ಆರ್‌ಟಿಒ ಅಧಿಕಾರಿಗಳಿಗೆ(RTO Officer) ಎಟಿಎಸ್(ATS) ಕಡಿವಾಣ. ಇನ್‌ಸ್ಪೆಕ್ಟರ್‌ಗಳಿಲ್ಲದೆಯೇ ಆಗಲಿದೆ ಎಫ್‌ಸಿ(FC).
ಒಂದು ವಾಹನಕ್ಕೆ ಎಫ್‌ಸಿ ಮಾಡಿಸಬೇಕು ಅಂದರೆ ಆರ್‌ಟಿಒ ಅಧಿಕಾರಿಗಳು, ಮಧ್ಯವರ್ತಿಗಳ(Brokers) ಕಾಲು ಕೈ ಹಿಡಿದು ಅವರು ಕೇಳಿದಷ್ಟು ಹಣ ನೀಡಿ, ಎಫ್ ಸಿ ಯಶಸ್ವಿಗೆ ಆರ್‌ಟಿಒ ಕಚೇರಿಗೆ(RTO office) ದಿನನಿತ್ಯ ದರ್ಶನ ಕೊಡಲೇ ಬೇಕಿತ್ತು. ಆದರೆ ಇಂತಹ ಭ್ರಷ್ಟಬಾಕರ ದರ್ಪಕ್ಕೆಲ್ಲಾ ಇನ್ಮುಂದೆ ಎಟಿಎಸ್ ಕಡಿವಾಣ ಬೀಳಲಿದೆ. ಇದರಿಂದ ವಾಹನ ಸವಾರರು ನಿಟ್ಟುಸಿರು ಬಿಡಬಹುದು. ನಮ್ಮ ವ್ಯವಸ್ಥೆಯಲ್ಲಿ ಅಂಥದ್ದೇನು ಬದಲಾವಣೆಯಾಗುತ್ತಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಮೊದಲು ವಾಹನಗಳಿಗೆ ಎಫ್‌ಸಿ ಮಾಡಲು ಆರ್‌ಟಿಒ ಇನ್ಸ್‌ಪೆಕ್ಟರ್ ಗಳು(RTO Inspectors) ಇರುತ್ತಿದ್ದರು. ಇದರಿಂದ ವಾಹನ ಸವಾರರು ತಮ್ಮ ಹಣದ ಜತೆ, ಸಮಯವನ್ನೂ ವ್ಯಯಿಸಬೇಕಿತ್ತು. ಅಧಿಕಾರಿಗಳ ನಿರ್ಲಕ್ಷ್ಯ, ಲಂಚಗುಳಿತನದಿಂದ ಸವಾರರು ವ್ಯವಸ್ಥೆ ಬಗ್ಗೆ ರೋಸಿ ಹೋಗಿದ್ದರು. ಆದರೆ ಈಗ ಅದರ ಪರಿಪಾಟಲು ಇಲ್ಲ.
ಈಗ ಯಾವುದೇ ಇನ್ಸ್‌ಪೆಕ್ಟರ್, ಮಧ್ಯವರ್ತಿಗಳ ಹಾವಳಿಯಿಲ್ಲದೆ ಎಫ್‌ಸಿ ಮಾಡಲು ಸಾರಿಗೆ ಇಲಾಖೆ Automatic Testing Station (ATS) ತೆರೆದು ಸವಾರರ ಸ್ನೇಹಿಯಾಗಿದೆ.
ಇದೇ ಮೊದಲ ಬಾರಿಗೆ ಬೆಂಗಳೂರಿನ ನೆಲಮಂಗಲ ಆರ್‌ಟಿಒಗಳಲ್ಲಿ ಎಟಿಎಸ್ ಸೆಂಟರ್(ATC center) ತೆರೆಯಲಾಗಿದೆ. ಸವಾರರು ತಮ್ಮ ವಾಹನವನ್ನು ಸೆಂಟರ್ ಗಳಿಗೆ ತೆಗೆದುಕೊಂಡು ಹೋಗಿ, ಎಟಿಎಸ್ ಮಷಿನ್‌ಗಳೇ ವಾಹನಗಳ ಪಾಸ್ ಅಥವಾ ಫೇಲ್ ಸರ್ಟಿಫಿಕೇಟ್ ನೀಡುತ್ತವೆ.
ಇದರಿಂದ ನಿಮ್ಮ ಅಲೆದಾಟ, ಹಣ, ಸಮಯ ಎಲ್ಲವೂ ಉಳಿತಾಯ. ಈಗ ಗಂಟೆ ಗಟ್ಟಲೆ ಕಾಯುವ ಕೆಲಸಕ್ಕೆ ಗುಡ್ ಬೈ ಹೇಳಿ, ಯಾಕೆಂದರೆ ವಾಹನ ತೆಗೆದುಕೊಂಡ ಹೋದ ಕೇವಲ ಹತ್ತು ನಿಮಿಷಗಳಲ್ಲಿ ಎಫ್‌ಸಿ ಆಗುತ್ತದೆ. ವಾಹನಗಳ ಗುಣಮಟ್ಟದ ಫಲಿತಾಂಶ ನಿಮ್ಮ ಕೈಗೆ ಸಿಗುತ್ತದೆ.
ರೂಲ್ಸ್ ಪ್ರಕಾರ, ಹಳದಿ ಬೋರ್ಡ್(Yellow board) ಇರುವ ಹೊಸ ವಾಹನಗಳಿಗೆ 7 ವರ್ಷದ ಒಳಗೆ, ಎರಡು ವರ್ಷಕ್ಕೊಮ್ಮೆ ತಪ್ಪದೇ ಎಫ್‌ಸಿ ಮಾಡಿಸಬೇಕು. ಏಳು
ವರ್ಷ ಕಳೆದ(After seven years) ಮೇಲೆ ವಾಹನಗಳಿಗೆ ಪ್ರತಿವರ್ಷ ಕಡ್ಡಾಯ ಎಫ್‌ಸಿ ಮಾಡಿಸಬೇಕು. ವೈಟ್ ಬೋರ್ಡ್ ವಾಹನಗಳಿಗೆ 15 ವರ್ಷಕ್ಕೊಮ್ಮೆ ಎಫ್‌ಸಿ ಮಾಡಿಸಬೇಕು. 15 ವರ್ಷ ಕಳೆದ ನಂತರ 5 ವರ್ಷಕೊಮ್ಮೆ ಎಫ್‌ಸಿ ಮಾಡಿಸಬೇಕು.
ಎಫ್‌ಸಿ ತಪಾಸಣೆ ಪಟ್ಟಿ ಹೀಗಿದೆ :
ಎಂಜಿನ್ ಸೌಂಡ್, ವೆಹಿಕಲ್ ವೈಬ್ರೇಷನ್, ಹೊಗೆ ತಪಾಸಣೆ, ಇಂಜಿನ್ ಆಯಿಲ್ ಫಿಟ್ಟೆಸ್, ಸ್ಪೀಡ್ ಗವರ್ನರ್, ಹೆಡ್ ಲೈಟ್ ವೈಪರ್, ಹಾರನ್ ಬ್ರೇಕ್, ಲೈಟ್ಸ್ ಬಾಡಿ, ಡೆಟೋರೆಟೆಡ್ ಟೈರ್ ತಪಾಸಣೆ ಮಾಡಲಾಗುತ್ತದೆ.
ಅಕ್ರಮಗಳಿಗೆ ಎಟಿಎಸ್ ಕಡಿವಾಣ :
ವಾಹನ ಸವಾರರು ಎಫ್‌ಸಿ ಮಾಡಿಸಲು ಹೋದರೆ ಆರ್‌ಟಿಒ ಇನ್ಸ್‌ಪೆಕ್ಟರ್‌ಗಳು ಮತ್ತು ಮಧ್ಯವರ್ತಿಗಳು ಸೇರಿಕೊಂಡು ವಾಹನದ ಗುಣಮಟ್ಟ ಸರಿಯಿದ್ದರೂ ಇಲ್ಲಸಲ್ಲದ ಕುಂಟು ನೆಪಗಳನ್ನು ಹೇಳಿ ಎಫ್‌ಸಿ ಫೇಲ್ ಎಂದು ಸರ್ಟಿಫಿಕೇಟ್ ನೀಡುತ್ತಿದ್ದರು. ಅದು ಪಾಸ್ ಆಗಬೇಕೆಂದರೆ ಅವರು ಕೇಳಿದಷ್ಟು ಹಣ ನೀಡಬೇಕಿತ್ತು. ಕೊಡಲ್ಲ ಅಂದರೆ ವಾಹನಗಳನ್ನು ಹಿಡಿದು ಅಲೆದಾಡಿಸುತ್ತಿದ್ದರು.
ಅದರೆ ಎಟಿಎಸ್ ಮಷಿನ್(ATS machine) ಅಧಿಕಾರಿಗಳ ಉಪಕ್ರಮಕ್ಕೆ ಬ್ರೇಕ್ ಹಾಕಿದೆ. ಈ ಮಷಿನ್ ಸ್ಥಳದಲ್ಲೇ ವಾಹನ ಸವಾರರಿಗೆ ಎಫ್‌ಸಿ ಸರ್ಟಿಫಿಕೇಟ್(FC Certificate) ಕೊಡುತ್ತದೆ. ಅದ್ದರಿಂದ ನಾವೆಲ್ಲರೂ ಎಟಿಎಸ್ ತಂತ್ರಜ್ಞಾನಕ್ಕೆ ಒಂದು ಧನ್ಯವಾದ ಹೇಳುವ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




