ರೇಷನ್ ಕಾರ್ಡ್ ಇದ್ದವರ ಗಮನಕ್ಕೆ, ಫೆ. 29 ರೊಳಗೆ ಈ ಕೆಲಸ ಮಾಡದೇ ಇದ್ದಲ್ಲಿ ರೇಷನ್ ಕಾರ್ಡ್ ಬಂದ್!

ration card update 3

ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಪಾದರ್ಶಕತೆ ತರಲು ಆಹಾರ ಇಲಾಖೆಯು ಗ್ರಾಹಕರ ಪಡಿತರ ಚೀಟಿ ಹೊಂದಿರುವವರಿಗೆ ಮಹತ್ವದ ಸೂಚನೆ ಹೊರಡಿಸಿದ್ದಾರೆ. ಬರುವ ಫೆಬ್ರುವರಿ 29 ರ ಒಳಗಾಗಿ ಕಡ್ಡಾಯವಾಗಿ ಪಡಿತರ ಚೀಟಿ ಹೊಂದಿರುವ ಎಲ್ಲಾ ಗ್ರಾಹಕರು ಈ ಕೆಲಸ ಮಾಡಲೇಬೇಕು, ಇಲ್ಲವಾದಲ್ಲಿ ನಿಮ್ಮ ಪಡಿತರ ಚೀಟಿ ತಾತ್ಕಾಲಿಕವಾಗಿ ಬಂದಾಗುತ್ತದೆ. ಇದರಿಂದ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯದ ಯೋಜನೆ ಹಣಕ್ಕೂ ಕತ್ತರಿ ಬೀಳುವ ಸಾಧ್ಯತೆ ಇದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಈ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ರೇಷನ್ ಕಾರ್ಡ್ ಇ-ಕೆವೈಸಿ

ರಾಜ್ಯದ ಎಲ್ಲಾ ಬಿಪಿಎಲ್ ಮತ್ತು ಅಂತೋದಯ ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳು ಪಡಿತರ ಚೀಟಿಯೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು, ಇ-ಕೆವೈಸಿ ಮತ್ತು ಮೊಬೈಲ್ ಸಂಖ್ಯೆಯನ್ನು ನವೀಕರಿಸುವ ಕೊನೆಯ ದಿನಾಂಕವನ್ನು ಇದೇ ಫೆಬ್ರುವರಿ 29 ರವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ಸರಬರಾಜು ಮತ್ತು ಗ್ರಾಹಕ ವಿವರಗಳ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇ-ಕೆವೈಸಿ ಮಾಡದೇ ಇದ್ರೆ ಏನಾಗುತ್ತೆ?

ಪಡಿತರ ಚೀಟಿ ಹೊಂದಿದ ಪ್ರತಿಯೊಬ್ಬ ನಾಗರಿಕರು ತಮ್ಮ ರೇಷನ್ ಕಾರ್ಡ್ ನೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದೇ ಬರುವ 29ನೇ ತಾರೀಖಿನ ಒಳಗಾಗಿ ಗ್ರಾಹಕರು ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇದ್ದ ಪಕ್ಷದಲ್ಲಿ ಅಂತವರ ಪಡಿತರ ಚೀಟಿಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ಮತ್ತು ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರವೇ ಕಾರ್ಡನ್ನು ಅನ್ ಬ್ಲಾಕ್ ಮಾಡಲಾಗುತ್ತದೆ. ಸಂದರ್ಭದಲ್ಲಿ ನಿಮಗೆ ಆ ತಿಂಗಳ ರೇಷನ್ ಮತ್ತು ಅನ್ನ ಭಾಗ್ಯದ ಹಣ ಸಿಗದೇ ಇರುವ ಸಾಧ್ಯತೆ ಇರುತ್ತದೆ. ಹಾಗಾಗಿ ಇದೇ 29 ರ ಒಳಗಾಗಿ ತಪ್ಪದೆ ಪ್ರತಿಯೊಬ್ಬರು ಆಹಾರ ಸರಬರಾಜು ಇಲಾಖೆಯ ಸೂಚನೆಯ ಮೇರೆಗೆ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಪಡಿತರ ಚೀಟಿಯ ರದ್ದು ಪ್ರಾರಂಭ :

ಈಗಾಗಲೇ ರಾಜ್ಯದ ಎಲ್ಲಾ ಅರ್ಹ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಬರೋಬರಿ 10,000 ವರೆಗೆ ಐದು ತಿಂಗಳ ಹಣ ಪಡೆದುಕೊಂಡಿದ್ದಾರೆ, 6ನೇ ಕಂತಿನ ಹಣದ ನಿರೀಕ್ಷೆಯಲ್ಲಿರುವ ಅರ್ಹರಲ್ಲದ ಮಹಿಳೆಯರಿಗೆ ಶಾಕಿಂಗ್ ಸುದ್ದಿ ಇದಾಗಿದೆ, ಹೌದು ರಾಜ್ಯದಲ್ಲಿ ಬಿಪಿಎಲ್ ಮತ್ತು ಅಂತೋದಯ ರೇಷನ್ ಕಾರ್ಡಗೆ ಅರ್ಹರಲ್ಲದ ಫಲಾನುಭವಿಗಳನ್ನು ಗುರುತಿಸಿ ಪ್ರತಿ ತಿಂಗಳು ಅಂತವರ ರೇಷನ್ ಕಾರ್ಡ್ಗಳನ್ನು ಬಂದು ಮಾಡುತ್ತಿದೆ. ಹೌದು ಈ ವಿಚಾರದಲ್ಲಿ ತುಂಬಾ ಸ್ಟ್ರಿಕ್ಟ್ ಆಗಿರುವ ಸರ್ಕಾರ ಪ್ರತಿ ತಿಂಗಳು ಅರ್ಹರಲ್ಲದ ಮತ್ತು ಸುಳ್ಳು ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡವರ ಕಾರ್ಡ್ ಗಳನ್ನು ರದ್ದುಪಡಿಸುತ್ತಿದೆ.

ಹೌದು, ಐಷಾರಾಮಿ ಕಾರು ಇದ್ದವರು, ಸರಕಾರಿ ಕೆಲಸ ಮಾಡುವವರು, 3 ಎಕರೆಗಿಂತ ಜಾಸ್ತಿ ಕೃಷಿ ಜಮೀನು ಇದ್ದವರು, ಹೆಚ್ಚಿಗೆ ಟ್ಯಾಕ್ಸ್ ಕಟ್ಟುವವರು ಹೀಗೆ ಅನೇಕ ಸೌಲಭ್ಯ ಇದ್ದವರು ಕೂಡಾ ನಕಲಿ BPL ಕಾರ್ಡ್ ಅನ್ನು ಹೊಂದಿದ್ದಾರೆ. ಆಹಾರ ಇಲಾಖೆಯು ಇಂತಹ ನಕಲಿ BPL ಕಾರ್ಡನ್ನು ಹೊಂದಿದವರ ಪತ್ತೆ ಹಚ್ಚಿ ಅವರ ration card ರದ್ದುಗೊಳಿಸುತ್ತಿದ್ದಾರೆ, ಮತ್ತು ದಂಡ ಕೂಡ ವಿಧಿಸಲಾಗುತ್ತಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

One thought on “ರೇಷನ್ ಕಾರ್ಡ್ ಇದ್ದವರ ಗಮನಕ್ಕೆ, ಫೆ. 29 ರೊಳಗೆ ಈ ಕೆಲಸ ಮಾಡದೇ ಇದ್ದಲ್ಲಿ ರೇಷನ್ ಕಾರ್ಡ್ ಬಂದ್!

Leave a Reply

Your email address will not be published. Required fields are marked *

error: Content is protected !!