Ration Card : ಹೊಸ ಪಡಿತರ ಚೀಟಿ ಮತ್ತು ತಿದ್ದುಪಡಿಗೆ ಮತ್ತೇ  ಅವಕಾಶ ; ಇದೇ ತಿಂಗಳು ಕೊನೆಯ ದಿನ.! 

ration card

WhatsApp Group Telegram Group

ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ: ಹೊಸ ಸದಸ್ಯರ ಸೇರ್ಪಡೆ, ವಿಳಾಸ ಬದಲಾವಣೆ ಮತ್ತು ಇತರ ತಿದ್ದುಪಡಿಗಳು – ಕೊನೆಯ ದಿನಾಂಕ ಮಾರ್ಚ್ 31, 2025! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ (State and central government) ವಿವಿಧ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ರೇಷನ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದಾಗಿದ್ದು, ಅದರಲ್ಲಿರುವ ಕೆಲವೊಂದು ತಪ್ಪುಗಳನ್ನು ಸರಿಪಡಿಸಲು ಈಗ ಅವಕಾಶ ನೀಡಲಾಗಿದೆ.
ಕೆಲವರಿಗೆ ತಮ್ಮ ರೇಷನ್ ಕಾರ್ಡ್‌ (Rarion card) ನಲ್ಲಿ ಹೆಸರು, ವಿಳಾಸ ಮತ್ತು ಇತರ ದೋಷಗಳು ಇದ್ದವು, ಇದಕ್ಕಾಗಿ ಈಗ ಹೊಸ ತಿದ್ದುಪಡಿ ಅವಕಾಶ ದೊರಕಿದೆ. ಹೀಗಾಗಿ, ಇಷ್ಟು ದಿನ ಈ ತಿದ್ದುಪಡಿ (Amendment) ವ್ಯವಸ್ಥೆಗಾಗಿ ಕಾಯುತ್ತಿದ್ದವರಿಗೆ ಇದು ಸಿಹಿ ಸುದ್ದಿಯಾಗಿದೆ. ಹೊಸ ಸದಸ್ಯರ ಸೇರ್ಪಡೆ, ವಿಳಾಸ ಬದಲಾವಣೆ ಮತ್ತು ಇತರ ವಿವಿಧ ವಿವರಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಈಗ ಸರ್ಕಾರ (Government) ನೆರವು ನೀಡುತ್ತಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ರೇಷನ್ ಕಾರ್ಡ್ ನಲ್ಲಿ ಮಾಡಲು ಸಾಧ್ಯವಿರುವ ತಿದ್ದುಪಡಿ:

ಹೊಸ ಸದಸ್ಯರ ಸೇರ್ಪಡೆ(Addition of new members) :
ಕುಟುಂಬದಲ್ಲಿ ಹೊಸದಾಗಿ ಜನಿಸಿದ ಮಕ್ಕಳು, ಮದುವೆ ಆದವರು ಅಥವಾ ಯಾವುದೇ ಇತರ ಸದಸ್ಯರನ್ನು ಪಡಿತರ ಚೀಟಿಗೆ ಸೇರಿಸಬಹುದು.

ಹೆಸರು ತೆಗೆದುಹಾಕುವುದು(Name removal) :
ಕಾಲದ ಪ್ರಕಾರ ಮರಣ ಹೊಂದಿದವರು, ಬೇರೆ ಮನೆಗೆ ಹೋಗಿದವರು ಅಥವಾ ಕುಟುಂಬದಿಂದ ದೂರವಾದ ಸದಸ್ಯರನ್ನು ಪಡಿತರ ಚೀಟಿಯಿಂದ ಹೊರಹಾಕಬಹುದು.

ವಿಳಾಸ ಬದಲಾವಣೆ(changes in address) :
ಹೊಸ ಸ್ಥಳಕ್ಕೆ ಸ್ಥಳಾಂತರಗೊಂಡರೆ ಪಡಿತರ ಚೀಟಿಯ ವಿಳಾಸವನ್ನು ಬದಲಾಯಿಸಬಹುದು.

ನ್ಯಾಯಬೆಲೆ ಅಂಗಡಿ ಬದಲಾವಣೆ(Fair price store change) :
ಪಡಿತರ ಸರಬರಾಜು ಮಾಡುವ ಅಂಗಡಿಯನ್ನು ಬದಲಾಯಿಸಲು ಅವಕಾಶ ಇದೆ.

ಆಧಾರ್ ಇ-ಕೆವೈಸಿ ಮತ್ತು ಹೆಸರು ತಿದ್ದುಪಡಿ (Aadhaar e-KYC and name correction):
ಆಧಾರ್‌ನ್ನು ಇ-ಕೆವೈಸಿಯೊಂದಿಗೆ ತಿದ್ದುಪಡಿ ಮಾಡುವ ಅವಕಾಶವೂ ನೀಡಲಾಗಿದೆ.

ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು (Documents) ಯಾವುವು?:

ಅರ್ಜಿದಾರರ ಆಧಾರ್ ಕಾರ್ಡ್ (Adhar card).
ಹೊಸ ಹೆಸರು ಸೇರ್ಪಡೆಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ(Income and caste certificate).
ಮೊಬೈಲ್ ಸಂಖ್ಯೆ.
ಹಾಲಿ ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ (Ration card).
6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಜನನ ಪ್ರಮಾಣಪತ್ರ.

ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?: 

ಮೊದಲಿಗೆ https://ahara.kar.nic.in/home ಲಾಗಿನ್ ಆಗಬೇಕು.
ನಂತರ ಅಲ್ಲಿ ಇರುವ ಸೆಲೆಕ್ಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಹೊಸ ಪೇಜ್ ನಲ್ಲಿ ಕಾಣುವ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
ನಂತರ ಅಲ್ಲಿ ತಿಳಿಸಲಾಗಿರುವ ಎಲ್ಲಾ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪ್‌ಲೋಡ್ ಮಾಡಬೇಕು.
ಅಪ್‌ಲೋಡ್ ಮಾಡಿದ ನಂತರ ಫಾರ್ಮ್ ಅನ್ನು ಸಬ್‌ಮಿಟ್ ಮಾಡಬೇಕು.
ಇನ್ನು ನೀವು ನೀಡಿರುವ ಎಲ್ಲಾ ದಾಖಲೆಗಳು ಸರಿಯಾಗಿಯಿದ್ದರೆ, ಅರ್ಜಿದಾರನ ಹೊಸ ಪಡಿತರಚೀಟಿಯನ್ನು ಅವರ ಮನೆಗೆ ಕಳುಹಿಸಿಕೊಡಲಾಗುತ್ತದೆ.  

ಎಲ್ಲಿ ಅರ್ಜಿ ಸಲ್ಲಿಸಬೇಕು?

ಪಡಿತರ ಚೀಟಿಯಲ್ಲಿ ಯಾವುದೇ ರೀತಿಯಲ್ಲಿ ತಿದ್ದುಪಡಿಯನ್ನು ಮಾಡಲು ನಿಮ್ಮ ಹತ್ತಿರದ ಯಾವುದೇ ಸಿಎಸ್ಸಿ ಕೇಂದ್ರ, ಗ್ರಾಮಒನ್ ಕೇಂದ್ರ, ಕರ್ನಾಟಕ ಒನ್, ಕೇಂದ್ರಕ್ಕೆ ಭೇಟಿ ನೀಡಿ ಅಥವಾ ನಾಡ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಮಾಡಿಕೊಳ್ಳಬಹುದಾಗಿದ್ದು, ನೇರವಾಗಿ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಅವಧಿ (Ration card tiddupadi date)

ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಮಾರ್ಚ್ 31, 2025ರ ವರೆಗೆ ಪ್ರತಿ ದಿನ ಬೆಳ್ಳಗೆ 10-00 ಗಂಟೆಯಿಂದ ಸಂಜೆ 5-00 ಗಂಟೆ ವರೆಗೆ ಅವಕಾಶ ಮಾಡಿಕೊಡಲಾಗಿದೆ. ಕರ್ನಾಟಕದಲ್ಲಿ 31 ಜಿಲ್ಲೆಗಳಿಗೂ ಕೂಡ ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿ ಸಲ್ಲಿಸಲು (New Ration card Karnataka)ಅವಕಾಶವಿದೆ.

ಗಮನಿಸಿ :
ತಿದ್ದುಪಡಿ ಅಥವಾ ಸೇರ್ಪಡೆಗಾಗಿ ಮಾರ್ಚ್ 31, 2025 ರವರೆಗೆ ಮಾತ್ರ ಅವಕಾಶವಿದೆ.
ಅರ್ಜಿಯನ್ನು ಶೀಘ್ರವಾಗಿ ಸಲ್ಲಿಸುವುದು ಉತ್ತಮ.
ಅರ್ಜಿಯ ಸ್ಥಿತಿಯನ್ನು ನೋಂದಣಿ ಸಂಖ್ಯೆಯ ಮೂಲಕ ಟ್ರ್ಯಾಕ್ ಮಾಡಬಹುದು.
ಈ ಅವಕಾಶವನ್ನು ಬಳಸಿಕೊಂಡು, ನಿಮ್ಮ ಪಡಿತರ ಚೀಟಿಯನ್ನು ನವೀಕರಿಸಿ, ಸರಿಯಾದ ಮಾಹಿತಿಯನ್ನು ಹೊಂದಿಸಿ, ಸರ್ಕಾರದ ಸೌಲಭ್ಯಗಳನ್ನು ಪಡೆಯಿರಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!