ಪಡಿತರ ಚೀಟಿದಾರರೇ ಈ ಕೂಡಲೇ ಎಚ್ಚರವಾಗಿ ಮುಂದಿನ ತಿಂಗಳು ರೇಷನ್ ಬೇಕೆಂದರೆ ಈ ಕೆಲಸವನ್ನು ಈ ಕೂಡಲೇ ಮಾಡಿ.
ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ ಈ ರೀತಿಯ ಹಲವು ದಾಖಲೆಗಳು (Documents) ಇಂದು ಜನರಿಗೆ ಅಗತ್ಯವಾದ ದಾಖಲೆಗಳಾಗಿವೆ. ಅದರಲ್ಲೂ ರೇಷನ್ ಕಾರ್ಡ್ ಎಲ್ಲರಿಗೂ ಕೂಡ ಅವಶ್ಯಕವಾಗಿ ಬೇಕಾಗಿರುವಂತಹ ಒಂದು ದಾಖಲೆ. ಕಾಂಗ್ರೆಸ್ ಸರ್ಕಾರ (Congress government) ಅಧಿಕಾರಕ್ಕೆ ಬಂದಾಗಿನಿಂದಲೂ ರೇಷನ್ ಕಾರ್ಡ್ ಮಾಡಿಸುವವರ ಸಂಖ್ಯೆ ಹೆಚ್ಚಾಗಿದೆ. ಜನರು ರೇಷನ್ ಕಾರ್ಡ್ ಏನು ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ಅದಕ್ಕೆ ಪೂರಕವಾಗಿ ಇ-ಕೆವೈಸಿ ಮಾಡಿಸುವುದನ್ನು ಮರೆತುಬಿಟ್ಟಿದ್ದಾರೆ. ಇ-ಕೆವೈಸಿ ಎಂದರೆ ನೀವು ಯಾವುದೇ ರೀತಿಯ ಹಣಕಾಸಿನ ಕೊಡುಗೆಗಳನ್ನು ಪಡೆಯುವ ಬದಲು ಗ್ರಾಹಕರ ಗುರುತು ಮತ್ತು ವಿಳಾಸದ ವಿವರಗಳನ್ನು ದೃಢೀಕರಿಸುವ ಅಥವಾ ಪರಿಶೀಲಿಸುವ ಪ್ರಕ್ರಿಯೆಯಾಗಿದೆ. ಆದ್ದರಿಂದ ರೇಷನ್ ಕಾರ್ಡ್ (ration card) ಗೆ ಇ-ಕೆವೈಸಿ (E-KYC) ಮಾಡಿಸಲು ಸರ್ಕಾರ ಗಡುವು ನೀಡಿದೆ. ಇ-ಕೆವೈಸಿ ಮಾಡಿಸಲು ಯಾವುದು ಕೊನೆಯ ದಿನಾಂಕ? ಯಾವೆಲ್ಲಾ ದಾಖಲೆಗಳು ಬೇಕು? ಇ-ಕೆವೈಸಿ ಹೇಗೆ ಮಾಡಿಸಬೇಕು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಇ-ಕೆವೈಸಿ ಮಾಡಿಸಲು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಮಾಹಿತಿ ನೀಡಿದ್ದು, ಎಲ್ಲ ಜಿಲ್ಲೆಯಲ್ಲಿಯೂ ಕೂಡ ಪಡಿತರ ಚೀಟಿಗಳನ್ನು ಪಡೆದುಕೊಂಡಿರುವ ಕುಟುಂಬಗಳು ಇದ್ದಾವೆ ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ ಮಾಡಿಸುವದು ಕಡ್ಡಾಯವಾಗಿದೆ ಎಂದು ತಿಳಿಸಿದೆ. ಈ ಹಿಂದೆ ರಾಜ್ಯ ಸರ್ಕಾರ ಪಡಿತರ ಚೀಟಿಗೆ (ration card) ಕುಟುಂಬದ ಸದಸ್ಯರ ಇ-ಕೆವೈಸಿ ಕಡ್ಡಾಯಗೊಳಿಸಿದ್ದರೂ ಕೂಡ ಕೆಲವರು ಇ-ಕೆವೈಸಿ ಮಾಡಿಸಿರುವುದಿಲ್ಲ. ಹಾಗಾಗಿ ಅಂತಹ ಪಡಿತರ ಚೀಟಿಗಳಿಗೆ ರೇಷನ್ ನೀಡುವುದನ್ನು ಮುಂದಿನ ತಿಂಗಳಿನಿಂದ ಸ್ಥಗಿತಗೊಳಿಸುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.
ರೇಷನ್ ಕಾರ್ಡ್ ಗೆ ಇ-ಕೆವೈಸಿ ಮಾಡಿಸಲು ಕೊನೆಯ ದಿನಾಂಕ ಯಾವುದು?
ಸೆಪ್ಟೆಂಬರ್ 30ರೊಳಗೆ ಗ್ರಾಹಕರು ಸಂಬಂಧ ಪಟ್ಟ ನ್ಯಾಯ ಬೆಲೆ ಅಂಗಡಿಗಳಲ್ಲಿ ಬೆ.7.00 ರಿಂದ ರಾ. 9.00 ರವರೆಗೆ ಉಚಿತವಾಗಿ ಮಾಡಿಸಿಕೊಳ್ಳುವುದು. ಹಾಗೂ ಆನ್ಲೈನ್ (Online) ಮುಖಾಂತರ ಮಾಡಿಕೊಳ್ಳಬಹುದು. ಒಂದು ವೇಳೆ ಗ್ರಾಹಕರು ಸೆಪ್ಟೆಂಬರ್ ಅಂತ್ಯದೊಳಗೆ ಇ-ಕೆವೈಸಿ ಮಾಡಿಸದೇ ಹೋದರೆ ಎಂತಹ ಪಡಿತರ ಚೀಟಿದಾರರಿಗೆ ಮುಂದಿನ ದಿನಗಳಲ್ಲಿ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ರೇಷನ್ ಕಾರ್ಡ್ ಗೆ ಇ-ಕೆವೈಸಿ (eKYC) ಮಾಡಿಸುವ ಹೊಸ ಪ್ರಕ್ರಿಯೆ:
ಈ ಹಿಂದೆ, ಇ-ಕೆವೈಸಿಯನ್ನು ಮಾಡಿಸಬೇಕೆಂದರೆ ದೂರದ ರಾಜ್ಯಗಳಿಗೆ ಹೋಗಿದ್ದರೂ ಕೂಡ ತಮ್ಮ ತವರು ರಾಜ್ಯದ ಸ್ಥಳೀಯ ಸರ್ಕಾರಿ ಪಡಿತರ ಅಂಗಡಿಗೆ ಭೇಟಿ ನೀಡಬೇಕಾಗಿತ್ತು. ಯಾಕೆಂದರೆ ಈ ಹಿಂದೆ ಬಯೋಮೆಟ್ರಿಕ್ ಪರಿಶೀಲನೆಯನ್ನು ಬಳಸಿಕೊಂಡು eKYC ಅನ್ನು ಪೂರ್ಣಗೊಳಿಸಲಾಗುತ್ತಿತ್ತು ಆದ್ದರಿಂದ ಪಡಿತರ ಚೀಟಿದಾರರು ತಮ್ಮ ತವರು ರಾಜ್ಯಕ್ಕೆ ಹಿಂತಿರುಗುತಿದ್ದರು. ಆದರೆ ಈಗ ಅದರ ಅವಶ್ಯಕತೆ ಇಲ್ಲ ಅದರ ಬದಲಾಗಿ ನೀವು ವಾಸಿಸುತ್ತಿರುವ ಸ್ಥಳದಲ್ಲಿ ಇರುವ ಯಾವುದೇ ಸರ್ಕಾರಿ ಪಡಿತರ ಅಂಗಡಿಗೆ ನೀವು ಭೇಟಿ ನೀಡಬಹುದು ಮತ್ತು ಆಧಾರ್ ಬಯೋಮೆಟ್ರಿಕ್ (Adhar Biometric) ಪರಿಶೀಲನೆಯನ್ನು ಬಳಸಿಕೊಂಡು ಅಲ್ಲಿ eKYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಹಳೆಯ ಕುಟುಂಬದ ಮಾಹಿತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಇ-ಕೆವೈಸಿ ಪ್ರಕ್ರಿಯೆಯು ಪರಿಹರಿಸುತ್ತದೆ.
ರೇಷನ್ ಕಾರ್ಡ್ ಗೆ ಇ-ಕೆವೈಸಿ ಮಾಡಿಸಲು ಈ ದಾಖಲೆಗಳು (Documents) ಕಡ್ಡಾಯ:
ಪಡಿತರ ಚೀಟಿಯ ಒರಿಜಿನಲ್ ಪ್ರತಿ.
ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಫೋಟೋಕಾಪಿ.
ಕುಟುಂಬದ ಯಜಮಾನನ ಆಧಾರ್ ಕಾರ್ಡ್ ನಕಲು ಪ್ರತಿ.
ಬ್ಯಾಂಕ್ ಪಾಸ್‌ಬುಕ್‌ನ ಫೋಟೋಕಾಪಿ.
ಕುಟುಂಬದ ಯಜಮಾನನ ಎರಡು ಪಾಸ್‌ಪೋರ್ಟ್ ಅಳತೆಯ ಪೋಟೋ.
ಇ-ಕೆವೈಸಿ (eKYC) ಮಾಡಿಸುವ ಜೊತೆಗೆ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲೂ ಕೂಡ ಅವಕಾಶ ಕಲ್ಪಿಸಿಕೊಡಲಾಗಿದೆ :
ಸೆಪ್ಟೆಂಬರ್ 15ರಿಂದ 30ರೊಳಗೆ ಯಾವುದಾದರೂ ಒಂದು ದಿನದಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ ಎಂದು ತಿಳಿಸಿತ್ತು, ಆದರೆ ಇದುವರೆಗೂ ಮಾಡಿಕೊಟ್ಟಿಲ್ಲ ಇನ್ನು ಇದಕ್ಕಾಗಿ ಎರೆಡು ದಿನ ಸಮಯ ಇದೆ ಈ ದಿನಗಳಲ್ಲಿ ಮಾಡಿಕೊಡಬಹುದು ಎಂದು ಮಾಹಿತಿಗಳು ಲಭ್ಯವಾಗಿವೆ.
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಯಾವೆಲ್ಲ ಅರ್ಹತೆಗಳು (Qualifications) ಬೇಕು?
ಮೊದಲಿಗೆ ಅವರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ಇದುವರೆಗೂ ಪಡಿತರ ಚೀಟಿ ಪಡೆಯದೇ ಇರುವವರು ಅರ್ಜಿ ಸಲ್ಲಿಸಬಹುದು.
ಈಗಷ್ಟೇ ಮದುವೆಯಾಗಿರುವ ದಂಪತಿಗಳು, ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದು.
ಅರ್ಜಿದಾರರ ವಾರ್ಷಿಕ ಆದಾಯದ ಮೇಲೆ ಪಡಿತರ ಚೀಟಿ ಬಿಪಿಎಲ್ ಅಥವಾ ಎಪಿಎಲ್ ಎಂಬುದನ್ನು ನಿರ್ಧರಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲೆಗಳು (Documents) ಬೇಕು?
ವೋಟರ್ ಐಡಿ.
ಆಧಾರ್ ಕಾರ್ಡ್.
ವಯಸ್ಸಿನ ಪ್ರಮಾಣ ಪತ್ರ.
ಮೊಬೈಲ್ ಸಂಖ್ಯೆ.
ಇತ್ತೀಚಿನ ಪಾರ್ಸ್ ಪೋರ್ಟ್ ಅಳತೆಯ ಭಾವಚಿತ್ರ.
ಸ್ವಯಂ ಘೋಷಿತ ಪ್ರಮಾಣ ಪತ್ರ.
ಡ್ರೈವಿಂಗ್ ಲೈಸೆನ್ಸ್.
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹೇಗೆ ಸಲ್ಲಿಸಬಹುದು :
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ahara.kar.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಹರು ಮೊಬೈಲ್, ಕಂಪ್ಯೂಟರ್ ಗಳನ್ನು ಬಳಸಿಕೊಂಡು ಸೇವಾ ಸಿಂಧು ಪೋರ್ಟಲ್ ಗಳಲ್ಲಿ (Sevasindhu portal) ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿರುವ ರೇಷನ್ ಕಾರ್ಡ್‌ಗಳ ಅರ್ಜಿಯನ್ನು ಪರಿಶೀಲನೆ ಮಾಡಲಾಗುತ್ತಿದ್ದು, ಹೊಸ ರೇಷನ್ ಕಾರ್ಡ್‌ಗಳ ವಿತರಣೆಯನ್ನು ಸೆಪ್ಟೆಂಬರ್ ಅಂತ್ಯದೊಳಗಾಗಿ ಮಾಡಲಾಗುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




