ಸ್ಥಿರ ದೂರವಾಣಿ ಸೇವೆಯಲ್ಲಿ ಬಿಎಸ್ಎನ್ಎಲ್ಹಿಂದಿಕ್ಕಿದ ಜಿಯೋ ಅಗ್ರಸ್ಥಾನದಲ್ಲಿ
ನವದೆಹಲಿ,19 ಅಕ್ಟೋಬರ್ 2022: ಹೆಸರಾಂತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಆಗಸ್ಟ್‌ನಲ್ಲಿ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ನ್ನು ಹಿಂದಿಕ್ಕಿದೆ. ಈ ಮೂಲಕ ದೇಶದ ಅತಿದೊಡ್ಡ ಸ್ಥಿರ ದೂರವಾಣಿ ಸೇವೆಯ ಪೂರೈಕೆದಾರರಾನಾಗಿ ಹೊರಹೊಮ್ಮಿದೆ. ದೇಶದಲ್ಲಿ ಟೆಲಿಕಾಂ ಸೇವೆಗಳನ್ನು ಪ್ರಾರಂಭಿಸಿದ ನಂತರ ಮೊದಲ ಬಾರಿಗೆ ಖಾಸಗಿ ಕಂಪನಿಯೊಂದು ವೈರ್‌ಲೈನ್ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದೆ.
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಜಿಯೋದ ವೈರ್‌ಲೈನ್ ಚಂದಾದಾರರ ಮೂಲವು ಆಗಸ್ಟ್‌ನಲ್ಲಿ 73.52 ಲಕ್ಷಕ್ಕೆ ತಲುಪಿದ್ದರೆ, BSNLನ ಚಂದಾದಾರರ ಸಂಖ್ಯೆ 71.32 ಲಕ್ಷಕ್ಕೆ ತಲುಪಿದೆ. BSNL ಕಳೆದ 22 ವರ್ಷಗಳಿಂದ ದೇಶದಲ್ಲಿ ವೈರ್‌ಲೈನ್ ಸೇವೆಗಳನ್ನು ಒದಗಿಸುತ್ತಿದೆ, ಆದರೆ Jio ತನ್ನ ವೈರ್‌ಲೈನ್ ಸೇವೆಯನ್ನು ಮೂರು ವರ್ಷಗಳ ಹಿಂದೆಯಷ್ಟೇ ಪ್ರಾರಂಭಿಸಿದೆ. ಹೀಗಿದ್ದರೂ ದೇಶದಲ್ಲಿ ವೈರ್‌ಲೈನ್ ಚಂದಾದಾರರ ಸಂಖ್ಯೆ ಜುಲೈನಲ್ಲಿ 2.56 ಕೋಟಿಯಿಂದ ಆಗಸ್ಟ್‌ನಲ್ಲಿ 2.59 ಕೋಟಿಗೆ ಏರಿದೆ. ಕರ್ನಾಟಕದಲ್ಲೇ ಇದು 4 ಲಕ್ಷಕ್ಕೂ ಹೆಚ್ಚು ಜಿಯೋ ಸ್ಥಿರ ದೂರವಾಣಿ ಚಂದಾದಾರರನ್ನು ಹೊಂದಿದೆ.
ವೈರ್‌ಲೈನ್ ಸೇವೆಗಳನ್ನು ಬಳಸುವ ಗ್ರಾಹಕರ ಸಂಖ್ಯೆಯಲ್ಲಿನ ಈ ಹೆಚ್ಚಳಕ್ಕೆ ಖಾಸಗಿ ವಲಯದ ಕೊಡುಗೆ ಬಹಳಷ್ಟಿದೆ. TRAI ಅಂಕಿಅಂಶಗಳ ಪ್ರಕಾರ, ಈ ಅವಧಿಯಲ್ಲಿ ಜಿಯೋಗೆ 2.62 ಲಕ್ಷ ಹೊಸ ಗ್ರಾಹಕರು ಸೇರ್ಪಡೆಗೊಂಡಿದ್ದಾರೆ. ಭಾರ್ತಿ ಏರ್‌ಟೆಲ್ 1.19 ಲಕ್ಷವಾದರೆ, ವೊಡಾಫೋನ್ ಐಡಿಯಾ ಮತ್ತು ಟಾಟಾ ಟೆಲಿಸರ್ವಿಸಸ್ ಕ್ರಮವಾಗಿ 4,202 ಮತ್ತು 3,769 ಹೊಸ ಗ್ರಾಹಕರನ್ನು ತನ್ನ ತೆಕ್ಕೆಗೆ ಸೆಳೆದಿದೆ. ಇದಕ್ಕೆ ವ್ಯತಿರಿಕ್ತವಾಗಿ, ರಾಜ್ಯ-ಚಾಲಿತ ಟೆಲಿಕಾಂಗಳು BSNL ಮತ್ತು MTNL ಆಗಸ್ಟ್ ತಿಂಗಳಲ್ಲಿ ಕ್ರಮವಾಗಿ 15,734 ಮತ್ತು 13,395 ವೈರ್‌ಲೈನ್ ಚಂದಾದಾರರನ್ನು ಕಳೆದುಕೊಂಡಿವೆ.
ಇದಲ್ಲದೇ ಆಗಸ್ಟ್‌ನಲ್ಲಿ ರಿಲಯನ್ಸ್ ಜಿಯೋ ನೆಟ್‌ವರ್ಕ್‌ಗೆ 32.81 ಲಕ್ಷ ಹೊಸ ಮೊಬೈಲ್ ಗ್ರಾಹಕರು ಸೇರ್ಪಡೆಗೊಂಡಿದ್ದರೆ, ಭಾರ್ತಿ ಏರ್‌ಟೆಲ್ ಕೇವಲ 3.26 ಲಕ್ಷ ಹೊಸ ಮೊಬೈಲ್ ಗ್ರಾಹಕರನ್ನು ಪಡೆಯುವ ಮೂಲಕ ಈ ರೇಸ್‌ನಲ್ಲಿ ಹಿಂದುಳಿದಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ವಿಐ ಈ ತಿಂಗಳಲ್ಲಿ 19.58 ಲಕ್ಷ ಮೊಬೈಲ್ ಗ್ರಾಹಕರನ್ನು ಕಳೆದುಕೊಂಡಿದೆ. ಈ ಅವಧಿಯಲ್ಲಿ BSNL 5.67 ಲಕ್ಷ, MTNL 470 ಮತ್ತು ರಿಲಯನ್ಸ್ ಕಮ್ಯುನಿಕೇಷನ್ಸ್ 32 ಮೊಬೈಲ್ ಗ್ರಾಹಕರನ್ನು ಕಳೆದುಕೊಂಡಿದೆ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.

WhatsApp Group




