಷಿಣ ಭಾರತದ ನಗರೀಕರಣಕ್ಕೆ ನೂತನ ದಿಕ್ಕು, 12 ಭಾಗಗಳ ಭೂಮಿಗೆ ಬಂಗಾರದ ಬೆಲೆ!

Picsart 25 07 04 23 20 14 5761

WhatsApp Group Telegram Group

ಬೆಂಗಳೂರನ್ನು ಭಾರತದ ತಂತ್ರಜ್ಞಾನ ರಾಜಧಾನಿಯಾಗಿ (Technology Capital) ಗುರುತಿಸಬಹುದಾದರೆ, ಚೆನ್ನೈ ದಕ್ಷಿಣ ಭಾರತದ ಪ್ರಮುಖ ಕೈಗಾರಿಕಾ ಹಾಗೂ ನೌಕಾ ದ್ವಾರವಾಗಿ ಗುರುತಾಗಿದೆ. ಈ ಎರಡು ನಗರಗಳು ವಿಭಿನ್ನ ಕ್ಷೇತ್ರಗಳಲ್ಲಿ ಪ್ರಗತಿಯ ಪಥದಲ್ಲಿ ಸ್ಪರ್ಧಿಸುತ್ತಲೇ ಇದ್ದರೂ, ಇವೆರಡರ ನಡುವೆ ಸುಗಮ ಸಂಪರ್ಕ ಕಲ್ಪಿಸುವ ಅಗತ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೇ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಕೈಗೊಂಡಿರುವ ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ (Satellite Town Ring Road – STRR) ಎಂಬ ಮಹತ್ವಾಕಾಂಕ್ಷಿ ಯೋಜನೆ, ನಗರೀಕರಣ, ಕೈಗಾರಿಕೀಕರಣ ಮತ್ತು ನಿರಂತರ ಸಾರಿಗೆ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿದೆ. ಹಾಗಿದ್ದರೆ ಯಾವೆಲ್ಲ ಭಾಗಗಳಲ್ಲಿ ಬೆಲೆ ಹೆಚ್ಚಾಗಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇದು ಕೇವಲ ರಸ್ತೆ ಮಾರ್ಗವಲ್ಲ. ಇದು ಭಾರತದ ದಕ್ಷಿಣ ಭಾಗದ ನಗರೀಕರಣದ ಹೊಸ ರೂಪರೇಖೆ, ಬೆಳೆದ ಮ್ಯೂಟ್ರೋಪಾಲಿಟನ್ ಪ್ರದೇಶಗಳ (Mutropalitan Regions) ಅವಶ್ಯಕತೆಗಳಿಗೆ ಉತ್ತರ ನೀಡುವ ದಾರಿ, ಮತ್ತು ಮುಂದಿನ ದಶಕದ ಇನ್‌ಫ್ರಾಸ್ಟ್ರಕ್ಚರ್ ವಿಸ್ತರಣೆಯ ಗೇಮ್ ಚೇಂಜರ್ ಆಗಿ ಗುರುತಿಸಬಹುದು.

ಹೌದು, ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ (Satellite Town Ring Road – STRR) ಎಂಬ ಬಹು ನಿರೀಕ್ಷಿತ ಎಕ್ಸ್‌ಪ್ರೆಸ್‌ವೇ ಯೋಜನೆ ಸಾಕಾರಗೊಳ್ಳುತ್ತಿದೆ. ಈ ಯೋಜನೆ ಕೇವಲ ರಸ್ತೆ ನಿರ್ಮಾಣವಲ್ಲ, ಇದು ಬೆಂಗಳೂರು ಸುತ್ತಮುತ್ತಲಿನ 12 ಪ್ರಮುಖ ಪ್ರದೇಶಗಳಿಗೆ ನೇರವಾಗಿ ಬಂಗಾರದ ಭೂಮಿಯನ್ನು ಉಂಟುಮಾಡುವ ಆರ್ಥಿಕ ಬದಲಾವಣೆ (Economic Changes) ಯಾತ್ರೆ.

ಯೋಜನೆಯ ವಿವರಗಳು ಹೀಗಿವೆ:

ಒಟ್ಟಾರೆ ಉದ್ದ:
243 ಕಿ.ಮೀ – ಕರ್ನಾಟಕದಲ್ಲಿ,
45 ಕಿ.ಮೀ – ತಮಿಳುನಾಡಿನಲ್ಲಿ,
ಒಟ್ಟಾರೆ 288 ಕಿ.ಮೀ ಉದ್ದದ ಎಕ್ಸ್‌ಪ್ರೆಸ್‌ವೇ ಆಗಿದ್ದು, ಇದು ಪರಿಪೂರ್ಣವಾಗಿ ನಿಯಂತ್ರಿತ ಪ್ರವೇಶವಿರುವ (controlled access) 4 ರಿಂದ 6 ಪಥದ ಹೆದ್ದಾರಿಯಾಗಲಿದೆ.

ವೆಚ್ಚ:

ಈ ಯೋಜನೆಯ ಅಂದಾಜಿತ ವೆಚ್ಚ ₹4,750 ಕೋಟಿ.
ಪೂರ್ಣಗೊಳ್ಳುವ ಕಾಲ:
2027 ರ ಒಳಗೆ ಈ ಯೋಜನೆಯು ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

ಯೋಜನೆಯ ಪ್ರಮುಖ ಉದ್ದೇಶಗಳು (Important purposes) ಹೀಗಿವೆ:

1. ಬೆಂಗಳೂರು ನಗರಕ್ಕೆ ಬೃಹತ್ ವಾಹನಗಳ ಪ್ರವೇಶ ತಡೆಯುವುದು, ಈ ಮೂಲಕ ನಗರ ಟ್ರಾಫಿಕ್ ಜಾಮ್ (Traffic jam) ಸಮಸ್ಯೆಗೆ ಪರಿಹಾರ ನೀಡುವುದು.
2. ಕೈಗಾರಿಕೆಗೆ ಪೂರಕ ವಾತಾವರಣ ನಿರ್ಮಿಸುವುದು, ವಿಶೇಷವಾಗಿ ಸಾಗಣೆ, ಆಮದು-ರಫ್ತು ವ್ಯಾಪಾರಗಳಿಗೆ ಸದುಪಯೋಗವಾಗುವಂತೆ ಮಾಡಲು.
3. ಬೆಂಗಳೂರಿನ ಸುತ್ತಲಿನ ಉಪನಗರಗಳ ಆರ್ಥಿಕ ಹಾಗೂ ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ (Infrastructure development) ಪುಷ್ಟಿ ನೀಡುವುದು.
4. ಬೆಂಗಳೂರನ್ನು 6 ರಾಷ್ಟ್ರೀಯ ಹೆದ್ದಾರಿಗಳು ಹಾಗೂ 8 ರಾಜ್ಯ ಹೆದ್ದಾರಿಗಳ ಮೂಲಕ ಸಂಪರ್ಕಿಸುವುದು.

ಬಂಗಾರದ ಬೆಲೆ ಆಗುತ್ತಿರುವ 12 ಪ್ರಮುಖ ಪ್ರದೇಶಗಳು:

ಈ ಯೋಜನೆಯು ಬೆಂಗಳೂರಿನ ಸುತ್ತಮುತ್ತಲಿನ ಬೃಹತ್ ಉಪನಗರಗಳ ಮೂಲಕ ಸಾಗಲಿದ್ದು, ಈ ಭಾಗಗಳಲ್ಲಿ ಈಗಾಗಲೇ ಭೂಮಿ ಹಾಗೂ ರಿಯಲ್ ಎಸ್ಟೇಟ್‌ಗೆ (property and real estate) ಭರ್ಜರಿ ಬೇಡಿಕೆ ಹೆಚ್ಚಾಗಿದೆ. ಈ ಯೋಜನೆಯ ಪ್ರಭಾವದಿಂದ ಇವುಗಳಲ್ಲಿ ಭೂಮಿಯ ಬೆಲೆ ಭವಿಷ್ಯದಲ್ಲಿ ಇನ್ನಷ್ಟು ಏರಿಕೆಯಾಗಲಿದೆಯೆಂದು ತಜ್ಞರು ಹೇಳಿದ್ದಾರೆ.

ಯಾವೆಲ್ಲ ಭಾಗಗಳಲ್ಲಿ ಬೆಲೆ ಹೆಚ್ಚಾಗಲಿದೆ:

1. ಹೊಸಕೋಟೆ
2. ದೇವನಹಳ್ಳಿ
3. ದೊಡ್ಡಬಳ್ಳಾಪುರ
4. ನೆಲಮಂಗಲ
5. ಕನಕಪುರ
6. ರಾಮನಗರ
7. ಅತ್ತಿಬೆಲೆ
8. ಆನೇಕಲ್
9. ಮಾಗಡಿ
10. ಸರ್ಜಾಪುರ
11. ಬಿಡದಿ
12. ದಾಬಸ್‌ಪೇಟೆ
ಈ ಪ್ರದೇಶಗಳಲ್ಲಿ ಈಗಾಗಲೇ ಹಲವಾರು ಐಟಿ ಪಾರ್ಕ್‌ಗಳು, ಕೈಗಾರಿಕಾ ಪ್ರದೇಶಗಳು, ಗೃಹ ನಿರ್ಮಾಣ ಯೋಜನೆಗಳು ಆರಂಭವಾಗಿದ್ದು, STRR ಯೋಜನೆಯು ಈ ವಿಸ್ತರಣೆಗೆ ವೇಗ ನೀಡಲಿದೆ.

ಈ ಯೋಜನೆಯಿಂದ ಆಗುವ ಲಾಭಗಳು (Profit’s) :

ರಿಯಲ್ ಎಸ್ಟೇಟ್ ಚಟುವಟಿಕೆಗಳು ಚುರುಕು: ಮನೆ, ಅಪಾರ್ಟ್‌ಮೆಂಟ್ ಹಾಗೂ ವಾಣಿಜ್ಯ ಕಟ್ಟಡಗಳ ಅಭಿವೃದ್ಧಿಗೆ ಇದು ಪೂರಕ.
ರೋಡ್ ಇನ್‌ಫ್ರಾಸ್ಟ್ರಕ್ಚರ್ (Road Infrastructure) ವಿಸ್ತರಣೆ: ರಾಜ್ಯದ ಮೂಲಭೂತ ಸೌಲಭ್ಯಗಳನ್ನು ವಿಸ್ತರಿಸಲು ಅನುಕೂಲ.
ಹೆಚ್ಚುವರಿ ಉದ್ಯೋಗಾವಕಾಶಗಳು: ನಿರ್ಮಾಣ ಹಾಗೂ ತದನಂತರದ ವಾಣಿಜ್ಯ ಚಟುವಟಿಕೆಗಳಿಂದ ಉದ್ಯೋಗ ಸಾಧ್ಯತೆಗಳು.
ತಮಿಳುನಾಡಿನ ಹೊಸೂರಿನೊಂದಿಗೆ ಜೋಡಣೆ: ಈ ಸಂಪರ್ಕದಿಂದ ತಂತ್ರಜ್ಞಾನ ಹಾಗೂ ಕೈಗಾರಿಕಾ ಸಹಕಾರಕ್ಕೆ ವೇದಿಕೆ ಸಿದ್ಧವಾಗಲಿದೆ.

ರಾಜಕೀಯ ಹಿನ್ನೆಲೆ (Political background) :

ಈ ಯೋಜನೆಯು ಮಾಜಿ ಪ್ರಧಾನಮಂತ್ರಿ ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಕನಸಿನ ಯೋಜನೆ ಎಂದು ಹೇಳಲಾಗಿದ್ದು, ಅವರು ಉತ್ತಮ ಸಂಪರ್ಕ ವ್ಯವಸ್ಥೆ ಹಾಗೂ ಕೈಗಾರಿಕಾ ವಿಸ್ತರಣೆಯ ಮಹತ್ವವನ್ನು ಬಹುಕಾಲದಿಂದ ತರಬೇಕು ಎಂದುಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.

ಒಟ್ಟಾರೆಯಾಗಿ, ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಯೋಜನೆಯು (Satalight Town ring road) ಕೇವಲ ರಸ್ತೆ ನಿರ್ಮಾಣ ಯೋಜನೆಯಲ್ಲ. ಇದು ಒಂದು ಆರ್ಥಿಕ ಶಕ್ತಿ ಕೇಂದ್ರವನ್ನು ರೂಪಿಸಲು ನಡೆಯುತ್ತಿರುವ ದಿಟ್ಟ ಹೆಜ್ಜೆ. ಭಾರತದ ದಕ್ಷಿಣ ಭಾಗದ ಮೆಗಾ ನಗರೀಕರಣದ ಹೆಜ್ಜೆ ಗುರುತು ಇದಾಗಲಿದೆ. ಭೂಮಿಯ ಬಂಗಾರದ ಬೆಲೆ ಈಗಾಗಲೇ ಆರಂಭವಾಗಿದ್ದು, ಮುಂದೆ ಇದರ ಮೌಲ್ಯವನ್ನು ಅಳೆಯುವುದು ಕಷ್ಟ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!