ರಾಜ್ಯ ಸರ್ಕಾರವು ಬಿಪಿಎಲ್ (BPL) ಮತ್ತು ಎಪಿಎಲ್ (APL) ಪಡಿತರ ಚೀಟಿದಾರರಿಗೆ ಮಹತ್ವದ ಸುದ್ದಿಯನ್ನು ನೀಡಿದೆ. ಹೊಸದಾಗಿ ಮದುವೆಯಾದವರು (Newly married) ಮತ್ತು ಮಕ್ಕಳು (Childrens) ಸೇರಿದಂತೆ, ಕುಟುಂಬದಲ್ಲಿ ಹೊಸ ಸದಸ್ಯರನ್ನು ಪಡಿತರ ಚೀಟಿಗೆ ಸೇರಿಸಲು (Adding new member to ration card) ಅಥವಾ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಈ ಅವಕಾಶವನ್ನು ನೀಡಲಾಗಿದೆ. ಪಡಿತರ ಚೀಟಿಗಳಲ್ಲಿ ಹೆಸರು ಸೇರಿಸುವ ಕ್ರಮದ ಬಗ್ಗೆ ತಿಳಿಯಲು ಈ ವರದಿಯಲ್ಲಿ ಆನ್ಲೈನ್ (Online) ಮತ್ತು ಆಫ್‌ಲೈನ್ (Offline) ವಿಧಾನಗಳನ್ನು ವಿವರಿಸುತ್ತೇವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಆಫ್‌ಲೈನ್ ಮೂಲಕ ಹೆಸರು ಸೇರಿಸುವ ವಿಧಾನ (How to add name through offline) :
ಪೊಲೀಷನ್ ಕಾರ್ಡ್ ತಿದ್ದುಪಡಿ: ಹೊಸ ಸದಸ್ಯರ ಹೆಸರು ಸೇರಿಸಲು ಆಹಾರ ಇಲಾಖೆಯ ಕಚೇರಿಗೆ ಭೇಟಿ ನೀಡಿ, ನಮೂನೆ (ಫಾರ್ಮ್) ಪಡೆಯಿರಿ.
ಫಾರ್ಮ್ ಭರ್ತಿ: ಈ ನಮೂನೆಯಲ್ಲಿ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ. ಅಗತ್ಯ ದಾಖಲಾತಿಗಳನ್ನು ಪೂರಕವಾಗಿ ಹೊಂದಿಸಬೇಕು.
ಅರ್ಜಿ ಸಲ್ಲಿಸಿ: ಭರ್ತಿಮಾಡಿದ ಫಾರ್ಮ್ ಅನ್ನು ಆಹಾರ ಇಲಾಖೆಯ ಕಚೇರಿಗೆ ಸಲ್ಲಿಸಿ. ಅರ್ಜಿಯನ್ನು ಸಲ್ಲಿಸಿದ ನಂತರ, ರಸೀದಿ ಪಡೆದುಕೊಳ್ಳುವುದು ಮುಖ್ಯ.
ಅಧಿಕೃತ ಪರಿಶೀಲನೆ: ಅರ್ಜಿ ಪರಿಶೀಲನೆಗೂ ಬಳಿಕ ಹೊಸ ಪಡಿತರ ಚೀಟಿಯನ್ನು ಪಡೆಯುವ ಸಾಧ್ಯತೆ ಇರುತ್ತದೆ.
ಆನ್ಲೈನ್ ಮೂಲಕ ಹೆಸರು ಸೇರಿಸುವ ವಿಧಾನ(Method of adding name through online) :
ಸರ್ಕಾರಿ ವೆಬ್‌ಸೈಟ್ ಗೆ ಪ್ರವೇಶ: ಮೊದಲು https://fcs.up.gov.in/FoodPortal.aspx ವೆಬ್‌ಸೈಟ್ ಗೆ ಭೇಟಿ ನೀಡಿ.
ಲಾಗಿನ್ ಅಥವಾ ನೋಂದಣಿ: ಈ ವೆಬ್‌ಸೈಟ್ ಗೆ ಲಾಗಿನ್ (Website login) ಮಾಡಿ. ನೀವು ಈಗಾಗಲೇ ಲಾಗಿನ್ ಐಡಿ ಹೊಂದಿದ್ದರೆ ಲಾಗಿನ್ ಮಾಡಿ; ಇಲ್ಲದಿದ್ದರೆ ಹೊಸ ಖಾತೆ ಸೃಷ್ಟಿಸಿ.
ಹೊಸ ಸದಸ್ಯ ಸೇರ್ಪಡೆ ಆಯ್ಕೆಯನ್ನು ಆರಿಸಿ: ಮುಖಪುಟದಲ್ಲಿ ಹೊಸ ಸದಸ್ಯರ ಹೆಸರು ಸೇರಿಸಲು ಆಯ್ಕೆಯನ್ನು ಕ್ಲಿಕ್ ಮಾಡಿ.
ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ: ಸದಸ್ಯರ ವಿವರಗಳು, ದಾಖಲೆಗಳೊಂದಿಗೆ ಫಾರ್ಮ್ ಭರ್ತಿಮಾಡಿ. ಎಲ್ಲ ಮಾಹಿತಿಯನ್ನು ಭರ್ತಿ ಮಾಡಿದ ನಂತರ SUBMIT ಆಯ್ಕೆಯನ್ನು ಕ್ಲಿಕ್ ಮಾಡಿ.
ನೋಂದಣಿ ಸಂಖ್ಯೆ: ಅರ್ಜಿಯನ್ನು ಸಲ್ಲಿಸಿದ ನಂತರ ನೋಂದಣಿ ಸಂಖ್ಯೆಯನ್ನು ಪಡೆಯಿರಿ. ಈ ಸಂಖ್ಯೆಯ ಮೂಲಕ ನಿಮ್ಮ ಅರ್ಜಿ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು. ಎಲ್ಲ ವಿವರಗಳು ಸರಿಯಾಗಿದ್ದರೆ ಹೊಸ ಪಡಿತರ ಚೀಟಿ ಅಂಚೆ ಮೂಲಕ ನಿಮಗೆ ಕಳುಹಿಸಲಾಗುತ್ತದೆ.
ಹೆಸರು ಸೇರಿಸಲು ಅಗತ್ಯ ದಾಖಲೆಗಳು (Necessary documents to add name) :
ಆಧಾರ್ ಕಾರ್ಡ್(Aadhar Card): ಹೊಸ ಸದಸ್ಯರನ್ನು ಪಡಿತರ ಚೀಟಿಗೆ ಸೇರಿಸಲು ಆಧಾರ್ ಕಾರ್ಡ್ ಕಡ್ಡಾಯ.
ಆದಾಯ ಪ್ರಮಾಣ ಪತ್ರ(Income Certificate): ಬಿಪಿಎಲ್ ಕಾರ್ಡ್ ಹೊಂದಿರುವವರು ತಮ್ಮ ಆದಾಯ ಪ್ರಮಾಣವನ್ನು ತೋರಿಸಬೇಕು.
ಮಕ್ಕಳ ಸೇರ್ಪಡೆ (Enrollment of children):
ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸೇರ್ಪಡೆಗೆ ಜನನ ಪ್ರಮಾಣ ಪತ್ರ ಮತ್ತು ಪೋಷಕರ ಆಧಾರ್ ಬೇಕಾಗುತ್ತದೆ.
ಹೆಂಡತಿಯ ಸೇರ್ಪಡೆ(Enrollment for wife):
ಹೆಂಡತಿಯ ಹೆಸರನ್ನು ಸೇರಿಸಲು ಆಕೆಯ ಆಧಾರ್ ಕಾರ್ಡ್ ಮತ್ತು ಗಂಡನ ಪಡಿತರ ಚೀಟಿಯ ಪ್ರತಿಯನ್ನು ನೀಡಬೇಕು.
ರಾಜ್ಯ ಸರ್ಕಾರದ ಈ ನಿರ್ಣಯವು ಬಿಪಿಎಲ್(BPL) ಮತ್ತು ಎಪಿಎಲ್ (APL) ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ ಆಗಿದ್ದು, ಹೊಸ ಕುಟುಂಬ ಸದಸ್ಯರನ್ನು ಪಡಿತರ ಚೀಟಿಗೆ ಸೇರಿಸಬೇಕೆಂದು ಬಯಸುವವರಿಗೆ ಈ ಅವಕಾಶ ಬಹಳ ಸಹಾಯಕವಾಗಿದೆ.ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




